ಖ್ಯಾತ ಕ್ರಿಕೆಟ್ ಆಟಗಾರ ಭಾರತರತ್ನ ವಿಜೇತ ಸಚಿನ ತೆಂಡೂಲಕರ ಇವರ ಗುರುಗಳಾದ ರಮಾಕಾಂತ ಆಚರೆಕರಸರ್ ಇವರ ಸ್ಮಾರಕವನ್ನು ಇತ್ತೀಚೆಗೆ ಮುಂಬೈಯಲ್ಲಿ ಅನಾವರಣಗೊಳಿಸಿದರು. ಆ ಸಮಯದಲ್ಲಿ ಮನೋಗತವನ್ನು ವ್ಯಕ್ತಪಡಿಸುವಾಗ ಸಚಿನ ತೆಂಡೂಲಕರ ಇವರು, ”ಪ್ರತಿಯೊಬ್ಬ ಆಟಗಾರನು ಈ ಆಟದ ವಸ್ತುಗಳೊಂದಿಗೆ ‘ಡ್ರೆಸಿಂಗ್ ರೂಮ್’ನಲ್ಲಿ (ಆಟಗಾರರ ವಸ್ತುಗಳನ್ನು ಇಡಲು, ಹಾಗೆಯೇ ಇತರ ಉಪಯೋಗಕ್ಕಾಗಿರುವ ಕೋಣೆ) ಕುಳಿತಿರುತ್ತಾನೆ. ಆದ್ದರಿಂದ ನಿರಂತರ ಆಟದ ವಸ್ತುಗಳನ್ನು ಗೌರವಿಸಬೇಕು. ಇಂದು ಅನೇಕ ಆಟಗಾರರು ತಮ್ಮ ವೈಫಲ್ಯದ ನಿರಾಶೆಯನ್ನು ಬ್ಯಾಟ್ ಅಥವಾ ಇತರ ವಸ್ತುಗಳನ್ನು ಎಸೆದು ವ್ಯಕ್ತಪಡಿಸುತ್ತಾರೆ. ಆಚರೆಕರಸರ್ ಇವರು ನಮಗೆ ನಿರಂತರ ಈ ವಸ್ತುಗಳನ್ನು ಗೌರವಿಸಲು ಕಲಿಸಿದ್ದರು. ಆದ್ದರಿಂದಲೇ ಇಂದು ನಾನು ಯಶಸ್ವಿಯಾದೆನು’’ ಎಂದು ಹೇಳಿದರು. ಆಟಗಾರರ ಈ ವಾಸ್ತವಿಕವನ್ನು ಬೆಳಕಿಗೆ ತರುವ ಈ ವಿಷಯವು ನಿಜಕ್ಕೂ ಮನಸ್ಸಿಗೆ ಚುಚ್ಚುವಂತಾಗಿದೆ.
ನಾವು ಕ್ರಿಕೆಟ್ ವಿಷಯದಲ್ಲಿ ನೋಡುವುದಾದರೆ, ಇಂದಿನ ಕಾಲದಲ್ಲಿನ ಖ್ಯಾತ ಕ್ರಿಕೆಟ ಆಟಗಾರ ವಿರಾಟ್ ಕೊಹ್ಲಿಯಂತಹ ಕ್ರಿಕೆಟಿಗರು ಸಹ, ಪಂದ್ಯದಲ್ಲಿ ಬೇಗನೆ ಸೋಲನ್ನು ಅನುಭವಿಸಿದಾಗ ಕೆಲವೊಮ್ಮೆ ಬ್ಯಾಟ್ ಅಥವಾ ಪ್ಯಾಡ್‌ಗಳನ್ನು ಎಸೆಯುವುದು, ‘ಡ್ರೆಸ್ಸಿಂಗ್ ರೂಂ’ನಲ್ಲಿನ ವಸ್ತುಗಳನ್ನು ಅಪ್ಪಳಿಸುವುದನ್ನು ನಾವು ನೋಡಿದ್ದೇವೆ. ಕೆಲವು ಸ್ಥಳಗಳಲ್ಲಿ ಪಂದ್ಯದ ಸಮಯದಲ್ಲಿ ವಾದ-ವಿವಾದವಾಗುವ ಪರಿಸ್ಥಿತಿಯಿದ್ದರೆ ಅಥವಾ ಅತೀ ಉತ್ಸಾಹದಿಂದ ಬ್ಯಾಟ್, ಸ್ಟಂಪ್ ಇತ್ಯಾದಿ ವಸ್ತುಗಳಿಂದ ಹೊಡೆದಾಟ ಮಾಡುವ ಘಟನೆಯೂ ಘಟಿಸಿರುವುದನ್ನು ಸ್ಥಳೀಯ ವ್ಯಕ್ತಿಗಳಿಂದ ನಾವು ಕೇಳುತ್ತೇವೆ. ಇದೇ ವಿಷಯವು ಇತರ ಆಟವನ್ನು ಆಡುವ ಆಟಗಾರರ ಸಂದರ್ಭದಲ್ಲಿಯೂ ಗಮನಕ್ಕೆ ಬರುತ್ತದೆ. ಇದಕ್ಕೆ ಸಿಟ್ಟು ಅಥವಾ ಸಂಯಮದ ಅಭಾವವೇ ಕಾರಣವಾಗಿದೆ. ಈ ರೀತಿ ಮಾಡುವುದೆಂದರೆ ಇದು ಕೃತಘ್ನತೆಯ ಲಕ್ಷಣವೇ ಆಗಿದೆ.
