Rahul Gandhi Praised China : ‘ಭಾರತದಲ್ಲಿ ನಿರುದ್ಯೋಗ ಇದ್ದರೇ ಚೀನಾದಲ್ಲಿ ಉದ್ಯೋಗ ಹೇರಳವಾಗಿದೆಯಂತೆ !’ – ರಾಹುಲ ಗಾಂಧಿ

ಅಮೇರಿಕಾಗೆ ಹೋಗಿರುವ ರಾಹುಲ್ ಗಾಂಧಿಯವರಿಂದ ಚೀನಾ ಬಗ್ಗೆ ನುಡಿಮುತ್ತು !

ಡಲ್ಲಾಸ್ (ಅಮೇರಿಕಾ) – ರಾಹುಲ್ ಗಾಂಧಿಯವರು ತಮ್ಮ ಮೂರು ದಿನಗಳ ಅಮೇರಿಕ ಪ್ರವಾಸದ ಪ್ರಾರಂಭದಲ್ಲಿ ಚೀನಾಕ್ಕೆ ಹೊಗಳಿಕೆಯ ಸುರಿಮಳೆಯನ್ನೇ ಸುರಿಸಿದ್ದು, ಜಗತ್ತಿನ ಹೊಸ ಉದಯೋನ್ಮುಖ ಶಕ್ತಿಯಾಗಿರುವ ಭಾರತದ ಕೊರತೆಯನ್ನು ಮಂಡಿಸಿದ್ದಾರೆ. ಇಲ್ಲಿನ ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಗಾಂಧಿಯವರು ಮಾತನಾಡುತ್ತಾ, ಈಗ ಯುರೋಪ್ ಮತ್ತು ಅಮೇರಿಕದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಭಾರತದಲ್ಲಿಯೂ ನಿರುದ್ಯೋಗವು ಅತಿ ದೊಡ್ಡ ಮತ್ತು ಪ್ರಮುಖ ಸಮಸ್ಯೆಯಾಗಿದೆ; ಆದರೆ ಚೀನಾಕ್ಕೆ ಅಂತಹ ಸಮಸ್ಯೆ ಇಲ್ಲ; ಚೀನಾ ನಿರಂತರವಾಗಿ ಉದ್ಯೋಗವನ್ನು ಹೆಚ್ಚಿಸುತ್ತಿದೆ. ಉದ್ಯೋಗವು ಹೊಸ ಅವಕಾಶಗಳನ್ನು ನಿರ್ಮಾಣ ಮಾಡುತ್ತಿದೆ. ಭಾರತವು ಉತ್ಪಾದನಾ ಕ್ಷೇತ್ರದೆಡೆಗೆ ಗಮನ ಹರಿಸಿಲ್ಲ. ಇದರಿಂದಾಗಿ ಇಂದು ನಿರುದ್ಯೋಗವು ಪ್ರಮುಖ ಸಮಸ್ಯೆಯಾಗಿ ಎದುರಾಗಿದೆ. ಭಾರತಕ್ಕೆ ತನ್ನ ಆರ್ಥಿಕತೆಯನ್ನು ಬಲಪಡಿಸುವುದಿದ್ದರೆ ಮತ್ತು ನಿರುದ್ಯೋಗದೊಂದಿಗೆ ಹೋರಾಡುವುದಿದ್ದರೆ, ಉತ್ಪಾದನಾ ಕ್ಷೇತ್ರದತ್ತ ಗಮನ ಹರಿಸಬೇಕಾಗುವುದು ಎಂದು ಗಾಂಧಿ ಹೇಳಿದರು. ಗಾಂಧಿಯವರ ಭಾಷಣವು ಸೆಪ್ಟೆಂಬರ್ 8 ರಂದು ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆಗೆ ಆಯಿತು.

ಗಾಂಧಿ ತಮ್ಮ ಮಾತನ್ನು ಮುಂದುವರಿಸಿ,

1. ಪ್ರತಿ ಬಾರಿಯೂ ಸರಕಾರವನ್ನು ಹೊಣೆಗಾರರನ್ನಾಗಿ ಮಾಡುವುದು, ಸಂಸತ್ತಿನಲ್ಲಿ ಸರಕಾರವನ್ನು ವಿರೋಧಿಸುವುದು ಮತ್ತು ಸರ್ವಾಧಿಕಾರವನ್ನು ಮುಂದುವರಿಸಲು ಅವಕಾಶ ನೀಡದಿರುವುದು ನನ್ನ ಜವಾಬ್ದಾರಿಯಾಗಿದೆ.

2. ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ, ‘ಭಾರತವು ಒಂದು ವಿಚಾರವಾಗಿದೆ’ ಮತ್ತು ನಮಗೆ, ‘ಭಾರತವು ಅನೇಕ ವಿಚಾರಗಳ ದೇಶವಾಗಿದೆ!’ ಎಂದು ಅನಿಸುತ್ತದೆ. (ಸ್ವಾತಂತ್ರ್ಯದ ಬಳಿಕ 77 ವರ್ಷಗಳ ವರೆಗೆ ಕಾಂಗ್ರೆಸ್ಸಿಗರು ಕೇವಲ ಹಿಂದೂಗಳನ್ನು ವಿರೋಧಿಸುವ ವಿಚಾರವನ್ನು ಕಾಪಾಡಿಕೊಂಡು ಬಂದರು. ಅದಕ್ಕೆ ಏನು ಹೇಳುವುದು ? – ಸಂಪಾದಕರು) ಹಾಗೆಯೇ ಪ್ರತಿಯೊಬ್ಬರಿಗೂ ಇದರಲ್ಲಿ ಭಾಗವಹಿಸುವಿಕೆ, ಕನಸನ್ನು ಕಾಣಲು ಅನುಮತಿ ನೀಡಬೇಕು. ಇದರಲ್ಲಿ ಅವರ ಜಾತಿ, ಭಾಷೆ, ಧರ್ಮ, ಸಂಪ್ರದಾಯಗಳನ್ನು ಲೆಕ್ಕಿಸದೇ ಸ್ಥಾನವನ್ನು ನೀಡಬೇಕು. (ಈ ದೇಶದ ಸಂಪನ್ಮೂಲದ ಮೇಲೆ ಮುಸಲ್ಮಾನರ ಮೊದಲ ಅಧಿಕಾರವಿದೆ’, ಎಂದು ಹೇಳುವ ಕಾಂಗ್ರೆಸ್ಸಿನ ಆಗಿನ ಪ್ರಧಾನಿ ಮನಮೋಹನ ಸಿಂಗ ಇವರ ಹೇಳಿಕೆಯ ಬಗ್ಗೆ ಮೊದಲು ರಾಹುಲ ಗಾಂಧಿಯವರು 100 ಕೋಟಿ ಹಿಂದೂಗಳ ಎದುರಿಗೆ ಕಿವಿ ಹಿಡಿದುಕೊಂಡು ಕ್ಷಮೆ ಯಾಚಿಸಬೇಕು. ! – ಸಂಪಾದಕರು)

3. 2024ರ ಲೋಕಸಭೆ ಚುನಾವಣೆಯಲ್ಲಿ ಭಾರತದ ಲಕ್ಷಾಂತರ ಜನರಿಗೆ ಪ್ರಧಾನಿ ಮೋದಿಯವರು ಭಾರತದ ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ತಿಳಿಯಿತು. (ಹಾಗಿದ್ದರೆ, ಇದೇ ಚುನಾವಣೆಯಲ್ಲಿ ಭಾಜಪ ಗೆದ್ದಿತು ಮತ್ತು ಕಾಂಗ್ರೆಸ್ ಭಾರಿ ಸೋಲನ್ನು ಕಂಡಿತು, ಹೇಗೆ ? – ಸಂಪಾದಕರು)

4. ಯಾವಾಗ ನಾನು ಸಂವಿಧಾನದ ಬಗ್ಗೆ ಮಾತನಾಡುತ್ತೇನೆಯೋ, ಆಗ ಜನರಿಗೆ ನಾನು ಏನು ಹೇಳುತ್ತಿದ್ದೇನೆ, ಎಂದು ತಿಳಿಯುತ್ತಿತ್ತು. ಅವರು ಭಾಜಪ ನಮ್ಮ ಸಂಪ್ರದಾಯ ಮತ್ತು ರಾಜ್ಯಗಳ ಮೇಲೆ ದಾಳಿ ಮಾಡುತ್ತಿದೆಯೆಂದು ಹೇಳುತ್ತಿದ್ದರು.

