ಭಾರತ ಮತ್ತು ಹಿಂದೂಗಳ ಬಗ್ಗೆ ನರನಾಡಿಯಲ್ಲಿ ದ್ವೇಷ ತುಂಬಿರುವ ಅಂತರಾಷ್ಟ್ರೀಯ ವಾರ್ತಾವಾಹಿನಿಯ ಇನ್ನೊಂದು ಹೆಸರು ಎಂದರೆ ‘ಬಿಬಿಸಿ – ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್ ‘! ಹಾಗೆಯೇ “ದ ಗಾರ್ಡಿಯನ್’, ‘ನ್ಯೂಯಾರ್ಕ್ ಟೈಮ್ಸ್’, ‘ವಾಷಿಂಗ್ಟನ್ ಪೋಸ್ಟ್’, ‘ಟೈಮ್’, ‘ಅಲ್ ಜಝೀರಾ’ ಮುಂತಾದ ಪಶ್ಚಿಮಾತ್ಯ ಪ್ರಸಾರ ಮಾಧ್ಯಮಗಳು ಒಂದೇ ಮಾಲೆಯ ಮಣಿಗಳಾಗಿವೆ; ಆದರೆ ‘ಬಿಬಿಸಿ’ ಇದು ಮಾಲೆಯ ಏರು ಮಣಿ ಆಗಿದೆ. ಭಾರತದ ಕುರಿತು ಸುಳ್ಳು ಕಥೆಗಳನ್ನು ಪ್ರಸ್ತುತಪಡಿಸುವುದಕ್ಕಾಗಿ ವೈಚಾರಿಕ ವಿಷವನ್ನು ಪೂರೈಸುವಲ್ಲಿ ‘ಬಿಬಿಸಿ’ ಮಂಚೂಣಿಯಲ್ಲಿದೆ. ಭಾರತ ಎಂದರೆ ಬಡವರ, ಅಸಹಾಯಕ ಜನರ ಮತ್ತು ‘ರಾಕ್ಷಸೀ ಧರ್ಮ’ದ (ಸನಾತನ ಧರ್ಮದ), ಈ ರೀತಿ ವಿಕೃತ ಮತ್ತು ನಿರಾಧಾರ ಚಿತ್ರಣ ಬಣ್ಣಿಸುತ್ತಾ ಬಂದಿದೆ. ‘ಬಿಬಿಸಿ’ ೧೦೨ ವರ್ಷಗಳ ಹಿಂದೆ ಹುಟ್ಟಿತ್ತು. ಈ ಅಂತರಾಷ್ಟ್ರೀಯ ವೈಚಾರಿಕ ಗೂಂಡಾಗಳ ವಿಚಾರ ಮಾಡುವ ಪ್ರಯೋಜನೆ, ಎಂದರೆ ಈ ವಾರ್ತಾ ವಾಹಿನಿಯ ಮನಸಿನ ಸ್ಥಿತಿಯನ್ನು ಬಗೆಬಗೆದು ಹೇಳುವ ‘ಡಾಕ್ಯುಮೆಂಟ್ರಿ’ ಅಕ್ಟೋಬರ್ ೨೫ ರಂದು ಜಗತ್ತಿನಾದ್ಯಂತ ಪ್ರಸಾರವಾಗಲಿದೆ.
‘ಬಿಬಿಸಿ ಆನ್ ಟ್ರಯಲ್’ (‘ಬಿಬಿಸಿ’ಯ ವಿರುದ್ಧ ಮೊಕದ್ದಮೆ) ‘ಅದರ ಹೆಸರಾಗಿದ್ದು ಅದರಲ್ಲಿ ‘ಬಿಬಿಸಿ’ ಮಾಡುತ್ತಿರುವ ಭಾರತದ ವಿರುದ್ಧದ ಅಪಪ್ರಚಾರಗಳ ಬಹಳ ಅಭ್ಯಾಸಪೂರ್ಣ ಚಿತ್ರಣವಿದೆ. ‘ಗ್ಲೋಬಲ್ ಹಿಂದೂ ಫೌಂಡೇಶನ್’, ‘ಪ್ರಾಚ್ಯಮ್’, ‘ಸ್ಟ್ರಿಂಗ್ ಜಿಯೋ’, ಮತ್ತು ‘ಜೈಪುರ್ ಡೈಲಾಗ್ಜ’ ಈ ಹಿಂದುತ್ವನಿಷ್ಠ ಆನ್ಲೈನ್ ವಾಹಿನಿಗಳಿಂದ ‘ಬಿಬಿಸಿ ಆನ್ ಟ್ರಯಲ್’ ಇಂಗ್ಲೀಷ್ ಭಾಷೆಯಲ್ಲಿ ಪದದರ್ಶನಗೊಳ್ಳುವುದು. ಶೀರ್ಘದಲ್ಲೇ ಹಿಂದಿ, ತಮಿಳು, ಮರಾಠಿ ಮುಂತಾದ ಭಾರತೀಯ ಭಾಷೆಗಳಲ್ಲಿ ಕೂಡ ಅದನ್ನು ಅನುವಾದ ಮಾಡಿರುವ ಆವೃತ್ತಿ ಪ್ರಸಾರವಾಗುವುದು.
ಕಟ್ಟರ ಭಾರತದ್ವೇಷ !
ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ಯಾವ ‘ಡಿಪ ಸ್ಟೇಟ್’ ಕಾರ್ಯನಿರತವಿದೆ, ಅದರಲ್ಲಿ ಬಿಬಿಸಿ ಒಂದು ಮಹತ್ವರ ಪಾತ್ರ ವಹಿಸುತ್ತದೆ. ಭಾರತದ, ಅಂದರೆ ಹಿಂದುಗಳ ವಿರುದ್ಧ ‘ಬಿಬಿಸಿ’ ಇದು ‘ಗೊಬೆಲ್ಸ್ ನೀತಿ’ಯನ್ನು ಉಪಯೋಗಿಸಿ ಜಗತ್ತಿಗೆ ‘ಭಾರತದಲ್ಲಿನ ಹಿಂದುಗಳು ಹೇಗೆ ಮುಸಲ್ಮಾನ ದ್ವೇಷಿ, ಹಿಂಸಾಚಾರಿಗಳು ಮತ್ತು ಅಸಹಿಷ್ಣು ಆಗಿದ್ದಾರೆ’, ಈ ಚಿತ್ರಕ್ಕೆ ನಿರಂತರವಾಗಿ ಬಣ್ಣ ತುಂಬುತ್ತಾ ಬಂದಿದೆ. ಹಾಗೆ ನೋಡಿದರೆ ‘ಬಿಬಿಸಿ’ಯ ಇದು ಒಂದು ದ್ವೇಷಪುರಿತ ವಾರ್ತೆಗಳ ಬಗ್ಗೆ ಅನೇಕ ದಶಕಗಳ ಇತಿಹಾಸವಿದೆ.
೧೯೭೦ ರಲ್ಲಿ ಅದು ಭಾರತದ ಕುರಿತು ‘ಫಂಟಮ್ ಇಂಡಿಯಾ’ ಮತ್ತು ‘ಕ್ಯಾಲಕಟ’ ಈ ಹೆಸರಿನಿಂದ ಎರಡು ‘ಡಾಕ್ಯುಮೆಂಟ್ರೀಜ್’ ಪ್ರಸಾರ ಮಾಡಿತ್ತು. ಅದರಲ್ಲಿ ಭಾರತದಲ್ಲಿನ ದರಿದ್ರತೆ ಮತ್ತು ದೇಶದ ನಿರಾಶಾವಾದಿ ಚಿತ್ರ ತೋರಿಸಲಾಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ದೊರೆತು ೨೫ ವರ್ಷ ಕಳೆದಿತ್ತು. ಭಾರತ ಬಹಳ ಪ್ರಗತಿ ಸಾಧಿಸಿತ್ತು, ಆದರೂ ಕೂಡ ಅದರ ಸಲ್ಲದ ವಿಕೃತ ಮತ್ತು ಪೂರ್ವಗ್ರಹ ಪೀಡಿತ ರೂಪ ಚಿತ್ರಿಸಲು ‘ಬಿಬಿಸಿ’ ಪ್ರಯತ್ನಿಸಿತು. ‘ಬಿಬಿಸಿ’ಯ ಕಾಶ್ಮೀರದ ಬಗ್ಗೆ ಭಾರತ ವಿರೋಧಿ ನಿಲುವು ಅದು ಒಂದು ಎಲ್ಲರೂ ಕೇಳಿಯೇ ಇದ್ದಾರೆ, ಅದರಲ್ಲಿ ಪಾಕಿಸ್ತಾನ ಮತ್ತು ಜಿಹಾದ್ ಭಯೋತ್ಪಾದಕರ ಪರವಾಗಿ ಅದು ಅತ್ಯಂತ ಪಕ್ಷಪಾತೀಯಾಗಿ ವರದಿ ಮಾಡುತ್ತದೆ. ೧೯೯೫ ರಲ್ಲಿ ಜಿಹಾದಿ ಭಯೋತ್ಪಾದಕರು ಕಾಶ್ಮೀರದಲ್ಲಿನ ‘ಚರಾರ-ಎ-ಶರೀಫ್’ನ್ನು ಗುರಿ ಮಾಡಿ ಅದನ್ನು ಸುಟ್ಟು ಹಾಕಿತ್ತು. ಆದರೆ ‘ಬಿಬಿಸಿ’ಯು ಅದರ ವಾರ್ತೆ ತೋರಿಸುವಾಗ ಚೆಚನಿಯದಲ್ಲಿ ರಷ್ಯಾದ ಟ್ಯಾಂಕರ್ ಮೇಲೆ ಕಾರ್ಯಾಚರಣೆ ಮಾಡುತ್ತಿರುವ ವಿಡಿಯೋ ಪ್ರಸಾರಗೊಳಿಸಿತ್ತು. ಇದರಿಂದ ಭಯೋತ್ಪಾದಕರಲ್ಲ, ಬದಲಾಗಿ ಭಾರತದ ಸೈನ್ಯವು ‘ಚರಾರ-ಎ-ಶರೀಫ’ ಮೇಲೆ ದಾಳಿ ನಡೆಸಿದೆ ಎಂದು ತೋರಿಸಲಾಯಿತು.
