ಕೊರೊನಾ ಸೋಂಕು ಮತ್ತು ನಂತರದ ಅವಧಿಯಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದಾಗಿ ವಾಯುವೇಗದಲ್ಲಿ ಹಬ್ಬಿದ ಸನಾತನ ಸಂಸ್ಥೆಯ ಧರ್ಮಕಾರ್ಯದ ಪಕ್ಷಿನೋಟ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

‘ಕೊರೊನಾ ಸಾಂಕ್ರಾಮಿಕ ರೋಗದಿಂದ ಉದ್ಭವಿಸಿದ ತುರ್ತುಪರಿಸ್ಥಿತಿಯು ಜನರ ಜೀವನವನ್ನು ಬದಲಾಯಿಸಿತು ಮತ್ತು ‘ಆನ್‌ಲೈನ್‌’ನಲ್ಲಿ ಪ್ರತ್ಯಕ್ಷ ಕೆಲಸ ಮಾಡುವ ಪದ್ಧತಿಯು ಬಂದಿತ್ತು. ಇಂದಿಗೂ ಈ ಪದ್ಧತಿ ‘ವರ್ಕ್ ಫ್ರಮ್‌ ಹೋಮ್‌ (ಮನೆಯಲ್ಲಿ ಕುಳಿತುಕೊಂಡು ಕೆಲಸ ಮಾಡುವುದು)’ ಹಾಗೆ ಮುಂದುವರಿದಿದೆ. ಪ್ರತ್ಯಕ್ಷ ಮಾಡಬೇಕಾಗಿದ್ದ ಕೆಲಸಗಳು ಈಗ ‘ಆನ್‌ಲೈನ್’ ಮೂಲಕ ಸುಲಭವಾಗಿ ಸಹಜವಾಗಿ ಆಗುತ್ತಿವೆ. ಈ ತುರ್ತುಪರಿಸ್ಥಿತಿಯ ನಿರ್ಬಂಧದಿಂದ ವ್ಯವಹಾರದ ಅನೇಕ ವಿಷಯಗಳು ‘ಆನ್‌ಲೈನ್’ ಆದವು. ಹಾಗೆಯೇ ಸನಾತನದ ಅನೇಕ ಉಪಕ್ರಮಗಳು ‘ಆನ್‌ಲೈನ್‌’ನಲ್ಲಿ ಪ್ರಾರಂಭವಾಗಿದ್ದವು. ಆ ಮಾಧ್ಯಮದಿಂದ ವಿವಿಧ ಕ್ಷೇತ್ರಗಳ ಜನರು ಈ ಉಪಕ್ರಮಗಳಲ್ಲಿ ಸಂಪರ್ಕಕ್ಕೆ ಬಂದರು. ಈ ಮಾಧ್ಯಮದಿಂದ ಮಾರ್ಗದರ್ಶನ ಪಡೆದು ‘ಸನಾತನ ಪ್ರಭಾತ’ದ ಓದುಗರು ಮತ್ತು ಜಾಹೀರಾತುದಾರರು ಹಾಗೂ ಸನಾತನದ ಹಿತೈಷಿಗಳು ಸಾಧನೆಯನ್ನು ಮಾಡಲು ಪ್ರಾರಂಭಿಸಿದರು. ಒಟ್ಟಾರೆ ಕೊರೊನಾ ಅಥವಾ ಅದರ ನಂತರದ ಅವಧಿಯು ಸಾಧಕರಿಗೆ ಸಾಧನೆಗಾಗಿ ಹಾಗೆಯೇ ಸನಾತನದ ಕಾರ್ಯವೃದ್ಧಿಗೆ ಹಬ್ಬವೇ ಆಗಿತ್ತು ಎನ್ನಬಹುದು.

