‘ಪೂ. ದಾತೆ ಅಜ್ಜಿಯವರ (ಪೂ. ನಿರ್ಮಲಾ ದಾತೆ,ವಯಸ್ಸು ೯೧ ವರ್ಷ, ಸನಾತನದ ೪೮ ನೇ ಸಂತರು) ಗಂಭೀರ ಅನಾರೋಗ್ಯದಲ್ಲಿಯೂ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದ ನಮಗೆ ಅತ್ಯಂತ ಅದ್ಭುತ ಮತ್ತು ಅಮೂಲ್ಯ ಸೂಕ್ಷ್ಮ ಜಗತ್ತು ಅನುಭವಿಸಲು ಸಿಗುತ್ತಿದೆ. ನಮ್ಮಲ್ಲಿ ಅರ್ಹತೆಯಿಲ್ಲದಿರುವಾಗಲೂ ಗುರುಗಳು ನಮ್ಮಿಂದ ಸೂಕ್ಷ್ಮ ಪ್ರಯೋಗ ಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಆ ವಿಷಯದಲ್ಲಿನ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
೧. ಪೂ. ದಾತೆ ಅಜ್ಜಿಯವರ ಮೆದುಳಿನ ರಕ್ತ ಪ್ರವಾಹದಲ್ಲಿ ರಕ್ತ ಹೆಪ್ಪುಗಟ್ಟಿ ಪ್ರಜ್ಞೆ ಕಳೆದುಕೊಳ್ಳುವುದು
೪.೫.೨೦೨೪ ರಂದು ಪೂ. ದಾತೆ ಅಜ್ಜಿಯವರ ಮೆದುಳಿನ ರಕ್ತ ಪ್ರವಾಹದಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಅವರು ತಮ್ಮ ಮಾತನಾಡುವ ಶಕ್ತಿಯನ್ನು ಕಳೆದುಕೊಂಡರು. ಅನಂತರ ಕ್ರಮೇಣ ಅವರ ಬಲಗೈ ಮತ್ತು ಬಲಗಾಲಿನ ಶಕ್ತಿ ಕಡಿಮೆಯಾಯಿತು. ಇದರಿಂದ ಅವರಿಗೆ ನಡೆಯಲು ಆಗುತ್ತಿರಲಿಲ್ಲ. ಹಾಗೆಯೇ ಅವರಿಗೆ ಬಲಗೈಯಿಂದ ಏನನ್ನೂ ಎತ್ತಲು ಸಾಧ್ಯವಾಗುತ್ತಿರಲಿಲ್ಲ. ಅವರ ಎಂ.ಆರ್.ಐ. ಪರೀಕ್ಷೆಯನ್ನು ಮಾಡಿ (ಇದು ರೋಗಗಳನ್ನು ಪತ್ತೆ ಹಚ್ಚಲು ದೇಹದ ಆಂತರಿಕ ಭಾಗಗಳ ಛಾಯಾಚಿತ್ರಗಳನ್ನು ತೆಗೆದುಕೊಳ್ಳುವ ತಂತ್ರಜ್ಞಾನವಾಗಿದೆ) ಚಿಕಿತ್ಸೆಯನ್ನು ಪ್ರಾರಂಭಿಸ ಲಾಯಿತು. ಒಂದು ತಿಂಗಳಿನ ಬಳಿಕ ಅವರಲ್ಲಿ ಅತ್ಯಂತ ನಿಧಾನವಾಗಿ ಸ್ವಲ್ಪ ಸುಧಾರಣೆಯಾಗಲು ಪ್ರಾರಂಭವಾಯಿತು. ಆದರೆ ೭.