‘ಪ.ಪೂ. ಡಾಕ್ಟರರು ‘ಸಾಧಕರ ವೈಯಕ್ತಿಕ ಆಧ್ಯಾತ್ಮಿಕ ಉನ್ನತಿ’, ಈ ವ್ಯಷ್ಟಿ ಉದ್ದೇಶ ಮತ್ತು ‘ಹಿಂದೂ ರಾಷ್ಟ್ರ’ ಸ್ಥಾಪನೆ ಈ ಸಮಷ್ಟಿ ಉದ್ದೇಶವನ್ನಿಟ್ಟುಕೊಂಡು ಸನಾತನ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅದಕ್ಕಾಗಿ ಪ.ಪೂ. ಡಾಕ್ಟರರು ಸನಾತನ ಸಂಸ್ಥೆಯಲ್ಲಿ ‘ಸಾಧಕರ ಸಾಧನೆಗೆ ಪೂರಕವಾಗಿರುವ ಕಾರ್ಯಪದ್ಧತಿಗಳನ್ನು ಹಾಕಿಕೊಟ್ಟಿದ್ದಾರೆ. ಈ ಕಾರ್ಯಪದ್ಧತಿಗಳ ವೈಶಿಷ್ಟ್ಯವೆಂದರೆ, ಆ ಕಾರ್ಯಪದ್ಧತಿಗಳನ್ನು ಪಾಲಿಸುವ ಸಾಧಕರ ಆಧ್ಯಾತ್ಮಿಕ ಉನ್ನತಿ ಸಹಜವಾಗಿ ಆಗುತ್ತದೆ. ಈ ಕಾರ್ಯಪದ್ಧತಿಯು ನನಗೆ ಮತ್ತು ಸನಾತನದ ಎಲ್ಲ ಸಾಧಕರ ಆಧ್ಯಾತ್ಮಿಕ ಉನ್ನತಿಯಾಗಲು ತುಂಬಾ ಲಾಭದಾಯಕವಾಗಿದೆ ಮತ್ತು ಈಗಲೂ ಆಗುತ್ತಿದೆ. ಈ ಉತ್ಕೃಷ್ಟ ಕಾರ್ಯಪದ್ಧತಿಯಿಂದ ಕೇವಲ ೧೨ ವರ್ಷಗಳಲ್ಲಿ (೧೯೯೮ ರಿಂದ ೨೦೧೦) ನನ್ನ ಸಂತಪದವಿಯ ವರೆಗಿನ ಪ್ರವಾಸವು ಶೀಘ್ರ ಗತಿಯಲ್ಲಿ ಆಯಿತು. ಇದರಿಂದ ‘ಆ ಕಾರ್ಯಪದ್ಧತಿಗಳು ಎಷ್ಟು ಯೋಗ್ಯವಾಗಿವೆ ಮತ್ತು ಎಷ್ಟು ಉಪಯುಕ್ತವಾಗಿವೆ ?’, ಎಂಬುದು ಸಿದ್ಧವಾಯಿತು.
೧. ಸತ್ಸಂಗದಲ್ಲಿನ ಜಿಜ್ಞಾಸುಗಳ ಸಂದೇಹ ನಿವಾರಣೆ ಮಾಡುವುದು
ಜಿಜ್ಞಾಸು ವ್ಯಕ್ತಿಯು ಯಾವಾಗ ಮೊದಲನೇ ಬಾರಿ ಸತ್ಸಂಗಕ್ಕೆ ಬರುತ್ತಾನೆಯೋ, ಆಗ ಅವರ ಮನಸ್ಸಿನಲ್ಲಿ ಸಾಧನೆಯ ಬಗ್ಗೆ ಅನೇಕ ಪ್ರಶ್ನೆಗಳಿರುತ್ತವೆ. ಸತ್ಸಂಗದಲ್ಲಿ ಆ ಸಂದೇಹಗಳ ಸಂಪೂರ್ಣ ಸಮಾಧಾನವಾಗುವವರೆಗೆ ಅವರ ಪ್ರತಿಯೊಂದು ಪ್ರಶ್ನೆಯ ಉತ್ತರವನ್ನು ಕೊಡಲಾಗುತ್ತದೆ. ‘ಸಾಧನೆಯನ್ನು ಏಕೆ ಮತ್ತು ಹೇಗೆ ಮಾಡಬೇಕು ?’, ಹಿಂದೂ ಧರ್ಮದಲ್ಲಿ ಅನೇಕ ದೇವತೆಗಳಿದ್ದಾರೆ, ‘ಯಾವ ದೇವತೆಯ ಆರಾಧನೆಯನ್ನು ಮಾಡಬೇಕು ?’, ಇದುವರೆಗೆ ವ್ಯಕ್ತಿ ಮಾಡುತ್ತಿರುವ ಸಾಧನೆ ಮತ್ತು ಸನಾತನ ಸಂಸ್ಥೆಯು ಹೇಳುತ್ತಿರುವ ಸಾಧನೆ’, ಇವುಗಳಲ್ಲಿನ ವ್ಯತ್ಯಾಸ’, ಇತ್ಯಾದಿಗಳ ಸಂದೇಹ ನಿವಾರಣೆ ಮಾಡಿದ್ದರಿಂದ ಜಿಜ್ಞಾಸುಗಳ ಸಾಧನೆಯು ಸಂದೇಹಗಳಿಲ್ಲದೇ ನಡೆಯುತ್ತದೆ. ಜಿಜ್ಞಾಸುಗಳ ಯಾವುದಾದರೊಂದು ಪ್ರಶ್ನೆಗೆ ಉತ್ತರವನ್ನು ಸತ್ಸಂಗಸೇವಕನಿಗೆ ಕೊಡಲು ಸಾಧ್ಯವಾಗದಿದ್ದರೆ, ಅವನು ಜವಾಬ್ದಾರ ಸಾಧಕರನ್ನು ಕೇಳಿ ಮುಂದಿನ ಸತ್ಸಂಗದಲ್ಲಿ ಜಿಜ್ಞಾಸುಗಳ ಸಂದೇಹ ನಿವಾರಣೆ ಮಾಡುತ್ತಾನೆ.
೨. ಸತ್ಸಂಗದಲ್ಲಿನ ಸಾಧಕರನ್ನು ವೈಯಕ್ತಿಕ ಸಂಪರ್ಕ ಮಾಡುವುದು
ಸತ್ಸಂಗದಲ್ಲಿ ಹೊಸದಾಗಿ ಬಂದಿರುವ ಜಿಜ್ಞಾಸುವನ್ನು ಕೆಲವು ದಿನಗಳ ನಂತರ ಸತ್ಸಂಗಸೇವಕರು ಅಥವಾ ಇತರ ಜವಾಬ್ದಾರ ಸಾಧಕರ ವೈಯಕ್ತಿಕ ಸಂಪರ್ಕ ಮಾಡುತ್ತಾರೆ. ‘ಅವನೊಂದಿಗೆ ಆತ್ಮೀಯತೆಯನ್ನು ಬೆಳೆಸುವುದು’, ಇದೇ ಅದರ ಹಿಂದಿನ ಉದ್ದೇಶವಾಗಿರುತ್ತದೆ. ಈ ಭೇಟಿಯಲ್ಲಿ ಜಿಜ್ಞಾಸುವಿಗೆ ಸಾಧನೆ ಮತ್ತು ಸನಾತನ ಸಂಸ್ಥೆಯ ಬಗ್ಗೆ ಸ್ವಲ್ಪ ಹೆಚ್ಚು ಮಾಹಿತಿಯನ್ನು ಹೇಳಲಾಗುತ್ತದೆ. ಒಟ್ಟಿನಲ್ಲಿ ಅದೊಂದು ಒಳ್ಳೆಯ ಸತ್ಸಂಗವೇ ಆಗಿರುತ್ತದೆ.
೩. ಸತ್ಸಂಗ ಮಹೋತ್ಸವಗಳ ಆಯೋಜನೆ
೩ ಅ. ಸಾಧನೆಯಿಂದಾದ ಬದಲಾವಣೆ ಮತ್ತು ಬಂದ ಅನುಭೂತಿಗಳನ್ನು ಕೇಳಿ ಸಾಧನೆಗಾಗಿ ಪ್ರೋತ್ಸಾಹ ಸಿಗುವುದು : ಪ್ರತಿ ೩-೪ ತಿಂಗಳಿಗೊಮ್ಮೆ ಹೊಸ ಮತ್ತು ಹಳೆಯ ಸಾಧಕರನ್ನು ಸೇರಿಸಿ ಸತ್ಸಂಗ ಮಹೋತ್ಸವಗಳ ಆಯೋಜನೆಯನ್ನು ಮಾಡಲಾಗುತ್ತಿತ್ತು. ಅದರಲ್ಲಿ ‘ಸಾಧಕರಿಗೆ ಸಾಧನೆಯನ್ನು ಮಾಡುವಾಗ ಬಂದ ಅನುಭೂತಿಗಳು ಮತ್ತು ಅವುಗಳ ಬಗ್ಗೆ ವಿಶ್ಲೇಷಣೆ, ಸಾಧನೆಯಿಂದ ಸಾಧಕರಲ್ಲಿ ಆಗುತ್ತಿರುವ ಬದಲಾವಣೆ’, ಇತ್ಯಾದಿ ವಿಷಯಗಳನ್ನು ಎಲ್ಲರ ಮುಂದೆ ಹೇಳಲಾಗುತ್ತಿತ್ತು.