ಕೊರೊನಾ ಬಿಕ್ಕಟ್ಟು ಸಂಭವಿಸಿದಾಗ, ಸನಾತನ ಸಂಸ್ಥೆಯ ಎಲ್ಲಾ ಕಾರ್ಯಗಳು ‘ಆನ್‌ಲೈನ್‌’ನಲ್ಲಿ ಪ್ರಾರಂಭವಾಗಿದ್ದವು. ೨೦೨೨ ರಲ್ಲಿ, ಮಹಾಶಿವರಾತ್ರಿಯಿಂದ, ಸನಾತನದ ಸಾಧಕರು ಕಾರ್ಯವನ್ನು  ಪುನಃ ಪ್ರತ್ಯಕ್ಷವಾಗಿ ಪರಿವರ್ತಿಸಲು ಪ್ರಯತ್ನಿಸಿದರು ಮತ್ತು ಸಾಧನಾವೃದ್ಧಿಯ ಧ್ಯೇಯವನ್ನು ಇಟ್ಟುಕೊಂಡರು. ೨೦೨೩ ರಲ್ಲಿ ಹೊಸ ಸಾಧಕರನ್ನು ಸಿದ್ಧಪಡಿಸುವ ಉದ್ದೇಶವನ್ನಿಟ್ಟುಕೊಂಡು ಉಪಕ್ರಮಗಳನ್ನು ಕಾರ್ಯನ್ವಿತಗೊಳಿಸಲಾಯಿತು. ಇದರ ಪರಿಣಾಮವೆಂದು, ಒಂದು ವರ್ಷದಲ್ಲಿಯೇ ಸಾವಿರಾರು ಹೊಸ ಸಾಧಕರು ಸಾಧನೆಗೆ ಪ್ರವೃತ್ತರಾದರು. ಆದ್ದರಿಂದ, ೨೦೨೪ ರಲ್ಲಿ, ಹೊಸ ಸಾಧಕರ ಸಾಮರ್ಥ್ಯಗಳಿಗೆ ನ್ಯಾಯವನ್ನು ಒದಗಿಸಿ, ಸನಾತನದ ಕಾರ್ಯಪದ್ಧತಿಯನ್ನು ಸಮರ್ಪಕಗೊಳಿಸಲು ಸಂಘಟನಾತ್ಮಕ ನಿಯೋಜನೆಯನ್ನು ಮಾಡಲಾಗಿದೆ. ೨೦೨೦ ರಿಂದ ಅಂದರೆ ಕೊರೊನಾದ ವಿಪತ್ತಿನಿಂದ ೨೦೨೪ ರ ಗುರುಪೂರ್ಣಿಮೆಯ ವರೆಗೆ ಸನಾತನದ ಕಾರ್ಯವು ಮುಗಿಲೆತ್ತರಕ್ಕೆ ಬೆಳೆಯಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯೇ ಕಾರಣವಾಗಿದೆ. ಇದರ ಮಾಹಿತಿಯನ್ನು ಈ ಲೇಖನದಿಂದ ತಿಳಿಯೋಣ.

‘ಆನ್‌ಲೈನ್‌ ನಾಮಸತ್ಸಂಗ’ದಲ್ಲಿ ವಿಷಯವನ್ನು ಮಂಡಿಸುತಿರುವ ಎಡದಿಂದ ಸೌ. ಕ್ಷಿಪ್ರಾ ಜುವೇಕರ ಮತ್ತು ಸದ್ಗುರು ನಂದಕುಮಾರ ಜಾಧವ

೧. ಕೊರೊನಾ ಕಾಲದಲ್ಲಿ, ಸಾಧಕರಿಗೆ ವ್ಯಷ್ಟಿ ಸಾಧನೆಯನ್ನು ಸಮರ್ಪಕವಾಗಿ ಮಾಡಲು ಸಾಧ್ಯವಾಗುವುದು ಮತ್ತು ವ್ಯಷ್ಟಿ ಸಾಧನೆ ಚೆನ್ನಾಗಿ ಆಗಿದ್ದರಿಂದ ನಿರಂತರವಾಗಿ ಹೆಚ್ಚುತ್ತಿರುವ ಗುರುಕಾರ್ಯದ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಸಾಧಕರಿಗೆ ಸುಲಭವಾದುದು

