|
ಟೊರೊಂಟೊ (ಕೆನಡಾ) – ಕೆನಡಾದಲ್ಲಿ ಹಿಂದೂ ದ್ವೇಷಿ ಜಸ್ಟಿನ್ ಟ್ರುಡೊ ಸರಕಾರದ ರಕ್ಷಣೆಯಲ್ಲಿ ಖಾಲಿಸ್ತಾನಿಗಳು ಭಾರತ ವಿರೋಧಿ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ಆಗಸ್ಟ್ 18 ರಂದು ಇಲ್ಲಿ ಭಾರತೀಯರು ಆಯೋಜಿಸಿದ್ದ ‘ಇಂಡಿಯಾ ಡೇ ಪರೇಡ್’ನಲ್ಲಿ ಖಲಿಸ್ತಾನಿ ಭಯೋತ್ಪಾದಕರು ಉದ್ವಿಗ್ನತೆಯನ್ನು ಸೃಷ್ಟಿಸಿದರು. ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಖಲಿಸ್ತಾನಿಗಳ ಅಪಾಯನ್ನು ಗಮನದಲ್ಲಿಟ್ಟುಕೊಂಡು ಆ ಸ್ಥಳದಲ್ಲಿ ಬಿಗಿ ಭದ್ರತೆಯನ್ನು ಇರಿಸಲಾಗಿತ್ತು.
ಇದರ ಹೊರತಾಗಿಯೂ ಖಲಿಸ್ತಾನಿಗಳು ‘ಭಾರತೀಯ ಹಿಂದೂ, ಗೋ ಬ್ಯಾಕ್ ಇಂಡಿಯಾ’ ಮತ್ತು ‘ನಾ ಹಿಂದಿ ನಾ ಹಿಂದೂಸ್ತಾನ್, ಬನಕೆ ರಹೇಗಾ ಖಲಿಸ್ತಾನ್’ ಎಂಬ ಘೋಷಣೆಗಳನ್ನು ಕೂಗಿದರು. ಆ ಸಮಯದಲ್ಲಿ ಖಲಿಸ್ತಾನಿಗಳು ಭಾರತದ ಧ್ವಜಕ್ಕೂ ಅಗೌರವ ತೋರಿದ್ದಾರೆ. ಒಂದು ವಿಡಿಯೋದಲ್ಲಿ ಖಲಿಸ್ತಾನಿಗಳು ಭಾರತೀಯ ಧ್ವಜವನ್ನು ತುಳಿಯುತ್ತಿರುವುದನ್ನು ಕಾಣಬಹುದು. ಮತ್ತೊಂದು ವೀಡಿಯೊದಲ್ಲಿ, ಖಲಿಸ್ತಾನಿ ಭಾರತೀಯ ರಾಷ್ಟ್ರಧ್ವಜವನ್ನು ಹರಿಯುತ್ತಿರುವುದನ್ನು ಕಾಣಬಹುದು, ಆದರೆ ಕೆನಡಾದ ಪೊಲೀಸರು ಸುಮ್ಮನೆ ನೋಡುತ್ತಿದ್ದಾರೆ. ಮೆರವಣಿಗೆಯಲ್ಲಿ ಭಾರತದ ರಾಜ್ಯಗಳನ್ನು ಪ್ರತಿನಿಧಿಸುವ ಹಲವಾರು ದೃಶ್ಯಗಳನ್ನು ಒಳಗೊಂಡಿತ್ತು.
ಈ ಸಮಯದಲ್ಲಿ ಪರೇಡ್‌ನಲ್ಲಿ ಭಾಗವಹಿಸಿದ್ದ ಭಾರತೀಯರು ‘ಹಿಂದುಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗುವ ಮೂಲಕ ಖಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ ಪ್ರತ್ಯುತ್ತರ ನೀಡಿದರು. ಒಂದು ಕಡೆ ಎರಡೂ ಕಡೆಯವರು ಮುಖಾಮುಖಿಯಾಗಿ ಹೊಡೆದಾಡಿಕೊಂಡರು. ಖಲಿಸ್ತಾನಿಗಳು ಮೊದಲೇ ಮೆರವಣಿಗೆಯನ್ನು ಪ್ರತಿಭಟಿಸಲು ಯೋಜಿಸಿದ್ದರು.
‘Indian Hindus, go back’ slogans chanted by #Khalistanis as they disrupt the India Day Parade in #Canada
Indian flag desecrated and trampled underfoot
Why isn’t the Central Government severing all ties with the anti-India Canada and teaching them a lesson?
When will the… pic.twitter.com/XcebNpYVoI
— Sanatan Prabhat (@SanatanPrabhat) August 19, 2024
ಸಂಪಾದಕೀಯ ನಿಲುವು
|