ತೀವ್ರ ಶಾರೀರಿಕ ತೊಂದರೆಯಲ್ಲಿಯೂ ಗುರುವಾಜ್ಞಾಪಾಲನೆ ಮಾಡಿ ಸೇವೆ ಮಾಡುವ ಶಿಷ್ಯ ಸದ್ಗುರು ರಾಜೇಂದ್ರ ಶಿಂದೆ ಮತ್ತು ದೇಹಬುದ್ಧಿ ಕಡಿಮೆಗೊಳಿಸಿ ಅವರ ಆಧ್ಯಾತ್ಮಿಕ ಪ್ರಗತಿ ಮಾಡಿಸಿಕೊಳ್ಳುವ ಗುರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಹಿಂದಿನ ವಾರದ ಸಂಚಿಕೆಯಲ್ಲಿ ಶಾರೀರಿಕ ತೊಂದರೆಗಳ ತೀವ್ರತೆ ಹೆಚ್ಚಾಗಿರುವಾಗ ಪ.ಪೂ. ಡಾಕ್ಟರರು ಈ ಅಜ್ಞಾನಿ ಜೀವದಿಂದ ಹೇಗೆ ಸೇವೆಯನ್ನು ಮಾಡಿಸಿಕೊಂಡರು ?’, ಎಂಬುದನ್ನು ನಾವು ನೋಡಿದೆವು. ವಾರದಲ್ಲಿ ೪ ದಿನ ಶುದ್ಧೀಕರಣ ಸತ್ಸಂಗ (ಟಿಪ್ಪಣಿ ೧) ತೆಗೆದುಕೊಳ್ಳುವ ಸೇವೆಯನ್ನು ಮಾಡಿದ ನಂತರ ಉಳಿದ ೩ ದಿನ ‘ಚೈತನ್ಯವಾಹಿನಿ’ಯ (ಟಿಪ್ಪಣಿ ೨) ಸೇವೆಯನ್ನು ಹೇಗೆ ಮಾಡಿಸಿಕೊಂಡರು ?’, ಎಂಬುದನ್ನು ಇಲ್ಲಿ ಕೊಡಲಾಗಿದೆ.

(ಟಿಪ್ಪಣಿ ೧ – ಸಾಧಕರ ಸ್ವಭಾವದೋಷ ಮತ್ತು ಅಹಂನ್ನು ಕಡಿಮೆಗೊಳಿಸಲು ಅವರಿಂದಾದ ತಪ್ಪುಗಳನ್ನು ಸತ್ಸಂಗದಲ್ಲಿ ಹೇಳಿ ‘ಯೋಗ್ಯ ಯಾವುದು ? ಎಂಬುದನ್ನು ಹೇಳುವುದು.

ಟಿಪ್ಪಣಿ ೨ – ಸನಾತನ ಸಂಸ್ಥೆಯಿಂದ ಪ್ರಚಾರಕ್ಕಾಗಿ ಕೆಲವು ಉಪಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅದಕ್ಕಾಗಿ ಕೆಲವು ಜಿಲ್ಲೆಗಳು ಮಾಡಿದ ವೈಶಿಷ್ಟ್ಯಪೂರ್ಣ ಪ್ರಯತ್ನ. ಜಿಲ್ಲೆಯಲ್ಲಿನ ಸಾಧಕರಿಂದ ಆಗುವ ತಪ್ಪುಗಳು, ಅವರಿಗೆ ಕಲಿಯಲು ಸಿಕ್ಕಿದ ಅಂಶಗಳು ಇತ್ಯಾದಿಗಳನ್ನು ತರಿಸಿಕೊಂಡು ಅವುಗಳ ವಿಶ್ಲೇಷಣೆ ಮಾಡಿ ಆ ಮಾಹಿತಿಯನ್ನು ಎಲ್ಲ ಜಿಲ್ಲೆಗಳಿಗೆ ಕಳುಹಿಸಲಾಗುತ್ತದೆ. ಪ್ರತಿ ವಾರ ಮಾಡುವ ಈ ಸೇವೆಗೆ ‘ಚೈತನ್ಯವಾಹಿನಿ’ಯ ಸೇವೆ’, ಎಂದು ಹೇಳಲಾಗುತ್ತದೆ.)

ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/123727.html

೧. ತೀವ್ರ ಶಾರೀರಿಕ ತೊಂದರೆಯಾಗುತ್ತಿರುವಾಗಲೂ ಕೇವಲ ಗುರುಕೃಪೆಯಿಂದ ಮಾಡಿದ ‘ಚೈತನ್ಯವಾಹಿನಿ’ಯ ಸೇವೆ !

೧ ಅ. ಪ್ರಚಾರದಲ್ಲಿನ ಉಪಕ್ರಮಗಳ ಮಾಹಿತಿಯನ್ನು ತರಿಸುವುದು : ನನಗೆ ತೀವ್ರ ಶಾರೀರಿಕ ತೊಂದರೆಯಾಗುತ್ತಿರುವಾಗ ಶುದ್ಧೀಕರಣ ಸತ್ಸಂಗ ಇಲ್ಲದಿರುವಾಗ, ಆ ೩ ದಿನ ಗುರುಕೃಪೆಯಿಂದ ನನ್ನಿಂದ ‘ಚೈತನ್ಯವಾಹಿನಿ’ಯ ಸೇವೆ ಆಗುತ್ತಿತ್ತು. ಜೂನ್‌ ೨೦೧೧ ರಿಂದ ನಾನು ಈ ಸೇವೆಯನ್ನು ಮಾಡುತ್ತಿದ್ದೇನೆ. ಈ ಸೇವೆಯ ವ್ಯಾಪ್ತಿ ದೊಡ್ಡದಾಗಿದೆ. ಪ್ರಚಾರದಲ್ಲಿನ ೪೦ ಜಿಲ್ಲೆಗಳಿಂದ ಉಪಕ್ರಮಗಳ ಮಾಹಿತಿ ವಿ-ಅಂಚೆಯ (ಇ-ಮೇಲ್) ಮೂಲಕ ತರಿಸಲಾಗುತ್ತದೆ. (೨೦೧೩ ರಿಂದ ಈ ಮಾಹಿತಿಯನ್ನು ‘ಗೂಗಲ್‌ ಶೀಟ್‌’ನ ಮೂಲಕ ತರಿಸಲಾಗುತ್ತದೆ.) ತೀವ್ರ ಶಾರೀರಿಕ ತೊಂದರೆಗಳಲ್ಲಿಯೂ ಗುರುಕೃಪೆಯಿಂದಲೇ ನನಗೆ ಆ ಕೋಷ್ಟಕಗಳನ್ನು (ಉಪಕ್ರಮಗಳ ಮಾಹಿತಿಯನ್ನು ಬರೆದಿರುವ ತಖ್ತ್ತೆಗಳು) ಮಂಚದ ಮೇಲೆ ಮಲಗಿಕೊಂಡು ಅಭ್ಯಾಸ ಮಾಡಲು ಸಾಧ್ಯವಾಯಿತು.

೧ ಆ. ‘ಚೈತನ್ಯವಾಹಿನಿ’ಯ ಸೇವೆಯನ್ನು ಮಾಡಲು ‘ಎದ್ದು ನಿಲ್ಲಲು ಸಾಧ್ಯವಾಗಬೇಕು’, ಎಂದು ನೋವಿನ ಮಾತ್ರೆ ಮತ್ತು ಇಂಜೆಕ್ಷನ್‌ (ಚುಚ್ಚುಮದ್ದು) ತೆಗೆದುಕೊಳ್ಳುವುದು : ನನಗೆ ‘ಚೈತನ್ಯವಾಹಿನಿ’ಯ ಸೇವೆಯನ್ನು ಪ್ರಸ್ತುತಪಡಿಸಲು ೨ ಗಂಟೆ ಬೇಕಾಗುತ್ತಿತ್ತು, ‘ಈ ಮಾಹಿತಿಯನ್ನು ಹೇಳಲು ನನಗೆ ಎದ್ದು ನಿಲ್ಲಲು ಸಾಧ್ಯವಾಗ ಬೇಕೆಂದು’, ನಾನು ನೋವಿನ ಮಾತ್ರೆ ಮತ್ತು ಇಂಜೆಕ್ಷನ್‌ (ಚುಚ್ಚುಮದ್ದು) ತೆಗೆದುಕೊಳ್ಳುತ್ತಿದ್ದೆ, ಆದರೂ ಅಷ್ಟು ಸಮಯ ನನಗೆ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ; ಆದ್ದರಿಂದ ಅರ್ಧ ಮುಕ್ಕಾಲು ಗಂಟೆಯ ಸೇವೆಯನ್ನು ಸದ್ಗುರು ಕು. ಅನುರಾಧಾ ವಾಡೆಕರ (೨೮. ೧೦.೨೦೧೧ ರಂದು ಅವರು ಸಂತರಾದರು.) ತೆಗೆದುಕೊಳ್ಳುತ್ತಿದ್ದರು. ಅಷ್ಟು ಹೊತ್ತು ನಾನು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೆ.