ಕೊರೊನಾ ಸಾಂಕ್ರಾಮಿಕದ ಬಿಕ್ಕಟ್ಟು ಸಾಧಕರಿಗೆ ವ್ಯಷ್ಟಿ ಸಾಧನೆಯನ್ನು ಸಮರ್ಪಕವಾಗಿ ಕೈಗೊಳ್ಳುವ ದೃಷ್ಟಿಯಿಂದ ವೇದಿಕೆಯಾಯಿತು. ಸಮಷ್ಟಿ ಸಾಧನೆ ಮಾಡುವ ಅನೇಕ ಸಾಧಕರಿಗೆ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಹೊಂದಾಣಿಕೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕೊರೊನಾ ಕಾಲದಲ್ಲಿ ತುರ್ತುಪರಿಸ್ಥಿತಿ ಜಾರಿಯಲ್ಲಿದ್ದುದರಿಂದ ಸಮಷ್ಟಿ ಸೇವೆ, ಹಾಗೆಯೇ ಕಚೇರಿಯ ಕೆಲಸ ಕಾರ್ಯಗಳಿಗಾಗಿ ಮೊದಲ ೩ ತಿಂಗಳು ಹೊರಗೆ ಬೀಳುವುದು ಸಾಧ್ಯವಾಗದ ಕಾರಣದಿಂದ ಎಲ್ಲ ಸಾಧಕರು ಮನೆಯಲ್ಲಿಯೇ ಇದ್ದರು. ಆ ಕಾಲದಲ್ಲಿ ಸನಾತನದ ಎಲ್ಲ ಧರ್ಮ ಪ್ರಚಾರಕ ಸಂತರು ಮನೆಯಲ್ಲಿರುವ ಪ್ರತಿಯೊಬ್ಬ ಸಾಧಕನ ವರದಿಯನ್ನು ಪ್ರತಿದಿನ ತೆಗೆದುಕೊಳ್ಳಲು ಮತ್ತು ಅವರ ಸಾಧನೆ ಚೆನ್ನಾಗಿ ಆಗುವಂತೆ, ವ್ಯವಸ್ಥೆಯನ್ನು ಮಾಡಿದರು. ಇದರ ಪರಿಣಾಮ ಸಾಧಕರಿಗೆ ಶಾಂತವಾಗಿ ವ್ಯಷ್ಟಿ ಸಾಧನೆಯನ್ನು ಮಾಡಲು ಅವಕಾಶ ಸಿಕ್ಕಿತು. ‘ಪ್ರಾಸಂಗಿಕವಾಗಿ ಸೇವೆಯನ್ನು ಮಾಡುವ ಸಾಧಕರಿಂದ  ಕ್ರಿಯಾಶೀಲ ಸಾಧಕರ ವರೆಗೆ ಪ್ರತಿಯೊಬ್ಬರಿಗೂ ‘ಅಂತರ್ಮುಖವಾಗಲು ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಅನುಸಂಧಾನದಲ್ಲಿರಲು’ ಸಮಯ ಸಿಕ್ಕಿತು. ಅನೇಕ ಸಾಧಕರಿಗೆ ಈ ವಿಷಯದಲ್ಲಿ ಬಹಳ ಕೃತಜ್ಞತೆಯೆನಿಸಿತು. ಈ ಕಾಲಾವಧಿಯಲ್ಲಿ ಸಾಧನೆಯ ವರದಿಯನ್ನು ನೀಡುವ ಸಂಸ್ಕಾರವೂ ಸಾಧಕರ ಮನಸ್ಸಿನ ಮೇಲೆ ಬಿಂಬಿಸಲ್ಪಟ್ಟಿತು. ಸಮಯ ಬಹಳ ಇದ್ದುದರಿಂದ ಸಾಧನೆಯ ವರದಿಯನ್ನು ನೀಡುವುದರಿಂದ ಮತ್ತು ಅದರಲ್ಲಿ ಸಾತತ್ಯ ಮುಂದುವರಿದಿರುವುದರಿಂದ ಇಂದಿಗೂ ಸಾಧಕರಿಗೆ ಅದರ ಲಾಭವಾಗುತ್ತಿದೆ. ತದನಂತರ ಅನೇಕ ಸಾಧಕರ ಆಧ್ಯಾತ್ಮಿಕ ಉನ್ನತಿಯಾಯಿತು. ವ್ಯಷ್ಟಿ ಸಾಧನೆಯು ಸರಿಯಾಗಿ ಆಗಿದ್ದರಿಂದ ಈಗ ನಿರಂತರವಾಗಿ ಹೆಚ್ಚುತ್ತಿರುವ ಗುರುಕಾರ್ಯದ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಾಧಕರಿಗೆ ಸುಲಭವಾಗಿದೆ.

