ಬೆಂಗಳೂರಿನ ಶೇ. ೫೭ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಕು. ಅಭಿನವ ಗುರುರಾಜ ಶರ್ಮ (ವಯಸ್ಸು ೧೨ ವರ್ಷ)ನ ತಂದೆಗೆ ಅರಿವಾದ ಗುಣವೈಶಿಷ್ಟ್ಯವನ್ನು ಮುಂದೆ ನೀಡುತ್ತಿದ್ದೇವೆ.

ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ ದೈವೀ (ಸಾತ್ತ್ವಿಕ) ಮಕ್ಕಳೆಂದರೆ ಮುಂದೆ ಹಿಂದೂ ರಾಷ್ಟ್ರವನ್ನು (ಸನಾತನ ಧರ್ಮ ರಾಜ್ಯ) ನಡೆಸುವ ಪೀಳಿಗೆ ! ಚಿ. ಅಭಿನವ ಶರ್ಮ ಇವನು ಈ ಪೀಳಿಗೆಯಲ್ಲೊಬ್ಬನು.

ಕು. ಅಭಿನವ ಶರ್ಮ
ಶ್ರೀ. ಗುರುರಾಜ ಶರ್ಮ

‘ಕು. ಅಭಿನವ ಗುರುರಾಜ ಶರ್ಮ ‘ಉಚ್ಚ ಸ್ವರ್ಗಲೋಕದಿಂದ ಭೂಮಿಯಲ್ಲಿ ಜನಿಸಿರುವನು ಅವನ ಆಧ್ಯಾತ್ಮಿಕ ಮಟ್ಟ ೫೫% ಇದೆ’, ಎಂದು ವರ್ಷ ೨೦೨೦ ರಲ್ಲಿ ಘೋಷಿಸಲಾಗಿತ್ತು ೨೦೨೪ ರಲ್ಲಿ ಅವನ ಆಧ್ಯಾತ್ಮಿಕ ಮಟ್ಟವು ಶೇ. ೫೭ ರಷ್ಟಾಗಿದೆ. ಅವನ ಮೇಲೆ ಪಾಲಕರು ಮಾಡಿದ ಯೋಗ್ಯ ಸಂಸ್ಕಾರ, ಅವನಿಗೆ ಸಾಧನೆಯಲ್ಲಿರುವ ತಳಮಳ ಹಾಗೂ ಅವನಲ್ಲಿಯ ಭಾವದಿಂದ ಈಗ ಅವನ ಸಾಧನೆಯಲ್ಲಿ ಪ್ರಗತಿಯಾಗುತ್ತಿದೆ’.

– ಸಚ್ಚಿದಾನಂದ ಪರಬ್ರಹ್ಮ ಡಾ.ಆಠವಲೆ (೧೯.೯.೨೦೨೪)

೧. ಕೇಳುವ ಹಾಗೂ ವಿಚಾರಿಸುವ ವೃತ್ತಿ

‘ಅಭಿನವನ ಹಠಮಾರಿತನ ಕಡಿಮೆಯಾಗಿದೆ. ಅವನು ಪರಿಸ್ಥಿತಿಯನ್ನು ಬೇಗನೆ ಸ್ವೀಕರಿಸುತ್ತಾನೆ. ಅವನು ಪ್ರತಿಯೊಂದು ವಿಷಯವನ್ನು ವಿಚಾರಿಸಿಯೇ ಮಾಡುತ್ತಾನೆ. ಎಲ್ಲಿಗಾದರೂ ಹೋಗಬೇಕಾಗಿದ್ದರೆ ತಂದೆತಾಯಿಯ ಹತ್ತಿರ ಹೇಳಿ ಹೋಗುತ್ತಾನೆ.

೨. ವ್ಯಷ್ಟಿ ಸಾಧನೆ

ಅವನು ಶ್ರದ್ಧೆಯಿಂದ ಹಾಗೂ ಏಕಾಗ್ರತೆಯಿಂದ ನಾಮಜಪ ಹಾಗೂ ಭಾವಪೂರ್ಣ ಪೂಜೆಯನ್ನು ಮಾಡುತ್ತಾನೆ. ಹಾಗೆಯೇ ಶಾಲೆಗೆ ಹೋಗುವಾಗ ಪ್ರಾರ್ಥನೆಯನ್ನು ಮಾಡಿ ಹೋಗುತ್ತಾನೆ.

