Nagamangala Riots : ಮಂಡ್ಯದಲ್ಲಿ ಶ್ರೀ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ !

  • 500ಕ್ಕೂ ಹೆಚ್ಚು ಮುಸ್ಲಿಮರಿಂದ ದಾಳಿ

  • ಹಿಂದೂಗಳ ಹಲವು ಅಂಗಡಿಗಳು ಬೆಂಕಿಗಾಹುತಿ ಕೋಟ್ಯಂತರ ರೂಪಾಯಿ ನಷ್ಟ

  • ಮುಸಲ್ಮಾನರಿಂದ ಕಲ್ಲುತೂರಾಟ ಮತ್ತು ಚಪ್ಪಲಿ ಎಸೆತ

  • ಕಾಂಗ್ರೆಸ್ ನ ಪೊಲೀಸರಲ್ಲಿ ಸ್ಮಶಾನಮೌನ

  • ಹಿಂದೂಗಳಿಗೆ ಮೆರವಣಿಗೆ ಹಿಂತೆಗೆದುಕೊಳ್ಳುವಂತೆ ಪೊಲೀಸರಿಂದ ಒತ್ತಾಯ

ಮಂಡ್ಯ – ನಾಗಮಂಗಲದ ಬದರಿಕೊಪ್ಪಲು ಎಂಬಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯನ್ನು ಸಪ್ಟೆಂಬರ 11ರಂದು ರಾತ್ರಿ ವಿಸರ್ಜನೆಗಾಗಿ ಕೊಂಡೊಯ್ಯಲಾಗುತ್ತಿತ್ತು. ಈ ಮೆರವಣಿಗೆ ಮೇಲೆ 500 ಮತಾಂಧ ಮುಸ್ಲಿಮರ ಗುಂಪು ಕಲ್ಲು ತೂರಾಟ ನಡೆಸಿದೆ. ಇಲ್ಲಿನ ಮೈಸೂರು ರಸ್ತೆಯಲ್ಲಿರುವ ಒಂದು ದರ್ಗಾದ ಬಳಿ ಮೆರವಣಿಗೆ ಬರುತ್ತಿದ್ದಂತೆ ಕಲ್ಲುತೂರಾಟ ಆರಂಭವಾಯಿತು, ಚಪ್ಪಲಿ, ಗಾಜಿನ ಬಾಟಲಿಗಳು ಮತ್ತು ಪೆಟ್ರೋಲ್ ಬಾಂಬ್‌ ಎಸೆಯಲಾಯಿತು. ಈ ಸಮಯದಲ್ಲಿ ಮುಸಲ್ಮಾನರು ಅಲ್ಲಾಹು ಅಕ್ಬರ್ (ಅಲ್ಲಾ ಮಹಾನ್) ಎಂದು ಕೂಗುತ್ತ ಮಾರಕಾಸ್ತ್ರ ಸಹಿತ ಹಿಂದೂಗಳತ್ತ ಬೀಸಲಾರಂಭಿಸಿದರು. ಇದಕ್ಕೆ ಪ್ರತಿಯಾಗಿ ಹಿಂದೂಗಳೂ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಲಾರಂಭಿಸಿದರು. ಈ ವೇಳೆ ಮುಸ್ಲಿಂ ಗುಂಪು ಹಿಂಸಾಚಾರಕ್ಕೆ ತಿರುಗಿ ಆ ಪ್ರದೇಶದಲ್ಲಿದ್ದ ಅಂಗಡಿಗಳಿಗೆ, ವಾಹನಗಳಿಗೆ ಬೆಂಕಿ ಹಚ್ಚಿದೆ. ಇದರಲ್ಲಿ ಹಿಂದೂಗಳ ಕೋಟ್ಯಂತರ ರೂಪಾಯಿಯ ಆಸ್ತಿಗೆ ಹಾನಿಯಾಗಿದೆ. ಇದರಿಂದಾಗಿ ಹಿಂದೂಗಳೂ ಆಕ್ರಮಣಕಾರಿಯಾದರು. ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಯತ್ನಿಸಿದರು. ಈ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಪೊಲೀಸರು 23 ಹಿಂದೂಗಳು ಮತ್ತು 30 ಮುಸ್ಲಿಮರನ್ನು ಬಂಧಿಸಿದ್ದಾರೆ. (ಸರ್ವಧರ್ಮ ಸಮಭಾವ ವೃತ್ತಿಯ ಪೋಲೀಸರ ಎಂದಿನ ಪದ್ಧತಿ ! ಗಲಭೆಗಳ ಸಂದರ್ಭದಲ್ಲಿ ‘ಸಮತೋಲನ’ ಕಾಯ್ದುಕೊಳ್ಳಲು, ಗಲಭೆ ಮಾಡುವ ಮುಸ್ಲಿಮರನ್ನು ವಿರೋಧಿಸುವ ಹಿಂದೂಗಳನ್ನು ಬಂಧಿಸುವ ಪೊಲೀಸರ ವಿರುದ್ಧ ಮೊದಲು ಕ್ರಮ ತೆಗೆದುಕೊಳ್ಳುವುದು ಆವಶ್ಯಕವಿದೆ ! – ಸಂಪಾದಕರು) ಗಲಭೆಯನ್ನು ಖಂಡಿಸಲು ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸೆಪ್ಟೆಂಬರ್ 12 ರಂದು ಬಂದ್‌ಗೆ ಕರೆ ನೀಡಿತ್ತು.