೨. ರಾಷ್ಟ್ರೀಯ ಮಟ್ಟದಲ್ಲಿ ಪ್ರತಿದಿನ ಪ್ರಾರಂಭವಾದ ‘ಆನ್‌ಲೈನ್’ ಸತ್ಸಂಗ

ಕೊರೊನಾ ಸಾಂಕ್ರಾಮಿಕದ ಮೊದಲು ಮಾಡಿದ ಧರ್ಮಪ್ರಸಾರದಿಂದ ಅನೇಕ ಜಿಜ್ಞಾಸುಗಳು ಸನಾತನದ ಸಂಪರ್ಕಕ್ಕೆ ಬಂದಿದ್ದರು. ಅಕಸ್ಮಿಕವಾಗಿ ಕೊರೊನಾ ಸಾಂಕ್ರಾಮಿಕ ರೋಗವು ಬಂದಿದ್ದರಿಂದ ‘ಅವರಿಗೆ ಮುಂದಿನ ಮಾರ್ಗದರ್ಶನ ಸಿಗಬೇಕು’, ಎನ್ನುವ ಉದ್ದೇಶದಿಂದ ಸನಾತನ ಸಂಸ್ಥೆಯು ರಾಷ್ಟ್ರೀಯ ಸ್ತರದಲ್ಲಿ ನಾಮಸತ್ಸಂಗ, ಭಾವವೃದ್ಧಿ ಸತ್ಸಂಗ ಮತ್ತು ಚಿಕ್ಕಮಕ್ಕಳಿಗಾಗಿ ಬಾಲಸಂಸ್ಕಾರ ತರಗತಿಯನ್ನು ಪ್ರಾರಂಭಿಸಿತು. ಆನ್‌ಲೈನ್‌ ಸತ್ಸಂಗದಿಂದಾಗಿ ಕೊರೊನಾ ಪೂರ್ವದಲ್ಲಿ ಯಾವ ಜನರು ಸಂಪರ್ಕಕ್ಕೆ ಬಂದಿದ್ದರೋ, ಅವರನ್ನು ಈ ಸತ್ಸಂಗದ ಮಾಧ್ಯಮದಿಂದ ನಿರಂತರ ಸಂಪರ್ಕದಲ್ಲಿಟ್ಟುಕೊಳ್ಳಲು ಸುಲಭವಾಯಿತು. ಈ ಎಲ್ಲಾ ಸತ್ಸಂಗಗಳು ಯೂಟ್ಯೂಬ್‌ನಲ್ಲಿ ಇರುವುದರಿಂದ, ಜನರು ತಮ್ಮ ಲಭ್ಯವಿರುವ ಸಮಯಕ್ಕನುಸಾರ ಅವುಗಳನ್ನು ವೀಕ್ಷಿಸಲು ಸಾಧ್ಯವಾಗುತ್ತಿತ್ತು. ಈ ಸತ್ಸಂಗಗಳ ಪರಿಣಾಮವೆಂದರೆ ಜಿಜ್ಞಾಸು ಸಾಧಕರು ಸಿದ್ಧರಾದರು ಮತ್ತು  ಜಗತ್ತಿನಾದ್ಯಂತ ಅಧ್ಯಾತ್ಮ ಹರಡಿತು. ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ಆನ್‌ಲೈನ್‌ ಸತ್ಸಂಗದ ಮೂಲಕ ಅಧ್ಯಾತ್ಮದ ಪ್ರಸಾರವನ್ನು ಮಾಡಬೇಕಾಗಲಿಲ್ಲ. ಬದಲಾಗಿ ಅದು ತನ್ನಿಂತಾನೇ ಸಹಜವಾಗಿ ಆಯಿತು.

೨ ಅ. ಭಾವವೃದ್ಧಿ ಸತ್ಸಂಗ : ಯಾವ ಕಾಲಾವಧಿಯಲ್ಲಿ ಸುತ್ತಮುತ್ತಲಿನ ಪರಿಸರದಲ್ಲಿ ಉದ್ವಿಗ್ನತೆ ಮತ್ತು ಆತಂಕ ತುಂಬಿತ್ತೋ, ಆ ಸಮಯದಲ್ಲಿ ಕೇವಲ ಸಾಧಕರಿಗೆ ಮಾತ್ರವಲ್ಲ, ಸಮಾಜದ ಅನೇಕರನ್ನು ದೇವರು ಈ ಭಾವವೃದ್ಧಿ ಸತ್ಸಂಗಗಳ ಮೂಲಕ ಅಖಂಡ ಚೈತನ್ಯದಲ್ಲಿಯೇ ಇಟ್ಟಿದ್ದನು. ‘ಸಾಧಕನು ಸಂತೋಷದ ಪುಷ್ಪವಾಗಿ, ಈಶ್ವರನ ಚರಣಗಳಲ್ಲಿ ಲೀನವಾಗಲು ಇದೊಂದು ಚೈತನ್ಯದ ಅಲೆಯೇ ಆಗಿತ್ತು. ‘ಭಾವದೊಂದಿಗೆ ಸೇವೆಯನ್ನು ಹೇಗೆ ಮಾಡುವುದು ? ಶರಣಾಗತಭಾವದಿಂದ ಪ್ರಾರ್ಥನೆ, ಕೃತಜ್ಞತೆ, ಈಶ್ವರನ ಮಾನಸಪೂಜೆ, ಆತ್ಮನಿವೇದನೆಯನ್ನು ಮಾಡಿದ್ದರೆ ಮತ್ತು ಮುಗ್ಧಭಾವವಿದ್ದರೆ, ದೇವರ ಅನುಗ್ರಹವಾಗುತ್ತದೆ’ ಎನ್ನುವುದನ್ನು ಅನುಭವಿಸಲು ಸಾಧ್ಯವಾಯಿತು. ಇದರಿಂದ ಸಾಧಕರು ವೇಗವಾಗಿ ಪ್ರಯತ್ನಗಳನ್ನು ಪ್ರಾರಂಭಿಸಿದಾಗ ಅವರ ಕೃತಿಶೀಲತೆಯೂ ಹೆಚ್ಚಾಯಿತು.

