‘ಪ್ರಸ್ತುತ ಕಾಲದಲ್ಲಿ ‘ನೆರೆಟಿವ್’ (‘ಓಚಿಡಿಡಿಚಿಣೈವೆ’) ಎಂಬ ಪದವು ತುಂಬಾ ಚರ್ಚೆಯ ಮಾತಾಗಿದೆ. ‘ನೆರೆಟಿವ್’ ಅನ್ನೋದಕ್ಕೆ ಕನ್ನಡದಲ್ಲಿ ಅಥವಾ ಭಾರತೀಯ ಭಾಷೆಗಳಲ್ಲಿ ಸೂಕ್ತ ಪದವಿಲ್ಲ. ಏಕೆಂದರೆ ಇದು ವಿದೇಶಿ ಮೂಲದ ಆಧುನಿಕ ಶಬ್ದ. ಅದನ್ನು ಬಳಸುವುದು ಎಲ್ಲೆಡೆ ಪ್ರಚಲಿತವಾಗಿದೆ. ಆಂಗ್ಲ ಭಾಷೆಯಲ್ಲಿ ಜಗತ್ತಿನ ಎಲ್ಲ ವೈವಿಧ್ಯಗಳು, ವಿಚಿತ್ರಗಳು, ವಿಕೃತಿಗಳು, ಮನೋವಿಕಾರಗಳಿಗೆ ಅಲ್ಲಲ್ಲೆ ಶಬ್ದಗಳನ್ನು ಹುಟ್ಟುಹಾಕಿ ಬಿಡುತ್ತಾರೆ. ‘ನೆರೆಟಿವ್’ವಿನ ಮಾಧ್ಯಮದಿಂದ ಯಾವುದಾದರೊಂದು ಸುಳ್ಳು ವಿಚಾರ, ಭಾವನೆ, ಸಂವಾದ ಅಥವಾ ಹೇಳಿಕೆಯನ್ನು ಜನರ ಮನಸ್ಸಿನಲ್ಲಿ ಬಿಂಬಿಸಲು ಪ್ರಯತ್ನಿಸಲಾಗುತ್ತದೆ. ಅದೊಂದು ಕಾಲ್ಪನಿಕ ಕಥೆಯಾಗಿರುತ್ತದೆ ಮತ್ತು ಉದ್ದೇಶಪೂರ್ವಕವಾಗಿ ರಚಿಸಲಾಗುತ್ತದೆ. ಬುದ್ಧಿವಂತರು ಈ ‘ನೆರೆಟಿವ್’ಗಳನ್ನು ಸಿದ್ಧಪಡಿಸುತ್ತಾರೆ ಮತ್ತು ಇತರರು ಅದನ್ನು ಪ್ರಸಾರ ಮಾಡುತ್ತಾರೆ. ಈ ‘ನೆರೆಟಿವ್’ ಕ್ರಮೇಣ ಹೆಚ್ಚಾಗುತ್ತ ಹೋಗುತ್ತದೆ ಮತ್ತು ಜನರ ಮನಸ್ಸಿನಲ್ಲಿ ಗೊಂದಲ ನಿರ್ಮಾಣವಾಗುತ್ತದೆ. ಜನರು ಇದಕ್ಕೇ ಸತ್ಯವೆಂದು ತಿಳಿಯತೊಡಗುತ್ತಾರೆ. ‘ನಂಬುವಂತೆ ಸುಳ್ಳು ಹೇಳು’, ಎಂಬ ಒಂದು ಗಾದೆ ಇದೆ. ಈ ರೀತಿಯಲ್ಲಿ ‘ನೆರೆಟಿವ್’ನಲ್ಲಿನ ದ್ವೇಷ ಮತ್ತು ಅಪಾಯವನ್ನು ತೋರಿಸಿಕೊಟ್ಟು ವಿರೋಧಿಸದಿದ್ದರೆ, ದೇಶದ ವಿನಾಶ ನಿಶ್ಚಿತ.
೧. ಭಾರತದ ಕೆಲವು ಮಿಥ್ಯಾಜಾಲಗಳು ಮತ್ತು ಸತ್ಯ
೧ ಅ. ‘ಭಾರತಕ್ಕೆ ಸ್ವಾತಂತ್ರ್ಯ ತಂದಿದ್ದು ಕಾಂಗ್ರೆಸ್ ಪಕ್ಷ
ಸತ್ಯ : ಇದರಂತÀಹ ಮಿಥ್ಯೆ ಇನ್ನೊಂದು ಇರಲಿಕ್ಕಿಲ್ಲ, ವಾಸ್ತವವಾಗಿ ಮುಸ್ಲಿಂ ಲೀಗ್ ಜೊತೆ ಸೇರಿ ದೇಶ ಇಬ್ಭಾಗ ಮಾಡಿದ್ದು ಕಾಂಗ್ರೆಸ್. ಇದನ್ನು ಮರೆ ಮಾಚಿ ಗಾಂಧಿ, ನೆಹರು, ಪಟೇಲ್ ಚಿತ್ರಗಳನ್ನು ತೋರಿಸಿ ಜನರನ್ನು ಮರಳು ಮಾಡಲಾಗಿದೆ.
೧ ಆ. ಅಹಿಂಸೆಯಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಬಂದಿತು.
ಸತ್ಯ : ಸ್ವಾತಂತ್ರ್ಯದ ಕಾಲಘಟ್ಟದಲ್ಲಿ ಭಾರತದಲ್ಲಿ ನಡೆದ ಈ ಮಟ್ಟದ ಅತಿಹಿಂಸೆ ಎಲ್ಲೂ ನಡೆದಿಲ್ಲ. ದೇಶ ಇಬ್ಭಾಗವಾಗಿ ಸುಮಾರು ೧೦ ಲಕ್ಷ ಅಮಾಯಕರು ಅಮಾನುಷವಾದ ರೀತಿಯಲ್ಲಿ ಪ್ರಾಣ ಕಳೆದುಕೊಂಡರು. ಮುಸ್ಲಿಂ ಲೀಗ್ನ ಗೂಂಡಾಗಳಿಂದಾಗಿ ಸುಮಾರು ೧ ಕೋಟಿ ೫೦ ಲಕ್ಷ ಜನರು ಮನೆಮಾರು ಕಳೆದುಕೊಂಡು ಬದುಕಿನ ಅತ್ಯಂತ ದೀನಸ್ಥಿತಿಗೆ ಮುಟ್ಟಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಆದಾಗ ಪ್ರಾಣಹಾನಿ, ಮಾನಹಾನಿ, ಆಸ್ತಿಪಾಸ್ತಿ ನಷ್ಟ ಮತ್ತು ಕೋಮುಸಂಘರ್ಷ, ಅಮಾನವೀಯ ಕೊಲೆ ಜಗತ್ತಿನಲ್ಲಿ ಇದುವರೆಗೆ ಎಲ್ಲೂ ಆಗಿಲ್ಲ.
೧ ಇ. ಗಾಂಧಿ ಅಹಿಂಸೆಯ ಪೂಜಾರಿಯಾಗಿದ್ದರು !