ಮುಖ್ಯಾಂಶಗಳು!

1. ಹಿಂದೂಗಳು ಪೊಲೀಸ್ ಠಾಣೆಯ ಹೊರಗೆ ಶ್ರೀ ಗಣೇಶನ ಮೂರ್ತಿಯನ್ನು ಇಟ್ಟು ಮುಸ್ಲಿಮರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ನಡೆಸಿದರು. ಕಳೆದ ವರ್ಷವೂ ಇಲ್ಲಿನ ದರ್ಗಾ ಎದುರು ಇಂತಹದ್ದೇ ಘಟನೆ ನಡೆದಿತ್ತು.

2. ಜಿಲ್ಲಾಧಿಕಾರಿ ಡಾ. ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ. ನಾಗಮಂಗಲದಲ್ಲಿ ಪರಿಸ್ಥಿತಿ ಬಹಳ ಉದ್ವಿಗ್ನಗೊಂಡಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 14ರ ವರೆಗೆ ಕರ್ಫ್ಯೂ ಜಾರಿ ಮಾಡಲಾಗಿದೆ. ಅಲ್ಲದೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

3. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಿತೇಂದ್ರ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಮಾಹಿತಿಯನ್ನು ಪಡೆದುಕೊಂಡರು.

4. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಈ ಕುರಿತು ಪ್ರತಿಕ್ರಿಯೆ ವ್ಯಕ್ಯಪಡಿಸಿದ್ದು, ‘ಸರಕಾರ ಒಂದು ಗುಂಪನ್ನು ಓಲೈಕೆ ಮಾಡುತ್ತಿದೆ ಮತ್ತು ಇದರಿಂದಾಗಿ ಅವರ ಉದ್ಧಟತನ ಹೆಚ್ಚಾಗುತ್ತಿದೆ’, ಎಂದು ಹೇಳಿದರು.

ಹಿಂದೂಗಳ ಮೇಲೆ ದಾಳಿಯಾದಾಗ ಪೋಲೀಸರಲ್ಲಿ ಸ್ಮಶಾನಮೌನ !