೨ ಆ. ನಾಮಸತ್ಸಂಗ : ನಾಮಸತ್ಸಂಗವು ಮಾಡಿರುವ ಎಲ್ಲಕ್ಕಿಂತ ಅತಿದೊಡ್ಡ ಕಾರ್ಯವೆಂದರೆ ಈ ಸತ್ಸಂಗವು ಜನರನ್ನು ‘ಸಂಕಟದ ಸಮಯದಲ್ಲಿ ನಾಮಜಪವನ್ನು ಹೇಗೆ ಮಾಡಬೇಕು ?’ ಎನ್ನುವುದನ್ನು ಕಲಿಸಿತು. ಇದರಿಂದ ಸಮಾಜಕ್ಕೆ ಆಧ್ಯಾತ್ಮಿಕ ಆಧಾರ ದೊರಕಿತು. ಹಲವರ  ಮನಸ್ಸಿನಲ್ಲಿ ನಾಮಜಪದ ಆಸಕ್ತಿ ಹುಟ್ಟಿ ಅವರಿಗೆ ವ್ಯಾವಹಾರಿಕ ಮತ್ತು ಕೌಟುಂಬಿಕ ಸಂಕಟಗಳನ್ನು ಎದುರಿಸಲು ಸಾಧ್ಯವಾಯಿತು ಮತ್ತು ದುಃಖದ ಪ್ರಸಂಗಗಳನ್ನು ಎದುರಿಸಲು ಶಕ್ತಿ ಸಿಕ್ಕಿತು. ಈ ನಾಮಸತ್ಸಂಗದಿಂದ ಸಂಪರ್ಕದಲ್ಲಿ ಬಂದಂತಹ ನೂರಾರು ಜಿಜ್ಞಾಸುಗಳ ಜೀವನವು ಇಂದು ಆನಂದಮಯವಾಗಿದೆ. ಅನೇಕ ಜನರು ಸಕ್ರಿಯ ಸಾಧಕರಾಗಿ ಗುರುಸೇವೆಯನ್ನು ಮಾಡುತ್ತಿದ್ದಾರೆ.

೨ ಇ. ‘ಆನ್‌ಲೈನ್’ ಬಾಲಸಂಸ್ಕಾರವರ್ಗ : ಕೊರೊನಾ ಮಹಾಮಾರಿಯ ಹೆಚ್ಚುತ್ತಿರುವ ಕಾರಣದಿಂದ ಸಾಂಕ್ರಾಮಿಕ ರೋಗದಿಂದ ಶಾಲೆಗೆ ಹೋಗಲು ಸಾಧ್ಯವಾಗದ ಕಾರಣ ಮಕ್ಕಳು ಮನೆಯಲ್ಲಿಯೇ ಇದ್ದರು. ಆನ್‌ಲೈನ ಬಾಲಸಂಸ್ಕಾರವರ್ಗದ ಮಾಧ್ಯಮದಿಂದ ಸನಾತನದೊಂದಿಗೆ ಜೋಡಿಸಲ್ಪಟ್ಟ (ಸಂಪರ್ಕಕ್ಕೆ ಬಂದಂತಹ) ಕುಟುಂಬದವರಿಗೆ ಮಕ್ಕಳಲ್ಲಿ ಸುಸಂಸ್ಕಾರ ಮಾಡುವ ಅವಕಾಶ ಲಭ್ಯವಾಯಿತು. ಸಮಾಜದಲ್ಲಿನ ಕೆಲವು ಪೋಷಕರು ಈ ಅವಕಾಶದ ಸಂಪೂರ್ಣ ಲಾಭವನ್ನು ಪಡೆದುಕೊಂಡು ತಮ್ಮ ಮಕ್ಕಳನ್ನು ಬಾಲಸಂಸ್ಕಾರವರ್ಗಕ್ಕೆ ಸೇರಿಸಿದರು. ಇದರಿಂದ ಅವರ ಮಕ್ಕಳಿಗೆ ಬಹಳ ಲಾಭವಾಯಿತು. ಕೆಲವು ಮಕ್ಕಳಲ್ಲಿ ‘ಉದ್ಧಟತನದಿಂದ ಮಾತನಾಡುವುದು ಮತ್ತು ಹಿರಿಯರಿಗೆ ಎದುರುತ್ತರಗಳನ್ನು ಕೊಡುವುದು’, ಈ ಸ್ವಭಾವದೋಷಗಳು ಕಡಿಮೆಯಾದವು. ‘ಕೆಲವು ಮಕ್ಕಳು ತಮ್ಮ ವಸ್ತುಗಳನ್ನು ಸರಿಯಾಗಿ ಇಡಲು ಪ್ರಾರಂಭಿಸಿದರು, ಕೆಲವು ಮಕ್ಕಳು ತಮ್ಮಿಂದ ತಪ್ಪುಗಳಾದ ಕೂಡಲೇ ಅದರ ಅರಿವಾಗಿ ಅವರು ಕ್ಷಮೆಯನ್ನು ಕೇಳಲು ಪ್ರಾರಂಭಿಸಿದರು.