೧ ಇ. ಉಪಕ್ರಮದ ಮಾಹಿತಿಯ ವಿಶ್ಲೇಷಣೆ ಮಾಡುವಾಗ ಇತರ ಜಿಲ್ಲೆಗಳಿಗೆ ಅದನ್ನು ನೇರವಾಗಿ ಪ್ರಕ್ಷೇಪಣೆ ಮಾಡಲಾಗುತ್ತಿತ್ತು : ರಾಯಗಡ ಜಿಲ್ಲೆಯ ಕೆಲವು ಸಾಧಕರು ರವಿವಾರ ಮಧ್ಯಾಹ್ನ ಆಶ್ರಮದ ಸಣ್ಣ ಸಭಾಗೃಹದಲ್ಲಿ ಸೇರುತ್ತಿದ್ದರು. ಅವರ ಮುಂದೆ ನಾನು ಆ ಮಾಹಿತಿಯ ವಿಶ್ಲೇಷಣೆಯನ್ನು ಮಾಡು ತ್ತಿದ್ದೆನು, ಆಗ ಅದನ್ನು ನೇರವಾಗಿ ಎಲ್ಲ ಜಿಲ್ಲೆಗಳಿಗೆ ಪ್ರಕ್ಷೇಪಣೆ ಮಾಡಲಾಗುತ್ತಿತ್ತು. ಈ ರೀತಿ ಪ.ಪೂ. ಗುರುದೇವರ ಕೃಪೆಯಿಂದ ನನಗೆ ಅಸಾಧ್ಯವಾಗಿರುವ ಈ ಸೇವೆಯನ್ನು ಅವರೇ ನನ್ನಿಂದ ಮಾಡಿಸಿಕೊಳ್ಳುತ್ತಿದ್ದರು.

(ಸದ್ಗುರು) ಶ್ರೀ. ರಾಜೇಂದ್ರ ಶಿಂದೆ

೨. ‘ಚೈತನ್ಯ ವಾಹಿನಿ’ಯ ಕಾರ್ಯಕ್ರಮದ ಧ್ವನಿಚಿತ್ರೀಕರಣ ಮಾಡುವುದು

೨ ಅ. ಗುರುಕೃಪೆಯಿಂದ ‘ಚೈತನ್ಯವಾಹಿನಿ’ಯ ಕಾರ್ಯಕ್ರಮದ ಧ್ವನಿಚಿತ್ರೀಕರಣ ಮಾಡಿ ಅದನ್ನು ಪ್ರತಿ ರವಿವಾರ ಎಲ್ಲ ಜಿಲ್ಲೆಗಳಿಗೆ ಪ್ರಕ್ಷೇಪಣೆ ಮಾಡಲು ನಿರ್ಧರಿಸಲಾಯಿತು : ನವೆಂಬರ್‌ ೨೦೧೨ ರಿಂದ ಪ.ಪೂ. ಡಾಕ್ಟರರ ಕೃಪೆಯಿಂದ ‘ಚೈತನ್ಯವಾಹಿನಿ’ಯ ಕಾರ್ಯಕ್ರಮ ಧ್ವನಿಚಿತ್ರೀಕರಣ ಮಾಡಿ ಅದನ್ನು ಪ್ರಕ್ಷೇಪಣೆ ಮಾಡಲು ನಿರ್ಧರಿಸಲಾಯಿತು. ಅದಕ್ಕನುಸಾರ ಪೂರ್ವಸಿದ್ಧತೆ ಮತ್ತು ಅಭ್ಯಾಸ ಪೂರ್ಣವಾದ ನಂತರ ‘ಚೈತನ್ಯವಾಹಿನಿ’ಯ ಕಾರ್ಯಕ್ರಮದ ಧ್ವನಿಚಿತ್ರೀಕರಣ ಮಾಡಿ ಪ್ರತಿ ರವಿವಾರ ಅದನ್ನು ಎಲ್ಲ ಜಿಲ್ಲೆಗಳಿಗೆ ಪ್ರಕ್ಷೇಪಣೆ ಮಾಡಲಾಗುತ್ತಿತ್ತು.

