ತೀವ್ರ ಶಾರೀರಿಕ ತೊಂದರೆ ಇದ್ದಾಗಲೂ ಸಮಷ್ಟಿ ಸೇವೆಯನ್ನು ಮಾಡಿಸಿಕೊಂಡು ಆಧ್ಯಾತ್ಮಿಕ ಉನ್ನತಿ ಮಾಡಿಸಿಕೊಳ್ಳುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೨೫/೫೧ ನೇ ಸಂಚಿಕೆಯಲ್ಲಿ ಪ್ರಕಟಿಸಿದ ಭಾಗದಲ್ಲಿ ‘ಸದ್ಗುರು ರಾಜೇಂದ್ರ ಶಿಂದೆಯವರಿಗೆ ಆಗುತ್ತಿರುವ ತೀವ್ರ ಶಾರೀರಿಕ ತೊಂದರೆಗಳು ಮತ್ತು ಅದರ ಮೇಲೆ ಮಾಡಲಾಗುವ ಉಪಚಾರದ ಭಾಗ ನೋಡಿದೆವು. ಈಗ ಈ ಭಾಗದಲ್ಲಿ ‘ಇಂತಹ ಸ್ಥಿತಿಯಲ್ಲಿಯೂ ಅವರು ಹೇಗೆ ಸೇವೆಯನ್ನು ಮಾಡಿದರು ? ಎಂಬುದನ್ನು ಇಲ್ಲಿ ಕೊಡಲಾಗಿದೆ. 

(ಭಾಗ ೧೫)

ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/124293.html

೭. ತೀವ್ರ ಶಾರೀರಿಕ ತೊಂದರೆ ಆಗುತ್ತಿರುವಾಗಲೂ ಗುರುಕೃಪೆಯಿಂದ ಆಗಿರುವ ಸೇವೆ !

ನನಗೆ ತುಂಬಾ ಶಾರೀರಿಕ ತೊಂದರೆ ಆಗುತ್ತಿದ್ದುದರಿಂದ ವ್ಯಷ್ಟಿ ಸಾಧನೆ ಮತ್ತು ಸಮಷ್ಟಿ ಸೇವೆಯನ್ನು ಮಾಡುವುದು ಕಠಿಣವಾಗಿತ್ತು. ಆದರೂ ಗುರುಕೃಪೆಯಿಂದ ದೇವರು ನನ್ನಿಂದ ಈ ಮುಂದಿನ ಸೇವೆಗಳನ್ನು ಮಾಡಿಸಿಕೊಂಡರು.

೭ ಅ. ದೇವದ ಆಶ್ರಮದಲ್ಲಿ ಸಾಧಕರ ಶುದ್ಧೀಕರಣ ಸತ್ಸಂಗ ತೆಗೆದುಕೊಳ್ಳುವುದು : ಡಿಸೆಂಬರ ೨೦೧೧ ರಿಂದ ನನಗೆ ಗುರುಕೃಪೆಯಿಂದ ದೇವದ ಆಶ್ರಮದಲ್ಲಿ ಸಾಧಕರ ಶುದ್ಧೀಕರಣ ಸತ್ಸಂಗ (ಸ್ವಭಾವ ದೋಷ ನಿರ್ಮೂಲನ ಸತ್ಸಂಗ-ಟಿಪ್ಪಣಿ ೧) ತೆಗೆದುಕೊಳ್ಳುವ ಸೇವೆ ಸಿಕ್ಕಿತು. ಈ ಸತ್ಸಂಗ ಬೆಳಗ್ಗೆ ೯.೩೦ ರಿಂದ ೧೨.೩೦, ಮಧ್ಯಾಹ್ನ ೩ ರಿಂದ ರಾತ್ರಿ ೮ ರ ವರೆಗೆ ನಡೆಯುತ್ತಿತ್ತು. ಮಧ್ಯಾಹ್ನದ ಸತ್ಸಂಗವನ್ನು ಚಹಾಕ್ಕಾಗಿ ಅರ್ಧ ಗಂಟೆ ನಿಲ್ಲಿಸಲಾಗುತ್ತಿತ್ತು. ಕೆಲವೊಮ್ಮೆ ರಾತ್ರಿ ಮಹಾಪ್ರಸಾದದ ನಂತರವೂ ಈ ಸತ್ಸಂಗ ಮುಂದುವರಿಯುತ್ತಿದ್ದು ಅದು ರಾತ್ರಿ ೧೧.೩೦ ರ ವರೆಗೂ ನಡೆಯುತ್ತಿತ್ತು.