ಕೆಲವರ ಮಕ್ಕಳು ಮುದ್ರೆಯನ್ನು ಮಾಡಿ ಶ್ರೀ ಗಣೇಶನ ನಾಮಜಪ ಮಾಡಲು ಪ್ರಾರಂಭಿಸಿದರು. ಕೆಲವು ಪೋಷಕರು ಮಾತನಾಡಿ, ”ಈ ಕಾಲಾವಧಿಯಲ್ಲಿ ಏನು ಮಾಡಬೇಕು ?’ ಎನ್ನುವುದು ನಮಗೆ ತಿಳಿಯುತ್ತಿರಲಿಲ್ಲ; ಆದರೆ ಈ ವರ್ಗ ನಮಗೆ ವರದಾನವಾಗಿ ಪರಿಣಮಿಸಿತು. ಈ ಬಾಲಸಂಸ್ಕಾರವರ್ಗದಿಂದ ನಮ್ಮ ಮಕ್ಕಳಲ್ಲಿ ಬಹಳ ಬದಲಾವಣೆಯಾಯಿತು’, ಎಂದು ಹೇಳಿದರು. ಈ ಬಾಲಸಂಸ್ಕಾರವರ್ಗದಿಂದ ಅವರ ಪೋಷಕರ ಸಹಭಾಗಿತ್ವ ವೃದ್ಧಿಯಾಗಿ, ತದನಂತರ ಅವರು ಸನಾತನದ ನಿಯಮಿತ ಸತ್ಸಂಗಕ್ಕೆ ಬರಲು ಪ್ರಾರಂಭಿಸಿದರು.

೩. ಪ್ರತಿಯೊಂದು ಜಿಲ್ಲೆಯಲ್ಲಿಯೂ ಪ್ರಾರಂಭವಾಗಿರುವ ‘ಆನ್‌ಲೈನ್‌ ಸಾಧನಾ ಸತ್ಸಂಗ’

೩ ಅ. ತುರ್ತುಪರಿಸ್ಥಿತಿಯ ಕಾಲಾವಧಿಯಲ್ಲಿ  ಪಶ್ಚಿಮ ಮಹಾರಾಷ್ಟ್ರದ ಜಿಲ್ಲೆಗಳಲ್ಲಿ ‘ಆನ್‌ಲೈನ್’ ಸತ್ಸಂಗಗಳು ಪ್ರಾರಂಭವಾದವು : ತುರ್ತುಪರಿಸ್ಥಿತಿಯ ಕಾಲಾವಧಿಯಲ್ಲಿ ಎಲ್ಲ ವ್ಯವಹಾರಗಳು ಮತ್ತು ದೈನಂದಿನ ಜೀವನ ಸ್ಥಗಿತಗೊಂಡಿತ್ತು. ಜನರು ಭಯಭೀತರಾಗಿದ್ದರು. ಅವರಿಗೆ ಮಾನಸಿಕ ಆಧಾರದ ಅವಶ್ಯಕತೆಯಿತ್ತು. ರಾಷ್ಟ್ರಮಟ್ಟದಲ್ಲಿ ‘ಯೂ ಟ್ಯೂಬ್’ ಮೂಲಕ ನಡೆಸುತ್ತಿರುವ ಸತ್ಸಂಗಗಳು ಹಿಂದಿ ಭಾಷೆಯಲ್ಲಿದ್ದು, ಸಂವಹನ ಸೌಲಭ್ಯದ ಕೊರತೆಯಿಂದ ಕೆಲವು ಜಿಲ್ಲೆಗಳಲ್ಲಿ ಸ್ಥಳೀಯ ಸಾಧಕರು ಸ್ಥಳೀಯ ಭಾಷೆಯಲ್ಲಿ ‘ಆನ್‌ಲೈನ್’ ಸತ್ಸಂಗ ಪ್ರಾರಂಭಿಸಿದರು. ಪಶ್ಚಿಮ ಮಹಾರಾಷ್ಟ್ರದ ೬ ಜಿಲ್ಲೆಗಳಲ್ಲಿ ಮೊಟ್ಟಮೊದಲು ಈ ಉಪಕ್ರಮವನ್ನು ಜಾರಿಗೆ ತರಲಾಯಿತು. ಈ ಜಿಲ್ಲೆಯಲ್ಲಿ ಈ ಉಪಕ್ರಮಗಳಿಗೆ ಸಿಗುತ್ತಿದ್ದ ಅಗಾಧ ಪ್ರತಿಸ್ಪಂದನೆಯನ್ನು ನೋಡಿ ಬೇರೆ ಜಿಲ್ಲೆಗಳಲ್ಲಿಯೂ ಓದುಗರು, ಜಾಹೀರಾತುದಾರರು ಮತ್ತು ಹಿತಚಿಂತಕರಿಗಾಗಿ ಇಂತಹ ‘ಆನ್‌ಲೈನ್’ ಸತ್ಸಂಗಗಳನ್ನು ಪ್ರಾರಂಭಿಸಲಾಯಿತು.

