Drone Security : ಮಹಾಕುಂಭ ಮೇಳದ ಸಮಯದಲ್ಲಿ ಭಕ್ತರ ಭದ್ರತೆಗಾಗಿ ‘ಏರ್ ಗಾರ್ಡ್’

ಪ್ರಯಾಗರಾಜ – ಜನವರಿ 13 ರಿಂದ ಆರಂಭವಾಗಲಿರುವ ಮಹಾಕುಂಭ ಮೇಳಕ್ಕೆ ಬರುವ ಭಕ್ತರ ಭದ್ರತೆಗಾಗಿ ಇಲ್ಲಿ ‘ಆ್ಯಂಟಿ ಡ್ರೋನ್’ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ. ಈ ವ್ಯವಸ್ಥೆಯ ಮೂಲಕ ಅನುಮತಿಯಿಲ್ಲದೆ ಹಾರಾಡುವ ಡ್ರೋನ್‌ಗಳನ್ನು ನಿಷ್ಕ್ರಿಯಗೊಳಿಸಲಾಗುವುದು ಮತ್ತು ಅಂತಹ ಡ್ರೋನ್‌ಗಳನ್ನು ಹಾರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಬಾರಿಯ ಮಹಾಕುಂಭ ಮೇಳದಲ್ಲಿ ದೇಶ-ವಿದೇಶಗಳಿಂದ 40 ಕೋಟಿ ಭಕ್ತರು ಆಗಮಿಸಲಿದ್ದು, ಭಕ್ತರ ಭದ್ರತೆಗಾಗಿ ಅತ್ಯಾಧುನಿಕ ವ್ಯವಸ್ಥೆಗಳನ್ನು ಬಳಸಲಾಗುವುದು’, ಎಂದು ಉತ್ತರ ಪ್ರದೇಶ ಸರಕಾರ ಹೇಳಿಕೊಂಡಿದೆ.

ಮೊದಲ ದಿನವೇ 2 ಅಕ್ರಮ ಡ್ರೋನ್‌ಗಳು ವಶಕ್ಕೆ !

ಮಹಾಕುಂಭ ಮೇಳದ ಸಂದರ್ಭದಲ್ಲಿ ಡಿಸೆಂಬರ್ 14 ರಂದು 2 ಅಕ್ರಮ ಡ್ರೋನ್‌ಗಳನ್ನು ಹಿಡಿದು ನಿಷ್ಕ್ರಿಯಗೊಳಿಸಲಾಯಿತು. ಪೊಲೀಸರು ಸಂಬಂಧಪಟ್ಟವರಿಗೆ ನೋಟಿಸ್ ಕೂಡ ನೀಡಿದ್ದಾರೆ.