೨ ಆ. ‘ಚೈತನ್ಯವಾಹಿನಿ’ಯ ಧ್ವನಿಚಿತ್ರೀಕರಣಕ್ಕಾಗಿ ಮಾಡಬೇಕಾದ ಪೂರ್ವ ಸಿದ್ಧತೆ !

೧. ಸೋಮವಾರ ಸಾಯಂಕಾಲ ೫ ಗಂಟೆಯ ವರೆಗೆ ಎಲ್ಲ ಜಿಲ್ಲೆಗಳು ಉಪಕ್ರಮಗಳ ಮಾಹಿತಿಯನ್ನು ಕಳುಹಿಸುತ್ತಿದ್ದವು. ದೇವದ ಆಶ್ರಮದಲ್ಲಿ ಶ್ರೀ. ಯಜ್ಞೇಶ ಸಾವಂತ ಇವರು ಆ ಮಾಹಿತಿಯನ್ನು ಸಂಗ್ರಹಿಸಿ ಸಂಕಲನ ಮಾಡಿ ನನಗೆ ಕೊಡುತ್ತಿದ್ದರು, ಅದಕ್ಕಾಗಿ ಅವರು ತುಂಬಾ ಸಮಯ ಕೊಡಬೇಕಾಗುತ್ತಿತ್ತು.

೨. ಎಲ್ಲ ಜಿಲ್ಲೆಗಳಲ್ಲಿನ ಸಾಧಕರಿಂದ ಸಮಷ್ಟಿಗೆ ಹಾನಿಕರವಾಗಿರುವ ತಪ್ಪುಗಳನ್ನು ತರಿಸಿಕೊಳ್ಳಲಾಗುತ್ತಿತ್ತು. ಅವುಗಳ ಅಭ್ಯಾಸ ಮಾಡಿ ನಾನು ಅವುಗಳಿಗೆ ಯೋಗ್ಯ ದೃಷ್ಟಿಕೋನವನ್ನು ಬರೆದಿಡುತ್ತಿದ್ದೆನು. ಆ ತಪ್ಪುಗಳನ್ನು ‘ಚೈತನ್ಯವಾಹಿನಿ’ಯ ಮೂಲಕ ಹೇಳುವುದರಿಂದ ಸಾಧಕರಿಗೆ ಕಲಿಯಲು ದೊರಕಿ ಇಂತಹ ತಪ್ಪುಗಳನ್ನು ತಪ್ಪಿಸಲು ಸಾಧ್ಯವಾಗುತ್ತಿತ್ತು.

೩. ಅದರ ಜೊತೆಗೆ ಪ್ರಚಾರದಲ್ಲಿನ ವೈಶಿಷ್ಟ್ಯಪೂರ್ಣ ಒಳ್ಳೆಯ ಪ್ರಯತ್ನ ಮತ್ತು ಘಟನೆಗಳನ್ನೂ ತರಿಸಲಾಗುತ್ತಿತ್ತು. ಅವುಗಳನ್ನೂ ‘ಚೈತನ್ಯವಾಹಿನಿ’ಯ ಮೂಲಕ ಹೇಳುವುದರಿಂದ ವಿವಿಧ ಜಿಲ್ಲೆಗಳ ಸಾಧಕರು ಸಮಷ್ಟಿ ಪ್ರಚಾರಕ್ಕಾಗಿ ಮಾಡುತ್ತಿದ್ದ ಒಳ್ಳೆಯ ಪ್ರಯತ್ನ ಎಲ್ಲರಿಗೂ ತಿಳಿಯುತ್ತಿತ್ತು. ಅದರಿಂದ ಎಲ್ಲ ಕಡೆಗಳ ಸಾಧಕರಿಗೆ ಸೇವೆ ಮಾಡಲು ಪ್ರೋತ್ಸಾಹ ಸಿಗುತ್ತಿತ್ತು.

೪. ಇಂತಹ ಮಾಹಿತಿಗಳ ೩೦ ರಿಂದ ೩೫ ಕಡತಗಳು ನನಗೆ ಮಂಗಳವಾರ ಬೆಳಗ್ಗಿನ ವರೆಗೆ ಸಿಗುತ್ತಿದ್ದವು. ಅವುಗಳಲ್ಲಿನ ಮಹತ್ವದ ತಪ್ಪುಗಳನ್ನು ಮತ್ತು ವೈಶಿಷ್ಟ್ಯಪೂರ್ಣ ಒಳ್ಳೆಯ ಘಟನೆಗಳನ್ನು ಅಥವಾ ಪ್ರಯತ್ನಗಳನ್ನು ನಾನು ಆರಿಸಿಕೊಳ್ಳುತ್ತಿದ್ದೆ.

