ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದ ಅಧ್ಯಕ್ಷ ಜೋ ಬಿಡನ್ ಇವರು ಅಕ್ಟೋಬರ್ 28 ರ ರಾತ್ರಿ ತಮ್ಮ ಅಧಿಕೃತ ನಿವಾಸವಾದ ಶ್ವೇತಭವನದಲ್ಲಿ ದೀಪಾವಳಿಯನ್ನು ಆಚರಿಸಿದರು. ಭಾರತೀಯ ಮೂಲದ 600ಕ್ಕೂ ಹೆಚ್ಚು ಅಮೆರಿಕನ್ ಪ್ರಜೆಗಳು ಇದರಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಜೋ ಬಿಡೆನ್ ಮಾತನಾಡಿ, ನಾನು ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸೆನೆಟರ್ (ಸಂಸದ) ಆಗಿದ್ದ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ಮೂಲದ ಅಮೆರಿಕನ್ ಪ್ರಜೆಗಳೊಂದಿಗೆ ಕೆಲಸ ಮಾಡಿದ್ದೇನೆ. ದಕ್ಷಿಣ ಏಷ್ಯಾದ ಅಮೆರಿಕನ್ ಸಮುದಾಯವು ಅಮೆರಿಕಾದ ಜೀವನದ ಪ್ರತಿಯೊಂದು ಅಂಶವನ್ನು ಶ್ರೀಮಂತಗೊಳಿಸಿದೆ. ಇದು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಮುದಾಯವಾಗಿದೆ. ಈಗ ಶ್ವೇತಭವನದಲ್ಲಿ ದೀಪಾವಳಿಯನ್ನು ಅಭಿಮಾನದಿಂದ ಆಚರಿಸಲಾಗುತ್ತದೆ ಎಂದು ಹೇಳಿದರು.
ಈ ಬಾರಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಬಿಡೆನ್ ಅವರ ಪತ್ನಿ ದೀಪಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಬಿಡೆನ್ ಇವರು, ಪತ್ನಿ ಜಿಲ್ ಮತ್ತು ಕಮಲಾ ಹ್ಯಾರಿಸ್ ಇಲ್ಲಿರಲು ಬಯಸಿದ್ದರು; ಆದರೆ ಅವರು ಪ್ರಚಾರದಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು.
ಸುನೀತಾ ವಿಲಿಯಮ್ಸ್ ನೀಮದ ಬಾಹ್ಯಾಕಾಶ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ!
ಅಮೆರಿಕದ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ವಿಡಿಯೋ ಸಂದೇಶದ ಮೂಲಕ ದೀಪಾವಳಿ ಶುಭಾಶಯ ಕೋರಿದ್ದಾರೆ.
ಈ ವರ್ಷ ಭೂಮಿಯಿಂದ 400 ಕಿ.ಮೀ ದೂರದಲ್ಲಿರುವ ಬಾಹ್ಯಾಕಾಶ ನಿಲ್ದಾಣದಲ್ಲಿ ದೀಪಾವಳಿ ಆಚರಿಸಲು ನನಗೆ ಒಂದು ಅನನ್ಯ ಅವಕಾಶ ಸಿಕ್ಕಿದೆ. ನನ್ನ ತಂದೆ ಯಾವಾಗಲೂ ದೀಪಾವಳಿ ಮತ್ತು ಇತರ ಭಾರತೀಯ ಹಬ್ಬಗಳ ಬಗ್ಗೆ ನಮಗೆ ಕಲಿಸಿದರು ಮತ್ತು ನಮ್ಮ ಸಾಂಸ್ಕೃತಿಕ ಬೇರುಗಳೊಂದಿಗೆ ನಮ್ಮನ್ನು ಜೋಡಿಸಿಕೊಂಡಿದೆ. ದೀಪಾವಳಿಯು ಸಂತೋಷದ ಕ್ಷಣವಾಗಿದೆ; ಏಕೆಂದರೆ ಈ ಹಬ್ಬವು ಜಗತ್ತಿನಲ್ಲಿ ಒಳ್ಳೆಯತನವನ್ನು ಪಸರಿಸುತ್ತದೆ ಎಂದು ಹೇಳಿದರು.
2003 ರಿಂದ ಶ್ವೇತಭವನದಲ್ಲಿ ದೀಪಾವಳಿ ಆಚರಿಸಲಾಗುತ್ತಿದೆ !
2003 ರಲ್ಲಿ, ಜಾರ್ಜ್ ಬುಷ್ ಅಧ್ಯಕ್ಷರಾಗಿದ್ದಾಗ, ಶ್ವೇತಭವನದಲ್ಲಿ ದೀಪಾವಳಿಯನ್ನು ಆಚರಿಸಲು ಪ್ರಾರಂಭಿಸಿತು. 2009 ರಲ್ಲಿ, ಬರಾಕ್ ಒಬಾಮಾ ಅಧ್ಯಕ್ಷರಾದ ನಂತರ ಶ್ವೇತಭವನದಲ್ಲಿ ದೀಪಾವಳಿಯನ್ನು ಏಕಾಂಗಿಯಾಗಿ ಆಚರಿಸಿದ್ದರು.
ಅಮೆರಿಕದಲ್ಲಿರುವ 54 ಲಕ್ಷ ಭಾರತೀಯರಲ್ಲಿ ಶೇ.48ರಷ್ಟು ಮಂದಿ ಹಿಂದೂಗಳು !
‘ಪ್ಯೂ ರೀಸರ್ಚ್ ಸೆಂಟರ್’ನ ಸಮೀಕ್ಷೆಯ ಪ್ರಕಾರ, ಅಮೇರಿಕಾದಲ್ಲಿ ಭಾರತೀಯ ಮೂಲದ 54 ಲಕ್ಷ ಜನರಿದ್ದಾರೆ. ಅವರಲ್ಲಿ ಶೇ. 48 ರಷ್ಟು (ಅಂದಾಜು 25 ಲಕ್ಷ) ಹಿಂದೂಗಳಾಗಿದ್ದಾರೆ. ಪ್ರಸ್ತುತ, 130 ಕ್ಕೂ ಹೆಚ್ಚು ಭಾರತೀಯರು ಬಿಡೆನ್ ಆಡಳಿತದಲ್ಲಿ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಮೆರಿಕಾದಲ್ಲಿ ಅಂದಾಜು ಶೇ. 38 ರಷ್ಟು ವೈದ್ಯರು ಭಾರತೀಯ ಮೂಲದವರಾಗಿದ್ದಾರೆ. ಭಾರತೀಯ-ಅಮೆರಿಕನ್ನರು ಅಮೇರಿಕಾದಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ಜನಾಂಗೀಯ ಗುಂಪಾಗಿದೆ.