ಉಕ್ರೇನ್-ರಷ್ಯಾ ಸಂಘರ್ಷ ತಡೆಯಲು ಪ್ರಧಾನಿ ಮೋದಿಯವರ ಕೀವ್ ಭೇಟಿ ಉಪಯುಕ್ತವಾಗಲಿದೆ ! – ಅಮೇರಿಕಾ

ವಾಷಿಂಗ್ಟನ್ (ಅಮೇರಿಕಾ) – ಪ್ರಧಾನಿ ನರೇಂದ್ರ ಮೋದಿ ಅವರ ಉಕ್ರೇನ್ ಭೇಟಿಯ ಕುರಿತು ಪ್ರತಿಕ್ರಿಯಿಸಿರುವ ಅಮೇರಿಕಾ, ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಸಹಾಯ ಮಾಡುತ್ತಿರುವ ದೇಶಗಳನ್ನು ಅಮೇರಿಕಾ ಸ್ವಾಗತಿಸುತ್ತದೆ ಎಂದು ಹೇಳಿದೆ. ಈ ಸಂಘರ್ಷವನ್ನು ತಡೆಯಲು ಪ್ರಧಾನಿ ಮೋದಿಯವರ ಕೀವ್ ಭೇಟಿ ಸಹಕಾರಿಯಾಗಲಿದೆ ಎಂದು ಹೇಳಿದೆ.
ಅಮೇರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಕಿರ್ಬಿ ಅವರು ಉಕ್ರೇನ್ ಸಂಘರ್ಷದ ಬಗ್ಗೆ ಯಾವುದೇ ಮಾತುಕತೆಗಳು ಬಂದರೂ ಉಕ್ರೇನ್ ಮುಂದೆ ಬರುವುದು ಅವಶ್ಯಕವಾಗಿದೆ ಎಂದು ಹೇಳಿದರು.