Bangladesh Durga Idols Vandalised : ಬಾಂಗ್ಲಾದೇಶ: ದುರ್ಗಾ ಪೂಜೆಗೂ ಮುನ್ನ 16 ಮೂರ್ತಿಗಳ ಧ್ವಂಸ  

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಪಬನ ಜಿಲ್ಲೆಯ ಸುಜಾನಗರ ಉಪಜಿಲ್ಲೆಯಲ್ಲಿನ ‘ಋಷಿಪರಾ ಬರವಾರಿ ಪೂಜಾ ಮಂಟಪ’ ಮತ್ತು ‘ಮಾಣಿಕಾದಿ ಪಾಲಪಾರಾ ಬಾರವಾರಿ ಪೂಜಾ ಮಂಟಪ’ದಲ್ಲಿನ ಹಿಂದೂ ದೇವತೆಗಳ ಮೂರ್ತಿಗಳನ್ನು ಧ್ವಂಸಗೊಳಿಸಲಾಗಿದೆ. ಋಷಿಪಾರಾ ಮಂಟಪದಲ್ಲಿನ 4, ಮಾಣಿಕಡಿ ಮಂಟಪದಲ್ಲಿನ 5 ಮೂರ್ತಿಗಳನ್ನು ಧ್ವಂಸಗೊಳಿಸಲಾಗಿದೆ. ಈ ಘಟನೆಯಿಂದ ಅಲ್ಲಿನ ಹಿಂದೂಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಬಾಂಗ್ಲಾದೇಶದ ಭದ್ರತಾ ಇಲಾಖೆ ಮತ್ತು ಸ್ಥಳೀಯ ಸರ್ಕಾರವು ಕೂಡಲೇ ಮಧ್ಯಸ್ಥಿಕೆ ವಹಿಸಬೇಕೆಂದು ಸ್ಥಳೀಯ ಹಿಂದೂಗಳು ಕೋರಿದ್ದಾರೆ. ವಿಚಿತ್ರವೆಂದರೆ, ಪದೇ ಪದೇ ಪೊಲೀಸರಿಗೆ ಕರೆ ಮಾಡಿದರೂ ಸಹ ಈ ಘಟನೆಯನ್ನು ತಡೆಯಲು ಪೊಲೀಸರು ಸಮಯಕ್ಕೆ ತಲುಪಲಿಲ್ಲ. ಘಟನೆಯ ನಂತರ ಪೊಲೀಸರು ಮತ್ತು ಇತರ ಭದ್ರತಾ ದಳ ತಲುಪಿತು.

ಬಾಂಗ್ಲಾದೇಶದ ಸುಜಾನಗರ ಉಪಜಿಲ್ಲೆಯಲ್ಲಿರುವ 51 ದೇವಸ್ಥಾನಗಳಲ್ಲಿ ದುರ್ಗಾಪೂಜಾ ಹಬ್ಬವನ್ನು ಆಚರಿಸಲಾಗುತ್ತಿದೆ; ಆದರೆ ಈ ಘಟನೆಯಿಂದ  ಹಿಂದೂಗಳಲ್ಲಿ ಭಯ ನಿರ್ಮಾಣವಾಗಿದೆ. ಸುಜಾನಗರ ಉಪಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್ ರಶೀದುಜ್ಜಮಾನ ಈ ಬಗ್ಗೆ ಮಾತನಾಡಿ, ತಪ್ಪಿತಸ್ಥರ ವಿರುದ್ಧ ಕಾನೂನುರೀತ್ಯಾ ಕ್ರಮ ಕೈಕೊಳ್ಳಲು ಅವರನ್ನು ನಾವು ಹುಡುಕಾಡುತ್ತಿದ್ದೇವೆ ಎಂದು ಹೇಳಿದರು. ಸದ್ಯ ಪ್ರತಿಯೊಂದು ದೇವಸ್ಥಾನದ ಭದ್ರತೆಗಾಗಿ ಸ್ಥಳೀಯ ಜನರ ಒಂದು ಸಮಿತಿಯನ್ನು ಸ್ಥಾಪಿಸಲಾಗಿದೆ.

