ಸಂಭಾವ್ಯ ಜಾಗತಿಕ ಯುದ್ಧವನ್ನು ಎದುರಿಸಲು ನಾವು ಸಿದ್ಧರಿದ್ದೇವೆಯೆ ?

ಕೇವಲ ಯದ್ಧವಲ್ಲ; ವಿಶ್ವಯುದ್ಧ ಅಥವಾ ಮೂರನೇ ಮಹಾಯುದ್ಧ ಭೂ-ರಾಜಕೀಯವಾಗಿ ಪ್ರಭಾವ ಬೀರದಂತಹ ಸ್ಥಳಗಳ ತನಕ ವೇಗವಾಗಿ ಹರಡುತ್ತಿದೆ. ಹೀಗಿರುವಾಗ ನಾವು ಅಂದರೆ ಭಾರತವು ಸದ್ಯ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಅಡಚಣೆಗಳನ್ನುಂಟು ಮಾಡುವ ಈ ಯುದ್ಧವನ್ನು ಎದುರಿಸಲು ಯೋಗ್ಯ ಯೋಜನೆಯನ್ನು ಹಮ್ಮಿಕೊಳ್ಳುವ ಸಮಯ ಬಂದಿದೆ. ಇತರ ಅನೇಕ ದೇಶಗಳ ಹಾಗೆಯೆ ಯಾವ ದೇಶ ಯಾವಾಗ ನಮ್ಮ ಮೇಲೇರಿ ಬರುವುದು, ಎಂಬುದು ಖಚಿತವಿಲ್ಲ; ಆದರೆ ಈ ಮಹಾಯುದ್ಧದಲ್ಲಿ ನಮ್ಮ ಸಹಭಾಗ ಸಮೀಪಿಸಿದೆ ಹಾಗೂ ಅದು ಹೆಚ್ಚು ದೂರವಿಲ್ಲ, ಎಂಬುದು ಖಚಿತವಾಗಿದೆ.

ನ್ಯಾಯವಾದಿ (ಡಾ.) ಎಚ್‌.ಸಿ. ಉಪಾಧ್ಯಾಯ

೧. ಜಾಗತಿಕ ಶಾಂತಿಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಸಂಯುಕ್ತ ರಾಷ್ಟ್ರಗಳು !