ಸತ್ಯ : ಗಾಂಧಿ ಹಿಂದೂಗಳಿಗೆ ಅಹಿಂಸೆಯನ್ನೂ ಮುಸಲ್ಮಾನರಿಗೆ ಅತಿ ಹಿಂಸೆಯನ್ನೂ ಉಪದೇಶ ಮಾಡಿದ ಮುಖಂಡರಾಗಿದ್ದರು. ಗಾಂಧಿ ಯಾವ ಮಹಾತ್ಮರಲ್ಲ. ಅವರು ಸರ್ವಾಧಿಕಾರಿ ಆಡಳಿತ ವನ್ನು ನಡೆಸುತ್ತಿದ್ದರು ಮತ್ತು ರಾಜಕಾರಣಿ ಯಾಗಿದ್ದರು. ಅಂದರೆ ‘ತನ್ನದೇ ಮಾತು ನಡೆಯಬೇಕು, ಎಲ್ಲರೂ ತಾನು ಹೇಳಿದಂತೆ ಕೇಳಬೇಕು, ತಾನು ಹೇಳಿದ್ದೇ ಸತ್ಯ’ ಅಂತ ಪಟ್ಟು ಹಿಡಿದ ಹಠವಾದಿ. ನೇತಾಜಿ ಸುಭಾಷಚಂದ್ರ ಬೋಸರಂತಹ ಮಹಾನ ಯೋಧ, ರಾಷ್ಟ್ರಭಕ್ತ, ಅಧ್ಯಾತ್ಮಜೀವಿಯನ್ನು ದೇಶದಿಂದ ಹೊರ ದಬ್ಬಿದ್ದು ಗಾಂಧೀಜಿ. ಇದರಿಂದ ಭಾರತದ ರಾಜಕೀಯ ರಂಗದಿಂದ ನೀತಿ, ನಿಯತ್ತು, ನಿಷ್ಠೆ, ರಾಷ್ಟ್ರ ಪ್ರೇಮವೇ ಹೊರಟು ಹೋಯಿತು. ಸ್ವಾರ್ಥ, ಸ್ವಜನ ಪ್ರೀತಿ, ದುಷ್ಟತೆ-ಭ್ರಷ್ಟತೆ ನೆಲೆ ನಿಂತಿತು.
೧ ಈ. ಮುಸಲ್ಮಾನರು ಅಲ್ಪಸಂಖ್ಯಾತರು
ಸತ್ಯ : ಮುಸಲ್ಮಾನರು ಹಿಂದೂಗಳ ನಂತರ
ದೇಶದ ಬಹುಸಂಖ್ಯಾತರು. ದೇಶದ ಜನಸಂಖ್ಯೆ ಯಲ್ಲಿ ೩೦-೩೫ ಕೋಟಿ ಮುಸಲ್ಮಾನರಿದ್ದಾರೆ. ನಿಜವಾದ ಅಲ್ಪಸಂಖ್ಯಾತರೆಂದರೆ ಪಾರ್ಸಿಗಳು. ಕೇವಲ ೬೦ ಸಾವಿರ ಜನ ಮಾತ್ರ ಇದ್ದಾರೆ. ಮುಸಲ್ಮಾನರು ದೇಶದ ಎರಡನೇ ಬಹುಸಂಖ್ಯಾತರಾಗಿದ್ದರಿಂದ ಅವರನ್ನು ಅಲ್ಪಸಂಖ್ಯಾತರ ಪಟ್ಟಿಯಿಂದ ಕೈ ಬಿಡಬೇಕು.
೧ ಉ. ‘ಹಿಂದೂ-ಮುಸ್ಲಿಂ ಭಾಯಿ-ಭಾಯಿ’
ಸತ್ಯ : ‘ಹಿಂದೂ-ಮುಸ್ಲಿಂ ಭಾಯಿ-ಭಾಯಿ’ ಇಂಥ ಅಪ್ಪಟ ಸುಳ್ಳು ಈ ದೇಶದಲ್ಲಲ್ಲದೆ ಇನ್ನೆಲ್ಲೂ ಸಿಗಲಾರದು. ಮುಸಲ್ಮಾನರು ಸಾವಿರ ವರ್ಷಗಳಿಂದ ಹಿಂದೂಗಳನ್ನು ದ್ವೇಷಿಸುತ್ತಲೆ ಬಂದಿದ್ದಾರೆ. ೮ ನೇ ಶತಮಾನದ ಆದಿಯಲ್ಲಿ ಮಹಮ್ಮದ್ ಬಿನ್ ಕಾಸಿಂ ಇವನು ಸಿಂಧನ್ನು ಆಕ್ರಮಿಸಿ ಅಲ್ಲಿನ ರಾಜ ದಾಹಿರನನ್ನು ಕೊಂದು ಹೆಂಗಸರನ್ನು ಎಳೆದೊಯ್ದಂದಿನಿಂದ, ಇಂದಿನವರೆಗೆ ಮುಸ್ಲಿಂರ ಹಿಂದೂದ್ವೇಷ ನಿರಂತರವಾಗಿ ನಡೆಯುತ್ತಿದೆ. ಇದೇ ಕಾರಣಕ್ಕೆ ಡಾ. ಬಾಬಾಸಾಹೇಬ ಅಂಬೇಡಕರ್ ಇವರಿಗೆ ‘ದೇಶವಿಭಜನೆ ಆದಾಗ ಮುಸಲ್ಮಾನರೆಲ್ಲ ಪಾಕಿಸ್ತಾನಕ್ಕೆ ಹೋಗಬೇಕು, ಅಲ್ಲಿನ ಹಿಂದೂ ಗಳೆಲ್ಲ ಹಿಂದುಸ್ಥಾನಕ್ಕೆ ಬರಬೇಕು’ ಅಂತ ತಮ್ಮ ‘ಥಾಟ್ಸ್ ಆನ್ ಪಾಕಿಸ್ತಾನ, ದ ಪಾರ್ಟಿಶನ್ ಆಫ್ ಇಂಡಿಯಾ’ ಪುಸ್ತಕದಲ್ಲಿ ಬರೆದಿದ್ದರು. ಈ ಪುಸ್ತಕವನ್ನು ೧೯೪೦ ರಲ್ಲಿ ಬರೆಯಲಾಗಿತ್ತು. ಅಂದರೆ ಸ್ವಾತಂತ್ರ್ಯಕ್ಕೆ ಪೂರ್ವ ೭ ವರ್ಷ ಆಗಿತ್ತು ಬರೆದು. ಆದರೆ ಕಾಂಗ್ರೆಸ್ನವರು ಈ ಅತ್ಯಂತ ಸೂಕ್ತವಾದ, ಅನೇಕ ಸಮಸ್ಯೆಗಳನ್ನು ಏಕಕಾಲದಲ್ಲಿ ಪರಿಹರಿಸಬಹುದಾದ ಅಂಬೇಡ್ಕರ್ ಸಲಹೆಗೆ ಯಾವ ಸ್ಪಂದನೆಯೂ ಕೊಡಲಿಲ್ಲ.
