Rakesh Tikait Controversial Statement : ಭಾರತದಲ್ಲೂ ಸಹ ಬಾಂಗ್ಲಾದೇಶದಂತಹ ಆಂದೋಲನವಾಗಬಹುದು ! – ರಾಕೇಶ್ ಟಿಕಾಯತ್, ಭಾರತೀಯ ಕಿಸಾನ್ ಒಕ್ಕೂಟದ ರಾಷ್ಟ್ರೀಯ ವಕ್ತಾರ

ರಾಕೇಶ್ ಟಿಕಾಯತ್

ಮೀರತ್ (ಉತ್ತರ ಪ್ರದೇಶ) – ಭಾರತೀಯ ಕಿಸಾನ್ ಒಕ್ಕೂಟದ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಅವರು, ‘ಭಾರತದ ಪರಿಸ್ಥಿತಿಯು ಬಾಂಗ್ಲಾದೇಶ ಮತ್ತು ಶ್ರೀಲಂಕಾದಂತೆಯೇ ಇದೆ. ಬಾಂಗ್ಲಾದೇಶದಲ್ಲಿ ನಡೆದಂತೆ ಭಾರತದಲ್ಲಿಯೂ ಸಹ ಆಂದೋಲನ ನಡೆಯಬಹುದು ಎಂದು ಹೇಳಿಕೆ ನೀಡಿದ್ದಾರೆ. ಆಗಸ್ಟ್ 20, 2024 ರಂದು, ಮೀರತ್‌ನಲ್ಲಿರುವ ಪಶ್ಚಿಮಾಂಚಲ್ ವಿದ್ಯುತ್ ವಿತರಣ ನಿಗಮದ ಕಚೇರಿಯಲ್ಲಿ ವಿದ್ಯುತ್‌ಗೆ ಸಂಬಂಧಿಸಿದ ಕುಂದುಕೊರತೆಗಳ ಕುರಿತು ಚರ್ಚಿಸಲು ರಾಕೇಶ್ ಟಿಕಾಯತ್ ಮೀರತ್‌ಗೆ ಬಂದಿದ್ದರು. ಈ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಟಿಕಾಯತ್ ತಮ್ಮ ಮಾತನ್ನು ಮುಂದುವರೆಸಿ, 750ಕ್ಕೂ ಹೆಚ್ಚು ರೈತರು ರೈತರ ಆಂದೋಲನದಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ; ಆದರೆ ಕೇಂದ್ರ ಸರಕಾರ ಈ ಬಗ್ಗೆ ಏನನ್ನೂ ಹೇಳಿಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿ ರೈತರಿಗೆ ಉಚಿತ ವಿದ್ಯುತ್ ಘೋಷಣೆ ಮಾಡಿದ್ದರು; ಆದರೆ, ಮೀಟರ್ ಅಳವಡಿಸಲು ಷರತ್ತು ವಿಧಿಸಲಾಗಿದೆ. ಕೂಪನ್ ಲೀಂಕ್‌ಗಳಲ್ಲಿ ಮೀಟರ್ ಅಳವಡಿಸಲು ರೈತರಿಗೆ ಅನುಮತಿ ಇಲ್ಲ. ಮೀಟರ್ ಅಳವಡಿಸಿದರೆ ಅದನ್ನು ತೆಗೆದು ವಿದ್ಯುತ್ ಇಲಾಖೆಯಲ್ಲಿ ಜಮಾ ಮಾಡಲಾಗುತ್ತದೆ ಎಂದು ಟೀಕಿಸಿದರು.

ಮಾಧ್ಯಮದ ಪಾತ್ರದ ಬಗ್ಗೆಯೂ ಪ್ರತಿಕ್ರಿಯಿಸಿದ ಟಿಕಾಯತ್ ಅವರು, ಕೊಲಕಾತಾದಲ್ಲಿ ವೈದ್ಯೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಘಟನೆ ಖಂಡನೀಯ ಎಂದು ಹೇಳಿದ. ಈ ಹತ್ಯೆ ಬಗ್ಗೆ ಮಾಧ್ಯಮಗಳಲ್ಲಿ ಕಂಡಂತಹ ಸ್ಪಷ್ಟತೆ ಮಣಿಪುರದಲ್ಲಿ ನಡೆದ ಹಿಂಸಾಚಾರದ ವೇಳೆ ಕಾಣಲಿಲ್ಲ ಎಂದು ಹೇಳಿದರು.