೩ ಆ. ಸೇವೆಯನ್ನು ಪ್ರತ್ಯಕ್ಷ ಮಾಡಿ ತೋರಿಸುವುದರಿಂದ ‘ಸೇವೆಯನ್ನು ಹೇಗೆ ಮಾಡಬೇಕು ?’, ಎಂಬುದು ತಿಳಿಯುವುದು : ‘ಸೇವೆಯನ್ನು ಹೇಗೆ ಮಾಡಬೇಕು ?’, ಎಂಬುದನ್ನು ಪ್ರತ್ಯಕ್ಷ ಮಾಡಿ ತೋರಿಸುವುದರಿಂದ, ಉದಾ. ‘ಸನಾತನ ಪ್ರಭಾತ’ ನಿಯತಕಾಲಿಕೆಗಳ ಅಥವಾ ‘ಸನಾತನ-ನಿರ್ಮಿತ ಗ್ರಂಥಗಳ ಮಾಹಿತಿಯನ್ನು ಹೇಗೆ ಹೇಳಬೇಕು ?’, ‘ಸಾಧನೆಯ ಮಹತ್ವವನ್ನು ಹೇಗೆ ಹೇಳಬೇಕು ?’, ‘ಸಮಾಜವು ಕೇಳಿದ ಪ್ರಶ್ನೆಗಳಿಗೆ ಯೋಗ್ಯ ಮತ್ತು ಸೂಕ್ತ ಉತ್ತರಗಳನ್ನು ಹೇಗೆ ಕೊಡಬೇಕು ?’, ಎಂಬುದರ ಬಗ್ಗೆ ಪ್ರತ್ಯಕ್ಷ ಕೃತಿ ಮಾಡಿ ತೋರಿಸಲಾಗುತ್ತಿತ್ತು.
೩ ಇ. ಸಮಾರಂಭದಲ್ಲಿ ಕೊನೆಗೆ ಜವಾಬ್ದಾರ ಸಾಧಕರ ‘ಸಾಧನೆ’ ಈ ವಿಷಯದ ಬಗ್ಗೆ ಮಾರ್ಗದರ್ಶನವಾಗುತ್ತಿತ್ತು
ಆದ್ದರಿಂದ ಇಂತಹ ಸತ್ಸಂಗ ಸಮಾರಂಭಗಳಿಂದ ತುಂಬಾ ಕಲಿಯಲು ಸಿಗುತ್ತಿರುವುದರಿಂದ ಸಾಧಕರು ಕೃತಿಶೀಲರಾಗಲು ಸಹಾಯವಾಗುತ್ತಿತ್ತು.