ಸ್ಥಳೀಯ ಪ್ರತ್ಯಕ್ಷದರ್ಶಿಯೊಬ್ಬರು ವಾರ್ತಾ ವಾಹಿನಿಯೊಂದಿಗೆ ಮಾತನಾಡುವಾಗ, ಸುಮಾರು 500 ಮುಸ್ಲಿಮರು ದಾಳಿ ನಡೆಸಿದಾಗ ‘ನಾವು ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ?’ ಎಂದು ಅನಿಸುತ್ತಿತ್ತು. ಕಲ್ಲು ತೂರಾಟದಲ್ಲಿ 4 ಪೊಲೀಸರು ಗಾಯಗೊಂಡಿದ್ದು, 15 ಹಿಂದೂಗಳು ಗಾಯಗೊಂಡಿದ್ದಾರೆ. ಹಿಂದೂಗಳ ಮೇಲೆ ದಾಳಿ ನಡೆದಾಗ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು. ಅವರು ಆಕ್ರಮಣಕಾರಿ ಮುಸಲ್ಮಾನರಿಗೆ ತಿಳಿಸುವ ಬದಲು ಹಿಂದೂಗಳ ಮೇಲೆ ಲಾಠಿಚಾರ್ಜ ಮಾಡುತ್ತಿದ್ದರು. ಹಾಗೆಯೇ ‘ಇಲ್ಲಿಂದ ಮೆರವಣಿಗೆ ತೆಗೆದುಕೊಂಡು ಹೋಗಬೇಡಿ’ ಎಂದು ಹೇಳುತ್ತಿದ್ದರು. ಕೆಲವು ಪೊಲೀಸರು ಹಿಂದೂಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಘಟನೆ ನಡೆದ ಸ್ಥಳದಲ್ಲಿದ್ದ ಪೊಲೀಸರೊಂದಿಗೆ ಕಾಂಗ್ರೆಸ್ ತಾಲೂಕ ಅಧ್ಯಕ್ಷ ರಾಜೇಶ್ ಕೂಡ ಹಿಂದೂಗಳನ್ನು ವಾಪಸ್ ಕಳುಹಿಸುತ್ತಿದ್ದರು.

ಈ ಕೃತ್ಯ ಅತ್ಯಂತ ಗಂಭೀರವಾಗಿದೆ! – ಮುಖ್ಯಮಂತ್ರಿ ಸಿದ್ದರಾಮಯ್ಯ

ಈ ವಿದ್ಯಮಾನವು ಕಾನೂನು ಮತ್ತು ಸುವ್ಯವಸ್ಥೆಗೆ ಮಾರಕವಾಗಿದೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. (ಮುಸ್ಲಿಮರ ಓಲೈಕೆ ಮಾಡುತ್ತಿರುವ ಕಾಂಗ್ರೆಸ್ ರಾಜ್ಯದಲ್ಲಿ ಭವಿಷ್ಯದಲ್ಲಿ ಈ ಗಲಭೆಕೋರರು ಬಿಡುಗಡೆಗೊಂಡರೂ ಆಶ್ಚರ್ಯವೇನಿಲ್ಲ ! – ಸಂಪಾದಕರು)

ಮುಸ್ಲಿಮರು ಗಲಭೆ ಮಾಡಿದರೂ ಹಿಂದೂಗಳನ್ನು ಏಕೆ ಬಂಧಿಸಲಾಯಿತು ? – ಭಾಜಪ ಶಾಸಕ ಸಿ.ಟಿ. ರವಿ

ನಾಗಮಂಗಲದ ಗಲಭೆಗಳು ಒಂದು ಕೋಮಿನ ಗೂಂಡಾಗಳ ಉದ್ದೇಶಪೂರ್ವಕ ಹಿಂಸಾಚಾರವಾಗಿದೆ. ಪೆಟ್ರೋಲ್ ಬಾಂಬ್ ಎಸೆದು ಗಲಭೆಗೆ ಪ್ರಚೋದನೆ ನೀಡಿದ ಮುಸ್ಲಿಂ ಗಲಭೆಕೋರರನ್ನು ಬಂಧಿಸದೆ ಮೆರವಣಿಗೆ ಸಮಿತಿ ಸದಸ್ಯರನ್ನು ಬಂಧಿಸಿರುವ ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಿರಿ ಮತ್ತು ಇತರ ಗಣೇಶೋತ್ಸವಗಳಿಗೆ ಭದ್ರತೆ ಒದಗಿಸಿರಿ ! – ಹಿಂದೂ ಜನಜಾಗೃತಿ ಸಮಿತಿ

