ಕಟ್ಟಡ ಕಾಮಗಾರಿಯನ್ನು ನೀಷೇಧಿಸುತ್ತಾ ಹಸ್ತಪ್ಷೇಪ ಮಾಡಿದ ಮದ್ರಾಸ್ ಹೈಕೋರ್ಟ್
ಚೆನ್ನೈ (ತಮಿಳುನಾಡು) – ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ದೇವಾಲಯದ ಹೆಚ್ಚುವರಿ ನಿಧಿಯನ್ನು ಬಳಸಿಕೊಂಡು ‘ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ’ಯು ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸುವುದನ್ನು ನಿಷೇಧಿಸಿದೆ. ಈ ವಾಣಿಜ್ಯ ಸಂಕೀರ್ಣವನ್ನು ಅರುಳಮಿಘು ನಂದೀಶ್ವರಂ ತಿರುಕೋಯಿಲ್ ದೇವಸ್ಥಾನದ ಭೂಮಿಯಲ್ಲಿ ದೇವಸ್ಥಾನದ ಹಣದಿಂದ ನಿರ್ಮಿಸಲಾಗುತ್ತಿತ್ತು. ನ್ಯಾಯಾಲಯವು, ದೇವಾಲಯಗಳನ್ನು ಸಾಧ್ಯವಾದಷ್ಟು ಮೊಕದ್ದಮೆಗಳಿಂದ ದೂರವಿಡಬೇಕು ಎಂದೂ ಸಹ ಹೇಳಿದೆ.
ದೇವಾಲಯದ ನಿಧಿಯನ್ನು ದೇವಾಲಯಕ್ಕೆ ಮಾತ್ರ ಬಳಸಬೇಕು !
ಉಚ್ಚ ನ್ಯಾಯಾಲಯವು, ಒಂದು ವೇಳೆ ವಾಣಿಜ್ಯ ಸಂಕೀರ್ಣಗಳಿಗೆ ಅವಕಾಶ ನೀಡಿದರೆ, ಹೂಡಿಕೆಯ ಮೇಲಿನ ಲಾಭ, ಪರವಾನಗಿದಾರರು/ಬಾಡಿಗೆದಾರರನ್ನು ಹೊರಹಾಕುವುದು, ಬಾಡಿಗೆ ಬಾಕಿ ವಸೂಲಿ ಮತ್ತು ಅತಿಕ್ರಮಣ ತಡೆಗಟ್ಟುವಿಕೆಗೆ ಸಂಬಂಧಿಸಿದಂತೆ ತೊಡಕುಗಳು ಉಂಟಾಗಬಹುದು. ಅಲ್ಲದೆ, ‘ಮಾನವ ಸಂಪನ್ಮೂಲ ಮತ್ತು ನೈರ್ಮಲ್ಯ ಕಾಯ್ದೆ’ಯ ಪ್ರಕಾರ, ದೇವಾಲಯದ ಹೆಚ್ಚುವರಿ ಹಣವನ್ನು ಸೆಕ್ಷನ್ ’66(1)’ ಅಥವಾ ಸೆಕ್ಷನ್ ’36A’ ಅಥವಾ ‘ಸೆಕ್ಷನ್ 36B’ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಉದ್ದೇಶಗಳಿಗಾಗಿ ಮಾತ್ರ ಬಳಸಬಹುದಾಗಿದೆ ಮತ್ತು ಬೇರೆ ಯಾವುದೇ ಉದ್ದೇಶಕ್ಕಾಗಿ ಬಳಸುವಂತಿಲ್ಲ. ವಾಣಿಜ್ಯ ಸಂಕೀರ್ಣ ನಿರ್ಮಾಣವು ಯಾವುದೇ ವರ್ಗಕ್ಕೆ ಸೇರುವುದಿಲ್ಲ. ಆದ್ದರಿಂದ, ಈ ನಿರ್ಧಾರವನ್ನು ಪಕ್ಕಕ್ಕೆ ಇಡಬೇಕು ಎಂದು ಹೇಳಿದೆ.
ವಾಣಿಜ್ಯ ಸಂಕೀರ್ಣ ನಿರ್ಮಾಣದ ಒಂದು ಭಾಗವನ್ನು ಬಡವರಿಗೆ ಮದುವೆಗೆ ಲಭ್ಯವಾಗುವಂತೆ ಮಾಡಬೇಕು ! – ನ್ಯಾಯಾಲಯದ ಆದೇಶ
ವಾಣಿಜ್ಯ ಸಂಕೀರ್ಣದ ನಿರ್ಮಾಣದ ಒಂದು ಭಾಗ ಈಗಾಗಲೇ ಪೂರ್ಣಗೊಂಡಿದ್ದು, ಅದನ್ನು ಬಳಸದೆ ವ್ಯರ್ಥವಾಗಬಹುದು. ಆದ್ದರಿಂದ, ಇಲ್ಲಿಯವರೆಗೆ ಮಾಡಲಾದ ನಿರ್ಮಾಣ ಕಾರ್ಯಗಳನ್ನು ಬಡವರಿಗೆ ಆಹಾರವನ್ನು ಒದಗಿಸಲು ಬಳಸಬಹುದು. ಈ ಕಟ್ಟಡವನ್ನು ಬಡ ಮತ್ತು ನಿರ್ಗತಿಕ ಹಿಂದೂಗಳ ವಿವಾಹಗಳನ್ನು ನಡೆಸಲು ಸಹ ಬಳಸಬಹುದು’, ಎಂದು ನ್ಯಾಯಾಲಯವು ಆದೇಶ ನೀಡಿದೆ.
🙏 Madras High Court’s verdict: 🚫
Surplus funds of Arulmighu Nandeeswaram Thirukoil can’t be used for commercial complexes! 🏢
– Temple funds must be used only for temple purposes. 🕉️
– Existing complex to be used for poor people’s weddings, promoting social welfare.… pic.twitter.com/a1ZCO1FU2h
— Sanatan Prabhat (@SanatanPrabhat) January 11, 2025
ಸಂಪಾದಕೀಯ ನಿಲುವುತಮಿಳುನಾಡಿನಲ್ಲಿ ಹೆಚ್ಚಿನ ದೇವಾಲಯಗಳನ್ನು ಸರಕಾರಿಣಗೊಳಿಸಿರುವುದರಿಂದ, ದೇವಾಲಯದ ಹಣವನ್ನು ಸರಕಾರದ ಇಚ್ಛೆಯಂತೆ ಬಳಸಲಾಗುತ್ತಿದೆ. ದೇವಾಲಯಗಳ ಸರಕಾರಿಕರಣವನ್ನು ರದ್ದು ಪಡಿಸುವ ತನಕ ಇಂತಹ ಘಟನೆಗಳು ನಿಲ್ಲುವುದಿಲ್ಲ! |