೪. ಹೊಸ ಸಾಧಕನಿಗೆ ಸಾಧನೆಯಲ್ಲಿನ ಸೇವೆಯ ಮಹತ್ವವನ್ನು ಹೇಳಿ ಕೃತಿಶೀಲ ಮಾಡುವುದು
ಸಾಧಕರು ಕೆಲವು ದಿನಗಳ ತನಕ ಸತ್ಸಂಗಕ್ಕೆ ಬಂದ ನಂತರ ಅವರಿಗೆ ಸೇವೆಯ ಮಹತ್ವವನ್ನು ಹೇಳಿ ಅವರಿಗೆ ‘ಇಷ್ಟವಾಗುವ ಮತ್ತು ಅವರಿಗೆ ಹೊಂದಾಣಿಕೆ ಆಗುವ’, ಸೇವೆಯನ್ನು ಹೇಳಲಾಗುತ್ತಿತ್ತು. ಇದರಿಂದ ನಾಮಜಪ, ಸತ್ಸಂಗ ಇವುಗಳೊಂದಿಗೆ ಸಮಷ್ಟಿ ಸೇವೆಯ ಹಂತವೂ ಮುಂದುವರೆದು ಶೀಘ್ರ ಆಧ್ಯಾತ್ಮಿಕ ಉನ್ನತಿಯ ಮಾರ್ಗವು ಸುಲಭವಾಗುತ್ತಿತ್ತು. ನಾನು ಸತ್ಸಂಗಕ್ಕೆ ಹೋಗತೊಡಗಿದ ನಂತರ ಕೇವಲ ಒಂದೇ ತಿಂಗಳಲ್ಲಿ ಸೇವೆಯನ್ನು ಮಾಡತೊಡಗಿದೆ. ಮೊದಲಿಗೆ ಯಾವುದಾದರೊಬ್ಬ ಅನುಭವವಿರುವ ಸಾಧಕರೊಂದಿಗೆ ಸೇವೆಗೆ ಹೋಗಿದ್ದರಿಂದ ‘ಅಧ್ಯಾತ್ಮದ ಪ್ರಸಾರವನ್ನು ಹೇಗೆ ಮಾಡಬೇಕು ?’, ಎಂಬುದು ನನಗೆ ಪ್ರತ್ಯಕ್ಷ ಕಲಿಯಲು ಸಿಕ್ಕಿತು. ಕ್ರಮೇಣ ಸೇವೆಯಲ್ಲಿನ ಸಣ್ಣಪುಟ್ಟ ವಿಷಯಗಳು ಗಮನಕ್ಕೆ ಬಂದು ಸೇವೆ ಮಾಡುವುದರಲ್ಲಿನ ನನ್ನ ಆತ್ಮವಿಶ್ವಾಸವು ಹೆಚ್ಚಾಯಿತು.
೪ ಅ. ಸಮಷ್ಟಿ ಸೇವೆಯಲ್ಲಿ ಗುರುಕೃಪೆಯಿಂದ ಹೆಚ್ಚು ಅನುಭೂತಿಗಳು ಬರುವುದರಿಂದ ಶ್ರದ್ಧೆ ಹೆಚ್ಚಾಗಿ ಸೇವೆಗಳನ್ನು ಮಾಡಲು ಪ್ರೋತ್ಸಾಹ ಸಿಗುವುದು : ತುಂಬಾ ಸಮಯದ ವರೆಗೆ ಕುಳಿತು ನಾಮಸ್ಮರಣೆ ಮಾಡುವಾಗ ಮನಸ್ಸು ಅಷ್ಟು ಸಮಯ ಏಕಾಗ್ರ ಆಗುವುದಿಲ್ಲ. ಅದಕ್ಕಿಂತ ಸೇವೆಯಲ್ಲಿ ಮನಸ್ಸು ಬೇಗ ಏಕಾಗ್ರವಾಗಿ ಈಶ್ವರೀ ಅನುಸಂಧಾನದಲ್ಲಿರುತ್ತದೆ. ಆದ್ದರಿಂದ ಸಮಷ್ಟಿ ಸೇವೆಯಲ್ಲಿ ಗುರುಕೃಪೆಯೂ ಹೆಚ್ಚು ಪ್ರಮಾಣದಲ್ಲಾಗಿ ಅನುಭೂತಿಗಳೂ ಹೆಚ್ಚು ಬರುತ್ತವೆ. ಅನುಭೂತಿಗಳಿಂದ ಶ್ರೀ ಗುರುಗಳ ಮೇಲಿನ ಶ್ರದ್ಧೆ ಹೆಚ್ಚಾಗಲು ಸಹಾಯವಾಗುತ್ತದೆ. ಅದರ ಪರಿಣಾಮದಿಂದ ಸಮಷ್ಟಿ ಸೇವೆಯನ್ನು ಮಾಡಲು ಪ್ರೋತ್ಸಾಹ ಸಿಗುತ್ತದೆ.