‘ಬಿಬಿಸಿ’ ಯ ಸುಳ್ಳುತನವನ್ನು ಅಂದಾಜಿಸಲು ಇದೊಂದು ಉದಾಹರಣೆ ಸಾಕಾಗಿದೆ. ಪತ್ರಕರ್ತೆ ಮತ್ತು ಲೇಖಕಿ ಅಶಾಲಿ ವರ್ಮಾ ಇವರು, ‘ನಾನು ಒಮ್ಮೆ ಕೆಲಸಕ್ಕಾಗಿ ಭಾರತದಲ್ಲಿನ ‘ಬಿಬಿಸಿ’ಯ ಪತ್ರಕರ್ತರ ಕಕ್ಷೆಗೆ ಹೋಗಿದ್ದೆ. ಅಲ್ಲಿ ಉಪಸ್ಥಿತ ಪತ್ರಕರ್ತರ ಸಮೂಹ ಇದು ಹತ್ಯೆ, ಬಲತ್ಕಾರ ಅಥವಾ ಹಿಂಸಾಚಾರ ಇದಕ್ಕೆ ಸಂಬಂಧಪಟ್ಟ ಘಟನೆಗಳನ್ನು ಹುಡುಕುವುದರಲ್ಲಿ ತಲ್ಲಿನವಾಗಿತ್ತು.’ ೧೪೦ ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಇಂತಹ ನಕಾರಾತ್ಮಕ ಘಟನೆಗಳು ಹುಡುಕುವುದರಲ್ಲಿ ತಲ್ಲೀನವಾಗಿರುವ ಈ ಅಂತರಾಷ್ಟ್ರೀಯ ವಾರ್ತ ವಾಹಿನಿಯ ವೈಚಾರಿಕ ಯೋಗ್ಯತೆ ತಿಳಿಯಲು ಈ ಉದಾಹರಣೆ ! ಎಂದು ಹೇಳಿದರು. ೨೦೦೨ ರಲ್ಲಿ ಗೋದ್ರಾ ಹತ್ಯಾಕಾಂಡವನ್ನು ನಿರ್ಲಕ್ಷಿಸಿ ಅದರ ನಂತರ ಭುಗಿಲೆದ್ದ ಗಲಭೆಯನ್ನು ಬೆದರುಬೊಂಬೆ ಮತ್ತು ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಇವರ ಬಗ್ಗೆ ದುರುದ್ದೇಶಪುರಿತ ವರದಿ ಇರಲಿ ಅಥವಾ ೨೦೧೨ ರಲ್ಲಿನ ದೆಹಲಿಯ ನಿರ್ಭಯ ಬಲತ್ಕಾರ ಮತ್ತು ಹತ್ಯಾಕಾಂಡದಿಂದ ಸಂಪೂರ್ಣ ದೇಶ ಒಗ್ಗೂಡಿದಾಗ ಬಲಾತ್ಕಾರಿಯನ್ನು ವೈಭವೀಕರಿಸುವುದು ಹಾಗೂ ‘ದೆಹಲಿ ಇದು ಜಗತ್ತಿನ ಬಲತ್ಕಾರದ ರಾಜಧಾನಿ’ ಈ ರೀತಿ ಅಣಕಿಸುವ ಇದೆ ಆ ‘ಬಿಬಿಸಿ’ ! ಭಾರತ ದ್ವೇಷದಿಂದ ಕೂಡಿರುವ ‘ಬಿಬಿಸಿಯ’ ಸತ್ಯ ಸ್ವರೂಪ ಈ ‘ಡಾಕ್ಯುಮೆಂಟ್ರಿ’ಯಿಂದ ಜಗತ್ತಿನ ಎದುರು ತರಲಾಗುವುದು.