ಶ್ರೀ. ಗುರುಪ್ರಸಾದ ಗೌಡ

ಈ ದಾಳಿಯ ಕುರಿತು ಹಿಂದೂ ಜನಜಾಗೃತಿ ಸಮಿತಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಸಮಿತಿಯ ರಾಜ್ಯ ಸಮನ್ವಯಕರಾದ ಗುರುಪ್ರಸಾದ ಗೌಡ ಮಾತನಾಡಿ, ಮತಾಂಧ ಮುಸಲ್ಮಾನರ ಈ ಕೃತ್ಯ ನೋಡಿದ ಮೇಲೆ ಈ ದಾಳಿ ಸಂಪೂರ್ಣ ಪೂರ್ವ ಯೋಜಿತವಾಗಿದ್ದು ಕೇವಲ ಗಲಭೆ ಸೃಷ್ಟಿಸಲು ಈ ಕೃತ್ಯ ಎಸಗಿರುವುದು ಗಮನಕ್ಕೆ ಬರುತ್ತದೆ. ಈ ಘಟನೆಯನ್ನು ಹಿಂದೂ ಜನಜಾಗೃತಿ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಪೊಲೀಸರ ಸಮ್ಮುಖದಲ್ಲಿಯೇ ಇಷ್ಟೊಂದು ದೊಡ್ಡ ಪ್ರಮಾಣದ ದಾಳಿ ನಡೆಸಿರುವುದು ನಾಚಿಕೆಗೇಡಿನ ಸಂಗತಿ. ಪೊಲೀಸರು ಬಂಧಿಸಿರುವ ತಪ್ಪಿತಸ್ಥರು ಎಂದು ಸಾಬೀತಾದರೆ ಅವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಇನ್ನೂ ಗಣೇಶ ವಿಸರ್ಜನೆ ನಡೆಯಬೇಕಿದೆ. ಆದ್ದರಿಂದ ಮಂಡ್ಯದಂತಹ ಘಟನೆ ಬೇರೆಡೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಹೇಳಿದರು.

ಪತ್ರಿಕಾ ಪ್ರಕಟಣೆಯಲ್ಲಿ, ಗೃಹ ಸಚಿವ ಡಾ. ಪರಮೇಶ್ವರ್ ಇವರು ಆಕಸ್ಮಿಕ ಘಟನೆಯಾಗಿದ್ದೂ, ಯಾವುದೇ ದೊಡ್ಡ ಪ್ರಮಾಣದಲ್ಲಿ ಸಾವುನೋವು ಅಥವಾ ಪ್ರಾಣ ಹಾನಿಯಾಗಿಲ್ಲ ಎಂದು ಹೇಳಿದ್ದಾರೆ. ಗೃಹ ಸಚಿವರ ಈ ಹೇಳಿಕೆ ಅತ್ಯಂತ ಬೇಜವಾಬ್ದಾರಿಯಿಂದ ಕೂಡಿದೆ. ಇಂತಹ ಹೇಳಿಕೆಗಳಿಂದಲೇ ಮತಾಂಧರಿಗೆ ಶಕ್ತಿ ಬರುತ್ತದೆ. ಗೃಹ ಸಚಿವರ ಹೇಳಿಕೆಯನ್ನು ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಇದಲ್ಲದೇ ಮತಾಂಧರಿಂದ ಕಲ್ಲು ತೂರಾಟದ ನಡುವೆಯೂ ಗಣೇಶ ಮಂಡಳಿಯ ಸದಸ್ಯರನ್ನು ಬಂಧಿಸಿರುವುದು ಕಾಂಗ್ರೆಸ್ಸಿನ ತುಷ್ಟೀಕರಣ ನೀತಿಯನ್ನು ಎತ್ತಿ ತೋರಿಸುತ್ತದೆ. ಶಿವಮೊಗ್ಗದಲ್ಲಿ ಈದ್ ಮಿಲಾದ್ ವೇಳೆ ನಡೆದ ಗಲಭೆಯೂ ಆಕಸ್ಮಿಕ ಎಂದು ಗೃಹ ಸಚಿವರು ಹೇಳಿದ್ದರು. ಇದೀಗ ಮತ್ತೆ ಅದೇ ಹೇಳಿಕೆ ನೀಡಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ದರ್ಗಾಗಳು ಮತ್ತು ಮಸೀದಿಗಳು ದೇಶ ವಿರೋಧಿ ಮತ್ತು ಹಿಂದೂ ವಿರೋಧಿ ಕೃತ್ಯಗಳ ಅಡ್ಡೆ !