೫. ಪರಾತ್ಪರ ಗುರು ಡಾ. ಆಠವಲೆಯವರು ಅನೇಕ ಸೇವೆಗಳನ್ನು ಒದಗಿಸಿಕೊಡುವುದು
೫ ಅ. ‘ಸಾಧಕರ ಸಾಧನೆ ಆಗಬೇಕು’, ಎಂದು ಪರಾತ್ಪರ ಗುರು ಡಾಕ್ಟರರು ಅನೇಕ ಸೇವೆಗಳನ್ನು ಒದಗಿಸಿಕೊಡುವುದು : ಪ.ಪೂ. ಡಾಕ್ಟರರು ‘ಸಾಧಕರ ಸಾಧನೆ ಆಗಬೇಕು’, ಎಂದು ‘ಧರ್ಮಪ್ರಸಾರದಲ್ಲಿ ಬರುವ ಪ್ರವಚನಗಳು ಮತ್ತು ಸತ್ಸಂಗಗಳನ್ನು ತೆಗೆದುಕೊಳ್ಳುವುದು, ವೈಯಕ್ತಿಕ ಸಂಪರ್ಕ ಮತ್ತು ಸನಾತನ-ನಿರ್ಮಿತ ಗ್ರಂಥಗಳನ್ನು ವಿತರಣೆ ಮಾಡುವುದು, ‘ಸನಾತನ ಪ್ರಭಾತ’ ನಿಯತಕಾಲಿಕೆಗಳಿಗಾಗಿ ಜಾಹೀರಾತುಗಳನ್ನು ತರುವುದು, ವಾರ್ತೆಗಳನ್ನು ಸಿದ್ಧಪಡಿಸುವುದು, ನಿಯತಕಾಲಿಕೆಗಳನ್ನು ವಿತರಣೆ ಮಾಡುವುದು, ಹಾಗೆಯೇ ಆಶ್ರಮದಲ್ಲಿನ ಸೇವೆಗಳ ಆಯೋಜನೆ ಮಾಡುವುದು, ಆ ಸೇವೆಗಳ ಸಮನ್ವಯ ಮಾಡುವುದು, ಉದಾ. ಅಡುಗೆ ಮಾಡುವುದು, ಧಾನ್ಯಗಳ ಸ್ವಚ್ಛತೆ, ಆಶ್ರಮದ ಸ್ವಚ್ಛತೆ, ರೋಗಿ ಮತ್ತು ವೃದ್ಧ ಸಾಧಕರ ಕಾಳಜಿಯನ್ನು ತೆಗೆದುಕೊಳ್ಳುವುದು, ವಾಹನಗಳನ್ನು ನಡೆಸುವುದು, ವಾಹನಗಳ ದುರುಸ್ತಿ ಇತ್ಯಾದಿ ಅನೇಕ ಸೇವೆಗಳನ್ನು ಲಭ್ಯಮಾಡಿಕೊಟ್ಟಿದ್ದಾರೆ. ಆಶ್ರಮದಲ್ಲಿನ ಈ ಎಲ್ಲ ಸೇವೆಗಳನ್ನು ಸಾಧಕರಿಂದ ಸಾಧನೆಯೆಂದು ಮಾಡಿಸಿಕೊಳ್ಳಲಾಗುತ್ತದೆ. ಇವುಗಳ ಹೊರತಾಗಿ ‘ಸಂಗೀತ, ನೃತ್ಯ, ಚಿತ್ರಕಲೆ, ಶಿಲ್ಪಕಲೆ, ಚಿತ್ರೀಕರಣ, ಕಟ್ಟಡ, ವಿದ್ಯುತ್‌ಸೇವೆ, ಕೃಷಿ, ಸಂಶೋಧನೆ, ಬೆರಳಚ್ಚು, ಅನುವಾದ ಮತ್ತು ಗ್ರಂಥಸಂಕಲನ, ವಿವಿಧ ಜಾಲತಾಣಗಳಿಗಾಗಿ ಲೇಖನಗಳನ್ನು ಬರೆಯುವುದು, ಜಾಲತಾಣಗಳ ಮಾಧ್ಯಮದಿಂದ ಪ್ರಸಾರ’ ಇತ್ಯಾದಿ ಅನೇಕ ಸೇವೆಗಳನ್ನು ಲಭ್ಯಗೊಳಿಸಿದ್ದಾರೆ.
