ಅಮರಾವತಿ (ಆಂಧ್ರಪ್ರದೇಶ) – ದಕ್ಷಿಣ ಭಾರತೀಯ ಚಲನಚಿತ್ರ ನಟ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ ಕಲ್ಯಾಣ ಅವರ ರಷ್ಯಾದ ಪತ್ನಿ ಅನ್ನಾ ಲೆಝನೆವಾ ತಿರುಪತಿ ತಿರುಮಲದ ವೆಂಕಟೇಶ್ವರ ಬಾಲಾಜಿ ದೇವಸ್ಥಾನದಲ್ಲಿ ಕೇಶಮುಂಡನ ಮಾಡಿಸಿಕೊಂಡರು. ಪವನ ಮತ್ತು ಅನಾ ಅವರ ಕಿರಿಯ ಪುತ್ರ ಮಾರ್ಕ್ ಸಿಂಗಾಪುರದ ಶಾಲೆಯೊಂದರಲ್ಲಿ ಕಲಿಯುತ್ತಿದ್ದಾನೆ. ಕಳೆದ ವಾರ ಶಾಲೆಯಲ್ಲಿ ನಡೆದ ಬೆಂಕಿ ಅವಘಡದಲ್ಲಿ ಮಾರ್ಕ್ ಗಾಯಗೊಂಡಿದ್ದನು. ಇದರ ನಂತರ ಅನಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಕೃತಜ್ಞತೆ ಸಲ್ಲಿಸಿ ಕೇಶಮುಂಡನ ಮಾಡಿಸಿಕೊಂಡರು. ಈ ದೇವಸ್ಥಾನದಲ್ಲಿ ಕೇಶಮುಂಡನ ಮಾಡಿಸಿಕೊಳ್ಳುವ ವಿಶೇಷ ಸಂಪ್ರದಾಯವಿದೆ.