ಪಾಲಘರನಲ್ಲಿ ವಿಶ್ವ ಹಿಂದೂ ಪರಿಷತ್‌ನಿಂದ ಶ್ಲಾಘನೀಯ ಪ್ರಯತ್ನ!
(ಘರವಾಪಸಿ ಎಂದರೆ ಹಿಂದೂ ಧರ್ಮಕ್ಕೆ ಮರುಪ್ರವೇಶ)
ಪಾಲಘರ – ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಒಟ್ಟು 50 ಕುಟುಂಬಗಳನ್ನು ಹಿಂದೂ ಧರ್ಮಕ್ಕೆ ಘರವಾಪಸಿ ಮಾಡಲಾಯಿತು. ಇದಕ್ಕೆ ವಿಶ್ವ ಹಿಂದೂ ಪರಿಷತ್ತು ಸಹಾಯ ಮಾಡಿದೆ. ಇದರಲ್ಲಿ ಒಟ್ಟು 38 ಮಹಿಳೆಯರು ಮತ್ತು 12 ಪುರುಷರು ಸೇರಿದ್ದಾರೆ. ಅದಾದ ನಂತರ, ಅವರನ್ನು ಮಹಾರಾಷ್ಟ್ರದ ಆರಾಧ್ಯ ದೇವತೆ ಶ್ರೀ ವಿಠ್ಠಲನ ದೇವಸ್ಥಾನಕ್ಕೆ ದರ್ಶನಕ್ಕಾಗಿ ಕರೆದೊಯ್ಯಲಾಯಿತು. ಈ ಪೈಕಿ ವಿಕ್ರಮಗಡ ತಾಲೂಕಿನ 17 ಜನರು ಹಿಂದೂ ಧರ್ಮಕ್ಕೆ ಘರವಾಪಸಿ ಆದರು. ಇದರಲ್ಲಿ 5 ಕುಟುಂಬಗಳು ಸೇರಿವೆ ಎಂದು ಪಾಲಘರ ಜಿಲ್ಲೆಯ ನರೇಶ್ ಮರಾಡ್ ಇವರು ಮಾಹಿತಿ ನೀಡಿದ್ದಾರೆ. ಮತಾಂತರದ ಆಮಿಷಕ್ಕೆ ಒಳಗಾದ ಹಿಂದೂಗಳನ್ನು ಪಾಲಘರನಲ್ಲಿರುವ ವಿಠ್ಠಲ ದೇವಾಲಯ ಸಮಿತಿಯು ಸನ್ಮಾನಿಸಿ ಸ್ವಾಗತಿಸಿತು.