೫ ಆ. ಸಾಧನೆಗಾಗಿ ವಿವಿಧ ರೀತಿಯ ವಿಪುಲ ಸೇವೆಗಳನ್ನು ಲಭ್ಯಗೊಳಿಸಿ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರ ಮೇಲೆ ಕೃಪೆಯನ್ನೇ ಮಾಡಿದ್ದಾರೆ : ‘ನನಗೆ ಮಾಡಲು ಸೇವೆ ಇಲ್ಲ ಅಥವಾ ನನ್ನ ಸೇವೆ ಪೂರ್ತಿ ಆಯಿತು’, ಎಂದು ಸನಾತನದಲ್ಲಿ ಯಾವುದೇ ಸಾಧಕನು ಎಂದಿಗೂ ಹೇಳಲು ಸಾಧ್ಯವಿಲ್ಲ; ಏಕೆಂದರೆ ಪ.ಪೂ. ಡಾಕ್ಟರರು ‘ಪ್ರಕೃತಿ, ವಯಸ್ಸು, ಸಾಧಕರ ಕ್ಷಮತೆ, ಕೌಶಲ್ಯ, ಆಧ್ಯಾತ್ಮಿಕ ಮಟ್ಟ, ದೊರಕುವ ಸಮಯ ಇವುಗಳಿಗನುಸಾರ ಮನೆಯಲ್ಲಿದ್ದೂ ಮಾಡಬಹುದು’, ಇಂತಹ ವಿವಿಧ ರೀತಿಯ ಸೇವೆಗಳನ್ನು ವಿಪುಲ ಪ್ರಮಾಣದಲ್ಲಿ ಲಭ್ಯಗೊಳಿಸಿ ಸಾಧಕರ ಮೇಲೆ ಅನಂತ ಕೋಟಿ ಕೃಪೆಯನ್ನೇ ಮಾಡಿದ್ದಾರೆ. ಸಮಾಜದಲ್ಲಿ ಅನೇಕ ಸಂಪ್ರದಾಯಗಳಿವೆ; ಆದರೆ ಅವರ ಬಳಿ ತಿಂಗಳಲ್ಲಿ ಕೆಲವು ದಿನಗಳು ಅಥವಾ ಕೆಲವು ಸ್ಥಳಗಳಲ್ಲಿ ವರ್ಷದಲ್ಲಿ ಸೀಮಿತ ಕಾಲಾವಧಿಯ ಸೇವೆಗಳು ಇರುತ್ತವೆ .
೬. ‘ಸಾಧಕನು ಯಾವ ಸೇವೆಯನ್ನು ಮಾಡುತ್ತಾನೆ ?’, ಅದಕ್ಕಿಂತ ‘ಅವನು ಸೇವೆಯನ್ನು ಹೇಗೆ ಮಾಡುತ್ತಾನೆ ?’, ಎಂಬುದಕ್ಕೆ ಹೆಚ್ಚು ಮಹತ್ವವಿದೆ
ಗುರುದೇವರು ಸಾಧಕರಿಗೆ ‘ಸೇವೆಯನ್ನು ಸಾಧನೆಯೆಂದು ಹೇಗೆ ಮಾಡಬೇಕು ?’, ಎಂಬುದನ್ನು ಕಲಿಸಿದ್ದಾರೆ. ಗುರುದೇವರು ‘ಯಾವುದೇ ಸೇವೆಯು ಶ್ರೇಷ್ಠ ಅಥವಾ ಕನಿಷ್ಠವಲ್ಲ’, ಎಂಬುದನ್ನು ಸಾಧಕರ ಮನಸ್ಸಿನಲ್ಲಿ ಬಿಂಬಿಸಿದ್ದಾರೆ. ಅವರು, ”ನೀವು ಯಾವ ಸೇವೆಯನ್ನು ಮಾಡುತ್ತೀರಿ ?’, ಎಂಬುದು ಮಹತ್ವದ್ದಲ್ಲ. ‘ನೀವು ಅದನ್ನು ಹೇಗೆ ಮಾಡುತ್ತೀರಿ ?’, ಎಂಬುದು ಮಹತ್ವದ್ದಾಗಿದೆ. ಸಾವಿರಾರು ಜನರ ಮುಂದೆ ಪ್ರವಚನವನ್ನು ತೆಗೆದುಕೊಳ್ಳುವವನು ಮತ್ತು ಆಶ್ರಮದಲ್ಲಿ ಸ್ವಚ್ಛತೆಯ ಸೇವೆಯನ್ನು ಮಾಡುವವನು ಈ ಇಬ್ಬರೂ ಭಾವಪೂರ್ಣ ಸೇವೆಯನ್ನು ಮಾಡಿದರೆ ಇಬ್ಬರ ಪ್ರಗತಿಯೂ ಸಮಾನವಾಗುತ್ತದೆ’’ ಎಂದು ಹೇಳುತ್ತಾರೆ. ಆದ್ದರಿಂದ ಅಡುಗೆಮನೆಯಲ್ಲಿ ಸೇವೆ ಮಾಡುವ ಅಥವಾ ದೊಡ್ಡ ಪ್ರಮಾಣದಲ್ಲಿ ಸಮಷ್ಟಿ ಸೇವೆ ಮಾಡುವ ಸಾಧಕನಿರಲಿ, ಎಲ್ಲರ ಪ್ರಗತಿಯೂ ಆಗುತ್ತಿದೆ. ಆದ್ದರಿಂದ ಸಾಧಕರು ಯಾವುದೇ ಸೇವೆಯನ್ನು ಮಾಡಲು ಸಿದ್ಧರಾಗುತ್ತಾರೆ.
