Varanasi Siddheshwar Mahadev Temple : ವಾರಣಾಸಿಯ ಮುಸ್ಲಿಂ ಬಹುಳ ಪ್ರದೇಶದಲ್ಲಿ ಮುಚ್ಚಲ್ಪಟ್ಟಿದ್ದ 200 ವರ್ಷಗಳಷ್ಟು ಹಳೆಯದಾದ ಸಿದ್ಧೇಶ್ವರ ದೇವಸ್ಥಾನವನ್ನು ಆಡಳಿತ ತೆರೆಯಿತು !

ವಾರಾಣಸಿ (ಉತ್ತರ ಪ್ರದೇಶ) – ನಗರದ ಮುಸ್ಲಿಂ ಬಹುಳ ಮದನಪುರಾ ಪ್ರದೇಶದಲ್ಲಿ ಮುಚ್ಚಲಾಗಿದ್ದ 200 ವರ್ಷಗಳಷ್ಟು ಹಳೆಯದಾದ ಸಿದ್ಧೇಶ್ವರ ದೇವಸ್ಥಾನವನ್ನು ಜಿಲ್ಲಾಡಳಿತವು ತೆರೆದಿದೆ. ಅದರಲ್ಲಿ ಅನೇಕ ಶಿವಲಿಂಗಗಳು ದೊರೆತಿವೆ. ಬರುವ ಜನವರಿ 15 ರ ನಂತರ ಈ ದೇವಸ್ಥಾನದಲ್ಲಿ ಪೂಜೆ ಆರಂಭವಾಗಲಿದೆ.

1. ಮದನಪುರಾ ಪ್ರದೇಶವು ಮುಸ್ಲಿಂ ಬಹುಳ ಪ್ರದೇಶವಾಗಿರುವುದರಿಂದ ಅನೇಕ ಹಿಂದೂ ಸಂಘಟನೆಗಳು ದೇವಸ್ಥಾನವನ್ನು ತಕ್ಷಣ ತೆರೆಯಬೇಕೆಂದು ಒತ್ತಾಯಿಸಿದ್ದವು. ಇದಕ್ಕೆ ಆಡಳಿತವು ದೇವಸ್ಥಾನವನ್ನು ಪರಿಶೀಲಿಸಿ ದೇವಸ್ಥಾನದ ಬೀಗವನ್ನು ತೆರೆಯಿತು. ಈ ದೇವಸ್ಥಾನವು ಸುಮಾರು 200 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ಪುರಾತತ್ವ ಇಲಾಖೆಯೂ ಈ ದೇವಸ್ಥಾನ ಮಧ್ಯಕಾಲೀನ ಕಾಲದ್ದು ಎಂದು ಪರಿಗಣಿಸಿದೆ.

2. ಬನಾರಸ ಹಿಂದೂ ವಿಶ್ವವಿದ್ಯಾಲಯದ ಪುರಾತತ್ವ ವಿಭಾಗದ ಪ್ರಾಧ್ಯಾಪಕರಾದ ಅಶೋಕ ಸಿಂಹ ರವರು ಮಾತನಾಡಿ, “ಈ ದೇವಸ್ಥಾನವನ್ನು ನೋಡಿದಾಗ, ಇದು ತುಂಬಾ ಹಳೆಯದು ಮತ್ತು ಮಧ್ಯಯುಗದ ಭಾರತದ್ದು ಎಂಬುದು ಗಮನಕ್ಕೆ ಬರುತ್ತದೆ. ಇದು ನಾಗರ ಶೈಲಿಯ ದೇವಸ್ಥಾನವಾಗಿದೆ. ಇಲ್ಲಿರುವ ಮುಖ್ಯ ಶಿವಲಿಂಗವು ಕಾಣೆಯಾಗಿದೆ; ಆದರೆ ಅಲ್ಲಿರುವ ಅನೇಕ ಶಿವಲಿಂಗಗಳಲ್ಲಿ ಒಂದು ಹಳೆಯದಾಗಿದ್ದು, ಮಧ್ಯಯುಗದ ಕಾಲದ್ದಾಗಿ ಕಂಡು ಬರುತ್ತದೆ. ಈ ದೇವಸ್ಥಾನ ಜನರಿಗಾಗಿ ತೆರೆದಾಗ, ನಾವು ಅದನ್ನು ನೋಡಲು ಹೋಗುತ್ತೇವೆ ಮತ್ತು ಅನಂತರ ನಮ್ಮ ತಂಡವು ದೇವಸ್ಥಾನದ ಸಮೀಕ್ಷೆಯನ್ನು ನಡೆಸುವುದು. ನಾವು ಈ ದೇವಸ್ಥಾನವು ಎಷ್ಟು ಹಳೆಯದಾಗಿದೆ ಎಂಬುದರ ಅಧ್ಯಯನ ಮಾಡುತ್ತೇವೆ.” ಎಂದು ಹೇಳಿದರು.