೧ ಊ. ಡಾ. ಅಂಬೇಡಕರ ಇವರು ಕೇವಲ ಸಂವಿಧಾನ ಶಿಲ್ಪಿ, ದಲಿತ ನಾಯಕ
ಸತ್ಯ : ಅಂಬೇಡ್ಕರ್ ರಾಷ್ಟ್ರವಾದಿ, ಇಸ್ಲಾಂನ ನಿಜಸ್ವರೂಪ ತಿಳಿದವರು. ಭಾರತೀಯ ಸಮಾಜದ ಜನಸಂಖ್ಯಾ ಸ್ವರೂಪವನ್ನು ಸ್ವಭಾವವನ್ನು ಅಧ್ಯಯನ ಮಾಡಿದ ಮೊದಲ ರಾಷ್ಟ್ರನಾಯಕ. ಹಿಂದೂ-ಮುಸಲ್ಮಾನರು ಎಂದೂ ಒಂದಾಗಲು ಸಾಧ್ಯವಿಲ್ಲ. ಏಕೆಂದರೆ ಮುಸಲ್ಮಾನರ ಮತ ಅವರನ್ನು ಸಾಮರಸ್ಯದಿಂದ ಬಾಳಲು ಬಿಡುವುದಿಲ್ಲ. ಕುರಾನಿನಲ್ಲಿ ಸ್ಪಷ್ಟವಾಗಿ, ಎಲ್ಲರನ್ನು ಇಸ್ಲಾಂಗೆ ಪರಿವರ್ತಿಸಬೇಕು ಎಂದು ಹೇಳಲಾಗಿದೆ. ದಾರು-ಲ್-ಹರ್ಬ್ (ಯದ್ಧಭೂಮಿ. ಎಲ್ಲಿ ಇಸ್ಲಾಮರ ಆಡಳಿತ ನಡೆಯುವದಿಲ್ಲವೋ, ಅಂತಹ ದೇಶ), ದಾರು-ಲ್-ಇಸ್ಲಾಂ (ಎಲ್ಲಿ ಇಸ್ಲಾಮರ ಆಡಳಿತ ನಡೆಯುತ್ತದೆಯೋ, ಆ ಪ್ರದೇಶ) ಎಂದು ವಿಭಾಗ ಮಾಡಲಾಗಿದೆ. ಇಸ್ಲಾಮೀಯರಲ್ಲದವರನ್ನು ಕಾಫಿರ್ ಎಂದು ಹೇಳಲಾಗಿದೆ. ಇಂಥ ಇಸ್ಲಾಂ ಮತೀಯ ವಿಚಾರಗಳನ್ನೂ ಅಧ್ಯಯನಪೂರ್ವಕವಾಗಿ ಬರೆದು, ಮುಸಲ್ಮಾನರ ಅಸಲಿ ಮುಖವನ್ನು ಬಯಲು ಮಾಡಿದ ಮೊದಲ ನಾಯಕ ಡಾ. ಅಂಬೇಡ್ಕರ. ದೌರ್ಭಾಗ್ಯವೆಂದರೆ, ಅಂಬೇಡ್ಕರ ಅವರ ಈ ಅಪೂರ್ವ ಚಿಂತನೆಯನ್ನು, ನೂತನ ದೃಷ್ಟಿಯನ್ನು ಅಂಬೇಡ್ಕರ ಅನುಯಾಯಿಗಳೇ ಗಾಳಿಗೆ ತೂರಿದ್ದಾರೆ.
೧ ಎ. ಸ್ವಾತಂತ್ರ್ಯವೀರ ಸಾವರಕರ ಇವರು ದ್ವಿರಾಷ್ಟ್ರ ವಿಚಾರವನ್ನು ಪ್ರಸ್ತಾಪ ಮಾಡಿ ದೇಶದ ವಿಭಜನೆಗೆ ಕಾರಣರಾದರು
ಸತ್ಯ : ದ್ವಿರಾಷ್ಟ್ರದ ಪ್ರಸ್ತಾಪವನ್ನು ಮೊದಲು ಸಯ್ಯದ ಅಹಮದ್ ಖಾನ್ ಇವರು ಮಂಡಿಸಿದರು. ಅವರೇ ಪಾಕಿಸ್ತಾನದ ಜನಕ ರಾಗಿದ್ದರು. ಇಂಥವರ ಹೆಸರನ್ನು ಹೇಳದೇ ಸುಖಾಸುಮ್ಮನೇ ಸಾವರಕರ ಮೇಲೆ ಆರೋಪ ಮಾಡುತ್ತಾರೆ. (ದ್ವಿರಾಷ್ಟ್ರ ಅಂದರೆ ಹಿಂದೂ-ಮುಸಲ್ಮಾನರು ಬೇರೆಬೇರೆ, ಅದಕ್ಕಾಗಿ ಬೇರೆಬೇರೆಯಾಗಿಯೇ ಇರಬೇಕು, ಎಂಬ ವಿಚಾರ.) ೧೮೫೭ ರಲ್ಲಿ ಬ್ರಿಟಿಷರನ್ನು ಹೊಡೆದೋಡಿಸಲು ಸಶಸ್ತ್ರ ಸಂಗ್ರಾಮವೇ ನಡೆಯಿತು. ಮಂಗಲ ಪಾಂಡೆ, ತಾತ್ಯಾ ಟೊಪೆ, ಝಾನ್ಸಿ ರಾಣಿ ಮುಂತಾದ ಮಹಾವೀರರು ಮತ್ತು ವೀರಾಂಗನೆಯರು ಬ್ರಿಟಿಷರನ್ನು ಹೊರಗೆ ಹಾಕಲು ಭಾರತದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದರು. ಕಾಂಗ್ರೆಸ್ಸಿನವರು ಯಾರೂ ಇವರುಗಳ ಹೆಸರನ್ನು ಹೇಳೋದಿಲ್ಲ. ಇಂದಿಗೂ ಕಾಂಗ್ರೆಸ್ ಸಮಾವೇಶಗಳಲ್ಲಿ ‘ಭಾರತ ಮಾತಾ ಕಿ ಜೈ’ ಎಂಬ ಘೋಷಣೆ ಕೇಳಿ ಬರುವುದಿಲ್ಲ. ೧೯ ನೇ ಮತ್ತು ೨೦ ನೇ ಶತಮಾನಗಳಲ್ಲಿ ಭಾಘಾ ಜತಿನ, ಅರವಿಂದೋ ಘೋಷ್, ರಾಸ ಬಿಹಾರಿ ಬೋಸ್, ಶಚೀಂದ್ರ ಸನ್ಯಲ್, ಬಾರೀಂದ್ರ ಘೋಷ್, ಖುದಿರಾಮ ಬೋಸ್ ಮುಂತಾದ ಬಂಗಾಲದ ಬೆಂಕಿಯ ಚೆಂಡಿನಂತಹ ಭಾರತಪ್ರೇಮಿಗಳು ಪ್ರಾಣಾರ್ಪಣೆ ಮಾಡಿದರು. ಫಡಕೆ ಸಹೋದರರು, ಚಾಪೇಕರ ಸಹೋದರರು, ಸಾವರಕರ ಸಹೋದರರು ಮುಂತಾದ ಮಹಾರಾಷ್ಟ್ರದ ಮಹಾನ ವೀರರು ಸ್ವಾತಂತ್ರ್ಯಕ್ಕಾಗಿ ಬದುಕನ್ನೇ ಚೆÀಲ್ಲಿದರು. ಪಂಜಾಬಿನ ಹುಲಿಗಳಾದ ಲಾಲಾ ಲಜಪತರಾಯ್, ಅಜಿತ ಸಿಂಗ್, ಭಗತ್ ಸಿಂಗ್ ಮುಂತಾದವರು, ಉತ್ತರಪ್ರದೇಶದ ರಾಮಪ್ರಸಾದ (ಬಿಸ್ಮಿಲ್ಲಾ), ಅಶಫಾಕುಲ್ಲಾ ಖಾನ್, ಚಂದ್ರಶೇಖರ ಆಝಾದ್ ಮುಂತಾದವರು ‘ರಿಪಬ್ಲಿಕನ್ ಆರ್ಮಿ’ಯನ್ನು ಸ್ಥಾಪಿಸಿ ದೇಶ ಭಕ್ತಿಯ ಕಿಡಿಯನ್ನು ಎಬ್ಬಿಸಿದರು. ನಂತರ ಇವರೆಲ್ಲರ ಅತ್ಯಂತ ಸಮರ್ಥ ವಾರಸುದಾರರಾಗಿ ನೇತಾಜಿ ಸುಭಾಷಚಂದ್ರ ಬೋಸ್ ಇವರು ‘ಇಂಡಿಯನ್ ನ್ಯಾಶನಲ್ ಆರ್ಮಿ’ಯನ್ನು ಸ್ಥಾಪಿಸಿ ಬ್ರಿಟಿಷರ ವಿರುದ್ಧ ಹೋರಾಡಿದರು. ಭಾರತದ ಸುಮಾರು ಎಲ್ಲ ಭಾಗಗಳನ್ನು ಮುಕ್ತಗೊಳಿಸುವ ವೀರಕೇಸರಿ ನೇತಾಜಿ ಸುಭಾಷಚಂದ್ರ ಬೋಸ್ ಇವರ ಹೆಸರನ್ನೂ ಕಾಂಗ್ರೆಸ್ ಹೇಳುವುದಿಲ್ಲ. ನೇತಾಜಿಯವರ ಪ್ರೇರಣೆಯಿಂದಲೇ ೧೯೪೬ ರಲ್ಲಿ ಭಾರತೀಯ ಸೇನೆಯಲ್ಲಿ ಬಂಡಾಯ ಎದ್ದು, ಬ್ರಿಟಿಷರು ಬೆದರಿ ಭಾರತದಿಂದ ಓಡಿದ್ದು. ಬ್ರಿಟಿಷರು ಸೇನೆಗೆ ಹೆದರಿದರೆ ಹೊರತು ಅಹಿಂಸೆಗೆ ಅಲ್ಲ. ಸ್ವಾತಂತ್ರ್ಯ ಬಂದಿದ್ದು ನೇತಾಜಿ ಕಡೆಯಲ್ಲಿ ಕೊಟ್ಟ ಏಟಿನಿಂದಾಗಿ, ಸಶಸ್ತ್ರ ಕ್ರಾಂತಿ, ಸೇನಾ ಕಾರ್ಯಾಚರಣೆಗಳೇ ಸ್ವಾತಂತ್ರ್ಯಕ್ಕೆ ಕಾರಣ. ಅಹಿಂಸೆಯ ಉಪದೇಶ ಅಲ್ಲ. ಕಾಂಗ್ರೆಸ್ನವರು ಕ್ರಾಂತಿಕಾರರನ್ನೂ ಸ್ಮರಿಸುವುದೂ ಇಲ್ಲ, ಅವರ ಪ್ರಾಣಾರ್ಪಣೆಗೆ ಬೆಲೆಯನ್ನೂ ಕೊಡುವುದಿಲ್ಲ. ಕಾಂಗ್ರೆಸ್ ಪಕ್ಷವು ದೇಶದ ಜನರನ್ನು ಎಲ್ಲ ರೀತಿಯಿಂದಲೂ ದಿಕ್ಕು ತಪ್ಪಿಸುತ್ತ ಬಂದಿದೆ.
೧ ಐ. ಈ ದೇಶದಲ್ಲಿ ಎಷ್ಟೇ ದೊಡ್ಡ ಅಪರಾಧಗಳಾದರೂ, ‘ಕಾನೂನು ಅದರ ಮಾರ್ಗವನ್ನು ತೆಗೆದುಕೊಳ್ಳುವುದು.’ (‘ಲಾ ವಿಲ್ ಟೆಕ್ ಇಟ್ಸ್ ಓನ್ ಕೋರ್ಸ)
ಸತ್ಯ : ಕಾನೂನಿಗೇನು ಸ್ವಂತ ಬುದ್ಧಿ ಇದೆಯೇ ? ನ್ಯಾಯ ತಿಳಿದವರು ಅಲ್ಲ, ಕಾನೂನು ಓದಿರೋರು ವಾದಿಗಳು ಕಾನೂನನ್ನು ಆಧಾರವಾಗಿಟ್ಟುಕೊಂಡು ವಾದ ಮಾಡಬೇಕು. ಒಂದೇ ವಿಚಾರವನ್ನು ವಾದಿ ಮತ್ತು ಪ್ರತಿವಾದಿಗಳು ಅವರವರಿಗೆ ತೋಚಿದಂತೆ ಜಗ್ಗಾಡುತ್ತಾರೆ. ಯಾರು ಬುದ್ಧಿವಂತನೋ ಅವನು ಗೆಲ್ಲುತ್ತಾನೆ. ಕಾನೂನು ನ್ಯಾಯವಾದಿಗಳು ಮತ್ತು ನ್ಯಾಯಾಧೀಶರ ಕೈಗೊಂಬೆಯಾಗಿ ರುತ್ತದೆ. ಕಾನೂನಿಗೆ ತನ್ನ ಬುದ್ಧಿ ಇಲ್ಲ. ಉದಾಹರಣೆಗೆ, ತಿಸ್ತಾ ಸೆಟಲ್ವಾಡ್ ಅವರು ಗುಜರಾತ್ ಗಲಭೆಯ ಸಮಯದಲ್ಲಿ ಮುಸಲ್ಮಾನರ ಪರವಾಗಿ ಸುಳ್ಳು ಪ್ರಚಾರವನ್ನು ಹರಡಿದರು ಎಂದು ಕಂಡುಬಂದಿದೆ. ಅವರಿಗೆ ೨೦ ವರ್ಷಗಳ ನಂತರ ಶಿಕ್ಷೆ ವಿಧಿಸಲಾಯಿತು. ೨೦೦೨ ರ ಗಲಭೆಯ ಬಗ್ಗೆ ೨ ದಶಕಗಳ ನಂತರ ಬಂದ ತೀರ್ಪು, ದಂಡನೆಯನ್ನು ಸರ್ವೋಚ್ಚ ನ್ಯಾಯಾಲಯವು ತಡೆ ಹಿಡಿಯಿತು. ಇದಕ್ಕಾಗಿ ರಾತ್ರಿ ೯ ರ ಮೇಲೆ ಮುಖ್ಯನ್ಯಾಯಮೂರ್ತಿಗಳು ನ್ಯಾಯಾಲಯ ನಡೆಯುವಂತೆ ಆದೇಶ ನೀಡಿ ‘ಅವರÀನ್ನು ಬಂಧಿಸಬಾರದು’, ಎಂಬ ಆದೇಶವನ್ನು ನೀಡಿದರು. ಇಂತಹ ರೀತಿಯ ನೂರಾರು ಪ್ರಕರಣಗಳು ಈ ದೇಶದಲ್ಲಿ ನಡೆಯುತ್ತಿವೆ. ಈಗ ಹೇಳಿ, ಕಾನೂನು ತನ್ನಷ್ಟಕ್ಕೆ ತಾನು ಪ್ರತಿವರ್ತಿಸುತ್ತದೆಯೋ ಅಥವಾ ಧೂರ್ತ ನ್ಯಾಯವಾದಿಗಳು, ನ್ಯಾಯಾಧೀಶರು ತಮ್ಮ ತಾಳಕ್ಕೆ ತಕ್ಕಂತೆ ಅದನ್ನು ಕುಣಿಸುತ್ತಾರೋ ?
