55 ಅಂಗಡಿಗಳಿಗೆ ನೋಟಿಸ್ ಜಾರಿ, 10 ಅಂಗಡಿಗಳ ವಿರುದ್ಧ ಪ್ರಕರಣ ದಾಖಲು
ವಾರಣಾಸಿ (ಉತ್ತರ ಪ್ರದೇಶ) – ಕಾಶಿ ವಿಶ್ವನಾಥ ದೇವಾಲಯದ 2 ಕಿ.ಮೀ. ಪ್ರದೇಶದಲ್ಲಿ ಮಾಂಸ ಮತ್ತು ಮದ್ಯದ ಅಂಗಡಿಗಳನ್ನು ಮುಚ್ಚುವ ಕುರಿತು ಕಾರ್ಯಾಚರಣೆಯಾಗುತ್ತಿದೆ. ಈ ನಿಟ್ಟಿನಲ್ಲಿ, ದೇವಾಲಯ ಸಂಕೀರ್ಣದ 2 ಕಿ.ಮೀ. ಸುತ್ತಮುತ್ತಲಿನ 55 ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ. ಪ್ರಸ್ತುತ, ಈ ಅಂಗಡಿಗಳಲ್ಲಿ 10 ಅಂಗಡಿಗಳ ವಿರುದ್ಧ ವಿವಿಧ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 3 ಪ್ರಕರಣಗಳನ್ನು ದಾಖಲಿಸಲಾಗಿದೆ. ಕಳೆದ ವರ್ಷ, ವಾರಣಾಸಿ ಮಹಾನಗರ ಪಾಲಿಕೆಯು ಕಾಶಿ ವಿಶ್ವನಾಥ ದೇವಾಲಯದ 2 ಕಿ.ಮೀ ವ್ಯಾಪ್ತಿಯೊಳಗಿನ ಎಲ್ಲಾ ಮಾಂಸ ಮತ್ತು ಮದ್ಯದಂಗಡಿಗಳನ್ನು ತೆಗೆದುಹಾಕಲು ನಿರ್ಧರಿಸಿತು.
ಮೇಯರ್ ಅಲೋಕ್ ತಿವಾರಿ ಇವರು, ಈ ಅಂಗಡಿಗಳನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವ ಬಗ್ಗೆ ಅಂಗಡಿಯವರ ಸಭೆಯಲ್ಲಿ ಒಮ್ಮತ ಮೂಡುವ ನಿರೀಕ್ಷೆಯಿದೆ. ನಾವು ಯಾರ ಜೀವನೋಪಾಯವನ್ನೂ ನಿಲ್ಲಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುದೇಶದ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಇಂತಹ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ! |