(ಟಿಪ್ಪಣಿ ೧ – ಸಾಧಕರ ಸ್ವಭಾವದೋಷ ಮತ್ತು ಅಹಂ ಕಡಿಮೆಗೊಳಿಸಲು ಅವರಿಂದ ಆಗಿರುವ ತಪ್ಪುಗಳನ್ನು ಸತ್ಸಂಗದಲ್ಲಿ ಹೇಳಿದಾಗ ‘ಯೋಗ್ಯ ಯಾವುದು ?’, ಎಂಬುದನ್ನು ಹೇಳುವುದು.)

ಮಹಾಪ್ರಸಾದದ ನಂತರ ನಾನು ಮಧ್ಯಾಹ್ನ ೧ ರಿಂದ ೨ ರ ವರೆಗೆ ವಿಶ್ರಾಂತಿ ಮಾಡುತ್ತಿದ್ದೆನು. ನಂತರ ಸ್ವಲ್ಪ ಸಮಯ ಪರಾತ್ಪರ ಗುರು ಪಾಂಡೆ ಮಹಾರಾಜರು ನನಗೆ ನಾಮಜಪಾದಿ ಉಪಾಯ ಮಾಡುತ್ತಿದ್ದರು ಹಾಗೂ ನನ್ನ ಬೆನ್ನಿಗೆ ಸ್ವಲ್ಪ ಮರ್ದನವನ್ನೂ (ಮಾಲಿಶ್) ಮಾಡುತ್ತಿದ್ದರು. ಅವರ ಉಚ್ಚಮಟ್ಟದ ಆಧ್ಯಾತ್ಮಿಕ ಶಕ್ತಿಯಿಂದ ನನಗೆ ಆಧ್ಯಾತ್ಮಿಕ ಲಾಭವಾಗುತ್ತಿತ್ತು.

(ಸದ್ಗುರು) ಶ್ರೀ. ರಾಜೇಂದ್ರ ಶಿಂದೆ

೭ ಅ ೧. ಎದ್ದು ಕುಳಿತುಕೊಳ್ಳಲು ಆಗದಿರುವುದರಿಂದ ತಪ್ಪು ಹೇಳುವ ಸಾಧಕರ ಧ್ವನಿ ಮಾತ್ರ ಕೇಳಿಸುತ್ತಿತ್ತು ಹಾಗೂ ಧ್ವನಿವರ್ಧಕ ಕೈಯಲ್ಲಿ ಹಿಡಿದು ಮಾತನಾಡುವಷ್ಟು ಶಕ್ತಿ ಇಲ್ಲದ ಕಾರಣ ಅದನ್ನು ಬಾಯಿಯ ಸಮೀಪ ‘ಸ್ಟ್ಯಾಂಡ್‌’ನಲ್ಲಿ ಅಳವಡಿಸಲಾಗುತ್ತಿತ್ತು : ಆಶ್ರಮದ ಹಳೆಯ ಕಟ್ಟಡದ ನೆಲಾಂತಸ್ತಿನ ಖಾಲಿ ಜಾಗದಲ್ಲಿ ನನಗಾಗಿ ಮಂಚವನ್ನು ಇಡಲಾಗುತ್ತಿತ್ತು. ನಾನು ಮಂಚದ ಮೇಲೆ ಮಲಗಿಯೆ ಇರುತ್ತಿದ್ದೆ ಹಾಗೂ ತಪ್ಪುಗಳನ್ನು ಹೇಳುವ ಸಾಧಕರು ನನ್ನ ಎದುರಿಗೆ ನೆಲದ ಮೇಲೆ ಕುಳಿತುಕೊಳ್ಳುತ್ತಿದ್ದರು. ಸಾಧಕರು ಮಾತನಾಡುವಾಗ ನನಗೆ ಅವರ ಧ್ವನಿ ಮಾತ್ರ ಕೇಳಿಸುತ್ತಿತ್ತು; ನನಗೆ ಏಳಲು ಆಗದ ಕಾರಣ ನಾನು ಅವರನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಶರೀರದಲ್ಲಿ ಶಕ್ತಿ ಇಲ್ಲದ ಕಾರಣ ‘ನಾನು ಮಾತನಾಡುವುದು ಎಲ್ಲರಿಗೂ ಕೇಳಿಸಬೇಕೆಂದು ಧ್ವನಿವರ್ಧಕವನ್ನು ಅಳವಡಿಸಲಾಗುತ್ತಿತ್ತು. ನಾನು ಧ್ವನಿವರ್ಧಕ ಕೈಯಲ್ಲಿ ಹಿಡಿದು ಮಾತನಾಡಲು ಸಾಧ್ಯವಾಗದ ಕಾರಣ ಅದನ್ನು ನನ್ನ ಎದುರಿಗೆ ಸ್ಟ್ಯಾಂಡ್‌ನಲ್ಲಿ ಅಳಡಿಸಲಾಗುತ್ತಿತ್ತು.