೫. ಈ ಕಡತಗಳಿಂದ ವೈಶಿಷ್ಟ್ಯಪೂರ್ಣ ವಿಷಯಗಳನ್ನು ಸಂಕಲನ ಮಾಡಿ ‘ಯಾವ ಜಿಲ್ಲೆಗಳ ಪ್ರಯತ್ನ ಚೆನ್ನಾಗಿ ಆಗುತ್ತಿದೆ ಹಾಗೂ ಯಾವ ಜಿಲ್ಲೆಗಳ ಪ್ರಯತ್ನ ಕಡಿಮೆಯಾಗುತ್ತಿದೆ’, ಎಂಬುದನ್ನು ನೋಂದಣಿ ಮಾಡಿಕೊಳ್ಳಲಾಗುತ್ತಿತ್ತು.

೬. ‘ಸಮಷ್ಟಿಗೆ ಹಾನಿಯಾಗುವ ತಪ್ಪುಗಳನ್ನು ಹಾಗೂ ವೈಶಿಷ್ಟ್ಯ ಪೂರ್ಣ ಘಟನೆಗಳನ್ನು ಆರಿಸುವುದು, ಬಂದಿರುವ ಮಾಹಿತಿಯನ್ನು ಅಭ್ಯಾಸ ಮಾಡುವುದು ಹಾಗೂ ಅವುಗಳಿಗೆ ಯೋಗ್ಯ ದೃಷ್ಟಿಕೋನವನ್ನು ಬರೆದಿಡುವುದು’, ಇದರಲ್ಲಿ ನನ್ನ ಮಂಗಳ ವಾರದ ದಿನ ಹೋಗುತ್ತಿತ್ತು. ಬುಧವಾರ ಬೆಳಗ್ಗಿನಿಂದ ಚಿತ್ರೀಕರಣ ಆರಂಭವಾಗುತ್ತಿತ್ತು. ಅದಕ್ಕೂ ಮೊದಲು ನನಗೆ ಆರಿಸಿದ ವಿಷಯಗಳನ್ನು ಮತ್ತೊಮ್ಮೆ ಅಭ್ಯಾಸ ಮಾಡಬೇಕಾಗುತ್ತಿತ್ತು.

೭. ಚಿತ್ರೀಕರಣ ಪೂರ್ಣವಾದ ನಂತರ ಶುಕ್ರವಾರ, ಶನಿವಾರ ಧ್ವನಿಚಿತ್ರೀಕರಣ ಸೇವೆಯಲ್ಲಿನ ಸಾಧಕ ಶ್ರೀ. ರವಿ ಸಾಳೋಖೆ ಇದರ ಮುಂದಿನ ಪ್ರಕ್ರಿಯೆಯನ್ನು ಮಾಡಿ ರವಿವಾರ ಅದನ್ನು ಪ್ರಕ್ಷೇಪಣೆ ಮಾಡುತ್ತಿದ್ದನು.

