|
ಮಂಡಿ (ಹಿಮಾಚಲ ಪ್ರದೇಶ) – ನಗರದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮಸೀದಿಯನ್ನು ಕೆಡವುವಂತೆ ಮಂಡಿ ನಗರಸಭೆ ಆಯುಕ್ತ ಎಚ್. ಎಸ್. ರಾಣಾ ಅವರ ನ್ಯಾಯಾಲಯವು ಸೆಪ್ಟೆಂಬರ್ 13 ರಂದು ಆದೇಶ ನೀಡಿತು. 30 ದಿನದೊಳಗೆ ಅಕ್ರಮವಾಗಿ ನಿರ್ಮಿಸಿರುವ ಮಸೀದಿಯನ್ನು ಕೆಡವಬೇಕು, ಇಲ್ಲವಾದಲ್ಲಿ ಸರ್ಕಾರ ಕೆಡವುದಾಗಿ ಮಸೀದಿ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದೆ. ಈ ಸ್ಥಳದಲ್ಲಿ ಮೊದಲು ಒಂದೇ ಅಂತಸ್ತಿನ ಮಸೀದಿ ಇತ್ತು, ಆ ಮಸೀದಿಯ ಮೇಲೆ ಯಾವುದೇ ಅನುಮತಿ ಪಡೆಯದೆ ಎರಡು ಅಂತಸ್ತನ್ನು ನಿರ್ಮಾಣ ಮಾಡಲಾಗಿದೆ. ಈ ಎರಡು ಅಂತಸ್ತನ್ನು ನೆಲಸಮ ಮಾಡಲಾಗುವುದು. ಮತ್ತೊಂದೆಡೆ, ಜೈಲ್ ರಸ್ತೆ ಪ್ರದೇಶದಲ್ಲಿ ನಿರ್ಮಿಸಲಾದ ಮಸೀದಿಯ ಅಕ್ರಮ ಗೋಡೆಯನ್ನು ಮುಸ್ಲಿಮರು ಸೆ.12 ರಿಂದ ಕೆಡವಲು ಆರಂಭಿಸಿದ್ದಾರೆ. ರಸ್ತೆ ಅತಿಕ್ರಮಣ ಮಾಡಿ ನಿರ್ಮಿಸಿದ ಗೋಡೆಯನ್ನು ಈಗ ಮುಸ್ಲಿಮರೇ ಕೆಡವುತ್ತಿದ್ದಾರೆ.
ಮಸೀದಿ ವಿರುದ್ಧ ಕ್ರಮಕ್ಕೆ ಹಿಂದೂಗಳ ಆಂದೋಲನ !
ಮಸೀದಿಯ ಅಕ್ರಮ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪುರಸಭೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಹಿಂದೂ ಸಂಘಟನೆಗಳು ಹಾಗೂ ಮಂಡಿಯ ಸ್ಥಳೀಯ ನಾಗರಿಕರು ಮಸೀದಿ ಧ್ವಂಸಕ್ಕೆ ಆಗ್ರಹಿಸಿ ನ್ಯಾಯಾಲಯದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದರು. (ಹಿಂದೂಗಳಿಗೇಕೆ ಇಂತಹ ಬೇಡಿಕೆ ಇಡಬೇಕಾಗುತ್ತದೆ? ಸರ್ಕಾರವೇ ಏಕೆ ಅಕ್ರಮ ನಿರ್ಮಾಣಗಳನ್ನು ಕೆಡವುತ್ತಿಲ್ಲ ?- ಸಂಪಾದಕರು) ಇದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಈ ಪ್ರಕರಣವು ಜೂನ್ 2024 ರಿಂದ ಮುನ್ಸಿಪಲ್ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿತ್ತು. ಸೆಪ್ಟೆಂಬರ್ 12 ರಂದು ಸರ್ಕಾರದೊಂದಿಗೆ ನಡೆಸಿದ ಮಾತುಕತೆ ವಿಫಲವಾದ ನಂತರ ಹಿಂದೂ ಸಂಘಟನೆಗಳು ಸೆಪ್ಟೆಂಬರ್ 13 ರಂದು ಪ್ರತಿಭಟನೆಯನ್ನು ಪ್ರಾರಂಭಿಸಿದವು. ಪ್ರತಿಭಟನೆ ವೇಳೆ ನೆರೆದ ಹಿಂದೂಗಳು ‘ಹಿಮಾಚಲ ನೆ ಥಾನಾ ಹೈ, ದೇವಭೂಮಿ ಕೊ ಬಚಾನಾ ಹೈ’ ಮತ್ತು ‘ಭಾರತಮಾತಾ ಕೀ ಜೈ’ ಎಂಬ ಘೋಷಣೆಗಳನ್ನು ಕೂಗಿದರು. ಹಿಂದೂ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದರು. ನಂತರ ನಡೆದ ಗಲಾಟೆ ಬಳಿಕ ಅಲ್ಲಿನ ಜಿಲ್ಲಾಧಿಕಾರಿಗಳು ‘ಅಕ್ರಮ ನಿರ್ಮಾಣ ಮಾಡಿರುವ ಮಸೀದಿಗೆ ಬೀಗ ಹಾಕಲಾಗುವುದು’ ಎಂದು ಘೋಷಿಸಿದರು. ಜಿಲ್ಲಾ ಮ್ಯಾಜಿಸ್ಟ್ರೇಟ್ ಅಪೂರ್ವ ದೇವಗನ್ ಅವರು ಪ್ರಸ್ತುತ ಮಂಡಿ ನಗರದ 7 ವಾರ್ಡ್‌ಗಳಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 163 ಅನ್ನು ಜಾರಿಗೊಳಿಸಿದ್ದಾರೆ.
ಸರಕಾರ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದೆ ! – ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು
ಮಂಡಿಯಲ್ಲಿ ಅಕ್ರಮ ನಿರ್ಮಾಣ ನಡೆದಿರುವುದು ಬಯಲಾಗಿದೆ. ಈ ವಿವಾದ ಬಗೆಹರಿಸಲು ಸಮಿತಿ ರಚಿಸಲಾಗುವುದು. ಹಿಮಾಚಲ ಪ್ರದೇಶ ಶಾಂತಿಪ್ರಿಯ ರಾಜ್ಯವಾಗಿದೆ. ಇಲ್ಲಿ ಎಲ್ಲ ಧರ್ಮಗಳನ್ನು ಗೌರವಿಸಲಾಗುತ್ತದೆ. ಆದರೆ ಯಾವುದೇ ಧರ್ಮ, ಜಾತಿ ಅಥವಾ ಪಂಥ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಸರಕಾರ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತದೆ. ಇಲ್ಲಿ ಅಕ್ರಮ ಕಟ್ಟಡಗಳಿಗೆ ಅವಕಾಶವಿಲ್ಲ. ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಹೇಳಿದ್ದಾರೆ.
ಸಂಪಾದಕೀಯ ನಿಲುವು
|