೧. ಅಧ್ಯಾತ್ಮದಲ್ಲಿ ಶ್ರೀಸತ್ಶಕ್ತಿ (ಸೌ.) ಬಿಂದಾ ಅಕ್ಕನವರ ಅಸಾಮಾನ್ಯತೆಯನ್ನು ಬಹಳ ಹಿಂದೆಯೇ ಗುರುತಿಸಿದ ಮಹಾನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು
‘ನಾನು ಸುಮಾರು ೨೦೧೩ ರಲ್ಲಿ ಒಂದು ಸೇವೆಯ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿಗೆ ಹೋಗಿದ್ದೆ. ಆಗ ಅವರು ನನಗೆ, ”ಬಿಂದಾ ಎಷ್ಟು ಮಾಡುತ್ತಾಳಲ್ಲ ! (ಟಿಪ್ಪಣಿ) ಅವಳು ಅಧ್ಯಾತ್ಮದಲ್ಲಿ ಎಷ್ಟು ಮುಂದೆ ಹೋಗುವಳೆಂದರೆ, ಸನಾತನದ ಇತಿಹಾಸದಲ್ಲಿ ಅದ್ವಿತೀಯಳೆಂದು ಸಾಬೀತಾಗುವಳು’’, ಎಂದರು. ಮುಂದೆ ೨೦೧೪ ರಲ್ಲಿ ತಮಿಳುನಾಡಿನ ಪೂ. ಡಾ. ಓಂ ಉಲಗನಾಥನ್ ಇವರು ಈಶ್ವರೀ ಪ್ರೇರಣೆಗನುಸಾರ ಸನಾತನ ಸಂಸ್ಥೆಗಾಗಿ ಸಪ್ತರ್ಷಿ ಜೀವನಾಡಿಪಟ್ಟಿಯ ವಾಚನ ಮಾಡಲು ಆರಂಭಿಸಿದರು. ಜೀವನಾಡಿಪಟ್ಟಿಯ ಮಾಧ್ಯಮದಿಂದ ಉಚ್ಚ ಲೋಕಗಳ ಮಹರ್ಷಿಗಳು ಸನಾತನಕ್ಕೆ ಮಾರ್ಗದರ್ಶನ ಮಾಡುತ್ತಾರೆ. ಇದರ ಅಂತರ್ಗತ ೨೦೧೬ ರಿಂದ ಮಹರ್ಷಿಗಳು ಇಲ್ಲಿಯವರೆಗೆ ಅನೇಕ ಸಲ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಅಸಾಮಾನ್ಯ ಪ್ರಭುತ್ವದ ಬಗ್ಗೆ ಗೌರವೋದ್ಗಾರ ತೆಗೆದಿದ್ದಾರೆ. ಉದಾಹರಣೆಗೆ ಒಂದು ಆಶೀರ್ವಾದ ಈ ರೀತಿ ಇದೆ – ದಿನಾಂಕ ೩೦.೫.೨೦೧೬ ರಂದು ಮಾಡಿದ ಸಪ್ತರ್ಷಿ ಜೀವನಾಡಿ ಪಟ್ಟಿಗನುಸಾರ ಸಪ್ತರ್ಷಿಗಳು, ‘ಹೇ ಉತ್ತರಾಪುತ್ರಿ (ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ), ತಾವು ಶ್ರೀ ಮಹಾಲಕ್ಷ್ಮೀಯ ಅಂಶವಾಗಿದ್ದೀರಿ. ಆದುದರಿಂದ ತಮಗೆ ಏನೂ ಕಡಿಮೆ ಬೀಳಲಾರದು. ಮುಂಬರುವ ಕಾಲದಲ್ಲಿ ತಾವು ಎಲ್ಲರಿಗೂ ಆದರ್ಶವಾಗಲಿರುವಿರಿ.
