Sam Pitroda Defends Rahul Gandhi : ‘ರಾಹುಲ್ ಗಾಂಧಿ ಇವರು ಉತ್ತಮ ರಣತಂತ್ರಜ್ಞರಂತೆ !’ – ‘ಇಂಡಿಯನ್ ಓವರ್ಸೀಸ್ ಕಾಂಗ್ರೆಸ್‌’ನ ಅಧ್ಯಕ್ಷ ಸ್ಯಾಮ್ ಪಿತ್ರೋದಾ

ಟೆಕ್ಸಾಸ್(ಅಮೇರಿಕಾ) – ರಾಹುಲ್ ಗಾಂಧಿ, ಇವರು ‘ಪಪ್ಪು’ (ಬೇಕಾಬಿಟ್ಟಿ ವರ್ತಿಸುವವರಿಗೆ ಉಪಾಸ್ಯದಿಂದ ಪಪ್ಪು ಎನ್ನುತ್ತಾರೆ) ಆಗಿಲ್ಲ, ಅವರು ಓರ್ವ ಉತ್ತಮ ರಣತಂತ್ರಗಾರರಾಗಿದ್ದಾರೆ, ಎಂದು ‘ಇಂಡಿಯನ್ ಓವರ್ಸೀಸ್ ಕಾಂಗ್ರೆಸ್’ನ (ಭಾರತೀಯ ವಿದೇಶಿ ಕಾಂಗ್ರೆಸ್ಸಿನ) ಅಧ್ಯಕ್ಷ ಸ್ಯಾಮ್ ಪಿತ್ರೋದಾ ಇವರು ಟೆಕ್ಸಾಸ್ ನಲ್ಲಿನ ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇವರನ್ನು ಹೊಗಳಿ ಅಟ್ಟಕೇರಿಸಿದರು. ಕಾಂಗ್ರೆಸ್ಸಿನ ಸಾಂಸದ ಮತ್ತು ಲೋಕಸಭೆಯಲ್ಲಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ೩ ದಿನಗಳ ಅಮೇರಿಕಾ ಪ್ರವಾಸದಲ್ಲಿದ್ದಾರೆ.

ಪಿತ್ರೋದಾ ಮಾತು ಮುಂದುವರಿಸಿ, ”ರಾಹುಲ್ ಗಾಂಧಿ ಇವರು ಅತ್ಯಂತ ನಿಪುಣ, ಶಿಕ್ಷಿತ ಮತ್ತು ಉತ್ತಮ ರಣತಂತ್ರಜ್ಞರಾಗಿದ್ದಾರೆ. ಅವರಿಗೆ ಎಲ್ಲಾ ವಿಷಯದಲ್ಲಿ ಆಳವಾದ ಅಧ್ಯಯನ ಇದೆ. ದೇಶದಲ್ಲಿನ ದೊಡ್ಡ ದೊಡ್ಡ ಪ್ರಶ್ನೆ ಬಿಡಿಸುವುದು, ಇದು ರಾಹುಲ್ ಗಾಂಧಿಯವರ ಧ್ಯೇಯವಾಗಿದೆ. ಅವರಲ್ಲಿ ಎಂತಹ ದೃಷ್ಟಿ ಇದೆ ಎಂದರೆ ಅದಕ್ಕಾಗಿ ಭಾಜಪ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತದೆ. ಕಳೆದ ೧೦ ವರ್ಷಗಳಿಂದ ಭಾಜಪ ರಾಹುಲ್ ಗಾಂಧಿ ಇವರ ಕುರಿತು ಸುಳ್ಳು ಮಾಹಿತಿ ಹಬ್ಬಿಸುತ್ತಿದೆ. ನನಗೆ ರಾಹುಲ್ ಗಾಂಧಿ ಇವರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಭಾರತಕ್ಕೆ ಈಗ ಯುವ ನಾಯಕ ಮತ್ತು ಆಧುನಿಕ ವಿಚಾರಧಾರೆಯ ಅವಶ್ಯಕತೆ ಇದೆ. ರಾಹುಲ ಇವರ ನಿಜವಾದ ಪ್ರತಿಭೆ ಈಗ ಬೆಳಕಿಗೆ ಬರುತ್ತಿದೆ. ಅವರಲ್ಲಿ ಪ್ರಧಾನಮಂತ್ರಿಯಲ್ಲಿ ಇರಬೇಕಾದ ಎಲ್ಲಾ ಗುಣಗಳು ಇವೆ”. ಎಂದು ಹೇಳಿದರು.

ಈ ಹಿಂದೆ ಕೂಡ ಪಿತ್ರೋದಾ ಇವರು ರಾಹುಲ್ ಗಾಂಧಿ ಅವರ ತಂದೆ ರಾಜೀವ್ ಗಾಂಧಿ ಇವರನ್ನು ಕೂಡ ನಿಪೂಣರು’, ಎಂದು ಹೇಳಿಕೆ ನೀಡಿದ್ದರು.

ಸಂಪಾದಕೀಯ ನಿಲುವು

ಪಿತ್ರೋದ ಇವರು ಅರ್ಧಸತ್ಯ ಹೇಳಿದ್ದಾರೆ. ‘ರಾಹುಲ್ ಗಾಂಧಿ ಇವರು ಉತ್ತಮ ತಂತ್ರಜ್ಞಾನವಾಗಿದ್ದು ಅವರು ಮತ್ತು ಸಂಪೂರ್ಣ ಕಾಂಗ್ರೆಸ್ಸಿನ ತಂತ್ರಗಾರಿಕೆ ಕೇವಲ ಹಿಂದುಗಳ ವಿರೋಧದಲ್ಲಿ ಇರುತ್ತದೆ’, ಇದು ಪೂರ್ಣಸತ್ಯ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಇವರ ಇತಿಹಾಸದಿಂದ ಕಂಡು ಬರುತ್ತಿದೆ !