ಯಾರಾದರೂ ಸತ್ಯವನ್ನು ನುಡಿದರೆ, ಅದು ಅಪರಾಧವೇ ? – ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಅಲಹಾಬಾದ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಶೇಖರ ಕುಮಾರ ಯಾದವ ಅವರ ಹೆಸರು ಉಚ್ಚರಿಸದೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಬೆಂಬಲ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಅಲಹಾಬಾದ ಉಚ್ಚನ್ಯಾಯಾಲಯದ ನ್ಯಾಯಾಧೀಶರು ಒಂದು ಕಥೆ ಹೇಳಿದರು. “ಸಮಾನ ನಾಗರಿಕ ಕಾನೂನು ಇರಬೇಕು ಮತ್ತು ಪ್ರಪಂಚದ ಬಹುಸಂಖ್ಯಾತ ಸಮಾಜದ ಭಾವನೆಗಳನ್ನು ಎಲ್ಲಾ ಸಂದರ್ಭಗಳಲ್ಲಿಯೂ ಗೌರವಿಸಬೇಕು” ಎಂದು ಅವರು ಹೇಳಿದ್ದರು. ಜಗತ್ತಿನಲ್ಲಿ ಹೀಗಾಗುತ್ತದೆ, ಯಾರಾದರೂ ಸತ್ಯವನ್ನು ನುಡಿದರೆ ಅದು ಅಪರಾಧವೇ ? ಈ ಜನರು (ವಿರೋಧ ಪಕ್ಷಗಳು) ನ್ಯಾಯಾಧೀಶರ ವಿರುದ್ಧ ದೋಷಾರೋಪಣೆಯ (ಮಹಾಭಿಯೋಗವೆಂದರೆಯಾವುದೇ ಹುದ್ದೆಯಲ್ಲಿರುವ ವ್ಯಕ್ತಿಯ ಆ ಹುದ್ದೆಯ ಎಲ್ಲಾ ಹಕ್ಕುಗಳು ಮತ್ತು ಜವಾಬ್ದಾರಿಗಳಿಂದ ತೆಗೆದುಹಾಕುವ ಪ್ರಕ್ರಿಯೆಯೇ) ನೋಟೀಸು ನೀಡಿದ್ದಾರೆ. ವಿರೋಧಿಗಳು ಸಂವಿಧಾನದ ಕತ್ತು ಹಿಸುಕಿ ದೇಶವನ್ನು ನಡೆಸಲು ಬಯಸುತ್ತಿವೆ, ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನ್ಯಾಯಮೂರ್ತಿ ಶೇಖರ ಕುಮಾರ ಯಾದವ ಅವರ ಹೆಸರು ಉಚ್ಚರಿಸದೆ ಬೆಂಬಲಿಸಿದರು. ನ್ಯಾಯಮೂರ್ತಿ ಯಾದವ ಅವರು ಕೆಲ ದಿನಗಳ ಹಿಂದೆ ಉಚ್ಚನ್ಯಾಯಾಲಯದ ಸಭಾಂಗಣದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕ್ರಮದಲ್ಲಿ ‘ದೇಶವು ಬಹುಸಂಖ್ಯಾತರ ಅಭಿಪ್ರಾಯದಂತೆ ಸಾಗಲಿದೆ’ ಎಂದು ಹೇಳಿಕೆ ನೀಡಿದ್ದರು. ಅದಕ್ಕೆ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ದೋಷಾರೋಪಣೆ ಪ್ರಕ್ರಿಯೆಗೆ ಒತ್ತಾಯಿಸಿವೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಾತು ಮುಂದುವರಿಸಿ, ಇವರು ತಮ್ಮನ್ನು ಪ್ರಜಾಪ್ರಭುತ್ವವಾದಿಗಳು ಎಂದು ಕರೆದುಕೊಳ್ಳುತ್ತಾರೆ; ಆದರೆ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಆ ಬಗ್ಗೆ ಅವರಿಗೆ ಸ್ವಲ್ಪವೂ ನಾಚಿಕೆಯೆನಿಸುವುದಿಲ್ಲ’, ಎಂದು ಹೇಳಿದರು.