‘ಬಿಬಿಸಿ’ಗೆ ಹಿಂದೂ ಗೋರಕ್ಷಕರು ‘ಗೂಂಡ’ ಹಾಗೂ ಮುಸಲ್ಮಾನ ಗೋ ಹಂತಕರನ್ನು ‘ಸಂತ್ರಸ್ತರು’ ಆಗಿರುತ್ತಾರೆ; ‘ದ ಕಾಶ್ಮೀರ ಫೈಲ್ಸ್’ ಈ ಚಲನಚಿತ್ರ ಮುಸಲ್ಮಾನ ದ್ವೇಷಿ ಹಾಗೂ ‘ಪಿಕೆ’ ಚಲನಚಿತ್ರ ಇದು ಹಿಂದೂ ಅಂಧಶ್ರದ್ಧೆಯ ವಿರುದ್ಧ ಹೋರಾಟವಾಗಿರುತ್ತದೆ; ೧೦ ಕೋಟಿ ಮರಗಳನ್ನು ಕಡೆದು ಆಚರಿಸುವ ಕ್ರೈಸ್ತರ ಕ್ರಿಸ್ಮಸ್ ಇದು ‘ಬಿಬಿಸಿ’ ಗೆ ಆನಂದೋತ್ಸವ ಹಾಗೂ ಹಿಂದುಗಳ ಗಣೇಶೋತ್ಸವ ಇದು ಪರಿಸರ ವಿರೋಧಿ ಆಗಿರುತ್ತದೆ ?
‘ಬಿಬಿಸಿ’ ಯ ‘ಬಿಬಿಸಿ ಗ್ಲೋಬಲ್ ಡಿಸಇನ್ಫಾರ್ಮೆಶನ್ ಟೀಂ’ ಮತ್ತು ‘ಬಿಪಿಸಿ ವೆರಿಫೈ’ ಎರಡು ವಿಭಾಗ ಹಿಂದೂದ್ವೇಷ ಮುಂದುವರಿಸುವುದಕ್ಕಾಗಿ ಹಿಂದೂ ವಿರೋಧಿ ಘಟನೆಗಳಿಗೆ ‘ಅವು ಹಿಂದೂ ವಿರೋಧಿ ಆಗಿರದೇ ಮುಸಲ್ಮಾನ ದ್ವೇಷದಿಂದ ಘಟಿಸಿರುವುದು’, ಎಂದು ಬಣ್ಣಿಸುವುದರಲ್ಲಿ ತಲ್ಲೀನವಾಗಿರುತ್ತವೆ. ಈ ವಿಭಾಗವು ಬಾಂಗ್ಲಾದೇಶದಲ್ಲಿ ಆಗಸ್ಟ್ ೨೦೨೪ ರಲ್ಲಿ ಮುಸಲ್ಮಾನರು ನಡೆಸಿರುವ ನೂರಾರು ಹಿಂದೂ ವಿರೋಧಿ ದಾಳಿಗಳು ಕೂಡ ‘ಹಿಂದುತ್ವನಿಷ್ಠರಿಂದ ಆಗಿರುವ ಅಪಪ್ರಚಾರ’ ಎಂದೇ ಬಣ್ಣಿಸಿತ್ತು ಹಾಗೂ ಕಳೆದ ವರ್ಷ ಹರಿಯಾಣಾದಲ್ಲಿನ ನೂಹ ಇಲ್ಲಿ ಹಿಂದೂಗಳ ಬ್ರಜಮಂಡಲ್ ಯಾತ್ರೆಯ ಮೇಲೆ ಮುಸಲ್ಮಾನರಿಂದ ನಡೆದ ದಾಳಿ ‘ಹಿಂದೂಗಳ ಗುಂಪಿನಿಂದ ಮುಸಲ್ಮಾನರ ಮೇಲೆ ದಾಳಿ ನಡೆಸಿದರು’, ಹೀಗೆ ವರದಿ ಮಾಡಿತ್ತು. ಬಹಳಷ್ಟು ಹಿಂದೂ ಜನಾಂಗ ಇಂತಹ ಅಂತರಾಷ್ಟ್ರೀಯ ಕಪಟನಾಟಕದಿಂದ ಪರಿಚಿತರಿಲ್ಲದಿರುವುದರಿಂದ ಅದು ಈ ರೀತಿಯ ವಿಷ ಬಲಿಯಾಗುತ್ತದೆ. ‘ಬಿಬಿಸಿ’ ಯ ದಾವೇಯ ಪ್ರಕಾರ ಕೇವಲ ಭಾರತದಲ್ಲಿ ಪ್ರತಿವಾರಕ್ಕೆ ಕನಿಷ್ಠ ೮ ಕೋಟಿ ಜನರು ಅದರ ವಾರ್ತೆ ಓದುತ್ತವೆ. ಇದರಿಂದ ‘ಬಿಬಿಸಿ’ಯ ಪ್ರಭಾವ ಎಷ್ಟು ಇದೆ, ಇದು ಗಮನಕ್ಕೆ ಬರುತ್ತದೆ.