ಅಮೇರಿಕಾ, ರಷ್ಯಾ, ‘ನ್ಯಾಟೋ’ (ಉತ್ತರ ಅಟ್ಲಾಂಟಿಕ್‌ ಒಪ್ಪಂದ ಸಂಘಟನೆ), ಚೀನಾ, ಇಸ್ರೈಲ್, ಯುಕ್ರೇನ್‌ನಂತಹ ದೊಡ್ಡ ಶಕ್ತಿಗಳ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಜಗತ್ತಿನಾದ್ಯಂತ ಕೋಲಾಹಲ ಉಂಟಾಗಿದೆ. ಶಾಂತಿ ಸ್ಥಾಪನೆಗೆ ಸಹಾಯ ಹಾಗೂ ಪ್ರಭಾವೀ ಕಾರ್ಯಾಚರಣೆಗಾಗಿ ಅನೇಕ ದೇಶಗಳು ಸಂಯುಕ್ತ ರಾಷ್ಟ್ರ ಸಂಘದಿಂದ ಅಪೇಕ್ಷೆ ಪಡುತ್ತಿವೆ. ಮೇಲ್ನೋಟಕ್ಕೆ ಜನರು ನಿರಾಶಾಜನಕ ಸ್ಥಿತಿಯಲ್ಲಿದ್ದಾರೆ. ಇತರರ ಮಾತನ್ನು ಕೇಳುವ ಮನಃಸ್ಥಿತಿಯಲ್ಲಿ ಯಾರೂ ಕಾಣಿಸುವುದಿಲ್ಲ. ಇಸ್ರೈಲ್ಂತೂ ಸಂಯುಕ್ತ ರಾಷ್ಟ್ರದ ಸಚಿವರಿಗೆ ‘ಅಯೋಗ್ಯ ವ್ಯಕ್ತಿ’ ಎಂದು ಹೇಳುವಷ್ಟು ಮುಂದುವರಿದಿದೆ. ಬಹುಶಃ ನಿರಾಶೆಯಿಂದ ಹಾಗೂ ‘ಜಾಗತಿಕ ಸಂಸ್ಥೆ ವಿಶ್ವಾಸಘಾತ ಮಾಡಿದೆ’, ಎಂಬ ಭಾವನೆಯಿಂದ ಇಸ್ರೈಲ್‌ನ ಪ್ರಧಾನಮಂತ್ರಿ ಬೆಂಜಮಿನ್‌ ನೇತಾನ್ಯಾಹೂ ಇವರು ಹೀಗೆ ಮಾತನಾಡಿರಬಹುದು; ಆದರೆ ಇಸ್ರೈಲ್‌ನ ಹಾಗೆ ಧ್ವನಿಯೆತ್ತಲು ಸಾಧ್ಯವಿಲ್ಲದ ಇನ್ನಿತರ ದೇಶಗಳು ಕೂಡ ಹೀಗೆಯೆ ವಿಚಾರ ಮಾಡುತ್ತಿವೆ. ಸಂಕ್ಷಿಪ್ತದಲ್ಲಿ ಹೇಳುವುದಾದರೆ ಯುದ್ಧನಿರತ ರಾಷ್ಟ್ರಗಳನ್ನು ಶಾಂತಗೊಳಿಸಲು ಸಂಯುಕ್ತ ರಾಷ್ಟ್ರದಲ್ಲಿ ಯಾವುದೇ ಪರ್ಯಾಯವಿಲ್ಲದ ಕಾರಣ ಅದಕ್ಕೆ ತನ್ನ ಭವಿಷ್ಯವನ್ನು ಎದುರಿಸಬೇಕಾಗಬಹುದು.

೨. ಸಂಭಾವ್ಯ ಮೂರನೇ ಮಹಾಯುದ್ಧ ಮತ್ತು ಭಾರತದ ಸ್ಫೋಟಕ ಸ್ಥಿತಿಯನ್ನು ಗಮನಿಸಿ ತುರ್ತುಪರಿಸ್ಥಿತಿಯನ್ನು ಘೋಷಿಸುವುದು ಆವಶ್ಯಕ !