೩. ‘ಚೈತನ್ಯವಾಹಿನಿ’ಯ ಸೇವೆಯಲ್ಲಾದ ತೊಂದರೆಗಳು ಮತ್ತು ಅದಕ್ಕೆ ಮಾಡಿದ ಉಪಾಯ

೩ ಅ. ಧ್ವನಿಚಿತ್ರೀಕರಣ ಮಾಡುವಾಗ ಪ್ರತಿ ೧೦-೧೫ ನಿಮಿಷಗಳಿಗೊಮ್ಮೆ ವಿಶ್ರಾಂತಿ ಪಡೆದು ನಂತರ ಪುನಃ ಧ್ವನಿಚಿತ್ರೀಕರಣ ಮಾಡಬೇಕಾಗುತ್ತಿತ್ತು : ಪ್ರತಿ ಬುಧವಾರ ಬೆಳಗ್ಗೆ ೧೦ ಗಂಟೆಗೆ ನಾನು ಸೊಂಟ ಮತ್ತು ಕುತ್ತಿಗೆಗೆ ಬೆಲ್ಟ್ ಹಾಕಿಕೊಂಡು ಧ್ವನಿಚಿತ್ರೀಕರಣಕ್ಕಾಗಿ ಆ ವಿಭಾಗಕ್ಕೆ ಹೋಗುತ್ತಿದ್ದೆನು. ಅನಂತರ ಧ್ವನಿಚಿತ್ರೀಕರಣದ ಉಡುಗೆ ಮತ್ತು ಇತರ ಸಿದ್ಧತೆಯಲ್ಲಿ ಅರ್ಧ-ಮುಕ್ಕಾಲು ಗಂಟೆ ಹೋಗುತ್ತಿತ್ತು. ಧ್ವನಿಚಿತ್ರೀಕರಣ ಆರಂಭಿಸಿದ ನಂತರ ೧೦-೧೫ ನಿಮಿಷಗಳ ನಂತರ ನನಗೆ ತೊಂದರೆ ಆರಂಭವಾಗುತ್ತಿತ್ತು. ಆಗ ನಾನು ಅಲ್ಲಿಟ್ಟಿದ್ದ ಮಂಚದ ಮೇಲೆ ಮಲಗುತ್ತಿದ್ದೆನು. ಸ್ವಲ್ಪ ವಿಶ್ರಾಂತಿ ಪಡೆದ ನಂತರ ಪುನಃ ಧ್ವನಿಚಿತ್ರೀಕರಣ ಮಾಡಲಾಗುತ್ತಿತ್ತು. ಈ ರೀತಿ ಸೇವೆಯನ್ನು ಮಾಡುವುದರಿಂದ ಧ್ವನಿಚಿತ್ರೀಕರಣಕ್ಕೆ ೩ ಗಂಟೆ ಬೇಕಾಗುತ್ತಿತ್ತು. ಅದರಲ್ಲಿನ ಅರ್ಧ ಮುಕ್ಕಾಲು ಗಂಟೆ ಸೇವೆ ಪೂ. ಅನುರಾಧಾ ವಾಡೆಕರ (೩೦.೭.೨೦೧೫ ರಂದು ಅವರು ಸದ್ಗುರು ಆದರು) ಮಾಡುತ್ತಿದ್ದರು. ಆಗ ನಾನು ವಿಶ್ರಾಂತಿ ಮಾಡುತ್ತಾ ಮಂಚದ ಮೇಲೆ ಮಲಗಿಕೊಂಡು ಬೇರೆ ಏನಾದರೂ ಸೇವೆ ಮಾಡುತ್ತಿದ್ದೆನು.

೩ ಆ. ಹೊಟ್ಟೆಯಲ್ಲಿನ ವಾಯುವಿನ ಶಬ್ದ ಧ್ವನಿಚಿತ್ರೀಕರಣದಲ್ಲಿಯೂ ಬರುವುದು, ಆದ್ದರಿಂದ ಪುನಃ ಧ್ವನಿಚಿತ್ರೀಕರಣ ಮಾಡಬೇಕಾಗುವುದು : ನನಗೆ ಹೊಟ್ಟೆಯ ಅನಾರೋಗ್ಯ ಇರುವುದರಿಂದ ಧ್ವನಿಚಿತ್ರೀಕರಣ ಮಾಡುವಾಗ ಹೊಟ್ಟೆಯಲ್ಲಿನ ವಾಯು ಹೊಟ್ಟೆಯಲ್ಲಿ ತಿರುಗುವಾಗ ಅದರ ಶಬ್ದ ಧ್ವನಿಚಿತ್ರೀಕರಣದಲ್ಲಿಯೂ ಕೇಳಿಸುತ್ತಿತ್ತು. ಆದ್ದರಿಂದ ಕೆಲವೊಮ್ಮೆ ಪುನಃ ಧ್ವನಿಚಿತ್ರೀಕರಣ ಮಾಡಬೇಕಾಗುತ್ತಿತ್ತು.