ಭಾರತದ ಅನೇಕ ಸ್ಥಳಗಳಲ್ಲಿ, ಹಿಂದೂಗಳ ಧಾರ್ಮಿಕ ಮೆರವಣಿಗೆಗಳು ಮಸೀದಿಗಳು ಅಥವಾ ದರ್ಗಾಗಳ ಪ್ರದೇಶವನ್ನು ತಲುಪಿದಾಗ ದಾಳಿ ಮಾಡಲಾಗುತ್ತದೆ. ಭಾರತದಲ್ಲಿ ಹಲವು ಮಸೀದಿಗಳಲ್ಲಿ ದೇಶವಿರೋಧಿ ಕೃತ್ಯಗಳು ನಡೆಯುತ್ತಿವೆ, ಇದು ಸಾಕ್ಷ್ಯಾಧಾರಗಳೊಂದಿಗೆ ಬೆಳಕಿಗೆ ಬಂದಿರುವಾಗಲೂ ಏಕೆ ಅವುಗಳಿಗೆ ಬೀಗ ಹಾಕುವುದಿಲ್ಲ ? ಮಂಡ್ಯದ ಮೈಸೂರು ರಸ್ತೆಯಲ್ಲಿರುವ ದರ್ಗಾ ಪ್ರದೇಶದಲ್ಲಿ ಹಿಂದೂ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಮೇಲೆ ಎರಡನೇ ಬಾರಿ ದಾಳಿ ನಡೆದಿದೆ. ಭಾರತದಲ್ಲಿ ಅನೇಕ ‘ಸೆಕ್ಯುಲರ್’ ಹಿಂದೂಗಳು ದರ್ಗಾಕ್ಕೆ ಹೋಗಿ ತಲೆ ಬಾಗುತ್ತಾರೆ. ಇದು ನಾಚಿಕೆಗೇಡಿನ ಸಂಗತಿಯಲ್ಲವೇ ?

ಸಂಪಾದಕೀಯ ನಿಲಿವು

  • ಹಿಂದೂಗಳ ಗಣೇಶೋತ್ಸವದ ಮೆರವಣಿಗೆಯ ಮೇಲೆ ದಾಳಿ ಮಾಡಲು ಮಂಡ್ಯ ಭಾರತದಲ್ಲಿದೆಯೋ ಅಥವಾ ಬಾಂಗ್ಲಾದೇಶದಲ್ಲಿದೆಯೋ ?
  • ಹಿಂದೂಗಳ ದೇವತೆಗಳ ವಿಸರ್ಜನಾ ಮೆರವಣಿಗೆಯ ಸಮಯದಲ್ಲಿ ದಾಳಿ ನಡೆಯುತ್ತಿರುವಾಗ ಪೋಲೀಸರು ಹಿಂದೂಗಳಿಗೆ ರಕ್ಷಣೆ ನೀಡದೆ ಬಾಲ ಮುದುಡಿಕೊಂಡು ಸುಮ್ಮನೆ ಕುಳಿತರೇ ಹಿಂದೂಗಳು ತಮ್ಮ ಸಾಂವಿಧಾನಿಕ ಆತ್ಮರಕ್ಷಣೆಗಾಗಿ ನೀಡಿದ ಹಕ್ಕನ್ನು ಚಲಾಯಿಸಲು ಪ್ರಾರಂಭಿಸಿದರೆ ಅದರಲ್ಲಿ ತಪ್ಪೇನು ?
  • ಹಿಮಾಚಲ ಪ್ರದೇಶದಿಂದ ಕರ್ನಾಟಕದವರೆಗೆ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ. ಶಿಮ್ಲಾದಲ್ಲಿ ಅಕ್ರಮ ಮಸೀದಿ ವಿರುದ್ಧ ಪ್ರತಿಭಟನೆ ಮಾಡುವ ಹಿಂದೂಗಳಿಗೆ ಪೊಲೀಸರು ಅಮಾನುಷವಾಗಿ ಥಳಿಸಿದರೆ, ಮಂಡ್ಯದಲ್ಲಿ ಮುಸಲ್ಮಾನರು ಅವರ ಮೆರವಣಿಗೆ ಮೇಲೆ ದಾಳಿ ಮಾಡುತ್ತಾರೆ, ಮೆರವಣಿಗೆ ನಿಲ್ಲಿಸುವಂತೆ ಹಿಂದೂಗಳಿಗೆ ಪೊಲೀಸರು ಒತ್ತಾಯಿಸುತ್ತಾರೆ. ಇದನ್ನು ಗಮನಿಸಬೇಕು !