೭ ಅ ೨. ಶುದ್ಧೀಕರಣ ಸತ್ಸಂಗ ತೆಗೆದುಕೊಳ್ಳುವಾಗ ಅನುಭವಿಸಿದ ಗುರುಕೃಪೆ ! : ನನಗೆ ತುಂಬಾ ಶಾರೀರಿಕ ಆಯಾಸ ಇದ್ದುದರಿಂದ ಸತ್ಸಂಗ ನಡೆಯುತ್ತಿರುವಾಗ ನನಗೆ ನಿದ್ದೆ ಬರುತ್ತಿತ್ತು. ಆದರೂ ಮಾತನಾಡುವ ಸಂದರ್ಭ ಬಂದಾಗ ಗುರುದೇವರ ಕೃಪೆಯಿಂದ ನನಗೆ ಎಚ್ಚರವಾಗುತ್ತಿತ್ತು ಹಾಗೂ ‘ನಾನು ಸಾಧಕರ ಎಲ್ಲ ಮಾತುಗಳನ್ನು ಕೇಳಿಸಿಕೊಂಡಿರುವ ಹಾಗೆ ಮಾತನಾಡುತ್ತಿದ್ದೆ ! ಆ ಅವಧಿಯಲ್ಲಿ ನನಗೆ ಇಂತಹ ಅನುಭೂತಿಗಳು ಅನೇಕ ಬಾರಿ ಬಂದಿದ್ದವು.

ಈ ಶುದ್ಧೀಕರಣ ಸತ್ಸಂಗ ಸುಮಾರು ೬ ತಿಂಗಳು ನಡೆಯುತ್ತಿತ್ತು ಹಾಗೂ ವಾರದಲ್ಲಿ ೪-೫ ದಿನ ಇರುತ್ತಿತ್ತು ಮತ್ತು ಉಳಿದ ದಿನಗಳಲ್ಲಿ ‘ಚೈತನ್ಯವಾಹಿನಿ’ಯ (ಟಿಪ್ಪಣಿ ೨) ಸೇವೆ ಇರುತ್ತಿತ್ತು.

(ಟಿಪ್ಪಣಿ ೨ – ಸನಾತನ ಸಂಸ್ಥೆಯಿಂದ ಪ್ರಚಾರಕ್ಕಾಗಿ ಕೆಲವು ಉಪಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅವುಗಳಿಗಾಗಿ ಕೆಲವು ಜಿಲ್ಲೆಗಳು ಮಾಡಿದ ವೈಶಿಷ್ಟ್ಯಪೂರ್ಣ ಪ್ರಯತ್ನ, ಜಿಲ್ಲೆಯಲ್ಲಿನ ಸಾಧಕರಿಂದ ಆಗಿರುವ ತಪ್ಪುಗಳು, ಅವರಿಗೆ ಕಲಿಯಲು ಸಿಕ್ಕಿದ ಅಂಶಗಳು ಇತ್ಯಾದಿಗಳನ್ನು ತರಿಸಿ ಅವುಗಳ ವಿಶ್ಲೇಷಣೆ ಮಾಡಿ ಆ ಮಾಹಿತಿಯನ್ನು ಎಲ್ಲ ಜಿಲ್ಲೆಗಳಿಗೆ ಕಳುಹಿಸಲಾಗುತ್ತದೆ. ಪ್ರತಿವಾರ ಮಾಡುವ ಈ ಸೇವೆಗೆ ‘ಚೈತನ್ಯವಾಹಿನಿ ಸೇವೆ’, ಎಂದು ಹೇಳಲಾಗುತ್ತದೆ.)

