ಕೊನೆಗೂ ಸೇಡು ತೀರಿಸಿಕೊಂಡ ಇಸ್ರೈಲ್‌

ಅಕ್ಟೋಬರ್‌ ೭, ೨೦೨೩ ರಂದು ಹಮಾಸ ಪ್ಯಾಲೇಸ್ಟೈನ ಭಯೋತ್ಪಾದಕ ಸಂಘಟನೆಯು ಇಸ್ರೈಲ್‌ ಮೇಲೆ ನಡೆಸಿದ ಆಕ್ರಮಣದ ಸೇಡನ್ನು ಇಸ್ರೈಲ್‌ ಕೊನೆಗೂ ತೀರಿಸಿಕೊಂಡಿದೆ. ಈ ಸಂಘಟನೆಯ ಮುಖಂಡ ೬೨ ವರ್ಷದ ಇಸ್ಮಾಯಿಲ್‌ ಹಾನಿಯಾ ಇವನನ್ನು ಇರಾನಿನ ರಾಜಧಾನಿ ತೆಹ್ರಾನನಲ್ಲಿ ನುಗ್ಗಿ ಇಸ್ರೈಲ್‌ ಹತ್ಯೆ ಮಾಡಿದೆ. ಇಷ್ಟೆ ಅಲ್ಲ, ಇದೇ ಸಮಯದಲ್ಲಿ ಇಸ್ರೈಲ್‌ ಲೆಬನಾನ್‌ ರಾಜಧಾನಿ ಬೈರೂತನಲ್ಲಿ ಹಿಜಬುಲ್ಲಾ ಭಯೋತ್ಪಾದಕ ಸಂಘಟನೆಯ ಹಿರಿಯ ಭಯೋತ್ಪಾದಕ ನಾಯಕ ಫುಆದ ಶುಕ್ರ ಇವನನ್ನು ಕೂಡ ಹತ್ಯೆ ಮಾಡಿದೆ. ಕ್ಷಿಪಣಿ ಮತ್ತು ಏರ್‌ ಸ್ಟೈಕ್‌ ಮೂಲಕ ಇವರಿಬ್ಬರನ್ನು ಹತ್ಯೆ ಮಾಡಿದೆ. ‘ಇವೆರಡೂ ನಗರಗಳು ಆ ದೇಶದ ರಾಜಧಾನಿಯಾಗಿದೆ’ ಎನ್ನುವುದನ್ನು ಗಮನಿಸಬೇಕಾಗಿದೆ. ಭಯೋತ್ಪಾದನೆಯನ್ನು ನಾಶಗೊಳಿಸಲು ಏನು ಮಾಡಬೇಕು ? ಎನ್ನುವುದನ್ನು ಇಸ್ರೈಲ್‌ ಮತ್ತೊಮ್ಮೆ ತೋರಿಸಿಕೊಟ್ಟಿದೆ. ಇಸ್ರೈಲ್‌ ಅನೇಕ ವರ್ಷಗಳಿಂದ ಶತ್ರುವಿನ ವಿರುದ್ಧ ಇಂತಹ ಕೃತ್ಯಗಳನ್ನು ಬೇರೆ ಬೇರೆ ದೇಶಗಳಿಗೆ ಹೋಗಿ ಮಾಡುತ್ತಾ ಬಂದಿದೆ. ಇಸ್ರೈಲ್‌ ಪ್ರತ್ಯಕ್ಷ ಮಾಡಿ ತೋರಿಸುತ್ತದೆ. ಆದರೆ ಭಾರತ ಮಾತ್ರ ಕೇವಲ ಮಾತನಾಡುವುದರಲ್ಲಿಯೇ ಸಮಯ ಕಳೆಯುತ್ತಿದೆಯೆನ್ನುವುದು ಗಮನಿಸಬೇಕಾಗಿದೆ. ‘ಭಾರತ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದನೊಳಗೆ ನುಗ್ಗಿ ಭಯೋತ್ಪಾದಕರನ್ನು ಕೊಲ್ಲಲು ಸಾಧ್ಯವಿದೆಯೇ ?’ ಎನ್ನುವ ಪ್ರಶ್ನೆಯಿದೆ. ‘ಇರಾನ ಮತ್ತು ಲೆಬನಾನ ದೇಶಗಳಲ್ಲಿ ನುಗ್ಗಿ ಭಯೋತ್ಪಾದಕರನ್ನು ಹತ್ಯೆ ಮಾಡಿದ್ದರಿಂದ ಈ ಎರಡೂ ದೇಶ ಇಸ್ರೈಲ್‌ ಮೇಲೆ ದಾಳಿ ನಡೆಸಬಹುದು’, ಎನ್ನುವ ಹೆದರಿಕೆಯೂ ಇಸ್ರೈಲ್‌ ದೇಶಕ್ಕೆ ಇಲ್ಲ ಎನ್ನುವುದನ್ನು ಗಮನಿಸಬೇಕಾಗಿದೆ.

