ಸಾಧನೆಯ ಪ್ರಾಥಮಿಕ ಹಂತದಲ್ಲಿ ಅಧ್ಯಾತ್ಮದ ತಾತ್ತ್ವಿಕ ಮಾಹಿತಿ ನೀಡುವ ಮತ್ತು ಮುಂದಿನ ಹಂತದಲ್ಲಿ ಪ್ರತ್ಯಕ್ಷ ಸಾಧನೆ ಮಾಡಲು ಕಲಿಸುವ ಸನಾತನದ ಗ್ರಂಥಗಳು !

ಅಧ್ಯಾತ್ಮ ವಿಷಯದ ಗ್ರಂಥ ಲೇಖಕರಲ್ಲಿ ವಿನಂತಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ವೇದ, ಪುರಾಣ, ಭಗವದ್ಗೀತೆ, ಇಂತಹ ಧರ್ಮಗ್ರಂಥಗಳು ಮತ್ತು ಜ್ಞಾನೇಶ್ವರಿ, ದಾಸಬೋಧ, ಏಕನಾಥಿ ಭಾಗವತ, ಇಂತಹ ಗ್ರಂಥಗಳು ಅಧ್ಯಾತ್ಮದ ತಾತ್ತ್ವಿಕ ಮಾಹಿತಿಯನ್ನು ಹೇಳುತ್ತಿದ್ದರೂ, ಅವು ಮುಖ್ಯವಾಗಿ ‘ಸಾಧನೆಯನ್ನು ಹೇಗೆ ಮಾಡಬೇಕು ?’, ಎಂಬ ಭಾಗವನ್ನೇ ಮುಖ್ಯವಾಗಿ ಹೇಳುತ್ತವೆ. ಆದ್ದರಿಂದ ಈ ಲೇಖನವನ್ನು ಓದಿದ ನಂತರ ಅಧ್ಯಾತ್ಮದ ಸಂದರ್ಭದಲ್ಲಿನ ಗ್ರಂಥಗಳನ್ನು ಬರೆಯುವ ಲೇಖಕರು ತಮ್ಮ ಗ್ರಂಥಗಳ ಕೊನೆಯಲ್ಲಿ ವಾಚಕರಿಗಾಗಿ ‘ಈ ತಾತ್ತ್ವಿಕ ಮಾಹಿತಿಯು ಓದುವಂಹದ್ದಾಗಿದ್ದರೂ, ನಿಜವಾದ ಸಾಧಕರು ಈ ಮಾಹಿತಿಗನುಸಾರ ಪ್ರತ್ಯಕ್ಷ ಕೃತಿಗೆ ಮಹತ್ವವನ್ನು ನೀಡುವುದು ಆವಶ್ಯಕವಾಗಿದೆ. ಇದರಿಂದಲೇ ನಿಮ್ಮ ನಿಜವಾದ ಆಧ್ಯಾತ್ಮಿಕ ಉನ್ನತಿ ಆಗಲಿದೆ’, ಎಂಬ ಟಿಪ್ಪಣಿಯನ್ನು ಸಹ ಮುದ್ರಿಸಬೇಕು’, ಎಂದು ಅವರಲ್ಲಿ ನನ್ನ ಸವಿನಯ ವಿನಂತಿ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

೧. ಸಾಧನೆ ಮಾಡಲು ಮೊದಲು ಅಧ್ಯಾತ್ಮದ ತಾತ್ತ್ವಿಕ ಮಾಹಿತಿ ಇರುವುದು ಆವಶ್ಯಕ

‘ಅಧ್ಯಾತ್ಮದ ಬಗೆಗಿನ ಅನೇಕ ಗ್ರಂಥಗಳನ್ನು ನೋಡಿ ‘ಸಂಬಂಧ ಪಟ್ಟ ಲೇಖಕರು ಕೇವಲ ತಾತ್ತ್ವಿಕ ಮಾಹಿತಿಯ ಗ್ರಂಥಗಳನ್ನು ಬರೆಯುವುದಕ್ಕಿಂತ ಪ್ರತ್ಯಕ್ಷ ಕೃತಿಯ ಸ್ತರದ ಅಂದರೆ ಸಾಧನೆಯ ಸಂದರ್ಭದಲ್ಲಿ ಗ್ರಂಥಗಳನ್ನು ಏಕೆ ಬರೆಯುವುದಿಲ್ಲ ?’, ಎಂದು ನನಗೆ ಯಾವಾಗಲೂ ಅನಿಸುತ್ತಿತ್ತು. ಈಶ್ವರನು ನನಗೆ ಅಧ್ಯಾತ್ಮದ ತಾತ್ತ್ವಿಕ ಗ್ರಂಥಗಳ ಮಹತ್ವವನ್ನು ಗಮನಕ್ಕೆ ತಂದು ಕೊಡುವ ಮುಂದಿನ ವಿಚಾರಗಳನ್ನು ಕೊಟ್ಟನು.