೭ ಆ. ಗುರುದೇವರ ಕೃಪೆಯಿಂದ ಮಹಾರಾಷ್ಟ್ರದಲ್ಲಿನ ಇತರ ಸಾಧಕರ ಸ್ವಭಾವದೋಷ ಮತ್ತು ಅಹಂ ನಿರ್ಮೂಲನಕ್ಕಾಗಿ ಸತ್ಸಂಗ ತೆಗೆದು ಕೊಳ್ಳುವುದು : ಗುರುದೇವರ ಕೃಪೆಯಿಂದ ಮೇ ೨೦೧೨ ರಿಂದ ನಾನು ಮಹಾರಾಷ್ಟ್ರದಲ್ಲಿನ ನಾಗಪುರ, ಯವತಮಾಳ, ವರ್ಧಾ, ಅಕೋಲಾ, ಸೋಲಾಪುರ, ಕೊಲ್ಹಾಪುರ, ಸಾತಾರಾ, ಸಾಂಗ್ಲಿ, ಪುಣೆ, ನಾಶಿಕ, ಜಳಗಾವ್, ಠಾಣೆ, ಮುಂಬಯಿ ಹಾಗೂ ರಾಯಗಡ ಈ ಜಿಲ್ಲೆಗಳ ಹಾಗೂ ಬೆಳಗಾವಿಯ (ಕರ್ನಾಟಕ) ಸಾಧಕರಿಗಾಗಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನದ ಸತ್ಸಂಗ ತೆಗೆದುಕೊಳ್ಳುವ ಸೇವೆಯನ್ನು ಮಾಡಿದೆ. ನಾನು ಪನವೇಲ್‌ನ ದೇವದ ಆಶ್ರಮದಲ್ಲಿದ್ದು ಆ ಸತ್ಸಂಗವನ್ನು ‘ಆನ್‌ಲೈನ್’ ಮೂಲಕ ತೆಗೆದುಕೊಂಡೆನು. ಜಿಲ್ಲೆಗಳ ವಿಸ್ತಾರಕ್ಕನುಸಾರ ಈ ಸತ್ಸಂಗ ಒಂದು ಜಿಲ್ಲೆಯಲ್ಲಿ ಸುಮಾರು ೨ ರಿಂದ ೪ ವಾರ ನಡೆಯುತ್ತಿತ್ತು. ಪ್ರತಿಯೊಂದು ಜಿಲ್ಲೆಯ ಸ್ವಭಾವದೋಷ ಹಾಗೂ ಅಹಂ ನಿರ್ಮೂಲನದ ಸತ್ಸಂಗ ಮುಗಿದ ನಂತರ ನಾನು ಮಹತ್ವದ ಹಾಗೂ ಗಂಭೀರ ತಪ್ಪುಗಳ ಚೌಕಟ್ಟು ಮತ್ತು ಸಾಧಕರ ಅಯೋಗ್ಯ ದೃಷ್ಟಿಕೋನಗಳಿಗೆ ಯೋಗ್ಯ ದೃಷ್ಟಿಕೋನವನ್ನು ಹೇಳುತ್ತಿದ್ದೆನು. ಒಬ್ಬ ಸಾಧಕ ಅದನ್ನು ಬರೆದುಕೊಂಡು ಮುಂದೆ ಸಂಕಲನ ವಿಭಾಗಕ್ಕೆ ಕಳುಹಿಸುತ್ತಿದ್ದನು.