೩ ಇ. ಧ್ವನಿಚಿತ್ರೀಕರಣದಲ್ಲಿ ಬಂದಿರುವ ಆಧ್ಯಾತ್ಮಿಕ ಅಡಚಣೆಗಳು ಮತ್ತು ಅವುಗಳ ನಿವಾರಣೆ : ಕೆಲವೊಮ್ಮೆ ಧ್ವನಿಚಿತ್ರೀಕರಣದಲ್ಲಿ ಆಧ್ಯಾತ್ಮಿಕ ಅಡಚಣೆಗಳು ಬರುತ್ತಿದ್ದವು, ಉದಾ. ಚಿತ್ರೀಕರಣ ವಿಭಾಗದಲ್ಲಿನ ದೀಪಗಳು ಅನಿರೀಕ್ಷಿತವಾಗಿ ಆರಿಹೋಗುವುದು, ಚಿತ್ರೀಕರಣ ಆಗದಿರುವುದು, ಏರ್‌ಕಂಡಿಶನ್‌ ಹಾಳಾಗುವುದು ಅಥವಾ ನಿಂತು ಹೋಗುವುದು ಇತ್ಯಾದಿ. ಈ ಅಡಚಣೆಗಳ ನಿವಾರಣೆಗಾಗಿಯೂ ಸಮಯ ಹೋಗುತ್ತಿತ್ತು. ಏರ್‌ ಕಂಡೀಶನ್‌ ನಿಂತಾಗ ತುಂಬಾ ತೊಂದರೆಯಾಗುತ್ತಿತ್ತು. ಧ್ವನಿಚಿತ್ರೀಕರಣಕ್ಕಾಗಿ ಅಳವಡಿಸಿದ ‘ಹೆಲೋಜೆನ್‌’ನ ಬೆಳಕಿನಿಂದ ತುಂಬಾ ಬಿಸಿಯಾಗುತ್ತಿತ್ತು. ಆಗ ಪ್ರತಿ ೧೦-೧೫ ನಿಮಿಷಗಳಿಗೊಮ್ಮೆ ಚಿತ್ರೀಕರಣ ವಿಭಾಗದ ಬಾಗಿಲು ತೆರೆದು ಉಲ್ಟಾ ಫ್ಯಾನ್‌ ನಡೆಸಿ ಒಳಗಿನ ಬಿಸಿ ಗಾಳಿಯನ್ನು ಹೊರಗೆ ಹಾಕಲಾಗುತ್ತಿತ್ತು, ಅನಂತರ ಪುನಃ ಚಿತ್ರೀಕರಣವನ್ನು ಆರಂಭಿಸುತ್ತಿದ್ದೆವು. – ಸದ್ಗುರು ರಾಜೇಂದ್ರ ಶಿಂದೆ

೩ ಈ. ವೈದ್ಯಕೀಯ ಉಪಚಾರಕ್ಕಾಗಿ ಪುಣೆಗೆ ಹೋಗಬೇಕಾಗುವುದು : ೨೦೧೪ ರಲ್ಲಿ ನಾನು ವೈದ್ಯಕೀಯ ಉಪಚಾರಕ್ಕಾಗಿ ಒಂದು ತಿಂಗಳು ಪುಣೆಯಲ್ಲಿದ್ದೆನು. ಗುರುಕೃಪೆಯಿಂದ ಭಗವಂತನು ಪುಣೆಯಲ್ಲಿನ ಒಬ್ಬ ಸಾಧಕನ ಮನೆಯಲ್ಲಿ ‘ಚೈತನ್ಯವಾಹಿನಿ’ಯ ಸೇವೆಯನ್ನು ಧ್ವನಿಚಿತ್ರೀಕರಣ ಸಹಿತ ಮಾಡಿಸಿಕೊಂಡನು.

೪. ‘ಚೈತನ್ಯವಾಹಿನಿ’ಯ ಸೇವೆಯನ್ನು ಮಾಡುವಾಗ ಸಾಧಕರಿಗೆ ಸಾಧನೆಯ ವಿಷಯದಲ್ಲಿ ಮಾಡುತ್ತಿದ್ದ ಮಾರ್ಗದರ್ಶನದ ಲೇಖನ ಬರೆದು ಅದನ್ನು ‘ಸನಾತನ ಪ್ರಭಾತ’ದಲ್ಲಿ ಮುದ್ರಿಸಲು ಕಳುಹಿಸುವುದು

