ಪ್ರಯಾಗರಾಜ ಕುಂಭ ಮೇಳಕ್ಕಾಗಿ ದೆಹಲಿಯಿಂದ ವಿಶೇಷ ರೈಲುಗಳ ಸಂಚಾರ

ಉತ್ತರಪ್ರದೇಶ ಸಾರಿಗೆ ಇಲಾಖೆಯಿಂದ ಏಳುವರೆ ಸಾವಿರ ಬಸ್ಸುಗಳ ಸಂಚಾರ

ನವ ದೆಹಲಿ – ಪ್ರಯಾಗರಾಜ ಮಹಾಕುಂಭ ಮೇಳದಲ್ಲಿ ಸಹಭಾಗಿ ಆಗಲು ಕೋಟ್ಯಾಂತರ ಭಕ್ತರ ಸೌಕರ್ಯಕ್ಕಾಗಿ ಉತ್ತರ ರೈಲ್ವೆ ಇಲಾಖೆಯು ವಿಶೇಷ ರೈಲುಗಳನ್ನು ಆರಂಭಿಸಲಿದೆ. ಈ ಎಲ್ಲಾ ರೈಲುಗಳು ಸಮಯದಲ್ಲಿ ತಲುಪಬೇಕು ಇದಕ್ಕಾಗಿ ಅವು ೨ ಇಂಜಿನ ಸಹಿತ ಚಲಿಸುವಂತೆ ರೈಲ್ವೆ ಇಲಾಖೆ ನಿರ್ಣಯ ತೆಗೆದುಕೊಂಡಿದೆ.

೧. ರೈಲಿನ ಸಾಮಾನ್ಯ ಬೋಗಿಗಳ ಹೆಚ್ಚುತ್ತಿರುವ ಬೇಡಿಕೆ ಪೂರೈಸಲು ೧೨ ಸಾವಿರ ಬೋಗಿಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಇದರಲ್ಲಿ ೯೦೦ ಭೋಗಿಗಳು ಈ ಆರ್ಥಿಕ ವರ್ಷದಲ್ಲಿ ಮೊದಲೇ ಜೋಡಿಸಲಾಗಿದೆ.

೨. ಪ್ರಯಾಣಿಕರಿಗೆ ತಕ್ಷಣ ಟಿಕೆಟ್ ಸಿಗಲು ಮತ್ತು ಯೋಗ್ಯವಾದ ಎಲ್ಲಾ ಮಾಹಿತಿ ಪೂರೈಸಲು ದೆಹಲಿಯಲ್ಲಿ ಎಲ್ಲಾ ರೈಲು ನಿಲ್ದಾಣಗಳಲ್ಲಿ ಟಿಕೆಟ್ ವಿಂಡೋಗಳ ಸಂಖ್ಯೆ ಹೆಚ್ಚಿಸಲಾಗುವುದು.

೩. ಪ್ರಯಾಣಿಕರಿಗೆ ರೈಲಿನಲ್ಲಿ ಸುಲಭವಾಗಿ ಹತ್ತಲು ಮತ್ತು ಇಳಿಯಲು ಸಾಧ್ಯವಾಗುವುದಕ್ಕಾಗಿ ಫ್ಲ್ಯಾಟ್ ಫಾರ್ಮ್ ನಲ್ಲಿ ನಿಯಂತ್ರಣ ಕಕ್ಷ ಸ್ಥಾಪಿಸಲಾಗುವುದು.

೪. ಮಹಾಕುಂಭ ಮೇಳದ ಸಮಯದಲ್ಲಿ ಎಲ್ಲಾ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಸೌಲಭ್ಯ, ತತ್ಕಾಲ ವೈದ್ಯಕೀಯ ಸೇವೆ, ತತ್ಕಾಲ ಪಡೆಗಳು, ಸ್ವಚ್ಛತೆ ಹಾಗೂ ರೈಲು ನಿಲ್ದಾಣದ ಸೌಂದರ್ಯ ಹೆಚ್ಚಿಸಲಾಗುವುದು. ಇದರ ಜೊತೆಗೆ ಪ್ರಯಾಣ ಸುರಕ್ಷೆಯ ಅಂಶದ ಕಡೆಗೆ ವಿಶೇಷ ಗಮನ ನೀಡಲಾಗುವುದು.

ಉತ್ತರಪ್ರದೇಶ ಸಾರಿಗೆ ಇಲಾಖೆಯಿಂದ ಏಳುವರೆ ಸಾವಿರ ಬಸ್ಸುಗಳ ಸೇವೆ !

