ಬಾಂಗ್ಲಾದೇಶದಲ್ಲಿನ ಹಿಂಸಾಚಾರದಲ್ಲಿ ೧ ಸಾವಿರ ಜನರು ಮೃತಪಟ್ಟಿರುವುದು ಹಾಗೂ ೪೦೦ ಜನರು ಕುರುಡರಾದರು !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಶೇಖ ಹಸೀನಾ ಇವರು ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ ನಂತರ ನಡೆದ ಹಿಂಸಾಚಾರದಲ್ಲಿ ೧ ಸಾವಿರ ಜನರು ಸಾವನ್ನಪ್ಪಿರುವ ಮಾಹಿತಿ ಬಾಂಗ್ಲಾದೇಶದ ಮಧ್ಯಂತರ ಸರಕಾರದ ಆರೋಗ್ಯ ಇಲಾಖೆ ನಿರ್ವಹಿಸುವ ನೂರಾಜಹಾ ಬೇಗಮ್ ಇವರು ನೀಡಿದರು. ಇದಲ್ಲದೆ ಈ ಹಿಂಸಾಚಾರದಿಂದ ೪೦೦ ಜನರು ಅಂಧರಾಗಿದ್ದಾರೆ. ಬೇರೆ ಬೇರೆ ವ್ಯವಸ್ಥೆಯಿಂದ ಸಾವನ್ನಪ್ಪಿರುವ ಜನರ ಸಂಖ್ಯೆ ಬೇರೆ ಬೇರೆ ಅಂಕಿ ಅಂಶ ನೀಡಿದರು. ಪ್ರತಿಯೊಂದು ಸಂಖ್ಯೆಯಲ್ಲಿ ೬೦೦ ರಿಂದ ೧ ಸಾವಿರದಲ್ಲಿ ಇದೆ. ನೂರಜಹಾ ಇವರು, ಈ ಹಿಂಸಾಚಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಕೂಡ ಗುರಿ ಮಾಡಲಾಗಿತ್ತು ಈಗ ಅನೇಕ ಪೊಲೀಸರು ಬಾಂಗ್ಲಾದೇಶದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಅವಾಮಿ ಲೀಗ್ ನ ೨ ಕಾರ್ಯಕರ್ತರ ಗುಂಡಿಕ್ಕಿ ಹತ್ಯೆ

ಆಗ ೨೯ ರಂದು ಚಿತಗಾವದ ಹಾತಝಾರಿ ಉಪಜಿಲ್ಲೆಯಲ್ಲಿ ಮಸೂದ್ ಕೈಸರ್ ಮತ್ತು ಮಹಮ್ಮದ್ ಅನೀಸ್ ಇವರಿಬ್ಬರಿಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಈ ಇಬ್ಬರು ಕೂಡ ಶೇಖ್ ಹಸೀನಾ ಇವರ ಅವಾಮಿ ಲೀಗ್ ಪಕ್ಷದ ಕಾರ್ಯಕರ್ತರಾಗಿದ್ದರು.