೩. ತಪ್ಪಿನ ಬಗ್ಗೆ ಸಂವೇದನಾಶೀಲ

ನಾವು ಅವನ ತಪ್ಪನ್ನು ಹೇಳಿದರೆ ಕೇಳುತ್ತಾನೆ. ತನ್ನ ತಪ್ಪನ್ನು ಅವನು ನಮಗೆ ಹೇಳುತ್ತಾನೆ ಹಾಗೂ ಇತರರಿಂದಾದ ತಪ್ಪನ್ನು ಸಹ ಹೇಳುತ್ತಾನೆ, ಉದಾ : ಸರಿಯಾದ ಸಮಯಕ್ಕೆ ತಂದೆಯವರು ಮನೆಗೆ ಬಾರದಿದ್ದರೆ ಅವರ ತಪ್ಪನ್ನು ಹೇಳುತ್ತಾನೆ.

೪. ಸಹಾಯ ಮಾಡುವುದು

ಅವನು ಮನೆಯ ಎಲ್ಲಾ ಸದಸ್ಯರಿಗೆ ಸಹಾಯ ಮಾಡುತ್ತಾನೆ ಹಾಗೆಯೇ ಸನಾತನ ಸಂಸ್ಥೆಯ ಗ್ರಂಥ ಪ್ರದರ್ಶನವಿದ್ದರೆ ಅಲ್ಲಿಯು ಸಹಾಯ ಮಾಡುತ್ತಾನೆ.

೫. ಗುರುಗಳಲ್ಲಿ ಶ್ರದ್ಧೆ

ಅವನು ರಾತ್ರಿ ಮಲಗುವಾಗ ಗುರುದೇವರ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ) ಸ್ಮರಣೆಯನ್ನು ಮಾಡುತ್ತಾನೆ ಹಾಗೂ ಅವತಾರ ಕಾರ್ಯದ ವಿಷಯವನ್ನು ಶ್ರದ್ಧೆಯಿಂದ ಕೇಳುತ್ತಾನೆ ಅವನಿಗೆ ಗುರುಗಳ ಬಗ್ಗೆ ಮಾತನಾಡಲು ಹಾಗೂ ಕೇಳಲು ಇಷ್ಟವಾಗುತ್ತದೆ.

೬. ಧರ್ಮಾಭಿಮಾನ

ಗೆಳೆಯರಿಗೆ ಅವನು ‘ಹಲಾಲ್‌ ಜಿಹಾದ್’ ವಿಷಯದ ಮಾಹಿತಿಯನ್ನು ಹೇಳಿ ‘ಹಲಾಲ್‌ ಪ್ರಮಾಣಿತ ವಸ್ತುಗಳನ್ನು’ ಉಪಯೋಗಿಸುವುದನ್ನು ತಡೆಯುತ್ತಾನೆ.

೭. ಅನುಭೂತಿ

ಒಮ್ಮೆ ಅವನು ಆಟವಾಡುತ್ತಿರುವಾಗ ಒಂದು ಮೊನಚಾದ ಆಟದ ಸಾಮಾನು ಅವನ ಕಣ್ಣಿಗೆ ತಾಗಿತು. ಆ ಆಟದ ವಸ್ತು ಕಣ್ಣಿನ ಹೊರಗೆ ಸ್ವಲ್ಪ ತಾಗಿತು. ಗುರುದೇವರ ಕೃಪೆಯಿಂದ ಕಣ್ಣು ಉಳಿಯಿತು. ಆಗ ಅವನು “ಗುರುದೇವರು ನಮ್ಮನ್ನು ಕ್ಷಣಕ್ಷಣವು ರಕ್ಷಣೆಯನ್ನು ಮಾಡುತ್ತಿದ್ದಾರೆ” ಎಂದು ಹೇಳಿದನು.

– ಶ್ರೀ. ಗುರುರಾಜ ಶರ್ಮ (ತಂದೆ) ಬೆಂಗಳೂರು (೧೮.೫.೨೦೨೪)