೩ ಆ. ‘ಕುಟುಂಬ ಸತ್ಸಂಗ’ ದ ಪರಿಕಲ್ಪನೆ ಅನುಷ್ಠಾನಗೊಳಿಸಿದ ಬಳಿಕ ಸಾಧನೆಯ ಮಹತ್ವ ಸಾಧಕರ  ಸಂಬಂಧಿಕರಿಗೂ ಗಮನಕ್ಕೆ ಬರುವುದು : ಜಿಲ್ಲೆಜಿಲ್ಲೆಗಳಲ್ಲಿ ‘ಆನ್‌ಲೈನ್’ ಸತ್ಸಂಗದಿಂದ ಆಗುತ್ತಿರುವ ಲಾಭವನ್ನು ಗಮನದಲ್ಲಿಟ್ಟುಕೊಂಡು ಪಶ್ಚಿಮ ಮಹಾರಾಷ್ಟ್ರದ ಸದ್ಗುರು ಸ್ವಾತಿ ಖಾಡಯೆ ಅವರು ‘ಕುಟುಂಬ ಸತ್ಸಂಗ’ ಪರಿಕಲ್ಪನೆಯನ್ನು ಜಾರಿಗೆ ತಂದರು. ಸಾಧಕರು ದೂರದಲ್ಲಿರುವ ಆದರೆ ಸಾಧನೆಯಲ್ಲಿ ಆಸಕ್ತಿ ಹೊಂದಿರುವ ತಮ್ಮ ಸಂಬಂಧಿಕರಿಗಾಗಿ ಸತ್ಸಂಗಗಳನ್ನು ಪ್ರಾರಂಭಿಸಿದರು. ಈ ಸತ್ಸಂಗದಿಂದಾಗಿ ಅನೇಕ ಜನರಲ್ಲಿ ಸನಾತನದ ವಿಷಯದಲ್ಲಿದ್ದ ತಪ್ಪು ಕಲ್ಪನೆ ದೂರವಾಯಿತು. ‘ಆನ್‌ಲೈನ್’ ಸತ್ಸಂಗವಿದ್ದುದರಿಂದ ಭಾರತಾದ್ಯಂತ ಯಾವುದೇ ಸ್ಥಳದಲ್ಲಿರುವ ಸಂಬಂಧಿಕರಿಗೆ ಜೋಡಣೆಯಾಗಲು ಸಾಧ್ಯವಾಗುತ್ತಿತ್ತು. ಈಗ ಪ್ರತ್ಯಕ್ಷ ಕಾರ್ಯ ಪ್ರಾರಂಭವಾದ ಬಳಿಕ ಅವರನ್ನು ಆಯಾ ಪ್ರದೇಶದ ಕಾರ್ಯದೊಂದಿಗೆ ಜೋಡಿಸಲಾಗಿದೆ. ಅವರೂ ಈಗ ವ್ಯಾಪಕಸ್ತರದಲ್ಲಿ ಕಾರ್ಯವನ್ನು ಮಾಡುತ್ತಿದ್ದಾರೆ. ‘ಇದು ಕೇವಲ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂಕಲ್ಪದಿಂದಲೇ ಸಾಧ್ಯವಾಯಿತು ಎಂಬುದು’ ಅನುಭವಕ್ಕೆ ಬಂದಿತು.

