ಚೀನಾದಲ್ಲಿರುವ ಸೌರ ಪ್ಯಾನೆಲ್ ಕಾರ್ಖಾನೆಗಳನ್ನು ಬಾಂಗ್ಲಾದೇಶಕ್ಕೆ ಸ್ಥಳಾಂತರಿಸಿ !
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಅವರು ಚೀನಾ ರಾಯಭಾರಿ ಯಾವೊ ವೆನ್ ಅವರನ್ನು ಭೇಟಿಯಾದರು. ಈ ಭೇಟಿಯ ವೇಳೆ ಯೂನಸ್ ಅವರು ‘ಚೀನೀ ತಯಾರಕರು ಬಾಂಗ್ಲಾದೇಶದಲ್ಲಿ ಸೌರ ಪ್ಯಾನೆಲ್ ಕಾರ್ಖಾನೆಗಳನ್ನು ಸ್ಥಳಾಂತರಿಸಬಹುದು, ಇದರಿಂದ ಬಾಂಗ್ಲಾದೇಶವು ತನ್ನ ರಫ್ತುಗಳನ್ನು ವೈವಿಧ್ಯಗೊಳಿಸಲು ಮತ್ತು ಹಸಿರು ಶಕ್ತಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ’ ಎಂದು ಅವರು ಒತ್ತಾಯಿಸಿದರು.
1. ಉಭಯ ದೇಶಗಳ ನಡುವಿನ ಆರ್ಥಿಕ ಸಹಕಾರವನ್ನು ಹೆಚ್ಚಿಸಲು ಚೀನಾ ಬಾಂಗ್ಲಾದೇಶದ ಸರಕುಗಳ ಆಮದನ್ನು ಹೆಚ್ಚಿಸುವ ಅಗತ್ಯವನ್ನು ಯೂನಸ್ ವ್ಯಕ್ತಪಡಿಸಿದರು. ಈ ಭೇಟಿಯ ವೇಳೆ ಯೂನಸ್ ಅವರು ಬೀಜಿಂಗ್ ಮತ್ತು ಢಾಕಾ ನಡುವೆ ನಿಕಟ ಆರ್ಥಿಕ ಸಹಕಾರಕ್ಕಾಗಿ ಕರೆ ನೀಡಿದರು.
2. ಸೌರ ಪ್ಯಾನೆಲ್ ಗಳ ಅತಿದೊಡ್ಡ ಉತ್ಪಾದಕರಾಗಿ ಚೀನಾ ಹೊರಹೊಮ್ಮಿದೆ ಎಂದು ಯೂನಸ್ ಹೇಳಿದರು; ಆದರೆ ನಮ್ಮ ದೇಶವು ರಫ್ತು ಮಾರುಕಟ್ಟೆಯಲ್ಲಿ ನಿರ್ಬಂಧಗಳನ್ನು ಎದುರಿಸುತ್ತಿದೆ. ಸೌರ ಉಷ್ಣ ಶಕ್ತಿಗೆ ಚೀನಾ ವಿಶ್ವದ ಅತಿದೊಡ್ಡ ಮಾರುಕಟ್ಟೆಯಾಗಿದೆ ಎಂದು ಹೇಳಿದರು.
3. ಯೂನಸ್ ನಾಯಕತ್ವದಲ್ಲಿ ಬಾಂಗ್ಲಾದೇಶದ ಭವಿಷ್ಯ ಉಜ್ವಲವಾಗಲಿದೆ ಎಂದು ಚೀನಾ ರಾಯಭಾರಿ ಯಾವೊ ವೆನ್ ಹೇಳಿದರು. ಅಲ್ಲದೆ, ಮ್ಯಾನ್ಮಾರ್ ನ ಹಿಂಸಾತ್ಮಕ ರಾಖೈನ್ ರಾಜ್ಯದಲ್ಲಿ ಕದನ ವಿರಾಮದೊಂದಿಗೆ ರೋಹಿಂಗ್ಯಾ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಚೀನಾ ನಿರ್ಧರಿಸಿದೆ.
4. ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ 10 ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾ ಜನರಿಗೆ ರಾಜಕೀಯ, ಆರ್ಥಿಕ ಮತ್ತು ಮಾನವೀಯ ನೆರವು ನೀಡುವುದನ್ನು ಚೀನಾ ಮುಂದುವರಿಸಲಿದೆ ಎಂದು ಯೂನಸ್ ಭರವಸೆ ವ್ಯಕ್ತಪಡಿಸಿದರು.
ಸಂಪಾದಕೀಯ ನಿಲುವುಬಾಂಗ್ಲಾದೇಶವು ಈಗ ಚೀನಾದ ಕೈಗೊಂಬೆ ಆಗಲಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ಆದ್ದರಿಂದ, ಭವಿಷ್ಯದಲ್ಲಿ ಚೀನಾ ಬಾಂಗ್ಲಾದೇಶದ ಭುಜದ ಮೇಲೆ ಬಂದೂಕನ್ನಿಟ್ಟು ಭಾರತದ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂಬುದಂತೂ ಸ್ಪಷ್ಟವಾಗಿದೆ. ಬಾಂಗ್ಲಾದೇಶದ ಪರಿಸ್ಥಿತಿಯಲ್ಲಿ ಹಸ್ತಕ್ಷೇಪ ಮಾಡದಿದ್ದರ ಪರಿಣಾಮವನ್ನು ಭಾರತವೇ ಅನುಭವಿಸಬೇಕಾಗುತ್ತದೆ ! |