ಕಿಶೋರ್‌ಗಂಜ್‌ನಲ್ಲಿಯೂ ಪ್ರತಿಮೆ ಧ್ವಂಸ

ಢಾಕಾದ ಕಿಶೋರೆಗಂಜ್‌ನಲ್ಲಿರುವ ಗೋಪಿನಾಥ ಜಿಉರ ಅಖಾಡ ದುರ್ಗಾ ಪೂಜಾ ಮಂಟಪದಲ್ಲಿ ಹಿಂದೂಗಳ ದೇವತೆಗಳ 7 ಮೂರ್ತಿಗಳನ್ನು ಧ್ವಂಸಗೊಳಿಸಲಾಗಿದೆ. ದೇವಸ್ಥಾನದ  ಭದ್ರತೆಗೆ ನಿಯೋಜನೆಗೊಂಡಿದ್ದ ಕಾವಲುಗಾರ ಮಲಗಿದ್ದಾಗ ಈ ಘಟನೆ ನಡೆದಿದೆ. ಜಿಹಾದಿಗಳು ಮೊದಲು ಮಂಟಪದ ಗೋಡೆ ಬೀಳಿಸಿದರು ಮತ್ತು ಮೂರ್ತಿಯ ಶಿರವನ್ನು ಮುರಿದರು. ಈ  ವಿಧ್ವಂಸಕತೆಯನ್ನು ನಿಷೇಧಿಸಲು, ಹಿಂದೂಗಳು ಅದೇ ದಿನ ನಿಷೇಧ ಮೆರವಣಿಗೆಯನ್ನು ನಡೆಸಿದರು. ‘ಅಪರಾಧಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು’ ಎಂದು ಜಿಲ್ಲಾ ಆಯುಕ್ತ ಫೌಜಿಯಾ ಖಾನ್ ಮತ್ತು ಪೊಲೀಸ್ ಅಧೀಕ್ಷಕ ಮಹಮ್ಮದ ಹಸನ ಚೌಧರಿ ಅವರು ಹಿಂದೂಗಳಿಗೆ ಭರವಸೆ ನೀಡಿದರು.
ಜಿಲ್ಲಾ ಪೂಜಾ ಉತ್ಸವ ಸಮಿತಿ ಅಧ್ಯಕ್ಷ ನಾರಾಯಣ ದತ್ತಾ ಪ್ರದೀಪ್ ಪ್ರತಿಕ್ರಿಯಿಸುತ್ತಾ, ಈ ವಿಧ್ವಂಸಕ ಕೃತ್ಯಗಳಿಂದ ಹಿಂದೂಗಳು ತೀವ್ರವಾಗಿ ನೊಂದಿದ್ದಾರೆ. ಸದ್ಯ ಇಲ್ಲಿ ಭಯದ ವಾತಾವರಣವಿದೆ. ಇಂತಹ ಅಹಿತಕರ ಘಟನೆಗಳು ನಡೆಯುತ್ತಲೇ ಇದ್ದರೆ, ನಾವು ಧಾರ್ಮಿಕ ಹಬ್ಬವನ್ನು ಹೇಗೆ ಆಚರಿಸುವುದು? ಎಂದು ಖೇದ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಆಯುಕ್ತ ಫೌಜಿಯಾ ಖಾನ ಅವರ ಅಧ್ಯಕ್ಷತೆಯಲ್ಲಿ ತುರ್ತು ಸಭೆಯನ್ನು ಕರೆಯಲಾಯಿತು. ಈ ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ಸೇನೆ ಮತ್ತು ಟಾಸ್ಕ್ ಫೋರ್ಸ್ ಅಧಿಕಾರಿಗಳು ಉಪಸ್ಥಿತರಿದ್ದರು. ದೋಷಿಗಳನ್ನು ಬಂಧಿಸುವಂತೆ ಹಿಂದೂಗಳ ನಾಯಕರು ಈ ಸಭೆಯಲ್ಲಿ ಬೇಡಿಕೆಯನ್ನಿಟ್ಟರು.

ಸಂಪಾದಕೀಯ ನಿಲುವು

ಭಾರತದಲ್ಲಿ, ಯಾವುದಾದರೊಂದು ಮಶೀದಿಯ ಮೇಲೆ ಅಪ್ಪಿ-ತಪ್ಪಿ ಒಂದು ಕಲ್ಲು ತೂರಿದರೂ ಮುಸ್ಲಿಮ್ ದೇಶಗಳು ಬಹಿರಂಗವಾಗಿ ಖಂಡಿಸುತ್ತವೆ; ಆದರೆ ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆದರೂ ಯಾರೂ ಮಾತನಾಡುತ್ತಿಲ್ಲ.