5. ಜನರ ಮನಸ್ಸಿನಲ್ಲಿ ಭಾಜಪ ಬಗ್ಗೆ ಇರುವ ಹೆದರಿಕೆ ಇಲ್ಲವಾಗಿದೆ. ಚುನಾವಣೆಯ ತೀರ್ಪಿನ ಬಳಿಕ ಭಾರತದಲ್ಲಿ ಯಾರೂ ಭಾಜಪ ಅಥವಾ ಭಾರತದ ಪ್ರಧಾನಿಯವರಿಗೆ ಹೆದರುತ್ತಿಲ್ಲ ಎನ್ನುವುದನ್ನು ನಾವು ನೋಡಿದ್ದೇವೆ. ಇದರಿಂದ ಇದು ದೊಡ್ಡ ಜಯವಾಗಿದೆ. (ಕಾಂಗ್ರೆಸ್ಸಿಗೆ ಸಂಸದರ ಮೂರು ಅಂಕಿಗಳನ್ನು ತಲುಪಲು ಸಾಧ್ಯವಾಗಲಿಲ್ಲ. ಇದನ್ನೇ ಅವರು ಜಯವೆಂದು ಹೇಳುತ್ತಿದ್ದರೆ, ಈಗ ಇದಕ್ಕೆ ಏನು ಹೇಳಬೇಕು ? – ಸಂಪಾದಕರು)

ಸಂಪಾದಕೀಯ ನಿಲುವು

  • ರಾಹುಲ ಗಾಂಧಿಯವರಂತಹ ಕಾಂಗ್ರೆಸ್ ನಾಯಕನಿಗೆ ಏನು ಮತ್ತು ಎಲ್ಲಿ ಹೇಳಬೇಕು ಎನ್ನುವುದೂ ಅರಿವಿಲ್ಲ. ಭಾರತವಿರೋಧಿ ಕಥೆಗಳನ್ನು ಸೃಷ್ಟಿಸಲು ಅವರು ವಿದೇಶಿ ಭೂಮಿಯ ಮೇಲೆ ಭಾರತದ ಶತ್ರುರಾಷ್ಟ್ರ ಚೀನಾವನ್ನು ಹೊಗಳುತ್ತಾರೆ. ಇಂತಹ ನಾಯಕರ ವಿರುದ್ಧ ರಾಷ್ಟ್ರದ್ರೊಹದ ಅಪರಾಧವನ್ನು ಏಕೆ ದಾಖಲಿಸಬಾರದು ?
  • ಚೀನಾ ಮತ್ತು ಕಾಂಗ್ರೆಸ್‌ನ ಗಾಂಧಿ ಕುಟುಂಬದ ನಿಕಟ ಸಾಮೀಪ್ಯ ಜಗತ್ತಿನಲ್ಲಿ ಎಲ್ಲರಿಗೂ ತಿಳಿದಿದೆ. ಇದರಿಂದ ರಾಹುಲ್ ಗಾಂಧಿಯವರ ಇಂತಹ ಹೇಳಿಕೆಗಳನ್ನು ನೀಡುವುದರಲ್ಲಿ ಆಶ್ಚರ್ಯವೇನಿದೆ ?
  • ಎಲ್ಲಿ ಅಮೇರಿಕದಲ್ಲಿ ಹಿಂದೂ ಧರ್ಮದ ಮತ್ತು ಭಾರತದ ಶ್ರೇಷ್ಠತೆಯನ್ನು ಹೇಳುವ ಸ್ವಾಮಿ ವಿವೇಕಾನಂದರು ಮತ್ತು ಎಲ್ಲಿ ಭಾರತವನ್ನು ಅವಮಾನಿಸಲು ಯಾವುದೇ ಅವಕಾಶವನ್ನು ಬಿಡದೇ ಪ್ರಯತ್ನಿಸುತ್ತಿರುವ ರಾಹುಲ್ ಗಾಂಧಿ !