‘ಚೈತನ್ಯವಾಹಿನಿ’ಯ ಕಾರ್ಯಕ್ರಮದ ಕೊನೆಯ ಸಮಯದಲ್ಲಿ ಸಾಧಕರಿಗೆ ಸಾಧನೆಯ ವಿಷಯದಲ್ಲಿ ಮಾರ್ಗದರ್ಶನ ಮಾಡಲಾಗುತ್ತಿತ್ತು. ಪ.ಪೂ. ಡಾಕ್ಟರರು ಆ ಮಾರ್ಗದರ್ಶನದ ಲೇಖನ ಮಾಡಿ ಅದನ್ನು ರವಿವಾರ ಕಾರ್ಯಕ್ರಮದ ಪ್ರಕ್ಷೇಪಣೆ ಆಗುವ ಮೊದಲು ಅಂದರೆ, ಶನಿವಾರ ದೈನಿಕ ‘ಸನಾತನ ಪ್ರಭಾತ’ದಲ್ಲಿ ಪ್ರಕಾಶನ ಮಾಡಬೇಕೆಂದು ಸಾಧಕರ ಮೂಲಕ ಸಂದೇಶ ನೀಡಿದ್ದರು. ಆದ್ದರಿಂದ ನಾನು ಆ ವಿಷಯದ ಸಿದ್ಧತೆ ಮಾಡಬೇಕಾಗುತ್ತಿತ್ತು. ಧ್ವನಿಚಿತ್ರೀಕರಣದ ನಡುವೆ ಅಥವಾ ರಾತ್ರಿ ನನಗೆ ಆ ವಿಷಯದ ಸಿದ್ಧತೆ ಮಾಡಿ ಆ ಲೇಖನವನ್ನು ಪೂರ್ಣಗೊಳಿಸಬೇಕಾಗುತ್ತಿತ್ತು. ನಾನು ಮಲಗಿಕೊಂಡೆ ವಿಷಯವನ್ನು ಹೇಳುತ್ತಿದ್ದೆ ಹಾಗೂ ಶ್ರೀ. ಯಜ್ಞೇಶ ಸಾವಂತ ಅದರ ಬೆರಳಚ್ಚು ಮಾಡುತ್ತಿದ್ದರು. ಆ ಲೇಖನವನ್ನು ಗುರುವಾರದ ಒಳಗೆ ಸಂಕಲನ ಮಾಡುವ ಸಾಧಕರಿಗೆ ಕಳುಹಿಸಬೇಕಾಗುತ್ತಿತ್ತು. ಸಂಕಲನಕಾರರು ಅದನ್ನು ಸಂಕಲನ ಮಾಡಿ ಶುಕ್ರವಾರ ಅದನ್ನು ದೈನಿಕ ‘ಸನಾತನ ಪ್ರಭಾತ’ಕ್ಕೆ ಕೊಡುತ್ತಿದ್ದರು ಹಾಗೂ ಶನಿವಾರ ಅದು ಮುದ್ರಣವಾಗುತ್ತಿತ್ತು. ಇದರ ಹೊರತು ಪ್ರಚಾರದದಲ್ಲಿ ನಡೆಯುತ್ತಿದ್ದ ಆಂದೋಲನಗಳ ವಿಷಯದ ಲೇಖನಗಳನ್ನೂ ದೈನಿಕ ‘ಸನಾತನ ಪ್ರಭಾತ’ಕ್ಕೆ ಕಳುಹಿಸಲಾಗುತ್ತಿತ್ತು, ಉದಾ. ಯುಗಾದಿ, ಗುರುಪೂರ್ಣಿಮೆ, ನವರಾತ್ರಿ, ದೀಪಾವಳಿ, ಸ್ವಾತಂತ್ರ್ಯದಿನ, ಗಣರಾಜ್ಯೋತ್ಸವ, ಇತ್ಯಾದಿ. ಹೀಗೆ ಸುಮಾರು ೧೦೦ ಕ್ಕಿಂತಲೂ ಹೆಚ್ಚು ವಿಷಯಗಳ ಧ್ವನಿಚಿತ್ರೀಕರಣ ಮಾಡಿ ಪ್ರಕ್ಷೇಪಣೆ ಮಾಡಲಾಯಿತು. ಅನಂತರ ಧ್ವನಿಚಿತ್ರೀಕರಣದ ಮೂಲಕ ‘ಚೈತನ್ಯವಾಹಿನಿ’ಯ ಸೇವೆಯನ್ನು ನಿಲ್ಲಿಸಿ ವಿ-ಅಂಚೆಯ ಮೂಲಕ ಮಾಹಿತಿಯನ್ನು ತಿಳಿಸಲು ಆರಂಭಿಸಲಾಯಿತು.’

(ಮುಂದುವರಿಯುವುದು)

– ಸದ್ಗುರು ರಾಜೇಂದ್ರ ಶಿಂದೆ, ಸನಾತನ ಆಶ್ರಮ ದೇವದ, ಪನವೇಲ್. (೨೨.೩.೨೦೨೪)