ದೇವಸ್ಥಾನಗಳನ್ನು ಆಧರಿಸಿರುವ ಅರ್ಥವ್ಯವಸ್ಥೆಯು ಭಾರತದಲ್ಲಿ ಹಿಂದಿನಿಂದಲೂ ಇದೆ. ಒಂದು ದೇವಸ್ಥಾನವು ಕೇವಲ ಕೆಲವೇ ಜನರನ್ನಲ್ಲ, ಅದು ಲಕ್ಷಗಟ್ಟಲೆ ಜನರ ಉದರಪೋಷಣೆ ಮಾಡುತ್ತದೆ. ದೇವಸ್ಥಾನದಲ್ಲಿನ ದೇವರ ಪೂಜೆಗಾಗಿ ಪೂಜಾ ಸಾಮಗ್ರಿ, ಅದರಲ್ಲಿ ಹೂವು, ಹಣ್ಣುಹಂಪಲು, ಶ್ರೀಫಲ, ಬಿಲ್ವಪತ್ರೆ, ತುಳಸಿ, ಗರಿಕೆ, ಪ್ರಸಾದದ ಪದಾರ್ಥಗಳು, ಊದುಬತ್ತಿ, ಗಂಧ, ದೀಪ, ಕರ್ಪೂರ ಇತ್ಯಾದಿಗಳಿರುತ್ತವೆ. ದೇವಸ್ಥಾನಗಳ ಪರಿಸರದಲ್ಲಿನ ವ್ಯಾಪಾರಿಗಳು ಸಾಹಿತ್ಯಗಳನ್ನು ಮಾರಾಟ ಮಾಡಿ ಅದರಿಂದ ತಮ್ಮ ಉದರಪೋಷಣೆ ಮಾಡಿ ಕೊಳ್ಳುತ್ತಾರೆ. ಯಾವ ದೇವಸ್ಥಾನಗಳಲ್ಲಿ ವಿಶಿಷ್ಟವಾದ ವಿಧಿಗಳನ್ನು ಮಾಡಲಾಗುತ್ತದೆಯೋ, ಅದಕ್ಕಾಗಿ ವಿಧಿಯ ಸಾಹಿತ್ಯಗಳನ್ನು ಸಿದ್ಧಪಡಿಸುವುದು, ಉದಾ. ಪಿಂಡದಾನದ ಸ್ಥಳದಲ್ಲಿ ಹಿಟ್ಟಿನ ಪಿಂಡಗಳನ್ನು ತಯಾರಿಸುವುದು, ಪೂಜೆಗಾಗಿ ದೇವತೆಗಳ ಪ್ರತಿರೂಪಿ ಆಕೃತಿಗಳನ್ನು ಮಾಡಲು ಸ್ಥಳೀಯ ಮಹಿಳೆಯರಿಗೆ ಅಥವಾ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಉದ್ಯೋಗ ಸಿಗುತ್ತದೆ. ದೊಡ್ಡ ದೇವಸ್ಥಾನಗಳ ಸ್ಥಳದಲ್ಲಿ, ಉದಾಹರಣೆಗೆ ತಿರುಪತಿ, ಶಿರ್ಡಿಯಲ್ಲಿ ಲಕ್ಷಗಟ್ಟಲೆ ಜನರು ಪ್ರತಿದಿನ ದರ್ಶನಕ್ಕಾಗಿ ಬರುತ್ತಾರೆ. ಎಲ್ಲರಿಗೂ ದೇವಸ್ಥಾನದ ಭಕ್ತ ನಿವಾಸದಲ್ಲಿ ಉಳಿಯಲು ಸಾಧ್ಯವಿಲ್ಲ. ಅದಕ್ಕಾಗಿ ಹೊಟೇಲ್, ಲಾಡ್ಜ್, ಧರ್ಮಶಾಲೆಗಳಲ್ಲಿ ತಂಗಬೇಕಾಗುತ್ತದೆ. ಭೋಜನಾಲಯಗಳು, ಉಪಹಾರಗೃಹಗಳಲ್ಲಿ ಭೋಜನ-ಅಲ್ಪಾಹಾರ ತೆಗೆದುಕೊಳ್ಳಬೇಕಾಗುತ್ತದೆ. ಅದರಿಂದ ಅಲ್ಲಿನ ಕಾರ್ಮಿಕರ ಉದರ ಪೋಷಣೆಯಾಗುತ್ತದೆ. ತೀರ್ಥಕ್ಷೇತ್ರ ಗಳಲ್ಲಿನ ರಿಕ್ಷಾ, ಟ್ಯಾಕ್ಸಿ, ಬಸ್ ಚಾಲಕರು ಮತ್ತು ಖಾಸಗಿ ಪ್ರವಾಸಿ ವಾಹನಗಳಿಗೆ ಒಳ್ಳೆಯ ಆದಾಯವಾಗುತ್ತದೆ. ದೇವಸ್ಥಾನದಲ್ಲಿನ ಸ್ವಚ್ಛತೆಯಿಂದ ಹಿಡಿದು ಪಾದರಕ್ಷೆ, ಮಹಾಪ್ರಸಾದ ಇಂತಹ ವ್ಯವಸ್ಥೆಯಲ್ಲಿ ನೂರಾರು ಜನರು ಬೇಕಾಗುತ್ತಾರೆ. ದೇವಸ್ಥಾನಗಳಲ್ಲಿ ನಿರಂತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ಕೆಟರಿಂಗ್‌ನವರು, ಮಂಟಪದವರು, ಡೆಕೋರೇಟರ್ಸ್ ಮುಂತಾದವರಿಗೆ ಉದ್ಯೋಗ ಸಿಗುತ್ತದೆ. ಸಂಗೀತ, ಢೋಲು-ಚರ್ಮವಾದ್ಯ, ತಬಲಾ, ಕೊಳಲು ಇತ್ಯಾದಿ ವಾದಕರು ಹಾಗೂ ಗಾಯಕರಿಗೂ ಬಹುಮಾನ ಸಿಗುತ್ತದೆ. ದೇವಸ್ಥಾನಗಳಲ್ಲಿ ನೂರಾರು ಸುರಕ್ಷಾ ಸಿಬ್ಬಂದಿಗಳು ಕಾರ್ಯನಿರತರಾಗಿರುತ್ತಾರೆ. ದೇವಸ್ಥಾನಗಳ ಪರಿಸರದಲ್ಲಿಯೇ ಮೂರ್ತಿ ಅಥವಾ ಧಾರ್ಮಿಕ ಗ್ರಂಥಗಳನ್ನು ಮಾರಾಟ ಮಾಡುವವರು, ದೈನಂದಿನ ಉಪಯೋಗದ ವಸ್ತುಗಳನ್ನು ಮಾರಾಟ ಮಾಡುವವರು, ಪಂಚೆ, ಜುಬ್ಬಾ ಇಂತಹ ವಸ್ತ್ರಗಳನ್ನು ಮಾರಾಟ ಮಾಡುವ ಅನೇಕರಿಗೆ ಉದ್ಯೋಗವು ಈ ಮೂಲಕ ಸಿಗುತ್ತದೆ.
ಈ ರೀತಿ ದೇವಸ್ಥಾನಗಳು ಸಾವಿರಾರು ಜನರ ಪಾಲನೆ ಪೋಷಣೆ ಮಾಡುತ್ತದೆ. ದೇವಸ್ಥಾನಗಳ ಪರಿಸರದಲ್ಲಿ ಲಕ್ಷಗಟ್ಟಲೆ ಜನರು ಬರುವುದರಿಂದ ಆ ಕ್ಷೇತ್ರದಲ್ಲಿನ ಆಡಳಿತದವರಿಂದ ಒಳ್ಳೆಯ ರಸ್ತೆ, ವಿದ್ಯುತ್ ವ್ಯವಸ್ಥೆ, ನೀರಿನ ಪೂರೈಕೆ ಇತ್ಯಾದಿ ಸೌಲಭ್ಯಗಳನ್ನು ಒಳ್ಳೆಯ ರೀತಿಯಲ್ಲಿ ಮಾಡಿಕೊಡುವ ಪ್ರಯತ್ನವಿರುತ್ತದೆ. ರೈಲ್ವೇ ನಿಲ್ದಾಣ, ಬಸ್‌ನಿಲ್ದಾಣದ ವ್ಯವಸ್ಥೆಯನ್ನು ಸರಕಾರವೇ ಮಾಡಬೇಕಾಗುತ್ತದೆ. ಭಾರತದಲ್ಲಿ ಹಿಂದಿನಿಂದಲೂ ಕೃಷಿಯನ್ನು ಆಧರಿಸಿರುವ ವ್ಯವಸ್ಥೆ ಇದ್ದರೂ ಸ್ವಯಂಭೂ ಆಗಿರುವ ದೇವಸ್ಥಾನಗಳನ್ನು ಆಧರಿಸಿರುವ ವ್ಯವಸ್ಥೆಯನ್ನು ದುರ್ಲಕ್ಷಿಸಲು ಸಾಧ್ಯವಿಲ್ಲ.
ದೇವಸ್ಥಾನದಿಂದ ಧಾರ್ಮಿಕ, ಆಧ್ಯಾತ್ಮಿಕ ಲಾಭವಂತೂ ಸಾವಿರಾರು ಪಟ್ಟು ಆಗುತ್ತಿರುತ್ತದೆ; ಅಷ್ಟು ಮಾತ್ರವಲ್ಲ, ದೇವಸ್ಥಾನ ಸ್ವಯಂಭೂ ಆಗಿದ್ದು ಅದರ ಕ್ಷೇತ್ರದ ಭೌತಿಕ ವಿಕಾಸವನ್ನೂ ಸಾಧಿಸುತ್ತದೆ. ಇಂತಹ ದೇವಸ್ಥಾನಗಳನ್ನು ರಕ್ಷಿಸುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ ಹಾಗೂ ಧರ್ಮಕಾರ್ಯವಲ್ಲವೇ ?
– ಶ್ರೀ. ಯಜ್ಞೇಶ ಸಾವಂತ, ಸನಾತನ ಆಶ್ರಮ, ದೇವದ, ಪನವೇಲ್