Chinese Army Retreated: ಲಡಾಖನಲ್ಲಿ ನುಸುಳಿದ್ದ ಚೀನಾದ ಶೇ.75 ರಷ್ಟು ಸೇನೆ ಹಿಂದೆ ಸರಿದಿದೆ ! – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

ಜಿನೀವಾ (ಸ್ವಿಟ್ಜರ್ಲೆಂಡ್) – ಪೂರ್ವ ಲಡಾಖ್ ಪ್ರದೇಶದಲ್ಲಿ ನುಸುಳಿದ್ದ ಚೀನಾದ ಶೇ.75 ಸೇನೆ ಹಿಂದೆ ಸರಿದಿದೆ ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇತ್ತೀಚೆಗೆ ಮಾಹಿತಿಯನ್ನು ನೀಡಿದರು. ಜಿನೀವಾದಲ್ಲಿ ಆಯೋಜಿಸಿದ್ದ ಸಂದರ್ಶನದಲ್ಲಿ ಅವರು ಚೀನಾದೊಂದಿಗೆ ನಡೆಯುತ್ತಿರುವ ಮಾತುಕತೆಗಳ ಬಗ್ಗೆ ಮಾಹಿತಿ ನೀಡಿದರು.

ವಿದೇಶಾಂಗ ಸಚಿವರು ಮಾತನಾಡಿ, ಗಲವಾನ್ ಕಣಿವೆಯಲ್ಲಿ ಜೂನ್ 2020ರಲ್ಲಿ ನಡೆದ ಘರ್ಷಣೆಯು ಭಾರತ ಮತ್ತು ಚೀನಾ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರಿದೆ. ಗಡಿಯಲ್ಲಿ ಹಿಂಸಾಚಾರ ನಡೆಯುತ್ತಿರುವಾಗ ಅದು ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಪರಿಸ್ಥಿತಿಗೆ ಪರಿಹಾರ ಕಂಡುಕೊಳ್ಳಲು ಎರಡೂ ಕಡೆಯಿಂದ ಮಾತುಕತೆ ನಡೆಯುತ್ತಿದೆ. ಗಡಿ ವಿವಾದಕ್ಕೆ ಪರಿಹಾರ ದೊರೆತರೆ ಉಭಯ ದೇಶಗಳ ಸಂಬಂಧ ಸುಧಾರಿಸಲಿದೆ ಎಂದು ವಿದೇಶಾಂಗ ಸಚಿವರು ಸೂಚಿಸಿದ್ದಾರೆ.

ಇಡೀ ಸೇನೆಯ ಹಿಂದೆ ಸರಿಯಲು ಒಪ್ಪಿಗೆ ! – ಅಜಿತ್ ಡೊವಲ್

ಅಜಿತ್ ಡೊವಲ್

ನವದೆಹಲಿ – ಲಡಾಖ್ ಗಡಿಯಿಂದ ಭಾರತ ಮತ್ತು ಚೀನಾ ಎರಡೂ ದೇಶಗಳು ಎಲ್ಲಾ ಸೈನಿಕರನ್ನು ಹಿಂತೆಗೆದುಕೊಳ್ಳಲು ಸಪ್ಟೆಂಬರ 12ರಂದು ಒಪ್ಪಿಕೊಂಡಿವೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ಡೊಬಲ್ ತಿಳಿಸಿದರು. ರಷ್ಯಾ ಪ್ರವಾಸದಲ್ಲಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊವಲ್ ಅವರು ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿ ಮಾಡಿದ್ದಾರೆ. ಆ ವೇಳೆ ಸೇನೆ ವಾಪಸಾತಿಗೆ ತಕ್ಷಣದ ಮತ್ತು ದುಪ್ಪಟ್ಟು ಪ್ರಯತ್ನ ಮಾಡಲು ಒಪ್ಪಿಗೆ ಸೂಚಿಸಲಾಯಿತು ಎಂದು ಅಜಿತ್‌ ಡೊವಲ್‌ ಹೇಳಿದ್ದಾರೆ.