ಬೆಂಗಳೂರಿನ ‘ಜಿ.ಟಿ. ಮಾಲ್’ನಲ್ಲಿ ಪಂಚೆ ಉಟ್ಟು ಬಂದ ಒಬ್ಬ ವೃದ್ಧ ವ್ಯಕ್ತಿಗೆ ಪ್ರವೇಶ ನಿರಾಕರಿಸಲಾಯಿತು, ಉಡುಪು ನಮ್ಮ ಸಂಸ್ಕೃತಿಯ ಅವಿಭಾಜ್ಯ ಘಟಕವಾಗಿದೆ ! ಸಾತ್ತ್ವಿಕ ಉಡುಪಿನಿಂದ ನಮ್ಮ ಸಂಸ್ಕೃತಿ, ಪರಂಪರೆ ಉಳಿಯುವುದರೊಂದಿಗೆ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಸ್ವಾಸ್ಥ್ಯವನ್ನು ಉತ್ತಮವಾಗಿಡಲು ಸಹಾಯವಾಗುತ್ತದೆ ಇತ್ತೀಚೆಗೆ ಬೆಂಗಳೂರಿನ ‘ಜಿ.ಟಿ. ಮಾಲ್’ನಲ್ಲಿ ಪಂಚೆ ಧರಿಸಿ ಬಂದ ಒಬ್ಬ ವೃದ್ಧ ವ್ಯಕ್ತಿಗೆ ಪ್ರವೇಶ ನಿರಾಕರಿಸಿದ ವಿಡಿಯೋ ಪ್ರಸಾರವಾಯಿತು. ಅವರಲ್ಲಿ ಚಲನಚಿತ್ರದ ಮುಂಗಡ ಟಿಕೇಟ್ ಇದ್ದರೂ ಆ ವೃದ್ಧ ಮತ್ತು ಅವರ ಮಗನೊಂದಿಗೆ ಪ್ರವೇಶದ್ವಾರದಲ್ಲಿನ ಕಾವಲುಗಾರ ವಿವಾದ ಮಾಡುತ್ತಾ ಅವರಿಗೆ ಒಳಗೆ ಹೋಗಲು ಬಿಡಲಿಲ್ಲ. ಫಕೀರಪ್ಪಾ ಎಂಬ ಈ ವೃದ್ಧ ರೈತರಿಗೆ ‘ಶರ್ಟ್-ಪ್ಯಾಂಟ್’ ಧರಿಸಿ ಬಂದರೆ ಮಾತ್ರ ‘ಮಾಲ್’ನಲ್ಲಿ ಪ್ರವೇಶ ನೀಡಲಾಗುವುದು’, ಎಂದು ಅವನು ಹೇಳಿದನು.
ಪದೇಪದೇ ವಿನಂತಿ ಮಾಡಿ, ‘ಇದು ನಮ್ಮ ಪಾರಂಪರಿಕ ಉಡುಪು’, ಎಂದು ಎಷ್ಟು ಹೇಳಿದರೂ, ಆ ಕಾವಲುಗಾರ ಮತ್ತು ‘ಮಾಲ್’ನ ವ್ಯವಸ್ಥಾಪನೆ ತಮ್ಮ ನಿರ್ಧಾರವನ್ನು ಬದಲಿಸಲಿಲ್ಲ. ಭಾರತದ ಪರಂಪರೆಯ ಅವಮಾನ ಹಾಗೂ ವೃದ್ಧ ವ್ಯಕ್ತಿಗಾದ ಅನಾದರದ ಬಗ್ಗೆ ಸಮಾಜದಿಂದ ತೀವ್ರ ವಿರೋಧವಾಯಿತು. ಮರುದಿನ ಪಂಚೆ ಮತ್ತು ಮುಂಡಾಸು ಕಟ್ಟಿಕೊಂಡು ಆಂದೋಲನಕರ್ತರು ‘ಮಾಲ್’ನ ಒಳಗೆ ನುಗ್ಗಿ ವ್ಯವಸ್ಥಾಪನೆಯ ವಿರುದ್ಧ ಘೋಷಣೆ ನೀಡಿ ಕಾರ್ಮಿಕರ ವಿರುದ್ಧ ಕ್ರಮ ಕೈಕೊಳ್ಳಬೇಕೆಂದು ಒತ್ತಾಯಿಸಿದರು. ಅನಂತರ ‘ಮಾಲ್’ನ ವ್ಯವಸ್ಥಾಪನೆಯವರು ಫಕೀರಪ್ಪಾ ಇವರನ್ನು ‘ಮಾಲ್’ಗೆ ಕರೆದು ಸನ್ಮಾನ ಮಾಡಿದರು. ಮಾಲ್‌ನ ವ್ಯವಸ್ಥಾಪನೆ ಮತ್ತು ಕಾವಲುಗಾರನು ಫಕೀರಪ್ಪಾ ಇವರಲ್ಲಿ ಕ್ಷಮಾಯಾಚಿಸುವಂತೆ ಮಾಡಿದರು. ವಿಧಾನಸಭೆಯಲ್ಲಿ ಈ ವಿಷಯ ಬಂದಾಗ ರಾಜ್ಯದ ನಗರವಿಕಾಸ ಮಂತ್ರಿ ಮತ್ತು ನಗರ ನಿಯೋಜನ ಮಂತ್ರಿ ಬಿರಾಥೀ ಸುರೇಶ ಇವರು ಸರಕಾರದ ವತಿಯಿಂದ ಈ ಘಟನೆಯನ್ನು ನಿಷೇಧಿಸುತ್ತಾ ‘೭ ದಿನ ‘ಮಾಲ್’ ಮುಚ್ಚಿಡಬೇಕೆಂದು ಆದೇಶ ಹೊರಡಿಸಿದರು’, ಹಾಗೂ ಈ ‘ಮಾಲ್’ ೨೦೨೩-೨೪ ರ ಆರ್ಥಿಕ ವರ್ಷದ ೧ ಕೋಟಿ ರೂಪಾಯಿಗಿಂತಲೂ ಹೆಚ್ಚು ಆಸ್ತಿ ತೆರಿಗೆ ಬಾಕಿ ಇಟ್ಟಿರುವುದರಿಂದ ಅದರ ವಿರುದ್ಧ ಪ್ರತ್ಯೇಕ ಕ್ರಮ ತೆಗೆದುಕೊಳ್ಳಲಾಯಿತು. ಸಂಕ್ಷಿಪ್ತದಲ್ಲಿ ಹೇಳುವುದಾದರೆ, ಉಡುಪಿನ ತಿರಸ್ಕಾರವು ‘ಮಾಲ್’ ವ್ಯವಸ್ಥಾಪನೆಗೆ ದುಬಾರಿ ಆಯಿತು ಹಾಗೂ ಅವರಿಗೆ ಚೆನ್ನಾಗಿ ಪಾಠ ಕಲಿಸಲಾಯಿತು !
ದೇಶದ ಪಾರಂಪರಿಕ ಉಡುಪನ್ನು ಧರಿಸುವ ಹಿರಿಯ ವ್ಯಕ್ತಿಯೊಂದಿಗೆ ತನ್ನದೇ ದೇಶದಲ್ಲಿ ಹೀಗೆ ವರ್ತಿಸುವುದೆಂದರೆ, ದೇಶದ ಸಾಂಸ್ಕೃತಿಕ ಅವನತಿಯ ಸಂಕೇತವಾಗಿದೆ. ಈ ಪ್ರಸಂಗದಿಂದ ನಗರಗಳ ಭಾರತೀಯರು ಅಂತರ್ಮುಖರಾಗುವ ಅವಶ್ಯಕತೆಯಿದೆ. ಅವರಿಗೆ ತಮ್ಮದೇ ದೇಶದಲ್ಲಿ ತಮ್ಮದೇ ಸಂಸ್ಕೃತಿ ಹಾಗೂ ವೃದ್ಧರ ಮೇಲಿನ ಅನ್ಯಾಯದ ವಿರುದ್ಧ ಸಾಮಾಜಿಕ ಮಾಧ್ಯಮಗಳ ಮೂಲಕ ಹೋರಾಡಬೇಕಾಯಿತು, ಆಗ ಸಂಸ್ಕೃತಿಯ ಮೇಲಿನ ಆಘಾತವನ್ನು ಎತ್ತಿ ಹಿಡಿಯಲಾಯಿತು ಹಾಗೂ ನ್ಯಾಯ ಸಿಕ್ಕಿತು ! ಹಿಂದುತ್ವನಿಷ್ಠ ಸಂಘಟನೆಗಳು ಮಂದಿರಗಳಲ್ಲಿ ವಸ್ತ್ರಸಂಹಿತೆಯಿರಬೇಕೆಂಬ ವಿಷಯ ತೆಗೆದಾಗ ಅದನ್ನು ಅನ್ವಯಿಸುವುದು ಸುಲಭವಿರಲಿಲ್ಲ. ಊರ್ಜೆಯ ಮೂಲ ಆದ ಮಂದಿರಗಳಿಗೂ ವಿರೋಧವನ್ನು ಎದುರಿಸಬೇಕಾಯಿತು; ಆದರೆ ಹಿಂದೂ ಮತ್ತು ಸಂಘಟಿತ ಮಂದಿರ ಸಮಿತಿಗಳಿಂದಾಗಿ ಅನೇಕ ಮಂದಿರಗಳಲ್ಲಿ ವಸ್ತ್ರಸಂಹಿತೆ ಅನ್ವಯವಾಯಿತು. ಭಾರತೀಯ ಪಾರಂಪರಿಕ ಉಡುಪುಗಳ ಸನ್ಮಾನಪೂರ್ವಕ ಪುನರುಜ್ಜೀವನಕ್ಕೆ ‘ಹಿಂದೂ ರಾಷ್ಟ್ರ’ವೇ ಬರಬೇಕು !
– ಸೌ. ಸ್ನೇಹಾ ತಾಮ್ಹನ್ಕರ್, ರತ್ನಾಗಿರಿ