೪. ವರ್ಗವಾರು ಸಾಧನಾ ಸತ್ಸಂಗ

೪ ಅ. ಅಕ್ಟೋಬರ್‌ ೨೦೨೦ ರಿಂದ ಪ್ರಾರಂಭವಾದ ಸತ್ಸಂಗ ಮಾಲಿಕೆ ಎಂದರೆ ಸಾಧಕರನ್ನು ತಯಾರಿಸುವ ಪ್ರಮುಖ ಸ್ರೋತ : ಕೆಲವು ಜಿಲ್ಲೆಗಳಲ್ಲಿ ಪ್ರಾರಂಭವಾಗಿರುವ ‘ಆನ್‌ಲೈನ್’ ಸತ್ಸಂಗ ಮತ್ತು ‘ಕುಟುಂಬ ಸತ್ಸಂಗ’ಕ್ಕೆ ವಿಶೇಷ ಸ್ಪಂದನ ದೊರೆಯುತ್ತಿರುವುದರಿಂದ ಈ ಉಪಕ್ರಮವನ್ನು ರಾಷ್ಟ್ರ ಮಟ್ಟದಲ್ಲಿ ಮತ್ತು ಎಲ್ಲಾ ಭಾಷೆಗಳಲ್ಲಿ ಮತ್ತು ಎಲ್ಲಾ ಜಿಲ್ಲೆಗಳಲ್ಲಿ ಕೈಗೊಳ್ಳಲು ನಿರ್ಧರಿಸಲಾಯಿತು. ಇದಕ್ಕಾಗಿ, ಸತ್ಸಂಗದಲ್ಲಿ ‘ಕಲಿಸಲಾಗುವ ವಿಷಯಗಳನ್ನು ಸಮಾನವಿರಿಸುವುದು ಹಾಗೆಯೇ ಸಾಧಕರನ್ನು ಸಿದ್ಧಪಡಿಸುವ ಪ್ರಕ್ರಿಯೆ ಎಲ್ಲರಿಗೂ ಸುಲಭವಾಗಿರುವ ಅಭ್ಯಾಸಕ್ರಮವನ್ನು ದೃಢಪಡಿಸಿಕೊಳ್ಳುವುದು’ ಆಗಿತ್ತು. ಇದಕ್ಕಾಗಿ ಸಂಸ್ಥೆಯ ಸ್ತರದಲ್ಲಿ ನಿಯೋಜನಬದ್ಧ ಪ್ರಯತ್ನ ಮಾಡಲಾಯಿತು. ಶೀಘ್ರ ಆಧ್ಯಾತ್ಮಿಕ ಉನ್ನತಿಯ ದೃಷ್ಟಿಯಿಂದ ‘ಮಟ್ಟಕ್ಕನುಗುಣವಾಗಿ ಸಾಧನೆ’ ಈ ಸಿದ್ಧಾಂತವಿರುವುದರಿಂದ ಸತ್ಸಂಗಕ್ಕೆ ಬರುವ ಸಾಧಕರ ವರ್ಗಕ್ಕೆ ಅನುಗುಣವಾಗಿ (ಅವರು ಕಲಿತು ಕೃತಿಯಲ್ಲಿ ತಂದಿರುವ ವಿಷಯಾನುಸಾರ) ಸತ್ಸಂಗದ ಅಭ್ಯಾಸಕ್ರಮವನ್ನು ಸಿದ್ಧಗೊಳಿಸಲಾಯಿತು. ಅಕ್ಟೋಬರ್‌ ೨೦೨೦ ರಿಂದ ಪ್ರಾರಂಭವಾಗಿರುವ ಸತ್ಸಂಗ ಮಾಲಿಕೆ ಸಾಧಕ ನಿರ್ಮಿತಿಯ ಮುಖ್ಯ ಸ್ರೋತವಾಯಿತು. ಮುಂದಿನ ಕೋಷ್ಟಕದಿಂದ, ೪.೮.೨೦೨೪ ರ ವರೆಗೆ ನಡೆಯುತ್ತಿರುವ ವರ್ಗವಾರು ಸತ್ಸಂಗಗಳ ಕಲ್ಪನೆ ಬರಬಹುದು.

ಟಿಪ್ಪಣಿ : ಇದಲ್ಲದೇ ಕಳೆದ ೪ ವರ್ಷಗಳಲ್ಲಿ, ೧ ಸಾವಿರಕ್ಕಿಂತ ಹೆಚ್ಚು ಸಾಧಕರು ಚತುರ್ಥಶ್ರೇಣಿಯ ಸತ್ಸಂಗದ ಅಭ್ಯಾಸಕ್ರಮವನ್ನು ಪೂರ್ಣಗೊಳಿಸಿ ಕ್ರಿಯಾಶೀಲ ಸಾಧಕರಾಗಿದ್ದಾರೆ. ಅವರು ಈಗ ಸತ್ಸಂಗದ ಮುಂದಿನ ಹಂತವಾದ ಕೇಂದ್ರ ಸಭೆಗೆ ಹೋಗುತ್ತಿದ್ದಾರೆ ಅಥವಾ ಕೇಂದ್ರದಲ್ಲಿ ಜವಾಬ್ದಾರಿಯನ್ನು ವಹಿಸಿಕೊಂಡು ಸಮಷ್ಟಿ ಸಾಧನೆಯನ್ನು ಮಾಡುತ್ತಿದ್ದಾರೆ.     (ಮುಂದುವರಿಯುವುದು)

– ಶ್ರೀಸತ್‍ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಉತ್ತರಾಧಿಕಾರಿಗಳಲ್ಲಿ ಒಬ್ಬರು)