ಅ. ಯಾವುದಾದರೊಂದು ವಿಷಯದ ಬಗ್ಗೆ ಮಾಹಿತಿ ಇದ್ದರೆ, ಮಾತ್ರ ಆ ವಿಷಯದ ಬಗ್ಗೆ ಜಿಜ್ಞಾಸೆ ಹುಟ್ಟುತ್ತದೆ, ಅನಂತರ ಆ ವಿಷಯದಲ್ಲಿ ಆಸಕ್ತಿ ಮೂಡುತ್ತದೆ. ಈ ಮಾಹಿತಿಯು ಅದರ ಸಂದರ್ಭದ ಗ್ರಂಥವಾಚನ ಮತ್ತು ಇತರರಿಂದ ದೊರಕಿದ ಮಾಹಿತಿಯ ಆಧಾರದಿಂದಲೇ ಆಗುತ್ತದೆ, ಉದಾ. ಒಬ್ಬನಿಗೆ ಅಕ್ಷರ ಜ್ಞಾನವಿದ್ದರೆ ಮಾತ್ರ ಅವನು ಆಧುನಿಕ ವೈದ್ಯ, ನ್ಯಾಯವಾದಿ, ಇಂಜನಿಯರ್‌ ಆಗಬಲ್ಲನು. ಅದೇ ರೀತಿ ಅಧ್ಯಾತ್ಮದ ಮಾಹಿತಿ ಇದ್ದರೆ ಮಾತ್ರ ಅವನು ಮನಃಪೂರ್ವಕ ಸಾಧನೆಯನ್ನು ಮಾಡಬಹುದು.

ಆ. ಈಶ್ವರನ ಬಗ್ಗೆ ತಾತ್ತ್ವಿಕ ಮಾಹಿತಿಯಿದ್ದರೆ ಮಾತ್ರ ಜಿಜ್ಞಾಸುಗಳ ಮನಸ್ಸಿನಲ್ಲಿ ಈಶ್ವರನನ್ನು ತಿಳಿದುಕೊಳ್ಳುವ, ಸಾಧನೆ ಮಾಡಕೆನ್ನುವ ವಿಚಾರಗಳು ಬರತೊಡಗುತ್ತವೆ. ಜಿಜ್ಞಾಸುಗಳು ಅನೇಕ ವಿಚಾರದವರಾಗಿರುತ್ತಾರೆ. ಅವರಿಗೆ ಸಾಧನೆಯ ಬಗ್ಗೆ ತಿಳಿಯದಿದ್ದರೂ, ಗ್ರಂಥಗಳಿಂದ ತಾತ್ತ್ವಿಕ ಮಾಹಿತಿ ದೊರಕಿದ ನಂತರ ಮುಂದೆ ಅವರು ಸಾಧನೆ ಮಾಡಲು ಪ್ರಾರಂಭಿಸುತ್ತಾರೆ.

ಇ. ಭಾರತದಲ್ಲಿ ಅನೇಕ ಪೀಳಿಗೆಗಳಿಂದ ನಡೆಯುತ್ತಿರುವ ಪೂಜೆ, ಪ್ರವಚನಗಳು, ಕಥೆ-ಕೀರ್ತನೆಗಳು, ಇಂತಹ ವಿವಿಧ ಮಾಧ್ಯಮಗಳಿಂದ ಹೆಚ್ಚಿನ ಜನರ ಗಮನ ಅಧ್ಯಾತ್ಮದೆಡೆಗೆ ಹೋಗುತ್ತದೆ; ಆದರೆ ಈ ವಿಷಯದ ಸಂಪರ್ಕದಲ್ಲಿ ಇಲ್ಲದವರು ಹಾಗೆಯೇ ವಿದೇಶದ ಜನರಿಗೆ ಅಧ್ಯಾತ್ಮದ ಬಗ್ಗೆ ಏನೂ ಗೊತ್ತಿಲ್ಲದ ಕಾರಣ ಅವರು ಸಾಧನೆಯತ್ತ ಹೊರಳುವ ಸಾಧ್ಯತೆ ಕಡಿಮೆ ಇರುತ್ತದೆ. ಅದಕ್ಕಾಗಿ ಅಧ್ಯಾತ್ಮದ ಗ್ರಂಥಗಳೇ ಮಾರ್ಗದರ್ಶನ ಮಾಡುತ್ತವೆ.