೧ ಓ. ಭಾಜಪ ಹಿಂದೂಗಳ ಹಿತವನ್ನು ಕಾಯುತ್ತದೆ
ಸತ್ಯ : ೧೯೪೭ ರಿಂದ ೨೦೧೪ ರ ವರೆಗೆ ಭಾಜಪ ಬಹುಮತದ ಸರಕಾರ ಇರಲಿಲ್ಲ. ವಾಜಪೇಯಿ ಸರಕಾರವು ಎಲ್ಲರಿಗಾಗಿ ಕೆಲಸ ಮಾಡಿತು; ಕೇವಲ ಹಿಂದೂಗಳಿಗಾಗಿ ಅಲ್ಲ. ೨೦೧೪ ರಲ್ಲಿ ನರೇಂದ್ರ ಮೋದಿ ಇವರ ಬಹುಮತ ಸರಕಾರವು ಅಧಿಕಾರಕ್ಕೆ ಬಂದಿತು. ವಾಜಪೇಯಿ ಮತ್ತು ಮೋದಿ ನಡುವೆ ಒಂದು ವ್ಯತ್ಯಾಸವಿದೆ. ಮೋದಿಯವರು ಅವರು ‘ಹಿಂದೂರಾಷ್ಟ್ರವಾದಿ’ಗಳಾಗಿರುವರೆಂದು ಬಹಿರಂಗವಾಗಿ ಹೇಳಿದರು. ಅದುವರೆಗೆ ಯಾರೂ ಅಭಿಮಾನದಿಂದ ‘ಹಿಂದೂ’ ಎಂದು ಹೇಳಿಕೊಳ್ಳುತ್ತಿರಲಿಲ್ಲ. ಕಾಂಗ್ರೆಸ್ ಹಿಂದೂಗಳನ್ನು ಅಷ್ಟರ ಮಟ್ಟಿಗೆ ಅದುಮಿ ಇಟ್ಟಿತ್ತು. ತಾವು ಹಿಂದೂ ಎಂದು ಹೇಳಿಕೊಂಡಿದ್ದನ್ನು ಬಿಟ್ಟರೆ ಮೋದಿಯವರು ಹಿಂದೂಗಳಿಗಾಗಿ ಯಾವ ವಿಶೇಷ ಕಾನೂನನ್ನು ರಚಿಸಲಿಲ್ಲ. ಹಿಂದೂಗಳನ್ನು ಹಣಿಯಲೆಂದು ಮುಸಲ್ಮಾನರಿಗಾಗಿ ಕಾಂಗ್ರೆಸ್ ತಂದಿದ್ದ ಕಾಯ್ದೆಗಳನ್ನು ಕೈ ಬಿಡಲಿಲ್ಲ. ಅವರು ಮಾಡಿದ್ದೆಲ್ಲಾ ಎಲ್ಲರಿಗಾಗಿ. ಮುಸಲ್ಮಾನರಿಗೆ ೫ ಕೋಟಿ ರೂಪಾಯಿಗಳ ವಿದ್ಯಾರ್ಥಿವೇತನ ನೀಡಿದರು; ಆದರೆ ಹಿಂದೂಗಳಿಗೆ ಈ ರೀತಿಯ ಸವಲತ್ತು ಕೊಟ್ಟಿಲ್ಲ.
ಹಿಂದೂಗಳ ಹಿತಕ್ಕಾಗಿ ಯಾವ ಸರಕಾರವೂ ಕೆಲಸ ಮಾಡುವುದಿಲ್ಲ. ಏನು ಮಾಡಿದರೂ, ಅದರ ಹೆಚ್ಚಿನ ಲಾಭವು ಮುಸಲ್ಮಾನರಿಗಾಗಿಯೇ ಇತ್ತು. ಅದಕ್ಕೆ ಕಾರಣವೆಂದರೆ, ಹಿಂದೂಗಳು ಯಾವುದೇ ಸವಲತ್ತಿಗಾಗಿ ಬೀದಿಗಿಳಿದು ಹೋರಾಟ ಮಾಡುವುದಿಲ್ಲ, ಸರಕಾರವು ತಾವಾಗಿಯೇ ಹಿಂದೂವಿಗಾಗಿ ಏನು ಮಾಡುವುದಿಲ್ಲ. ‘ಡೆಡ್ ಲಾಕ್’ನಂತೆ (ಬಿಕ್ಕಟ್ಟಿನ ಪರಿಸ್ಥಿತಿಯಂತೆ) ಪರಿಸ್ಥಿತಿಯಾಗಿದೆ. ‘ಏನು ನಡೆಯದ’ ಜಡತ್ವ ಇಬ್ಬರನ್ನೂ ಅವರಿಸಿದೆ.
