Commission Reports Bangladesh Former PM : ಬಾಂಗ್ಲಾದೇಶದಲ್ಲಿ ಸಾವಿರಾರು ಜನರು ನಾಪತ್ತೆ ಆಗುವುದರ ಹಿಂದೆ ಶೇಖ ಹಸಿನಾ ಇವರ ಕೈವಾಡ ಎಂದು ಇಲ್ಲಿಯ ಸರಕಾರದ ಕೂಗಾಟ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಮಧ್ಯಂತರ ಸರಕಾರ ಸ್ಥಾಪಿಸಿರುವ ತನಿಕಾ ಆಯೋಗವು ಅದರ  ಮಧ್ಯಂತರ ವರದಿಯಲ್ಲಿ, ೩ ಸಾವಿರದ ೫೦೦ ಕ್ಕಿಂತಲೂ ಹೆಚ್ಚಿನ ಜನರು ಕಥಿತವಾಗಿ ನಾಪತ್ತೆ ಆಗಿರುವ ಘಟನೆಯಲ್ಲಿ ಮಾಜಿ ಪ್ರಧಾನಮಂತ್ರಿ ಶೇಖ ಹಸೀನಾ ಇವರ ಕೈವಾಡ ಇರುವುದು ಕಂಡು ಬಂದಿದೆ ಎಂದು ಹೇಳಿದೆ.
ಸರಕಾರದ ಮುಖ್ಯ ಸಲಹೆಗಾರ ಮಹಮ್ಮದ್ ಯೂನಸ್ ಇವರ ಕಾರ್ಯಾಲಯದ ಪ್ರಸಿದ್ಧಿ ಮಾಧ್ಯಮ ಶಾಖೆಯಿಂದ ನೀಡಿರುವ ಮನವಿಯಲ್ಲಿ, ಆಯೋಗಕ್ಕೆ ಸಾಕ್ಷಿಗಳು ದೊರೆತಿರುವುದು, ಮಾಜಿ ಪ್ರಧಾನಮಂತ್ರಿ ಶೇಖ ಹಸೀನಾ ಇವರ ಸೂಚನೆಯ ಮೇರೆಗೆ ಜನರು ನಾಪತ್ತೆಯಾಗಿದ್ದರು. ಪ್ರಧಾನಮಂತ್ರಿಯ ರಕ್ಷಣಾ ಸಲಹೆಗಾರ ಮೇಜರ್ ಜನರಲ್ (ನಿವೃತ್ತ) ತಾರಿಕ ಅಹಮದ್ ಸಿದ್ದಿಕಿ, ರಾಷ್ಟ್ರೀಯ ದೂರ ಸಂಪರ್ಕ ಮೇಲ್ವಿಚಾರಣೆಯ ಕೇಂದ್ರದ ಮಾಜಿ ಮಹಾ ಸಂಚಾಲಕ ಮತ್ತು ಮೇಜರ್ ಜನರಲ್ ಝಿಯಾವುಲ್ ಅಹಸಾನ್, ಹಿರಿಯ ಪೊಲೀಸ ಅಧಿಕಾರಿ ಮುನಿರುಲ್ ಇಸ್ಲಾಂ ಮತ್ತು ಮಹಮ್ಮದ್ ಹಾರೂನ್-ಒರ್-ರಶೀದ್ ಮತ್ತು ಇತರ ಅನೇಕ ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ಘಟನೆಯಲ್ಲಿ ಬಂದಿಸಲಾಗಿರುವ ಎಲ್ಲಾ ಮಾಜಿ ಸೈನ್ಯಾಧಿಕಾರಿ ಪರಾರಿ ಆಗಿದ್ದಾರೆ’, ಎಂದು ಹೇಳಿದೆ.

ಸಂಪಾದಕೀಯ ನಿಲುವು

ಶೇಖ ಹಸೀನಾ ಇವರ ಅಧಿಕಾರ ಅವಧಿಯ ಬದಲು ಕಳೆದ ಆಗಸ್ಟ್ ನಿಂದ ದೇಶದಲ್ಲಿ ನಡೆದಿರುವ ದಾಳಿಯಲ್ಲಿ ಎಷ್ಟು ಹಿಂದುಗಳ ಹತ್ಯೆ ನಡೆದಿವೆ, ಎಷ್ಟು ಹಿಂದೂ ಮಹಿಳೆಯರು ನಾಪತ್ತೆಯಾಗಿದ್ದಾರೆ, ಎಷ್ಟು ಮಹಿಳೆಯರ ಮೇಲೆ ಬಲತ್ಕಾರ ನಡೆದಿದೆ, ಇದರ ನಿಜವಾದ ಮಾಹಿತಿ ನೀಡುತ್ತಿಲ್ಲ ?