೭ ಆ ೧. ಮಹಾರಾಷ್ಟ್ರದಲ್ಲಿನ ಸಾಧಕರ ಸ್ವಭಾವದೋಷ ಮತ್ತು ಅಹಂ ನಿರ್ಮೂಲನಕ್ಕಾಗಿ ಸತ್ಸಂಗ ತೆಗೆದುಕೊಳ್ಳುವಾಗ ಅವರ ತಪ್ಪುಗಳನ್ನು ಒಂದು ವಾರದ ಮೊದಲೇ ತರಿಸಿಕೊಳ್ಳಬೇಕಾಗುತ್ತಿತ್ತು ಹಾಗೂ ಪ್ರತ್ಯಕ್ಷ ಸತ್ಸಂಗಕ್ಕಾಗಿ ದಿನಾಂಕ, ಸಮಯ ಇತ್ಯಾದಿಗಾಗಿ ತುಂಬಾ ಸಮನ್ವಯ ಮಾಡಬೇಕಾಗುತ್ತಿತ್ತು : ಯಾವ ಜಿಲ್ಲೆಯ ಸತ್ಸಂಗ ತೆಗೆದುಕೊಳ್ಳಲಿಕ್ಕಿರುತ್ತಿತ್ತೊ, ಆ ಜಿಲ್ಲೆಯ ಒಂದೊಂದು ಊರಿನ ಎಲ್ಲ ಸಾಧಕರ ತಪ್ಪುಗಳನ್ನು ನಾನು ಒಂದು ವಾರ ಮೊದಲು ವಿ-ಅಂಚೆಯ ಮೂಲಕ ತರಿಸಿಕೊಳ್ಳುತ್ತಿದ್ದೆನು. ಅದರಲ್ಲಿನ ಗಂಭೀರ ತಪ್ಪುಗಳನ್ನು ಆರಿಸಿ ನಾನು ಅವುಗಳ ಅಭ್ಯಾಸ ಮಾಡಿ ಆ ತಪ್ಪುಗಳನ್ನು ಸತ್ಸಂಗದಲ್ಲಿ ಹೇಳುತ್ತಿದ್ದೆನು. ನಾನು ದೇವದ ಆಶ್ರಮದಲ್ಲಿದ್ದು ಯಾವ ಊರಿನ ಸಾಧಕರ ತಪ್ಪುಗಳನ್ನು ತೆಗೆದುಕೊಳ್ಳಲಿಕ್ಕಿರುತ್ತಿತ್ತೊ, ಆ ಸಾಧಕರೆಲ್ಲರೂ ಅವರ ಊರಿನಲ್ಲಿ ಒಂದು ಸ್ಥಳದಲ್ಲಿ ಒಟ್ಟಾಗುತ್ತಿದ್ದರು. ಎರಡೂ ಸ್ಥಳದಲ್ಲಿ ಸಂಚಾರಿವಾಣಿಗೆ ಧ್ವನಿವರ್ಧಕವನ್ನು ಜೋಡಿಸಿ ಎಲ್ಲರಿಗೂ ಸತ್ಸಂಗ ಕೇಳಿಸುವ ಹಾಗೆ ವ್ಯವಸ್ಥೆ ಮಾಡಲಾಗುತ್ತಿತ್ತು. ಈ ಸೇವೆಗಾಗಿ ಸತ್ಸಂಗದ ಸಮಯವನ್ನು ನಿರ್ಧರಿಸುವುದು, ತಪ್ಪುಗಳನ್ನು ತಿಳಿದುಕೊಳ್ಳುವುದು ಇತ್ಯಾದಿಗಾಗಿ ನನಗೆ ಜಿಲ್ಲೆಗಳೊಂದಿಗೆ ಬಹಳಷ್ಟು ಸಮನ್ವಯ ಮಾಡಬೇಕಾಗುತ್ತಿತ್ತು.

೭ ಆ ೨. ಸ್ವಭಾವದೋಷ ಮತ್ತು ಅಹಂ ನಿರ್ಮೂಲನದ ಸತ್ಸಂಗವೂ ಮಧ್ಯಾಹ್ನ ೧.೩೦ ರಿಂದ ಸಾಯಂಕಾಲ ೭.೩೦ ರವರೆಗೆ ನಡೆಯುತ್ತಿತ್ತು. ಕೇವಲ ಚಹಾಕ್ಕಾಗಿ ನಡುವೆ ಅರ್ಧ ಗಂಟೆ ಸತ್ಸಂಗವನ್ನು ನಿಲ್ಲಿಸಲಾಗುತ್ತಿತ್ತು.

೭ ಆ ೩. ಸಂಚಾರಿವಾಣಿಯನ್ನು ಬಾಯಿಯ ಸಮೀಪ ಹಿಡಿದು ಧ್ವನಿಯೇರಿಸಿ ಮಾತನಾಡುವಾಗ ಆಯಾಸವಾಗುತ್ತಿತ್ತು, ಆದುದರಿಂದ ಹಗುರವಾಗಿರುವ ಧ್ವನಿವರ್ಧಕವನ್ನು ಎದೆಯ ಮೇಲಿಟ್ಟು ಮಾತನಾಡುವುದು : ಆ ಸಮಯದಲ್ಲಿ ಇಂದಿನ ಹಾಗೆ ‘ಸ್ಮಾರ್ಟ್ ಫೋನ್’ ಇರಲಿಲ್ಲ. ಸಾಮಾನ್ಯ ಸಂಚಾರಿವಾಣಿಯನ್ನು ಬಾಯಿಯ ಸಮೀಪ ಹಿಡಿದು ಧ್ವನಿಯೇರಿಸಿ ಮಾತನಾಡಬೇಕಾಗುತ್ತಿತ್ತು. ಆದ್ದರಿಂದ ನನಗೆ ಮಾತನಾಡುವಾಗ ತುಂಬಾ ಆಯಾಸವಾಗುತ್ತಿತ್ತು. ಧ್ವನಿಯೇರಿಸಿ ಮಾತನಾಡುವಂತಹ ಸ್ಥಿತಿ ನನ್ನದಾಗಿರಲಿಲ್ಲ. ನಂತರ ಹಗುರವಾದ ಧ್ವನಿವರ್ಧಕ ಸಿಕ್ಕಿತು. ಅದನ್ನು ಎದೆಯ ಮೇಲಿಟ್ಟು ನಾನು ಮಾತನಾಡುತ್ತಿದ್ದೆನು. ಸಾಧಕರು ಏನಾದರೂ ಹೇಳುವಾಗ ನನಗೆ ‘ಹಾಂ ಹೂಂ’ ಎನ್ನುವಷ್ಟು ಕೂಡ ಶಕ್ತಿ ಇರಲಿಲ್ಲ; ಆದ್ದರಿಂದ ನಾನು ದೇವದನಲ್ಲಿನ ಜವಾಬ್ದಾರ ಸಾಧಕರಿಗೆ ‘ನೀವು ಸಾಧಕರಿಗೆ ಸ್ಪಂದಿಸುತ್ತಾ ಹೋಗಿ’, ಎಂದು ಹೇಳುತ್ತಿದ್ದೆನು.

೮. ಶಾರೀರಿಕ ಕ್ಷಮತೆ ಇಲ್ಲದಿರುವಾಗಲೂ ಪರಾತ್ಪರ ಗುರು ಡಾ. ಆಠವಲೆಯವರ ಸಂಕಲ್ಪದಿಂದ ಒಂದು ವರ್ಷ ‘ಆನ್‌ಲೈನ್’ ಸತ್ಸಂಗದಲ್ಲಿ ಮಾತನಾಡಲು ಸಾಧ್ಯವಾಯಿತು

ನಂತರ ನನ್ನ ಹೊಟ್ಟೆಯ ಸ್ನಾಯುಗಳು ಅತ್ಯಂತ ದುರ್ಬಲವಾದವು. ಮಾತನಾಡಲು ಸ್ನಾಯುಗಳಲ್ಲಿರಬೇಕಾದ ಶಕ್ತಿಯೂ ನನ್ನಲ್ಲಿರಲಿಲ್ಲ. ಮಲಗಿಕೊಂಡು ಮಾತನಾಡಲು ಹೆಚ್ಚು ಶಕ್ತಿ ಬೇಕಾಗುತ್ತದೆ; ಆದ್ದರಿಂದ ವೈದ್ಯರು ನನಗೆ ಮಾತನಾಡದೆ ಮಲಗಿಕೊಂಡಿರಲು ಹೇಳಿದ್ದರು; ಆದರೆ ಪ.ಪೂ. ಗುರುದೇವರು ನನಗೆ ಸತ್ಸಂಗದಲ್ಲಿ ದಿನವಿಡೀ ಮಾತನಾಡುವ ಸೇವೆಯನ್ನೆ ಕೊಟ್ಟಿದ್ದರು. ‘ಶ್ರೀ ಗುರುಗಳ ಆಜ್ಞಾಪಾಲನೆ ಮಾಡುವುದೇ’, ಸರ್ವಶ್ರೇಷ್ಠ ಆಗಿರುವುದರಿಂದ ನನ್ನ ಶಾರೀರಿಕ ಕ್ಷಮತೆ ಇಲ್ಲದಿರುವಾಗಲೂ ನನಗೆ ಶ್ರೀ ಗುರುಗಳ ಸಂಕಲ್ಪ ಮತ್ತು ಸಾಮರ್ಥ್ಯದಿಂದಲೇ ವರ್ಷವಿಡೀ ‘ಆನ್‌ಲೈನ್’ ಸತ್ಸಂಗದಲ್ಲಿ ಮಾತನಾಡಲು ಸಾಧ್ಯವಾಯಿತು !