೭. ಸಾಧಕರಿಗೆ ಸಾಧನೆಯ ಮುಂದಿನ ಹಂತಕ್ಕೆ ಹೋಗಲು ಮಾರ್ಗದರ್ಶನ ದೊರಕಲು ಅನುಕೂಲ ಮಾಡಿಕೊಡುವುದು
ಗುರುದೇವರು ಸಾಧಕನ ಸಾಧನೆಯು ಒಂದು ನಿರ್ದಿಷ್ಠ ಹಂತವನ್ನು ತಲುಪಿದಾಗ ಅವನಿಗೆ ಸಾಧನೆಯಲ್ಲಿನ ಮುಂದಿನ ಹಂತಕ್ಕೆ ಹೋಗಲು ಮಾರ್ಗದರ್ಶನ ಸಿಗಲು ಉತ್ತಮ ವ್ಯವಸ್ಥೆ ಮಾಡಿದ್ದಾರೆ. ಸಾಧಕನು ಸಮಷ್ಟಿ ಸೇವೆಯನ್ನು ಮಾಡಲು ಕೃತಿಶೀಲನಾದ ನಂತರ ಅವನಿಗೆ ಮುಂದಿನ ಹಂತದ ಸತ್ಸಂಗ ಸಿಗುತ್ತದೆ. ಇದರಲ್ಲಿ ‘ಪ್ರಸಾರ ಎಲ್ಲಿ ಮಾಡಬೇಕು ಮತ್ತು ಹೇಗೆ ಮಾಡಬೇಕು ?’, ಎಂಬುದರ ಚಿಂತನೆ ಮತ್ತು ಆಯೋಜನೆ ಮಾಡಲಾಗುತ್ತದೆ. ಇದರಿಂದ ಪರಿಪೂರ್ಣ ಸೇವೆಯನ್ನು ಮಾಡುವ ಪ್ರಯತ್ನಗಳಿಂದ ಸಾಧಕರ ಸೇವೆಯ ಮಾಧ್ಯಮದಿಂದ ಸಾಧನೆಯಾಗುತ್ತದೆ.
೮. ಯಾವುದಾದರೊಂದು ಸೇವೆಯ ಜವಾಬ್ದಾರಿಯನ್ನು ತೆಗೆದುಕೊಂಡು ಸೇವೆಯನ್ನು ಮಾಡುವಾಗ ಸಾಧಕನಿಗೆ ಎಲ್ಲ ರೀತಿಯ ಸಹಾಯವನ್ನು ನೀಡಲಾಗುತ್ತದೆ, ಆದುದರಿಂದ ಸಾಧಕನು ಉತ್ಸಾಹದಿಂದ ಸೇವೆಯನ್ನು ಮಾಡುವನು
ಸಾಧಕನು ಕ್ರಮೇಣ ಜವಾಬ್ದಾರಿಯನ್ನು ತೆಗೆದುಕೊಂಡು ಸೇವೆಯನ್ನು ಮಾಡಲು ಆರಂಭಿಸುತ್ತಾನೆ. ಅವನಿಗೆ ಯಾವುದಾದರೊಂದು ಸೇವೆಯ ಜವಾಬ್ದಾರಿಯನ್ನು ಕೊಡುವಾಗ ಸೇವೆಯ ವ್ಯಾಪ್ತಿಯನ್ನು ತಿಳಿಸಿ ಹೇಳಲಾಗುತ್ತದೆ. ಸೇವೆಯನ್ನು ಮಾಡುವಾಗ ಅಡಚಣೆಗಳು ಬಂದರೆ ‘ಆ ಕುರಿತು ಯಾರ ಮಾರ್ಗದರ್ಶನವನ್ನು ಪಡೆಯಬೇಕು ?’, ‘ಸೇವೆಯನ್ನು ಸಮಯಮಿತಿಯಲ್ಲಿ ಹೇಗೆ ಪೂರ್ಣಗೊಳಿಸಬೇಕು ?’, ಇತ್ಯಾದಿಗಳನ್ನು ಕಲಿಸಲಾಗುತ್ತದೆ. ಜವಾಬ್ದಾರ ಸಾಧಕರು ‘ಪ್ರತಿವಾರ ಅಥವಾ ನಿರ್ದಿಷ್ಠ ಅವಧಿಯ ನಂತರ ಜವಾಬ್ದಾರಿಯನ್ನು ವಹಿಸಿ ಸೇವೆಯನ್ನು ಮಾಡುವ ಸಾಧಕರ ಸತ್ಸಂಗವನ್ನು ತೆಗೆದುಕೊಂಡು