೬.೨೦೨೪ ರಿಂದ ಮತ್ತೆ ತೊಂದರೆಯಾಗಿ ಅವರಿಗೆ ಏನೂ ತಿಳಿಯುತ್ತಿರಲಿಲ್ಲ. ಅವರು ಒಂದು ರೀತಿಯಲ್ಲಿ ಪ್ರಜ್ಞೆಯನ್ನು ಕಳೆದುಕೊಂಡರು. ೮.೬.೨೦೨೪ ರಿಂದ, ಅವರಿಗೆ ಮೂಗಿನಲ್ಲಿ ಹಾಕಿದ ಕೊಳವೆಯ (ಟೂಬ್) ಮೂಲಕ ದ್ರವಪದಾರ್ಥಗಳನ್ನು ನೀಡಲು ಪ್ರಾರಂಭಿಸಲಾಯಿತು. ಕೆಲವೊಮ್ಮೆ ಅವರ ಹೃದಯ ಬಡಿತ (ಪಲ್ಸ ರೇಟ) ಹೆಚ್ಚಾಗುತ್ತಿತ್ತು. ಹಾಗೆಯೇ ಆಮ್ಲಜನಕದ ಮಟ್ಟವು ಕಡಿಮೆಯಾಗುತ್ತಿತ್ತು. ಅದನ್ನು ಅನುಸರಿಸಿ ಆಧುನಿಕ ವೈದ್ಯರು ಚಿಕಿತ್ಸೆ ನೀಡಿದರು.
೨. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮತ್ತು ಸಾಧಕರು ಮಾಡಿದ ನಾಮಜಪಾದಿ ಉಪಾಯಗಳು ಮತ್ತು ಅದರ ಪರಿಣಾಮ.
೭.೬.೨೦೨೪ ರಂದು ರಾತ್ರಿಯಿಂದಲೇ ಪ.ಪೂ. ಡಾಕ್ಟರರು ಸ್ವತಃ ಪೂ. ಅಜ್ಜಿಯವರಿಗಾಗಿ ನಾಮಜಪಾದಿ ಉಪಾಯಗಳನ್ನು ಮಾಡಲು ಪ್ರಾರಂಭಿಸಿದರು. ಅವರು ಮಾಡಿದ ನಾಮಜಪಾದಿ ಉಪಾಯ, ಪ್ರಯೋಗ, ಮುದ್ರೆಗಳು ಮತ್ತು ನಾಮಜಪಗಳಿಂದ ನಮಗೆ ಅನೇಕ ವಿಷಯಗಳು ಕಲಿಯಲು ಸಿಕ್ಕಿದವು. ಪ್ರಾರಂಭದಲ್ಲಿ ಗುರುದೇವರು ಸ್ವತಃ ನಾಮಜಪಾದಿ ಉಪಾಯವನ್ನು ಮಾಡಿದರು. ತದನಂತರ ಅವರು ನಮಗೂ ನಾಮಜಪಾದಿ ಉಪಾಯಗಳನ್ನು ಮಾಡಲು ಹೇಳಿದರು. ಅದಕ್ಕನುಸಾರವಾಗಿ ಆಧುನಿಕ ವೈದ್ಯರಾದ ನರೇಂದ್ರ ದಾತೆ (ಆಧ್ಯಾತ್ಮಿಕ ಮಟ್ಟ ಶೇ. ೬೬), ಸೌ. ಜ್ಯೋತಿ ನರೇಂದ್ರ ದಾತೆ (ಆಧ್ಯಾತ್ಮಿಕ ಮಟ್ಟ ಶೇ. ೬೫) ಶ್ರೀ. ನಿರಂಜನ ದಾತೆ ಮತ್ತು ಸೌ. ನೇಹಾ ನಿರಂಜನ ದಾತೆಯವರು ಸರತಿಯಲ್ಲಿ ನಾಮಜಪಾದಿ ಉಪಾಯಗಳನ್ನು ಮಾಡಿದರು. ಅದರ ಮಾಹಿತಿಯನ್ನು ಕೋಷ್ಟಕದಲ್ಲಿ (೧೧ನೇ ಪುಟದಲ್ಲಿ) ನೀಡಲಾಗಿದೆ.