ಸಮಾಜವು ಖ್ಯಾತ ವ್ಯಕ್ತಿಗಳ ಅನುಕರಣೆ ಮಾಡುತ್ತದೆ. ಆದ್ದರಿಂದ ಮೇಲಿನ ಅಯೋಗ್ಯ ರೀತಿಯ ವಿಷಯಗಳನ್ನು ಸಂಬಂಧಿಸಿದ ವ್ಯಕ್ತಿಗಳಿಂದ ಘಟಿಸಿದರೆ ಅದನ್ನು ತಿಳಿದೂ-ತಿಳಿಯದೆ ಸಮಾಜದಲ್ಲಿನ ಚಿಕ್ಕ ಮಕ್ಕಳು, ಯುವ ಪೀಳಿಗೆ ಮತ್ತು ಇತರ ಆಟಗಾರರ ಮೇಲೆಯೂ ಅಯೋಗ್ಯ ಪರಿಣಾಮ ಬೀರುತ್ತದೆ ಮತ್ತು ಅವರಿಂದಲೂ ಘಟಿಸುತ್ತವೆ, ಇದನ್ನು ಅವರು ಗಮನದಲ್ಲಿಡುವುದು ಆವಶ್ಯಕವಾಗಿದೆ. ಕೇವಲ ಕ್ರೀಡೆಗೆ ಮಾತ್ರವಲ್ಲ; ಈ ದೋಷಗಳ ಪ್ರಭಾವ ಎಲ್ಲೆಡೆ ಬಿದ್ದು ಶಾಲೆಯ ಮಕ್ಕಳಿಂದಲೂ ಪಠ್ಯಪುಸ್ತಕಗಳನ್ನು ಎಸೆಯುವುದು, ಹಿರಿಯರ ಮಾತಿಗೆ ಒಪ್ಪದಿದ್ದಾಗ ಸಿಡಿಮಿಡಿಗೊಂಡು ವಸ್ತುಗಳನ್ನು ಎಸೆಯುವುದು ಇತ್ಯಾದಿ ಅಯೋಗ್ಯ ಕೃತಿಗಳು ಘಟಿಸುತ್ತವೆ. ಇಂತಹ ತಪ್ಪು ಕೃತಿಗಳು ಮನಸ್ಸಿನ ದೌರ್ಬಲ್ಯವನ್ನು ತೋರಿಸುತ್ತವೆ. ಕ್ರೀಡೆಯಲ್ಲಿ ಮಾತ್ರವಲ್ಲದೇ, ಎಲ್ಲ ಕ್ಷೇತ್ರಗಳಲ್ಲಿ ವ್ಯಕ್ತಿಯ ಪಾಲಿಗೆ ಯಶಸ್ಸು-ಅಪಯಶಸ್ಸು ಬರುತ್ತಿರುತ್ತವೆ. ಅದೊಂದು ಕಲಿಯುವ ಮತ್ತು ತಯಾರಾಗುವ ಪ್ರಕ್ರಿಯೆ ಆಗಿದೆ; ಆದರೆ ಈ ಎಲ್ಲ ಪ್ರಸಂಗಗಳಲ್ಲಿ, ಹಾಗೆಯೇ ಪರಿಸ್ಥಿತಿಯಲ್ಲಿ ನಾವು ಸಂಯಮದಿಂದ ನಮಗೆ ಸಹಾಯವಾಗಿರುವ ಘಟಕಗಳು, ಹಾಗೆಯೇ ವಸ್ತುಗಳ ಬಗ್ಗೆ ಕೃತಜ್ಞತೆಯಿಂದಿದ್ದೂ ಮತ್ತು ಅವುಗಳ ಬಗ್ಗೆ ಗೌರವದಿಂದ ನಡೆದುಕೊಂಡರೆ ನಾವು ಯಶಸ್ಸಿನ ಕಡೆಗೆ ಮಾರ್ಗಕ್ರಮಣ ಮಾಡಬಲ್ಲೆವು. ಅದಕ್ಕಾಗಿ ತಾಳ್ಮೆಯಿಂದಲೇ ಇರಬೇಕು. ನಿತ್ಯ ಜೀವನದಲ್ಲಿ ವಸ್ತು ಅಥವಾ ವ್ಯಕ್ತಿಗಳನ್ನು ಗೌರವದಿಂದ ನೋಡಿಕೊಂಡರೆ ಮಾತ್ರ ನಮಗೆ ಗೌರವ ಸಿಗುತ್ತದೆ. ಅದಕ್ಕಾಗಿ ನಾವು ಎಲ್ಲರನ್ನೂ ಗೌರವಿಸುವುದು, ಇದು ಉತ್ತಮ ವ್ಯಕ್ತಿಯ ಲಕ್ಷಣವಾಗಿದೆ.
– ಶ್ರೀ. ಸಂದೇಶ ನಾಣೋಸಕರ, ಸನಾತನ ಆಶ್ರಮ, ದೇವದ, ಪನವೇಲ.