ಇಂತಹ ಭಯದ ಪರಿಸ್ಥಿತಿಯನ್ನು ಗಮನಿಸಿದರೆ ಒಂದು ರಾಷ್ಟ್ರವೆಂದು ನಾವು ಈ ಚಟುವಟಿಕೆಗಳ ಬಗ್ಗೆ ಗಂಭೀರವಾಗಿ ವಿಚಾರ ಮಾಡುವುದು (ಸಾಧ್ಯವಿದ್ದರೆ ರಾಷ್ಟ್ರೀಯ ಮನ್ನಣೆಯೊಂದಿಗೆ) ಹಾಗೂ ಯುದ್ಧವನ್ನು ಪ್ರಭಾವಪೂರ್ಣವಾಗಿ ಎದುರಿಸಲು ರಣನೀತಿಯನ್ನು ಸಿದ್ಧಪಡಿಸುವುದು ಆವಶ್ಯಕವಾಗಿದೆ. ಸಂವಿಧಾನದ ಕಲಮ್‌ ೩೫೨ ರಲ್ಲಿ ಇಂತಹ ಪರಿಸ್ಥಿತಿಗಾಗಿ ವಿಶೇಷ ವ್ಯವಸ್ಥೆ ಇದೆ. ಅದಕ್ಕನುಸಾರ ರಾಷ್ಟ್ರಪತಿಗಳಿಗೆ ತುರ್ತುಪರಿಸ್ಥಿತಿಯ ಘೋಷಣೆ ಮಾಡುವ ಅಧಿಕಾರ ಇದೆ; ಆದರೆ ಹಾಗೆ ಮಾಡಲು ಪ್ರಧಾನಮಂತ್ರಿಗಳ ಅಧ್ಯಕ್ಷತೆಯ ಮಂತ್ರಿಮಂಡಳಕ್ಕೆ ‘ಯುದ್ಧ ಅಥವಾ ಬಾಹ್ಯ ಆಕ್ರಮಣದ ಗಂಭೀರ ಅಪಾಯವಿದೆ’, ಎನ್ನುವ ತೀರ್ಮಾನ ಮಾಡಬೇಕಾಗುತ್ತದೆ. ಅನಂತರ ಈ ತೀರ್ಮಾನವನ್ನು ತುರ್ತುಪರಿಸ್ಥಿತಿಯ ಘೋಷಣೆಗಾಗಿ ರಾಷ್ಟ್ರಪತಿಗಳಿಗೆ ಕಳುಹಿಸಲಾಗುತ್ತದೆ. ನಿಜ ನೋಡಿದರೆ ದೇಶದ ಇಂದಿನ ಪರಿಸ್ಥಿತಿ ಭಯಾನಕವಾಗಿದೆ. ದೇಶ ವಿಘಟಿತವಾಗಿದೆ  ಹಾಗೂ ಅರಾಜಕತೆಯು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಅರಾಜಕತೆಗಾಗಿ ಜಿಹಾದಿಗಳು, ಮತಾಂಧರು ಮತ್ತು ರಾಷ್ಟ್ರವಿರೋಧಿ ಶಕ್ತಿಗಳು ಹಗಲಿರುಳು ಪ್ರಯತ್ನಿಸುತ್ತಿದ್ದಾರೆ. ಪಕ್ಕದ ಶತ್ರು ರಾಷ್ಟ್ರಗಳು ಭಾರತದ ವಿರುದ್ಧ ಯುದ್ಧ ಮಾಡಲು ಅವಕಾಶವನ್ನು ನೋಡುತ್ತಿವೆ.

೩. ಯುದ್ಧಜನ್ಯ ಸ್ಥಿತಿಯನ್ನು ಕಣ್ಮುಂದಿಟ್ಟು ತುರ್ತುಪರಿಸ್ಥಿತಿಯನ್ನು ಹೇರುವುದು ಆಕ್ಷೇಪಾರ್ಹವಲ್ಲ !

ದುರದೃಷ್ಟವಶಾತ್‌ ರಾಜಕೀಯ ಅಧಿಕಾರವನ್ನು ಉಳಿಸಿಕೊಳ್ಳುವ ದುರುದ್ದೇಶದಿಂದ ೧೯೭೫ ರಲ್ಲಿ ಕ್ರೂರ ಹಾಗೂ ಕಾನೂನುಬಾಹಿರವಾಗಿ ಹೇರಿದ ತುರ್ತುಪರಿಸ್ಥಿತಿಯ ಪರಿಣಾಮವನ್ನು ಲಕ್ಷಗಟ್ಟಲೆ ಅಮಾಯಕರು ಸಹಿಸಿಕೊಳ್ಳಬೇಕಾಯಿತು. ಆದ್ದರಿಂದ ತುರ್ತು ಪರಿಸ್ಥಿತಿಗೆ ‘ದೆವ್ವದ ಆಡಳಿತ’, ಎನ್ನುವ ಸಂಶಯಾಸ್ಪದ ಸ್ವರೂಪ ಪ್ರಾಪ್ತಿಯಾಗಿದೆ; ಆದರೆ ಅದು ನಿಜವಲ್ಲ. ೧೯೬೨ ರಲ್ಲಿ ಚೀನಾದೊಂದಿಗಿನ ಯುದ್ಧ ಹಾಗೂ ೧೯೭೧ ರಲ್ಲಿ ಪಾಕಿಸ್ತಾನದೊಂದಿಗಿನ ಯುದ್ಧ, ಈ ಯುದ್ಧಗಳ ಸಂದರ್ಭದಲ್ಲಿ ಘೋಷಣೆ ಮಾಡಿರುವ ತುರ್ತುಪರಿಸ್ಥಿತಿಯ ಘೋಷಣೆಗಳ ವಿಚಾರ ಮಾಡಿರಿ. ಈ ಎರಡು ಆಪತ್ಕಾಲಿನ ಪರಿಸ್ಥಿತಿಯ ವಿರುದ್ಧ ಯಾರು ಕೂಡ ಆಕ್ಷೇಪವೆತ್ತಲಿಲ್ಲ. ಆದ್ದರಿಂದ ‘ಆಪತಾಲೀನ’ ಈ ಶಬ್ದ ಕೆಟ್ಟದಲ್ಲ; ಆದರೆ ತುರ್ತುಪರಿಸ್ಥಿತಿಯನ್ನು ಹೇರುವ ನಿರ್ಣಯದ ಹಿಂದಿನ ಉದ್ದೇಶ ವೈಯಕ್ತಿಕ ಅಥವಾ ಪಕ್ಷಪಾತಿ ಹಿತಸಾಧಿಸುವುದಾಗಿದ್ದರೆ, ಅದು ಕೆಟ್ಟದ್ದು ಹಾಗೂ ಅಯೋಗ್ಯವಾಗಿದೆ.