ಗಡಿಪಾರು ಮಾಡಿ !
ಅಂತರಾಷ್ಟ್ರೀಯ ವಾರ್ತಾವಾಹಿನಿ ‘ಅಲ್ ಜಝೀರಾ’ದಿಂದ ಯುದ್ಧದ ವರದಿ ಮಾಡುವಾಗ ಹಮಾಸ್ನ ಪರ ಎತ್ತಿ ಹಿಡಿದಿರುವುದರಿಂದ ಸ್ವಾಭಿಮಾನಿ ಇಸ್ರೇಲ್ ಅಲ್ಲಿಯ ಅದರ ಕಾರ್ಯಾಲಯಕ್ಕೆ ನುಗ್ಗಿ ಅದನ್ನು ಮುಚ್ಚಿತು. ಈಗ ಯುದ್ಧ ಇದು ಶಸ್ತ್ರಾಸ್ತ್ರಗಳಿಗಿಂತ ವಿಚಾರಗಳಿಂದ ಮಾಡಲಾಗುತ್ತಿರುವಾಗ ಭಾರತಕ್ಕೂ ಕೂಡ ಭವಿಷ್ಯದಲ್ಲಿ ಇಸ್ರೇಲ್ ನಂತೆ ನಿಲುವು ತಾಳ ಬೇಕಾಗುವುದು. ‘ಬಿಬಿಸಿ ಆನ್ ಟ್ರಯಲ್’ ಇದು ಅದೇ ದಿಕ್ಕಿನತ್ತ ಸಾಗುತ್ತಿರುವ ಮೊದಲ ಸ್ವಾಗತಾರ್ಹ ಹೆಜ್ಜೆ ಆಗಿದೆ. ‘ಗ್ಲೋಬಲ್ ಹಿಂದೂ ಫೌಂಡೇಶನ್’ನ ಅಧ್ಯಕ್ಷ ಪಂಡಿತ ಸತೀಶ ಶರ್ಮ ಇವರು ಇದಕ್ಕಾಗಿ ಕಳೆದ ಒಂದುವರೆ ವರ್ಷದಿಂದ ನಿರಂತರ ಪರಶ್ರಮ ತೆಗೆದುಕೊಂಡು ಇದನ್ನು ನಿರ್ಮಿಸಿದ್ದಾರೆ. ಸತೀಶ ಶರ್ಮ ಇವರು, ‘ಅವರು ಕಳೆದ ೮ ವರ್ಷ ಲಂಡನ್ ನ ‘ಬಿಬಿಸಿ’ ಕಾರ್ಯಾಲಯಕ್ಕೆ ಹೋಗಿ ಭಾರತ ವಿರೋಧಿ ವರದಿಗಳ ವಿರುದ್ಧ ಧ್ವನಿ ಎತ್ತುತ್ತಾ ಬಂದಿದ್ದಾರೆ; ಆದರೆ ‘ಬಿಬಿಸಿ’ ಎಂದಿಗೂ ಅವರನ್ನು ಲೆಕ್ಕಿಸಲಿಲ್ಲ. ಆದ್ದರಿಂದ ನಾನು ‘ಬಿಬಿಸಿ ಆನ್ ಟ್ರಯಲ್’ನ ನಿರ್ಮಾಣ ಮಾಡಿದೆ. ಅದರ ಪ್ರಚಾರ ಪ್ರಸಾರ ಎಲ್ಲವೂ ದೂರವಾಗಿ ‘ಬಿಬಿಸಿ’ಗೆ ಭಾರತದಿಂದ ಗಡಿಪಾರು ಮಾಡುವ ಜನಾಂದೋಲನಕ್ಕೆ ಈ ‘ಡಾಕ್ಯುಮೆಂಟರಿ’ ನಿರ್ಣಾಯಕ ಕಿಡಿಯಾಗುವ ಅಪೇಕ್ಷೆ ಇದೆ ! ಎಂದು ಹೇಳುತ್ತಾರೆ.