೧ ಔ. ಹಿಂದೂಗಳು ಹಿಂಸಕರು, ದ್ವೇಷ ಮಾಡುವವರು
ಸತ್ಯ : ಕಾಂಗ್ರೆಸ್ಸಿನ ರಾಹುಲ ಗಾಂಧಿಯವರು ಪಕ್ಕಾ ಹಿಂದೂದ್ವೇಷಿ. ಜಿಹಾದಿ ಮನಃಸ್ಥಿತಿಯಿಂದ ನರಳುತ್ತಿರುವ ಒಬ್ಬ ರೋಗಿಷ್ಠ. ವಿಶ್ವದ ಕಳೆದ ೨ ಸಾವಿರ ವರ್ಷಗಳ ಇತಿಹಾಸವನ್ನು ಸ್ಥೂಲ ವಾಗಿ ಗಮನಿಸಿದರೆ ಸಾಕು ನರಹಂತಕರು ಯಾರೆಂಬುದು ಗೊತ್ತಾಗುತ್ತದೆ. ಇಸ್ಲಾಂನ ಜಿಹಾದ್ ಮತ್ತು ಕ್ರೈಸ್ತರ ‘ಕ್ರುಸೆಡ್’ ಇವರು ಕೋಟಿಗಟ್ಟಲೆ ಜನರನ್ನು ಹಿಂಸಿಸಿ ಮತಾಂತರಿಸಿದ್ದಾರೆ. ವಿಶ್ವಶಾಂತಿಗಾಗಿ ಕಾಯಾ, ವಾಚಾ ಮತ್ತು ಮನಸ್ಸಿನಿಂದ ಕೃತಿಶೀಲರಾಗಿರುವವರು ಹಿಂದೂಗಳೇ ಮಾತ್ರ ಎನ್ನಬಹುದು. ‘ಕೊವಿಡ್’ ಮಾಹಾಮಾರಿಯ ವೈರಾಣುವನ್ನು ಹಬ್ಬಿಸಿದ್ದು ಯಾರು ? ಲಸಿಕೆಯನ್ನು ಕಂಡುಹಿಡಿದು ಜಗತ್ತಿನ ಬಡ ದೇಶಗಳಿಗೆ ಹಂಚಿ ಮಾನವೀಯತೆ ಮೆರೆದಿದ್ದು ಯಾರು ? ಚೀನಾವು ರೋಗವನ್ನು ಹರಡಿತು ಮತ್ತು ಭಾರತವು ಅದಕ್ಕೆ ಔಷಧಿಯನ್ನು ಕಂಡು ಹಿಡಿದು ಪರಿಹಾರ ನೀಡಿತು. ಕೇವಲ ನಾಲ್ಕು ವರ್ಷಗಳ ಹಿಂದೆ ನಡೆದ ಈ ಜಾಗತಿಕ ಘಟನೆಯೂ ಕಾಂಗ್ರೆಸ್ಸಿನ ರಾಹುಲ ಗಾಂಧಿಯವರಿಗೆ ತಿಳಿಯುತ್ತಿಲ್ಲ. ಇಂತಹ ಜನರು ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗುತ್ತಾರೆ. ವಿದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಿಂದೂಗಳ ವಿರುದ್ಧ ಭಯ ಹುಟ್ಟಿಸುತ್ತಿದ್ದಾರೆ. ರಾಹುಲ ಇವರು ವಯನಾಡ್ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ವಯನಾಡು ಇದು ಕೇರಳದಲ್ಲಿನ ಮುಸ್ಲಿಂ ಬಾಹುಳ್ಯ ಉಳ್ಳ ಕ್ಷೇತ್ರವಾಗಿದೆ. ಪ್ರಸ್ತುತ ಆಗುತ್ತಿರುವ ಹಿಂದೂಗಳ ನಿಂದನೆ, ಖಂಡನೆ, ದ್ವೇಷ, ನಾಶ ಇನ್ನೂ ಹೆಚ್ಚಾಗುವ ಲಕ್ಷಣಗಳು ಕಾಣುತ್ತಿವೆ. ಭಾರತದ ರಾಜಕೀಯ, ಸಾಮಾಜಿಕ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಹದಗೆಡಿಸಲು ಎಲ್ಲ ರೀತಿಯಲ್ಲಿ ಪ್ರಯತ್ನಿಸಲಾಗುತ್ತಿದೆ. ೨ ಸಾವಿರದ ೪೦೦ ವರ್ಷಗಳ ಹಿಂದೆ ಅಲೆಕ್ಸಾಂಡರ್ ಭಾರತಕ್ಕೆ ಲಗ್ಗೆಯಿಟ್ಟ. ಅವನು ವಿದೇಶಿಯಾಗಿರುವುದರಿಂದ ಬಗ್ಗು ಬಡಿದರು ಭಾರತೀಯರು. ಈಗ ಈ ಮಹಾಕಂಟಕನು ಸ್ವದೇಶಿಯಾಗಿರುವುದರಿಂದ ಅವನÀನ್ನು ಎದುರಿಸುವುದು ಕಠಿಣವಾಗಿದೆ. ಆದ್ದರಿಂದ ಹಿಂದೂಗಳು ಎಚ್ಚೆತ್ತು ಕೊಳ್ಳಬೇಕು. ಜನ್ಮ ಹಿಂದೂಗಳು ಹೆಚ್ಚಾಗಿದ್ದಾರೆ; ಆದರೆ ತಮ್ಮ ಅಸ್ತಿತ್ವದ ಅರಿವು ಇರುವ ಹಿಂದೂಗಳು ಶೇ. ೨೦-೩೦ ಕ್ಕಿಂತಲೂ ಹೆಚ್ಚು ಇಲ್ಲ. ಇದೇ ಭಾರತೀಯ ಸಮಾಜದ ಸುರಕ್ಷತೆಗಾಗಿ ದೊಡ್ಡ ಸವಾಲಾಗಿದೆ. ಶತ್ರು ಮನೆಯೊಳಗೆ ಇದ್ದಾನೆಂದು ಆ ಮನೆಯೊಳಗೆ ಇರುವ ಹಿಂದೂಗಳಿಗೆ ತಿಳಿದಿಲ್ಲ.