ಮಹಾಕುಂಭ ಮೇಳಕ್ಕಾಗಿ ಉತ್ತರ ಪ್ರದೇಶ ಸಾರಿಗೆ ಇಲಾಖೆಯ ವತಿಯಿಂದ ವಿಶೇಷ ಯೋಜನೆ ರೂಪಿಸಲಾಗಿದೆ. ಇದರಲ್ಲಿ ೨೦೦ ಎಸಿ ಬಸ್ಸುಗಳು, ೬ ಸಾವಿರದ ೮೦೦ ಸಾಮಾನ್ಯ ಬಸ್ಸುಗಳು ಮತ್ತು ೫೫೦ ಶಟಲ್ ಬಸ್ಸುಗಳು (ಕಡಿಮೆ ಅಂತರದಲ್ಲಿ ಇರುವ ಬಸ್ ನಿಲ್ದಾಣಕ್ಕಾಗಿ ಉಪಯೋಗಿಸಲಾಗುವ ಬಸ್ಸುಗಳು) ಇದರ ಸಮಾವೇಶವಿದೆ. ಶಟಲ್ ಸೇವೆಯಲ್ಲಿ ೧೫೦ ‘ಇ ಬಸ್’ (ವಿದ್ಯುತ್ ಬಸ್ಸುಗಳು) ಬಸ್ಸುಗಳ ಸಮಾವೇಶ ಇದೆ. ಪ್ರಯಾಣಿಕರ ಸೌಲಭ್ಯಕ್ಕಾಗಿ ವಿಮಾನ ನಿಲ್ದಾಣಕ್ಕೂ ಸಹ ೧೭ ಮಾರ್ಗಗಳಲ್ಲಿ ೫೫೦ ಶಟಲ್ ಬಸ್ಸುಗಳು ಸಂಚಾರ ಮಾಡುವುದು. ಇಲ್ಲಿಯ ವಿವಿಧ ಜಿಲ್ಲೆಯಿಂದ ಜನವರಿ ೧೨ ರಿಂದ ಈ ಸೇವೆಯು ಆರಂಭವಾಗುವುದು.

೧. ಜನವರಿ ೧೨ ರಿಂದ ಜನವರಿ ೨೩, ಜನವರಿ ೨೪ ರಿಂದ ಫೆಬ್ರುವರಿ ೭ ಮತ್ತು ಫೆಬ್ರುವರಿ ೮ ರಿಂದ ಫೆಬ್ರುವರಿ ೨೭ ಈ ಕಾಲಾವಧಿಯಲ್ಲಿ ಮೂರು ಹಂತದಲ್ಲಿ ಈ ವಾಹನಗಳ ಸಂಚಾರ ನಡೆಯುವುದು. ಮೊದಲು ಮತ್ತು ಮೂರನೇಯ ಹಂತದಲ್ಲಿ ಪ್ರಯಾಗರಾಜ ಸಹಿತ ಇಲ್ಲಿಯ ೧೦ ಇಲಾಖೆಯಲ್ಲಿ ಒಟ್ಟು ೩ ಸಾವಿರದ ೫೦ ಬಸ್ಸುಗಳು ಸಂಚರಿಸುವುದು. ಎರಡನೆಯ ಹಂತದಲ್ಲಿ ಮೌನಿ ಅಮಾವಾಸ್ಯೆ ಮತ್ತು ವಸಂತ ಪಂಚಮಿಯ ದಿನ ಉಳಿದಿರುವ ಬಸ್ಸುಗಳು ಸಂಚಾರ ಮಾಡುವುದು.

೨. ಈ ಮಹಾ ಮೇಳದ ಕಾಲಾವಧಿಯಲ್ಲಿ ರಾಜ್ಯದ ಎಲ್ಲಾ ೧೯ ಇಲಾಖೆಯಲ್ಲಿನ ಒಟ್ಟು ೭ ಸಾವಿರ ಬಸ್ಸುಗಳನ್ನು ಸಂಚರಿಸುವುದು. ಇದರಲ್ಲಿ ಗಾಝೀಯಾಬಾದ್ ಇಲಾಖೆಯಿಂದ ಎಲ್ಲಕ್ಕಿಂತ ಹೆಚ್ಚಿನ ೬೦೦ ಬಸ್ಸುಗಳ ಸಮಾವೇಶವಿದೆ.

೩. ಈ ಸಮಯದಲ್ಲಿ ಕುಂಭನಗರಿಯಲ್ಲಿ ಸಾರಿಗೆ ದಟ್ಟಣೆ ತಪ್ಪಿಸುವದಕ್ಕಾಗಿ ೮ ತಾತ್ಕಾಲಿಕ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುವುದು.