೨೦೨೩ ರಲ್ಲಿ ವಿದೇಶದಲ್ಲಿ ೮೬ ಭಾರತೀಯರ ಮೇಲೆ ದಾಳಿಗಳು ಮತ್ತು ಹತ್ಯೆಗಳು !

ಲೋಕಸಭೆಯಲ್ಲಿ ಕೇಂದ್ರ ಸರಕಾರದಿಂದ ಮಾಹಿತಿ

ನವ ದೆಹಲಿ – ೨೦೨೩ ರಲ್ಲಿ ವಿದೇಶದಲ್ಲಿ ೮೬ ಭಾರತೀಯರ ಮೇಲೆ ದಾಳಿಗಳು ನಡೆಸಲಾಗಿದೆ. ಇದರಲ್ಲಿ ಕೆಲವು ಜನರ ಹತ್ಯೆ ಕೂಡ ಮಾಡಲಾಗಿದೆ. ಇದರಲ್ಲಿ ಎಲ್ಲಕ್ಕಿಂತ ಹೆಚ್ಚಿನ ಘಟನೆಗಳು ಅಮೆರಿಕಾದಲ್ಲಿ ನಡೆದಿವೆ, ಇದರ ಬಗ್ಗೆ ವಿದೇಶಾಂಗ ರಾಜ್ಯ ಸಚಿವ ಕೀರ್ತಿವರ್ಧನ ಇವರು ಲೋಕಸಭೆಯಲ್ಲಿ ಮಾಹಿತಿ ನೀಡಿದರು. ಸಂಸದ ಸಂದೀಪ ಪಾಠಕ ಇವರು ಕೇಳಿರುವ ಪ್ರಶ್ನೆಗೆ ಉತ್ತರಿಸುತ್ತಿರುವಾಗ ಈ ಮಾಹಿತಿ ನೀಡಿದರು.

ರಾಜ್ಯ ಸಚಿವ ಕೀರ್ತಿವರ್ಧನ ಸಿಂಹ ಇವರು ನೀಡಿರುವ ಅಂಕಿ ಅಂಶಗಳ ಪ್ರಕಾರ ೨೦೨೧ ರಲ್ಲಿ ವಿದೇಶದಲ್ಲಿ ನಡೆದಿರುವ ದಾಳಿಯಲ್ಲಿ ಭಾರತೀಯರ ಸಂಖ್ಯೆ ೨೯ ಇತ್ತು. ಅದರ ನಂತರ ೨೦೨೨ ರಲ್ಲಿ ಈ ಸಂಖ್ಯೆ ೫೭ ಕ್ಕೆ ತಲುಪಿತು. ೨೦೨೩ ರಂದು ಅಮೇರಿಕಾದಲ್ಲಿ ೧೨ ಭಾರತೀಯರ ಮೇಲೆ ದಾಳಿ ಅಥವಾ ಅವರ ಹತ್ಯೆ ನಡೆದಿದೆ, ಹಾಗೂ ಕೆನಡಾ, ಬ್ರಿಟನ್ ಮತ್ತು ಸೌದಿ ಅರೇಬಿಯಾ ಇಲ್ಲಿ ಈ ಸಂಖ್ಯೆ ತಲ ೧೦ ಇತ್ತು. ರಾಜ್ಯ ಸಚಿವ ಕೀರ್ತಿವರ್ಧನ ಸಿಂಹ ಇವರು, ವಿದೇಶದಲ್ಲಿನ ಭಾರತೀಯರ ಸುರಕ್ಷೆ ಇದು ಕೇಂದ್ರ ಸರಕಾರದ ಆದ್ಯತೆಗಳಲ್ಲಿ ಒಂದಾಗಿದೆ. ನಾವು ಇದರ ಕುರಿತು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ, ಹಾಗೂ ಈ ಘಟನೆಗಳು ನಡೆದಿರುವ ದೇಶಕ್ಕೆ ಸಂಬಂಧಿತ ಅಧಿಕಾರಿಯಿಂದ ತಕ್ಷಣ ಮಾಹಿತಿ ಪಡೆಯಲಾಗುತ್ತದೆ. ಈ ಅಂಶಗಳಿಗೆ ಸಂಬಂಧಿಸಿದ ದೇಶಗಳ ಸರಕಾರಿ ಅಧಿಕಾರಿಗಳ ಜೊತೆಗೆ ಸಭೆಯಲ್ಲಿ ಕೂಡ ಈ ಅಂಶಗಳನ್ನು ಪ್ರಸ್ತಾಪಿಸಲಾಗುತ್ತದೆ. ಪ್ರಕರಣದ ಯೋಗ್ಯ ತನಿಖೆ ನಡೆಸಲಾಗುತ್ತದೆ ಮತ್ತು ಅಪರಾಧಿಗಳಿಗೆ ಶಿಕ್ಷೆ ಆಗುತ್ತದೆ’, ಎಂದು ಅವರು ಉತ್ತರದಲ್ಲಿ ಹೇಳಿದರು.

೨ ಲಕ್ಷ ೧೬ ಸಾವಿರ ೨೧೯ ಭಾರತೀಯರು ಪೌರತ್ವ ತೊರೆದಿದ್ದಾರೆ !

ಇತರ ಇನ್ನೊಂದು ಪ್ರಶ್ನೆಗೆ ಉತ್ತರಿಸುವಾಗ ಸರಕಾರವು ಸಂಸತ್ತಿಗೆ, ೨೦೨೩ ರಲ್ಲಿ ೨ ಲಕ್ಷ ೧೬ ಸಾವಿರ ೨೧೯ ಭಾರತೀಯರು ಪೌರತ್ವ ತ್ಯಜಿಸಿ ಇತರ ದೇಶದ ಪೌರತ್ವ ಪಡೆದಿದ್ದಾರೆ. ಸರಕಾರದ ಅಂಕಿ ಅಂಶಗಳ ಪ್ರಕಾರ ೨೦೨೨ ರಲ್ಲಿ ಈ ಸಂಖ್ಯೆ ೨ ಲಕ್ಷ ೨೫ ಸಾವಿರ ೬೨೦ ರಷ್ಟು ಆಗಿತ್ತು.

ಸಂಪಾದಕೀಯ ನಿಲುವು

ದೇಶದಲ್ಲಿ ಮತ್ತು ವಿದೇಶದಲ್ಲಿ ಎಷ್ಟು ಹಿಂದುಗಳ ಮೇಲೆ ಅವರು ‘ಹಿಂದೂ’ ಇರುವರು; ಎಂದು ದಾಳಿಗಳು ನಡೆದಿವೆ, ಅವರ ಹತ್ಯೆಗಳು ನಡೆದಿವೆ ಅಥವಾ ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರ ನಡೆದಿವೆ. ಇಸ್ಲಾಮಿ ದೇಶದಲ್ಲಿ ಎಷ್ಟು ಹಿಂದುಗಳ ಮೇಲೆ ಅತ್ಯಾಚಾರ ನಡೆದಿದೆ, ಎಷ್ಟು ಹಿಂದುಗಳು ಮತಾಂತರ ಗೋಳ್ಳಬೇಕಾಯಿತು, ಅವರ ದೇವಸ್ಥಾನಗಳ ಮೇಲೆ ನಡೆದಿರುವ ದಾಳಿಗಳು, ಇದರ ಮಾಹಿತಿ ಕೂಡ ಸರಕಾರವು ಸಂಗ್ರಹಿಸಿ ಹಿಂದುಗಳಿಗೆ ತಿಳಿಸಬೇಕು !