ಈ. ಯಾರಾದರೊಬ್ಬನು ಹಿಂದಿನ ಜನ್ಮದಲ್ಲಿ ಸಾಧನೆಯನ್ನು ಮಾಡಿದ್ದರೆ, ಮಾತ್ರ ಅವನು ಈ ಜನ್ಮದಲ್ಲಿ ಸಾಧನೆಯನ್ನು ಮಾಡಬಹುದು. ಯಾವನು ಈ ಮೊದಲು ಎಂದಿಗೂ ಸಾಧನೆಯನ್ನು ಮಾಡಿಲ್ಲವೋ, ಅವನು ಅಧ್ಯಾತ್ಮದ ಅಧ್ಯಯನ ಮಾಡುವುದು ಆವಶ್ಯಕವಾಗಿದೆ. ಅದಕ್ಕಾಗಿ ಅಧ್ಯಾತ್ಮದ ಬಗೆಗಿನ ತಾತ್ತ್ವಿಕ ವಿಷಯದ ಗ್ರಂಥಗಳು ಉಪಯುಕ್ತವಾಗಿವೆ.

ಉ. ಅಧ್ಯಾತ್ಮದ ಬಗ್ಗೆ ಯೋಗ್ಯ ಮಾಹಿತಿ ಇಲ್ಲದಿರುವಾಗ ಯಾವುದಾದರೊಬ್ಬನು ಅನೇಕ ವರ್ಷಗಳಿಂದ ತಪ್ಪು ಪದ್ಧತಿಯಿಂದ ಸಾಧನೆ ಮಾಡುತ್ತಿದ್ದರೆ, ಉದಾ. ತಪ್ಪು ನಾಮಜಪ ಮಾಡುವುದು, ಇದರಿಂದ ಅವನ ಆಧ್ಯಾತ್ಮಿಕ ಪ್ರಗತಿ ಆಗುವುದಿಲ್ಲ. ಇದಕ್ಕಾಗಿಯೂ ಅಧ್ಯಾತ್ಮದ ಅಧ್ಯಯನ ಮಾಡುವುದು ಅವಶ್ಯಕವಾಗಿದೆ.

೨. ಅಧ್ಯಾತ್ಮದ ಬಗ್ಗೆ ಸಾಧಕ-ಲೇಖಕರ ಗ್ರಂಥಗಳ ಅಧ್ಯಯನ ಮಾಡಬೇಕು !

ಸಾಧನೆ ಮಾಡಿದ ವ್ಯಕ್ತಿಯು ಬರೆದ ಗ್ರಂಥಗಳನ್ನು ಓದುವುದು ಯೋಗ್ಯವಾಗಿದೆ. ಸಾಧನೆ ಮಾಡದೇ ಕೇವಲ ಪಾಂಡಿತ್ಯದ ಆಧಾರದಿಂದ ಬರೆದ ಗ್ರಂಥಗಳಿಂದ ಗ್ರಂಥದ ಲೇಖಕರ ಮತ್ತು ವಾಚಕರ ಈ ಇಬ್ಬರ ಜೀವನವು ವ್ಯರ್ಥವಾಗುತ್ತದೆ.

೩. ಅಧ್ಯಾತ್ಮದ ತಾತ್ತ್ವಿಕ ಮಾಹಿತಿಗಿಂತ ಪ್ರತ್ಯಕ್ಷ ಸಾಧನೆಯನ್ನು ಮಾಡುವುದು ಮಹತ್ವದ್ದಾಗಿದೆ !

ಅಧ್ಯಾತ್ಮ ವಿಷಯದ ತಾತ್ತ್ವಿಕ ಮಾಹಿತಿಯ ಮೇಲಿನ ಮಹತ್ವವನ್ನು ನೋಡಿದರೂ, ಇದರ ಅರ್ಥ ‘ಜೀವನವಿಡಿ ಅಧ್ಯಾತ್ಮದ ಅಧ್ಯಯನ ಮಾಡಬೇಕು’, ಎಂದಲ್ಲ. ಈ ಮಾಹಿತಿಗೆ ಕೇವಲ ಶೇ. ೨ ರಷ್ಟು ಮಹತ್ವವಿರುತ್ತದೆ ಮತ್ತು ಪ್ರತ್ಯಕ್ಷ ಸಾಧನೆ ಮಾಡುವ ಕೃತಿಗೆ ಶೇ. ೯೮ ರಷ್ಟು ಮಹತ್ವವಿರುತ್ತದೆ, ಉದಾ. ಜೀವನವಿಡಿ ದಾಸಬೋಧದ ಅಧ್ಯಯನ ಮಾಡಿದರೂ, ಅದನ್ನು ಕೃತಿಯಲ್ಲಿ ತರುವುದು ಆವಶ್ಯಕವಾಗಿರುತ್ತದೆ. ‘ಈ ಪ್ರತ್ಯಕ್ಷ ಕೃತಿ ಅಂದರೇನೆ ಸಾಧನೆ. ಸಾಧನೆಯನ್ನು ಹೇಗೆ ಮಾಡಬೇಕು ?’, ಎಂಬುದನ್ನು ಸನಾತನದ ಅನೇಕ ಗ್ರಂಥಗಳಲ್ಲಿ ನೀಡಲಾಗಿದೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