ಶತ್ರುವಿನ ಆಕ್ರಮಣವನ್ನು ಹೇಗೆ ವಿಫಲಗೊಳಿಸಬೇಕು ? ಈ ಯುದ್ಧತಂತ್ರವನ್ನು ಕಲಿಸುವ ಶ್ರೀಕೃಷ್ಣ !

ಕರ್ಣ ಮತ್ತು ಅರ್ಜುನ ಇವರ ನಡುವಿನ ಯುದ್ಧದಲ್ಲಿ ಖಾಂಡವವನವು ಸುಟ್ಟು ಹೋಗಿದ್ದರಿಂದ ಕೋಪಗೊಂಡ ‘ತಕ್ಷಕ’ ನಾಗನು ಪಾಂಡವರ ಶತ್ರುವಾದನು ಮತ್ತು ಅವನು ಅರ್ಜುನನನ್ನು ಕಚ್ಚಿ ಕೊಲ್ಲಲು ಬಯಸಿದನು. ಅವನು ಆ ಅವಕಾಶದ ದಾರಿಯನ್ನು ಕಾಯುತ್ತಿದ್ದನು. ಆಗ ಅವನು ಕರ್ಣನಿಗೆ ತನ್ನ ವ್ಯಥೆಯನ್ನು ಹೇಳಿ ‘ನನ್ನನ್ನು ನಿನ್ನ ಬಾಣದ ಮೇಲೆ ಇರಿಸಿಕೋ ಮತ್ತು ಅದನ್ನು ಅರ್ಜುನನ ಮೇಲೆ ಬಿಡು. ಅಲ್ಲಿ ನಾನು ಅವನನ್ನು ಕಚ್ಚಿ ಕೊಲ್ಲುವೆನು ಮತ್ತು ನನ್ನ ಹಗೆಯನ್ನು ತೀರಿಸಿಕೊಂಡು ಧನ್ಯನಾಗುವೆನು’, ಎಂದು ಹೇಳಿದನು. ಕರ್ಣನು ಅದಕ್ಕೆ ಒಪ್ಪಿದನು; ಏಕೆಂದರೆ ‘ಶತ್ರುವಿನ ಶತ್ರು ಮಿತ್ರ’, ಈ ನ್ಯಾಯದಿಂದ ಮತ್ತು ಅವನು ವಾಸವಿಶಕ್ತಿಯನ್ನು ಕಳೆದುಕೊಂಡಿದ್ದರಿಂದ ಕರ್ಣನು ಒಪ್ಪಿದನು. ಅದರಂತೆ ಅವನು ತಕ್ಷಕನನ್ನು ಬಾಣದ ಮೇಲೆ ಕೂರಿಸಿಕೊಂಡು, ಆ ಅಸ್ತ್ರವನ್ನು ಅರ್ಜುನನ ಮೇಲೆ ಬಿಟ್ಟನು. ಬಹಳ ವೇಗದಿಂದ ‘ಬರುವ ಅಸ್ತ್ರದ ಮೇಲೆ ತಕ್ಷಕನಿದ್ದಾನೆ’, ಎಂದು ಶ್ರೀಕೃಷ್ಣನು ತಕ್ಷಣ ಗುರುತಿಸಿದನು ಮತ್ತು ‘ಅವನು ಅರ್ಜುನನ ಕಂಠವನ್ನು ಕಚ್ಚಲಿದ್ದಾನೆ ಎಂದು ಅವನ ಗಮನಕ್ಕೆ ಬಂದಿತು. ಸಕಾಲದಲ್ಲಿ ಶ್ರೀಕೃಷ್ಣನು ರಥದ ಅಶ್ವಗಳ ಮೇಲೆ ಭಾರವನ್ನು ನೀಡಿ ರಥವನ್ನು ಕೆಳಗೆ ಬಾಗಿಸಿದನು ಮತ್ತು ಆ ಬಾಣ ಅರ್ಜುನನ ಕಿರೀಟಕ್ಕೆ ತಾಗಿತು ಮತ್ತು ತಕ್ಷಕನ ವಿಷದಿಂದ ಕಿರೀಟವು ಸುಟ್ಟು ಕೆಳಗೆ ಬಿದ್ದಿತು. ಅರ್ಜುನನು ರಕ್ಷಿಸಲ್ಪಟ್ಟನು. ತಕ್ಷಕನಿಗೆ ನಿರಾಶೆಯಾಗಿ ಪುನಃ ಕರ್ಣನ ಬಳಿಗೆ ಹೋಗಿ ಬಾಣದ ಮೇಲೆ ಕೂರಿಸಿಕೊಳ್ಳಲು ವಿನಂತಿಸತೊಡಗಿದನು; ಆದರೆ ‘ನಾನು ಒಂದು ಅಸ್ತ್ರವನ್ನು ಒಂದೇ ಬಾರಿ ಪ್ರಯೋಗಿಸುತ್ತೇನೆ. ಒಂದೇ ಅಸ್ತ್ರವನ್ನು  ಪುನಃ ಪುನಃ ಪ್ರಯೋಗಿಸುವುದಿಲ್ಲ’, ಎಂದು ಕರ್ಣನು ಹೇಳಿದನು. ಇಲ್ಲಿ ಶ್ರೀಕೃಷ್ಣನು ‘ಶತ್ರುವಿನ ದಾಳಿಯನ್ನು ಹೇಗೆ ವಿಫಲಗೊಳಿಸ ಬೇಕು ?’, ಎಂಬ ಯುದ್ಧತಂತ್ರವನ್ನು ತೋರಿಸಿದನು. ಇದು ಅತ್ಯಂತ ಬುದ್ಧಿವಂತ ಮತ್ತು ಉತ್ತಮ ಯುದ್ಧತಂತ್ರವಾಗಿದ್ದು ಮರುದಾಳಿ ಮಾಡದೇ ಶತ್ರುವಿನ ದಾಳಿಯನ್ನು ನಿಷ್ಕ್ರಿಯ ಮಾಡುತ್ತದೆ !