ಈ ದೃಷ್ಟಿಕೋನದಿಂದ ತುರ್ತುಪರಿಸ್ಥಿತಿಯನ್ನು ಘೋಷಣೆ ಮಾಡುವುದು ಯೋಗ್ಯ ಮಾತ್ರವಲ್ಲ, ಅನಿವಾರ್ಯವೂ ಆಗಿದೆ. ತುಂಬಾ ಬಾಯಾರಿಕೆಯಾದಾಗ ಬಾವಿ ತೋಡುವುದಲ್ಲ; ಮುಂದೆ ಬೇಕಾಗುವ ನೀರಿನ ಅವಶ್ಯಕತೆಯ ಬಗ್ಗೆ ಮೊದಲೆ ಚಿಂತನೆ ಮಾಡಿ ಬಾವಿಯನ್ನು ಅಗೆಯುವ ಕಾರ್ಯವನ್ನು ಮಾಡಬೇಕಾಗುತ್ತದೆ. ಈ ದೂರದೃಷ್ಟಿಯನ್ನು ಸಂವಿಧಾನದ ಕಲಮ್‌ ೩೫೨ ರಲ್ಲಿ ಸಮಾವೇಶಗೊಳಿಸಲಾಗಿದೆ. ತುರ್ತುಪರಿಸ್ಥಿತಿಯನ್ನು ಹೇರಿದ ನಂತರ ‘ಭಾರತೀಯ ರಕ್ಷಣಾ ಕಾನೂನು’ ಮತ್ತು ಅದರಡಿಯಲ್ಲಿ ಸಿದ್ಧಪಡಿಸಿರುವ ನಿಯಮಗಳ ಅನುಷ್ಠಾನ ಮಾಡಬೇಕು. ಸಂಕ್ಷಿಪ್ತದಲ್ಲಿ ಹೇಳುವುದಾದರೆ ಸರಕಾರವು ಇಂದಿನ ಅತ್ಯಂತ ಚಿಂತಾಜನಕ ಪರಿಸ್ಥಿತಿಯನ್ನು ಗಮನಿಸಿ ದೇಶದ ಭದ್ರತೆ, ಸಾರ್ವಭೌಮತ್ವ, ಅಖಂಡತೆ, ಐಕ್ಯ ಹಾಗೂ ಪ್ರಜಾಪ್ರಭುತ್ವವನ್ನು ಕಾಪಾಡಲು ಎಲ್ಲ ರೀತಿಯ ಕಾನೂನು ಪ್ರಕಾರ ಹಾಗೂ ಕಾರ್ಯಶೈಲಿಯ ಹೆಜ್ಜೆ ಇಡುವ ಸಮಯ ಬಂದಿದೆ.

– ನ್ಯಾಯವಾದಿ (ಡಾ.) ಎಚ್‌.ಸಿ. ಉಪಾಧ್ಯಾಯ, ಭಾಗ್ಯನಗರ, ತೆಲಂಗಾಣ.