೯. ಭಾರತದಾದ್ಯಂತದ ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆ ಪ್ರಕ್ರಿಯೆಗಾಗಿ ಬಂದಿರುವ ಸಾಧಕರ ವ್ಯಷ್ಟಿ ಸಾಧನೆಯ ವರದಿ ತೆಗೆದುಕೊಳ್ಳುವುದು

ಈ ಸತ್ಸಂಗ ನಡೆಯುತ್ತಿರುವಾಗಲೇ ಏಪ್ರಿಲ್‌ ೨೦೧೨ ರಿಂದ ಮೇ ೨೦೧೩ ರ ವರೆಗೆ ನಾನು ಮಹಾರಾಷ್ಟ್ರ ಮತ್ತು ಭಾರತದ ವಿವಿಧ ಸ್ಥಳಗಳಿಂದ ಬರುವ ಸಾಧಕರ ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಳ್ಳುವ ಸೇವೆಯನ್ನು ಮಾಡಿದೆನು. ಆಗ ಭಾರತದಾದ್ಯಂತದ ೩೫ ಸಾಧಕರು ದೇವದ ಆಶ್ರಮಕ್ಕೆ ಬಂದಿದ್ದರು. ಆ ಪ್ರತಿಯೊಬ್ಬ ಸಾಧಕರೊಂದಿಗೆ ವೈಯಕ್ತಿಕವಾಗಿ ಮಾತನಾಡುವುದು, ಅವರ ಸಾಧನೆಯ ವರದಿ ತೆಗೆದುಕೊಳ್ಳುವುದು, ಅವರನ್ನು ಒಟ್ಟುಕೂಡಿಸಿ ಸಾಪ್ತಾಹಿಕ ಸತ್ಸಂಗ ತೆಗೆದುಕೊಳ್ಳುವುದು’, ಇಂತಹ ಸೇವೆಯೂ ಆರಂಭವಾಯಿತು. ಸಾಧಕರ ವ್ಯಷ್ಟಿ ಸಾಧನೆ ಚೆನ್ನಾಗಿ ಆರಂಭವಾದ ನಂತರ ಆ ಸಾಧಕರು ಹಿಂತಿರುಗಿ ಹೋಗುತ್ತಿದ್ದರು ಹಾಗೂ ಅವರ ಸ್ಥಾನದಲ್ಲಿ ಹೊಸ ಸಾಧಕರು ಬರುತ್ತಿದ್ದರು. ಹೀಗೆ ಈ ಸತ್ಸಂಗವೂ ವರ್ಷವಿಡೀ ನಡೆದಿತ್ತು.

೧೦. ಎಪ್ರಿಲ್‌ ೨೦೧೩ ರಲ್ಲಿ ಪುನಃ ದೇವದ ಆಶ್ರಮದಲ್ಲಿನ ಸಾಧಕರ ಸ್ವಭಾವದೋಷ ಮತ್ತು ಅಹಂ ನಿರ್ಮೂಲನಕ್ಕಾಗಿ ಸತ್ಸಂಗ ತೆಗೆದುಕೊಳ್ಳುವುದು  