೧ ಕ. ಸರ್ವ ಧರ್ಮಗಳೂ ಸಮಾನ
ಸತ್ಯ : ‘ಸರ್ವ ಧರ್ಮಗಳೂ ಸಮಾನವಾಗಿವೆ’, ಹಿಂದೂಗಳನ್ನು ಅಡ್ಡದಾರಿ ಹಿಡಿಸೋಕೆ ಅಂತಲೆ ಕಟ್ಟಿದ ಅನೇಕ ಸುಳ್ಳಿನ ಕಂತೆಗಳಲ್ಲಿ ಇದೂ ಒಂದು. ಏಕೆಂದರೆ, ಅಸಲಿಗೆ ಎಲ್ಲವೂ ಧರ್ಮ ಎಂಬ ವ್ಯಾಖ್ಯೆಗೆ ಬರುವುದಿಲ್ಲ. ಸನಾತನವನ್ನು ಬಿಟ್ಟರೆ ಮಿಕ್ಕವೆಲ್ಲ ಒಬ್ಬ ಐತಿಹಾಸಿಕ ವ್ಯಕ್ತಿಯನ್ನು ಅವಲಂಬಿಸಿವೆ. ಭಾರತದ ಮಣ್ಣಿನಲ್ಲಿ ಜನ್ಮಿಸಿದ ಬೌದ್ಧ, ಜೈನ ಮತ್ತು ಸಿಖ್ಖ ಮತಗಳಲ್ಲಿ ಮತಾಂತರದ ಹಪಾಹಪಿ ಅಷ್ಟಾಗಿ ಕಾಣುವುದಿಲ್ಲ. ಸನಾತನ ಧರ್ಮದಲ್ಲಂತೂ ಮತಾಂತರದ ನೆರಳನ್ನು ಕಾಣಲಾಗದು. ಸನಾತನ ಧರ್ಮದ ಧ್ಯೇಯ ಒಂದೇ ಇದೆ ಮತ್ತು ಅದೆಂದರೆ ಆತ್ಮಜ್ಞಾನ. ಈ ವಿಶಾಲ ಭಾವವನ್ನೇ ‘ಧರ್ಮ’ ಎಂದು ಕರೆಯುತ್ತಾರೆ. ಇಸ್ಲಾಂನ ಪವಿತ್ರ ಕುರಾನ ಗ್ರಂಥದಲ್ಲಿ ‘ಇಸ್ಲಾಮಿಯರಲ್ಲದವರು ಕಾಫಿರರು, ಅವರನ್ನು ಕೊಲ್ಲಬೇಕು’, ಎಂದು ಹೇಳಿದೆ. ಇದೇ ಭೇದಬುದ್ಧಿಯನ್ನೇ ಎಲ್ಲ ಮದರಸಾಗಳಲ್ಲಿ ಮುಸಲ್ಮಾನರಿಗೆ ಬೋಧಿಸುತ್ತಾರೆ. ಅವರು ೫ ಬಾರಿ ಮಾಡುವ ನಮಾಜಿನಲ್ಲಿ ‘ಅಲ್ಲಾ’ ಒಬ್ಬನೇ ದೇವರು ಇನ್ಯಾರು ಅಲ್ಲ’ ಎಂದು ಸಾರಿ ಸಾರಿ ಹೇಳುತ್ತಾರೆ. ಇದೇ ಕಾರಣಕ್ಕೆ ಅವರು ಬೇರೆ ಧರ್ಮದ ದೇವ-ದೇವತೆಗಳನ್ನು ಸುಳ್ಳು ಎಂದು ಹೇಳುವುದು, ಕೀಳೆಂದು ಪರಿಗಣಿಸುವುದು. ದ್ವೇಷ, ಅಸೂಯೆ, ತಾರತಮ್ಯಗಳನ್ನು ತಮ್ಮ ಮೂಲ ಗ್ರಂಥಗಳಲ್ಲೇ ಅಳವಡಿಸಿಕೊಂಡಿರುವ ಮತಗಳನ್ನು ಸನಾತನ ಧರ್ಮಕ್ಕೆ ಹೇಗೆ ಹೋಲಿಸಲಾದೀತು ? ಒಟ್ಟಿನಲ್ಲಿ ಸರ್ವಧರ್ಮಗಳೂ ಸಮಾನ ಎಂಬುದು ಅಪ್ಪಟ ಸುಳ್ಳು.
೨. ಭಾಜಪ ಎಲ್ಲಿ ಸೋತಿತು ?
ಶ್ರೀರಾಮಮಂದಿರದ ನಿರ್ಮಿತಿಯು ಭಾಜಪದ ಮಹತ್ವದ ರಾಷ್ಟ್ರಕಾರ್ಯವಾಗಿದೆ. ಶ್ರೀರಾಮಮಂದಿರಕ್ಕಾಗಿ ೫೦೦ ವರ್ಷಗಳ ಹೋರಾಟ ನಡೆಯಿತು. ೩ ಲಕ್ಷಕ್ಕೂ ಹೆಚ್ಚು ರಾಮಭಕ್ತರ ಪ್ರಾಣಾರ್ಪಣೆ, ೨೦ ತಲೆಮಾರುಗಳ ನಿರಂತರ ಅಪೇಕ್ಷೆ, ಆಶಾಭಾವನೆ ಒಂದು ಸಾರ್ಥಕ ಹಂತಕ್ಕೆ ಮುಟ್ಟಿದ್ದು ರಾಮಮಂದಿರದ ನಿರ್ಮಾಣ ಕಾರ್ಯದಲ್ಲಿ ಭಾಜಪಗೆ ಹಿಂದೂ ಗಳೆಲ್ಲರ ಕೃತಜ್ಞತೆ ಸಲ್ಲುತ್ತದೆ. ಸಾವಿರಾರು ರಾಮಭಕ್ತರ ಮೇಲೆ ಗುಂಡು ಹಾರಿಸಿ ಅವರನ್ನು ಕೊಲ್ಲಲು ಆದೇಶವನ್ನು ನೀಡಿದ ಸಮಾಜವಾದಿ ಪಕ್ಷದ ಮುಖಂಡ ಮತ್ತು ಉತ್ತರಪ್ರದೇಶದ ಅಂದಿನ ಮುಖ್ಯಮಂತ್ರಿ ಮುಲಾಯಮ್ ಸಿಂಹ ಇವರಿಗೆ ‘ಪದ್ಮಭೂಷಣ’ ಪ್ರಶಸ್ತಿ ನೀಡಲಾಯಿತು ! ಮುಲಾಯಮ್ ಇವರು ಗುಂಡು ಹಾರಿಸುವ ಆದೇಶವನ್ನು ನೀಡಿರುವಾಗ ಸರಕಾರದ ಮುಖ್ಯ ಸಚಿವರಾದ ನರೇಂದ್ರ ಮಿಶ್ರಾ ಇವರನ್ನು ದೇವಸ್ಥಾನ ನಿರ್ಮಾಣದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಶಿಲಾನ್ಯಾಸ ದಿಂದ ಪ್ರಾಣಪ್ರತಿಷ್ಠಾಪನೆವರೆಗೆ ಅನೇಕ ಮುಸಲ್ಮಾನರು ‘ಶ್ರೀರಾಮಮಂದಿರವನ್ನು ಒಡೆಯುತ್ತೇವೆ’, ‘ಮತ್ತೆ ಮಸೀದಿಯನ್ನು ಕಟ್ಟುವೆವು’ ಎಂದು ಘಂಟಾಘೋಷವಾಗಿ ಕೂಗುತ್ತಿದ್ದರೂ ಸರಕಾರದ ಪರವಾಗಿ ಅವರನ್ನು ಖಂಡಿಸುವ ಒಂದು ಮಾತೂ ಬರಲಿಲ್ಲ. ಕೃತಿ ಮಾಡುವುದಂತೂ ದೂರವೇ ಉಳಿಯಿತು. ಸರಕಾರವು ಮುಸಲ್ಮಾನರ ಬೆದರಿಕೆಗೆ ಪ್ರತ್ಯುತ್ತರವನ್ನು ನೀಡಲಿಲ್ಲ. ಸಾಮಾನ್ಯಜನರು ಇಂತಹ ವಿಷಯಗಳಿಗೆ ಪ್ರತ್ಯುತ್ತರವನ್ನು ನೀಡಿದರೆ ಅವರನ್ನೇ ಬಂಧಿಸಲಾಗುತ್ತದೆ. ಆದ್ದರಿಂದ ದೇಶದ್ರೋಹಿಗಳ ಉತ್ಸಾಹ ಹೆಚ್ಚುತ್ತ್ತಿದೆ. ಭಾಜಪ ಇಲ್ಲಿ ಸೋತಿದೆ.
೩. ಹಿಂದೂಗಳು ಜಾಗೃತರಾಗುವುದು ಆವಶ್ಯಕ !