ಅವರ ಅಡಚಣೆಗಳನ್ನು ಪರಿಹರಿಸುತ್ತಾರೆ, ‘ಅವರ ಸೇವೆ ಮತ್ತು ಸಾಧನೆ ಯೋಗ್ಯ ರೀತಿಯಲ್ಲಿ ಆಗುತ್ತಿದೆಯಲ್ಲ ?’, ಎಂಬುದನ್ನು ನೋಡುತ್ತಾರೆ ಮತ್ತು ಅವಶ್ಯಕತೆಗನುಸಾರ ಅವರಿಗೆ ಸಹಾಯ ಮಾಡುತ್ತಾರೆ. ಆದ್ದರಿಂದ ಅವರಿಗೆ ಆಧಾರವೆನಿಸಿ ಸೇವೆಯನ್ನು ಮಾಡಲು ಉತ್ಸಾಹವೆನಿಸುತ್ತದೆ. ಆದ್ದರಿಂದ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಬಗ್ಗೆ ಅವರ ಮನಸ್ಸಿನಲ್ಲಿರುವ ಸಂದೇಹಗಳ ನಿವಾರಣೆಯಾಗುತ್ತದೆ ಮತ್ತು ಅವರು ಹೆಚ್ಚು ಆತ್ಮವಿಶ್ವಾಸದಿಂದ ಜವಾಬ್ದಾರಿಯನ್ನು ತೆಗೆದುಕೊಂಡು ಸೇವೆಯನ್ನು ಮಾಡತೊಡಗುತ್ತಾರೆ. ಯಾವುದಾದರೊಬ್ಬ ಸಾಧಕನು ಯಾವಾಗ ಜವಾಬ್ದಾರಿಯನ್ನು ವಹಿಸಿಕೊಂಡು ಸೇವೆ ಮಾಡುತ್ತಾನೋ, ಆಗ ಅವನ ಮೇಲೆ ಗುರುಕೃಪೆಯು ಹೆಚ್ಚು ಪ್ರಮಾಣದಲ್ಲಿ ಆಗುತ್ತದೆ. ಆದ್ದರಿಂದ ಅವನ ಆಧ್ಯಾತ್ಮಿಕ ಪ್ರಗತಿಯು ಬೇಗನೇ ಆಗುತ್ತದೆ.
೯. ಜವಾಬ್ದಾರ ಸಾಧಕರು ಸಹಸಾಧಕರಿಗೆ ಕಲಿಸುವುದು
ನಾನು ಹೊಸದಾಗಿ ಸೇವೆಯನ್ನು ಮಾಡತೊಡಗಿದಾಗ, ನಮ್ಮ ಜವಾಬ್ದಾರ ಸಾಧಕರು ಆಗಾಗ ಸಂಪರ್ಕಸೇವೆಗೆ ಹೋಗುವಾಗ ಕೆಲವು ಸಾಧಕರನ್ನು ಅವರ ಜೊತೆಗೆ ಕಲಿಯಲು ಕರೆದುಕೊಂಡು ಹೋಗುತ್ತಿದ್ದರು. ಅವರಿಂದ ನನಗೆ ಸಾಧನೆಯಲ್ಲಿನ ಮಹತ್ವದ ಗುಣಗಳೆಂದರೆ ಪ್ರೇಮಭಾವ, ಇತರರನ್ನು ತಿಳಿದುಕೊಳ್ಳುವುದು, ಪ್ರತಿಯೊಬ್ಬರಿಗೂ ಅವನ ಸ್ಥಿತಿಗನುಸಾರ ಮಾರ್ಗದರ್ಶನ ಮಾಡುವುದು ಇತ್ಯಾದಿ ವಿಷಯಗಳು ಕಲಿಯಲು ಸಿಕ್ಕಿದವು’,
(ಮುಂದುವರಿಯುವುದು)
ಇದಂ ನ ಮಮ | (ಈ ಬರವಣಿಗೆ ನನ್ನದಲ್ಲ !)
– (ಸದ್ಗುರು) ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ. (೧೭.೪.೨೦೨೪)