ಎಪ್ರಿಲ್‌ ೨೦೧೩ ರಲ್ಲಿ ಪುನಃ ಒಂದು ತಿಂಗಳಿಗಾಗಿ ನನಗೆ (ಸೌ.) ಅಶ್ವಿನಿ ಪವಾರ್‌ (೨೦೧೭ ರಲ್ಲಿ ಅವರು ಸನಾತನದ ೬೯ ನೇ (ಸಮಷ್ಟಿ) ಸಂತರಾದರು) ಇವರ ಜೊತೆಗೆ ದೇವದ ಆಶ್ರಮದಲ್ಲಿನ ಸಾಧಕರ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಸತ್ಸಂಗ ತೆಗೆದುಕೊಳ್ಳುವ ಸೇವೆ ಸಿಕ್ಕಿತು. ಸತ್ಸಂಗ ನಡೆಯುತ್ತಿರುವಾಗ ನಾನು ಮಂಚದ ಮೇಲೆ ಮಲಗಿಕೊಂಡಿದ್ದರೂ, ನನಗೆ ಏನಾದರೂ ಹೇಳಲಿಕ್ಕಿದ್ದರೆ ನನಗೆ ಕೆಲವು ಕ್ಷಣ ಎದ್ದು ಕುಳಿತುಕೊಂಡು ಹೇಳಲು ಸಾಧ್ಯವಾಗುತ್ತಿತ್ತು. ಆಗ ನನಗೆ ೫-೭ ನಿಮಿಷಗಳ ವರೆಗೆ ಕುಳಿತುಕೊಳ್ಳಲು ಸಾಧ್ಯವಾಗುತ್ತಿತ್ತು. ಅನಂತರ ಎಪ್ರಿಲ್‌ ೨೦೧೪ ರಿಂದ ಸೌ. ಅಶ್ವಿನಿ ಪವಾರ್‌ ಇವರ ಜೊತೆಗೆ ದೇವದ ಆಶ್ರಮದಲ್ಲಿ ಮುಂದಿನ ಶುದ್ಧೀಕರಣ ಸತ್ಸಂಗ ಆರಂಭವಾಯಿತು. ಅದು ಸುಮಾರು ೬ ತಿಂಗಳು ನಡೆಯುತ್ತಿತ್ತು. ಈ ಸತ್ಸಂಗ ಮಧ್ಯಾಹ್ನ ಆರಂಭವಾದರೆ ಅದು ಸಾಯಂಕಾಲದ ವರೆಗೆ ನಡೆಯುತ್ತಿತ್ತು.

೧೧. ಗುರುಕೃಪೆಯಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯ ವಿಷಯದಲ್ಲಿ ಲೇಖನವನ್ನು ಬರೆಯುವುದು 

ವ್ಯಷ್ಟಿ ಸಾಧನೆಯ ಅಂತರ್ಗತ ‘ಯಾವುದಾದರೊಂದು ಸ್ವಭಾವದೋಷವನ್ನು ಹೇಗೆ ಹೋಗಲಾಡಿಸಬೇಕು ?’, ‘ಅಹಂ ಕಡಿಮೆ ಮಾಡಲು ಹೇಗೆ ಪ್ರಯತ್ನಿಸಬೇಕು ?’, ‘ಸ್ವಭಾವದೋಷ ನಿರ್ಮೂಲನೆಯಲ್ಲಿನ ಅಡಚಣೆ ಮತ್ತು ಉಪಾಯ’ದ ವಿಷಯದಲ್ಲಿ ಗುರುಕೃಪೆಯಿಂದ ದೇವರು ನನ್ನಿಂದ ಲೇಖನವನ್ನು ಬರೆಸಿಕೊಂಡರು, ಅಂದರೆ ನಾನು ಅದನ್ನು ಹೇಳುತ್ತಿರುವಾಗ ಒಬ್ಬ ಸಾಧಕ ಅದನ್ನು ಬರೆದುಕೊಳ್ಳುತ್ತಿದ್ದನು. ಶಾರೀರಿಕ ಸ್ಥಿತಿ ಎಷ್ಟು ಪ್ರತಿಕೂಲವಿದ್ದರೂ, ಪ.ಪೂ. ಗುರುದೇವರ ಕೃಪೆಯಿಂದ ನನಗೆ ಈ ಎಲ್ಲ ಸತ್ಸಂಗಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿತ್ತು. ಗುರುದೇವರೇ ಆ ಸೇವೆಗಳನ್ನು ನನ್ನಿಂದ ಮಾಡಿಸಿಕೊಳ್ಳುತ್ತಿದ್ದರು !

‘ಅಸಾಧ್ಯವನ್ನೂ ಸಾಧ್ಯಗೊಳಿಸುವರು’, ಎಂಬುದನ್ನು ನಾನು ನಿರಂತರ ಅನುಭವಿಸಿದೆನು.

ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೂಚಿಸಿದ ಶಬ್ದಪುಷ್ಪಗಳನ್ನು ಕೃತಜ್ಞತಾಭಾವದಿಂದ ಅವರ ಚರಣಗಳಿಗೆ ಅರ್ಪಿಸುತ್ತಿದ್ದೇನೆ !

(ಮುಂದುವರಿಯುವುದು)

ಇದಂ ನ ಮಮ |’ (ಈ ಲೇಖನ ನನ್ನದಲ್ಲ !)

– (ಸದ್ಗುರು) ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ ಪನವೇಲ. (೨೨.೩.೨೦೨೪)