ಇಂದು ಪ್ರತಿದಿನ ಈ ರೀತಿಯ ಸುಳ್ಳು ಪ್ರಚಾರಗಳನ್ನು ರಾಜಕೀಯ ಪಕ್ಷಗಳು, ಚಲನಚಿತ್ರದ ಕಲಾವಿದರು, ಮುಸಲ್ಮಾನರ ಸಂಸ್ಥೆಗಳು, ಕ್ರೈಸ್ತ ಪ್ರಚಾರಕರು ಮತ್ತು ಧೂರ್ತ ಹಿಂದೂಗಳು ಮಾಡುತ್ತಿರುತ್ತಾರೆ. ಇತ್ತೀಚಿನ ಚುನಾವಣೆಯಲ್ಲಿ ‘ಭಾಜಪವು ಮತ್ತೆ ಅಧಿಕಾರಕ್ಕೆ ಬಂದರೆ, ಸಂವಿಧಾನವನ್ನು ಬದಲಾಯಿಸುವುದು’, ಎಂದು ಸಾವಿರಾರು ಬಾರಿ ಸುಳ್ಳು ಪ್ರಚಾರ ಮಾಡಿದುದರಿಂದ ಜನರಿಂದ ಭಾಜಪವನ್ನು ಸೋಲಿಸುವ ಪ್ರಯತ್ನವಾಯಿತು.
ವಸ್ತುತಃ ಕಾಂಗ್ರೆಸ್ ಪಕ್ಷವು ತಮ್ಮ ಸ್ವಾರ್ಥಕ್ಕಾಗಿ ೬೦ ಬಾರಿ ಸಂವಿಧಾನ ಬದಲಾಯಿಸಿದೆ. ಮೂಲ ಪೀಠಿಕೆಯಲ್ಲಿ ಇಲ್ಲದ ‘ಸೆಕ್ಯುಲರ್’ (ಜಾತ್ಯತೀತ) ಶಬ್ದವನ್ನು ಇಂದಿರಾ ಗಾಂಧಿಯವರು ಸೇರಿಸಿದರು. ಕಾಂಗ್ರೆಸ್ ಅನೇಕ ಘೋರಪಾಪಗಳನ್ನು ಮಾಡಿದ್ದರೂ ಅದರ ಜೊತೆಗೆ ಇತರ ಪಕ್ಷಗಳೂ ಸನಾತನ ಧರ್ಮೀಯರನ್ನು ಹಳಿಯುವ ಕೆಲಸವನ್ನು ಬಹಳ ಚೆನ್ನಾಗಿ ಮಾಡುತ್ತಿವೆ.
ಹಾರವರ್ಡ, ಕೊಲಂಬಿಯಾ, ಆಕ್ಸ್ಫರ್ಡ ಇತ್ಯಾದಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ‘ವೋಕಿಸಂ’ ಆರಂಭವಾಗಿದೆ. (ಜಗತ್ತಿದಾದ್ಯಂತ ಸ್ಥಾಪಿತವಾದ ಸಮಾಜವ್ಯವಸ್ಥೆ, ಸಂಸ್ಕೃತಿ, ಕುಟುಂಬವ್ಯವಸ್ಥೆ ಇವುಗಳನ್ನು ಖಂಡಿಸುವ ಹೊಸ ವಿಕೃತಿ ಎಂದರೆ ವೋಕಿಸಂ !) ‘ಹಿಂದೂಗಳು ಜಾತೀಯವಾದಿಗಳು’, ‘ಅವರು ದಲಿತರನ್ನು ತುಳಿಯುವವರು’, ‘ಅವರಲ್ಲಿ ಸಮಾನತೆ ಇಲ್ಲ’, ‘ನೂರೆಂಟು ದೇವರುಗಳು’, ಎಂದು ಹೇಳುತ್ತಾ ಹಿಂದೂಗಳನ್ನು ಗುರುತಿಸಿ ಹಿಂಸಿಸಲಾಗುತ್ತಿದೆ. ಸಮಾನತೆ ಎಂದು ಸನಾತನ ಧರ್ಮದಲ್ಲಿನ ಸಮಾನತೆಯನ್ನು ಅಲ್ಲಗಳೆದು ಅತ್ಯಂತ ವಿಕೃತ ರೀತಿಯಿಂದ ನಡೆದುಕೊಳ್ಳುತ್ತಿದ್ದಾರೆ.
ಈ ಎಲ್ಲ ಜಾಗತಿಕ ದುಷ್ಕೃತ್ಯಗಳ ಹಿಂದೆ ಇಸ್ಲಾಂ, ಸಾಮ್ಯವಾದಿ ಮತ್ತು ಕ್ರೈಸ್ತ ಪ್ರಚಾರಕರ ಒಕ್ಕೂಟ ಕೆಲಸ ಮಾಡುತ್ತಿವೆ. ಇದಕ್ಕಾಗಿ ಅವರಿಗೆ ಬೇಕಾದಷ್ಟು ಆರ್ಥಿಕ ಸಹಾಯ ಸಿಗುತ್ತಿದೆ. ಈ ಕೆಲಸವನ್ನು ಮುಖ್ಯವಾಗಿ ೯೨ ವರ್ಷದ ಮುದುಕ ಅಂತಾರಾಷ್ಟ್ರೀಯ ಉದ್ಯಮಿ ಜಾರ್ಜ ಸೊರೋಸ್ ಮಾಡುತ್ತಿದ್ದಾರೆ. ಸದ್ಯದಲ್ಲಿ ಆದ ಲೋಕಸಭೆ ಚುನಾವಣೆಯಲ್ಲಿ ಭಾಜಪವನ್ನು ಸೋಲಿಸಲು ಅವರು ಶತಪ್ರಯತ್ನಗಳನ್ನು ಮಾಡಿದ್ದ; ಆದರೆ ದೇವರ ಕೃಪೆಯಿಂದ ಮೋದಿಯವರು ಸ್ವಲ್ಪದರಲ್ಲಿಯೇ ಸೋಲನ್ನು ತಪ್ಪಿಸಿಕೊಂಡರು. ಒಟ್ಟಿನಲ್ಲಿ, ಜಗತ್ತಿನಾದ್ಯಂತ ದುಷ್ಟ ಶಕ್ತಿಗಳು ತುಂಬಾ ಜಾಗೃತವಾಗಿವೆ. ಎಲ್ಲ ಪ್ರಾಚೀನ ಸಂಸ್ಕೃತಿಗಳು ನಾಶವಾಗಿವೆ. ಆದರೆ ಕೇವಲ ಭಾರತದಲ್ಲಿ ಸನಾತನ ಧರ್ಮವು ಇನ್ನೂವರೆಗೂ ಉಳಿದಿದೆ. ಅದನ್ನು ಅಳಿಸಿ ಹಾಕಲು ಶತ ಪ್ರಯತ್ನಗಳು ನಡೆಯುತ್ತಿವೆ. ಹಿಂದೂಗಳು ಈ ವಿಚಾರಗಳನ್ನು ತಿಳಿದಿರಬೇಕು, ವಿವೇಚನೆ ಬೆಳೆಸಿಕೊಳ್ಳಬೇಕು.
– ಡಾ. ಎಸ್.ಆರ್. ಲೀಲಾ, ಗ್ರಂಥಕರ್ತರು, ಮತ್ತು ವಿಧಾನ ಪರಿಷತ್ತಿನ ಮಾಜಿ ಸದಸ್ಯರು, ಬೆಂಗಳೂರು.