೩. ನಾಮಜಪಾದಿ ಉಪಾಯಗಳಿಂದ ತೊಂದರೆಗಳು ದೂರವಾಗುವುದು
ಪೂ. ಅಜ್ಜಿಗಾಗಿ ನಾಮಜಪಾದಿ ಉಪಾಯಗಳನ್ನು ಮಾಡುತ್ತಿರುವಾಗ ಪ.ಪೂ. ಡಾಕ್ಟರರು, ”ಅಡಚಣೆಗಳು ಎಲ್ಲಿವೆ ? ಅವುಗಳಿಗನುಸಾರ ಉಪಾಯವನ್ನು ಕಂಡುಹಿಡಿಯುವುದು ಆವಶ್ಯಕವಾಗಿದೆ. ಉಪಾಯಗಳನ್ನು ಮಾಡುವುದರಿಂದ ಆ ಅಡಚಣೆಗಳು ದೂರವಾಗುತ್ತವೆ”, ಎಂದು ಹೇಳುವುದು.
೪. ಸಚ್ಚಿದಾನಂದ ಪರಬ್ರಹ್ಮ ಡಾ.ಆಠವಲೆಯವರು ಸಾಧಕರಿಗೆ ಹೇಳಿದ ಪ್ರಯೋಗಗಳು ಮತ್ತು ಸಾಧಕರಿಗೆ ಅರಿವಾದ ಅಂಶಗಳು
ಪ.ಪೂ. ಡಾಕ್ಟರರು ನಮ್ಮಿಂದ ಒಂದು ಪ್ರಯೋಗವನ್ನು ಮಾಡಿಸಿಕೊಂಡರು. ಅವರು ನಮಗೆ ಪೂ. ಅಜ್ಜಿಯವರ ಎಡಗೈ ಮೇಲೆ ಕೆಳಗಿನಿಂದ ಮೇಲೆ ಮತ್ತು ಮೇಲಿನಿಂದ ಕೆಳಗೆ ನಮ್ಮ ಕೈಯನ್ನು ತೆಗೆದುಕೊಂಡು ಮಾಡಲು ಹೇಳಿದರು. ಆ ಸಮಯದಲ್ಲಿ ನಮಗೆ ಗಮನಕ್ಕೆ ಬಂದ ಅಂಶಗಳನ್ನು ಮುಂದಿನ ಕೋಷ್ಟಕದಲ್ಲಿ ನೀಡಲಾಗಿದೆ.
– ಸೌ. ಜ್ಯೋತಿ ದಾತೆ (ಪೂ. ಅಜ್ಜಿಯವರ ಸೊಸೆ, ಆಧ್ಯಾತ್ಮಿಕ ಮಟ್ಟ ಶೇ. ೬೫, ವಯಸ್ಸು ೬೦ ವರ್ಷ), ಪುಣೆ (೧೨.೬.೨೦೨೪)
ಪ್ರಾಣಶಕ್ತಿವಹನ ಉಪಾಯ ಪದ್ಧತಿಯ ಲಾಭ ಪಡೆಯಿರಿಪರಾತ್ಪರ ಗುರು ಡಾ. ಆಠವಲೆಯವರು ‘ಮುಂಬರುವ ಘೋರ ಆಪತ್ಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಕಷ್ಟವಾಗಲಿದೆ’ ಎನ್ನುವುದನ್ನು ಅರಿತುಕೊಂಡು ಮನುಷ್ಯನಿಗೆ ರೋಗಗಳನ್ನು ದೂರ ಮಾಡಲು ಪ್ರಾಣಶಕ್ತಿ ವಹನದ ಮೂಲಕ ತೊಂದರೆಗಳನ್ನು ಕಂಡು ಹಿಡಿಯುವುದು ಮತ್ತು ಕೈ ಬೆರಳುಗಳ ಮುದ್ರೆ ಮತ್ತು ನಾಮಜಪವನ್ನು ಮಾಡುವುದು ಇದನ್ನು ಕಲಿಸುವ ಉಪಾಯಪದ್ಧತಿಯನ್ನು ಕಂಡು ಹಿಡಿದಿದ್ದಾರೆ. ಈ ಉಪಾಯ ಪದ್ಧತಿಯ ಮೂಲಕ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯು ಯಾರ ಸಹಾಯವಿಲ್ಲದೇ ತನ್ನ ಕಾಯಿಲೆಯನ್ನು ತಾನೇ ದೂರಗೊಳಿಸಲು ಪ್ರಯತ್ನಿಸಬಹುದು ಅಥವಾ ಉನ್ನತ ಸಾಧಕರು ಇತರ ಅನಾರೋಗ್ಯ ವ್ಯಕ್ತಿಗಾಗಿ ಈ ಉಪಾಯ ಪದ್ಧತಿಯ ಮೂಲಕ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯನ್ನು ಗುಣಪಡಿಸಲು ಪ್ರಯತ್ನಿಸಬಹುದು. ಸನಾತನದ ೪೮ ನೇ ಸಂತ ಪೂ. (ಶ್ರೀಮತಿ) ನಿರ್ಮಲಾ ದಾತೆ (ವಯಸ್ಸು ೯೧ ವರ್ಷ) ಅವರು ಪ್ರಸ್ತುತ ತೀವ್ರ ಅನಾರೋಗ್ಯಪೀಡಿತರಾಗಿದ್ದು (ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿದ್ದು) ಅವರು ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ಇದ್ದಾರೆ. ಅವರ ಈ ಗಂಭೀರ ಕಾಯಿಲೆಯಲ್ಲಿ ಆಧುನಿಕ ವೈದ್ಯರು ಅವರ ಮೇಲೆ ಔಷಧೋಪಚಾರ ಮಾಡುತ್ತಿದ್ದಾರೆ. ಇದರೊಂದಿಗೆ ತಮ್ಮ ಸ್ವಂತ ಪ್ರಾಣಶಕ್ತಿ ಅತ್ಯಲ್ಪವಿರುವಾಗಲೂ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪೂ. ಅಜ್ಜಿಯವರಿಗಾಗಿ ನಾಮಜಪಾದಿ ಉಪಾಯಗಳನ್ನು ಮಾಡಿದರು. ಹಾಗೆಯೇ ಇತರ ಸಾಧಕರಿಗೆ ನಾಮಜಪಾದಿ ಉಪಾಯಗಳನ್ನು ಹೇಳಿ, ಅವರಿಂದಲೂ ಉಪಾಯ ಮತ್ತು ಕೆಲವು ಪ್ರಯೋಗಗಳನ್ನೂ ಮಾಡಿಸಿಕೊಂಡರು. ಉಪಾಯಪದ್ಧತಿಯಿಂದ ಯಾವ ಬದಲಾವಣೆಯ ಅರಿವಾಗುತ್ತದೆ ? ಎನ್ನುವುದನ್ನೂ ಅಧ್ಯಯನ ಮಾಡಿದರು. ಈ ಪ್ರಯೋಗದಿಂದ ಆಧ್ಯಾತ್ಮಿಕ ಸ್ತರದಲ್ಲಿ ಆಗುವ ಲಾಭವು ಸಾಧಕರಿಗೆ ಮತ್ತು ಸಮಾಜಕ್ಕೆ ಕಲಿಯಲು ಸಿಗುವುದು ಹಾಗೂ ಈ ಚಿಕಿತ್ಸಾ ವಿಧಾನದ ಮಹತ್ವ ಗಮನಕ್ಕೆ ಬರುವುದು ಎನ್ನುವ ಕಾರಣದಿಂದ ಈ ಲೇಖನವನ್ನು ಇಲ್ಲಿ ಮುದ್ರಿಸುತ್ತಿದ್ದೇವೆ. – ಸಂಪಾದಕರು |