ಟಿಪ್ಪಣಿ : ಶ್ರೀಸತ್ಶಕ್ತಿ (ಸೌ.) ಬಿಂದಾ ಅಕ್ಕನವರು ಎಲ್ಲೆಡೆಯ ಸಾಧಕರ ಸಾಧನೆಯ ಅಡಚಣೆ ಪರಿಹರಿಸಿ ಅವರಿಗೆ ಸಾಧನೆ ಬಗ್ಗೆ ಉತ್ತಮ ಮಾರ್ಗದರ್ಶನ ಮಾಡುತ್ತಾರೆ. ಅವರ ಮಾರ್ಗದರ್ಶನ ಮತ್ತು ವಾಣಿಯಲ್ಲಿನ ಚೈತನ್ಯದಿಂದ ಅನೇಕ ಸಾಧಕರ ಸಾಧನೆ ಚೆನ್ನಾಗಿ ನಡೆದಿದ್ದು ಅವರು ಸಾಧನೆಯಲ್ಲಿ ಪ್ರಗತಿ ಮಾಡಿಕೊಳ್ಳುತ್ತಿದ್ದಾರೆ. – ಪೂ. ಸಂದೀಪ ಆಳಶಿ
೨. ಅನುಭೂತಿ
‘ಪ.ಪೂ. ಭಕ್ತರಾಜ ಮಹಾರಾಜ – ಪ.ಪೂ. ರಾಮಾನಂದ ಮಹಾರಾಜ – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ – ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ’ ಇದು ಸನಾತನದ ಗುರುಪರಂಪರೆಯಾಗಿದೆ. ನನ್ನ ಅದೃಷ್ಟದಿಂದ ನನಗೆ ಕೆಲವೊಂದು ಸಲ ಪ.ಪೂ. ಭಕ್ತರಾಜ ಮಹಾರಾಜರ ದರ್ಶನದ ಅವಕಾಶ ದೊರಕಿತು. ಅವರ ಸಹವಾಸದಲ್ಲಿ ನನಗೆ ಚಂದನದ ಸುಗಂಧದ ಅನುಭೂತಿ ಬರುತ್ತಿತ್ತು. ಶ್ರೀಸತ್ಶಕ್ತಿ (ಸೌ.) ಬಿಂದಾ ಅಕ್ಕನವರ ಸಂದರ್ಭದಲ್ಲಿ ನನಗೆ ೨೦೨೧ ರಲ್ಲಿ ಬಂದ ಅನುಭೂತಿ ಈ ರೀತಿ ಇದೆ – ಒಂದು ಸಲ ನಾನು ಆಧ್ಯಾತ್ಮಿಕ ಕಾರಣಗಳಿಂದಾಗಿ ಕೆಲವು ತೊಂದರೆಗಳಿಂದ ಬಹಳ ಬೇಸತ್ತಿದ್ದೆ. ಆಗ ನನಗೆ ಶ್ರೀಸತ್ಶಕ್ತಿ (ಸೌ.) ಬಿಂದಾ ಅಕ್ಕನವರ ನೆನಪಾಯಿತು ಮತ್ತು ಅದೇ ಸಮಯದಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಸಹವಾಸದಲ್ಲಿ ನನಗೆ ಯಾವ ರೀತಿಯ ಚಂದನದ ಸುಗಂಧ ಬರುತ್ತಿತ್ತೋ, ಅದೇ ರೀತಿಯ ಸುಗಂಧ ಬಂದಿತು. (ಇದೇ ರೀತಿ ಮುಂದೆ ಸಹ ಒಂದು ಪ್ರಸಂಗದಲ್ಲಿ ಘಟಿಸಿತು.) ಆಗ ಪ.ಪೂ. ಭಕ್ತರಾಜರು, ‘ನಾನು ಶ್ರೀಸತ್ಶಕ್ತಿ (ಸೌ.) ಬಿಂದಾ ಅಕ್ಕನವರ ರೂಪದಲ್ಲಿ ಯಾವಾಗಲೂ ನಿನ್ನೊಂದಿಗೆ ಇದ್ದೇನೆ’, ಎಂದು ಹೇಳಿದಂತಾಯಿತು. ಇದರಿಂದ ನನ್ನ ಮನಸ್ಸು ಆನಂದದಿಂದ ತುಂಬಿ ಹೋಯಿತು. ಈ ಪ್ರಸಂಗದಿಂದ ನನಗೆ ‘ಸನಾತನದ ಗುರುಪರಂಪರೆ ಎಷ್ಟು ಯಥಾರ್ಥವಾಗಿದೆ’, ಎಂಬ ಅನುಭೂತಿ ಬಂದಿತು
– (ಪೂ.) ಸಂದೀಪ ಆಳಶಿ (೨೦.೯.೨೦೨೩)