ಭಾರತ ಇಸ್ರೈಲ್‌ನಿಂದ ಏನನ್ನೂ ಕಲಿತಿಲ್ಲ

ಇಸ್ರೈಲ್‌ ಕೇವಲ ಗಾಝಾದಲ್ಲಿ ಮಾತ್ರವಲ್ಲ, ಬದಲಾಗಿ ಇರಾನ, ಲೆಬನಾನ್‌ ಈ ದೇಶಗಳಿಗೆ ನುಗ್ಗಿ ಭಯೋತ್ಪಾದಕರನ್ನು ಗುರಿ ಮಾಡುತ್ತಿದೆ. ಇನ್ನೊಂದೆಡೆ ಕಳೆದ ತಿಂಗಳಿಡಿ ಪಾಕಿಸ್ತಾನಿ ಭಯೋತ್ಪಾದಕರು ಜಮ್ಮೂ-ಕಾಶ್ಮೀರದಲ್ಲಿ ನಡೆಸಿದ ದಾಳಿಯಲ್ಲಿ ೧೬ ಭಾರತೀಯ ಸೈನಿಕರು ವೀರಗತಿಯನ್ನು ಹೊಂದಿದ್ದಾರೆ. ೬೦೦ ಕ್ಕಿಂತ ಅಧಿಕ ಪಾಕಿಸ್ತಾನಿ ಸೈನಿಕರು ಜಮ್ಮೂವಿನಲ್ಲಿ ನುಸುಳಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಇದನ್ನು ನೋಡಿದರೆ ಭಾರತ ಇಸ್ರೈಲ್‌ನಿಂದ ಏನನ್ನೂ ಕಲಿತಿಲ್ಲ ಎನ್ನುವುದು ಗಮನಕ್ಕೆ ಬರುತ್ತದೆ. ಇಸ್ರೈಲ್‌ನೊಂದಿಗೆ ಮೈತ್ರಿ ಇರುವುದು ಒಂದು ಭಾಗವಾದರೆ, ಈ ಸ್ನೇಹಿತನಿಂದ ಭಾರತಕ್ಕೆ ಯಾವುದು ಯೋಗ್ಯವಾಗಿದೆಯೋ, ಅದನ್ನು ಕಲಿತುಕೊಂಡು ಅದಕ್ಕನುಗುಣವಾಗಿ ಕೃತಿಯನ್ನು ಮಾಡುವುದೂ ಆವಶ್ಯಕವಾಗಿದೆ. ಪುಟ್ಟ ಇಸ್ರೈಲ್‌ ಏನನ್ನು ಮಾಡಲು ಸಾಧ್ಯವಾಗುತ್ತಿದೆಯೋ, ಅದನ್ನು ಅಣ್ವಸ್ತ್ರ ಸಜ್ಜಿತ ಮತ್ತು ೫ ನೇ ಜಾಗತಿಕ ಅರ್ಥವ್ಯವಸ್ಥೆಯಾಗಿರುವ ಭಾರತಕ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇಸ್ರೈಲ್‌ ಕೇವಲ ಹಾನಿಯಾನನ್ನು ಮಾತ್ರ ಹತ್ಯೆ ಮಾಡಿಲ್ಲ. ಬದಲಾಗಿ ಕಳೆದ ೧೦ ತಿಂಗಳಿನಲ್ಲಿ ಅದು ಹಾನಿಯಾನ ಈತನ ಸಹೋದರಿ, ಸಹೋದರ, ಅಣ್ಣನ ಮಗ, ಮಕ್ಕಳು, ಸಂಬಂಧಿಕರು ಮುಂತಾದವರನ್ನು ಹತ್ಯೆ ಮಾಡಿದೆ. ‘ಭಯೋತ್ಪಾನೆಯ ಬುಡವನ್ನೇ ನಾಶಗೊಳಿಸುವುದೆಂದರೆ ಏನು ?’ ಎನ್ನುವ ಉದಾಹರಣೆಯನ್ನು ಇಸ್ರೈಲ್‌ ಎದುರಿಗೆ ಇಟ್ಟಿದೆ. ಭಾರತ ಸರಿಸುಮಾರು ೩೫ ವರ್ಷಗಳಿಂದ ಜಿಹಾದಿ ಭಯೋತ್ಪಾದನೆಯಿಂದ ನರಳುತ್ತಿದೆ. ಕಳೆದ ೧೦ ವರ್ಷಗಳಲ್ಲಿ ಭಾರತವು ಇದರ ಮೇಲೆ ಸ್ವಲ್ಪ ಮಟ್ಟಿಗೆ ನಿಯಂತ್ರಣವನ್ನು ಸಾಧಿಸಿದ್ದರೂ, ಈ ಭಯೋತ್ಪಾದನೆಗೆ ಕಾರಣವಾಗಿರುವ ಪಾಕಿಸ್ತಾನಕ್ಕೆ ಈ ಪಾಠವನ್ನು ಕಲಿಸಲು ಸಾಧ್ಯವಾಗಿಲ್ಲ.

ಭಾರತದ ಗಾಂಧಿಗಿರಿ

ಉರಿ ಮತ್ತು ಪಠಾಣಕೋಟನ ಸೇನಾ ನೆಲೆಯ ಮೇಲಿನ ದಾಳಿಯ ಬಳಿಕ ಭಾರತವು ಪಾಕಿಸ್ತಾನದಲ್ಲಿ ನುಗ್ಗಿ ದಾಳಿ ಮಾಡಿದೆ. ಆದಾಗ್ಯೂ ಇದರಿಂದ ಭಯೋತ್ಪಾದನೆ ನಾಶವಾಗಿಲ್ಲ. ಇಂದಿಗೂ ಭಯೋತ್ಪಾದಕರು ಮತ್ತು ಪಾಕಿಸ್ತಾನಿ ಸೈನಿಕರು ಭಾರತದಲ್ಲಿ ನುಸುಳುತ್ತಿದ್ದಾರೆ. ಜಮ್ಮೂವಿನಲ್ಲಿ ಪಾಕಿಸ್ತಾನಿ ಸೈನಿಕರು ನುಗ್ಗಿದ್ದರಿಂದ ಮತ್ತೊಮ್ಮೆ ಯುದ್ಧಸದೃಶ ಸ್ಥಿತಿ ನಿರ್ಮಾಣವಾಗಿದೆಯೆಂದು ಹೇಳಲಾಗುತ್ತಿದೆ. ಭಾರತದ ಸ್ಥಾನದಲ್ಲಿ ಇಸ್ರೈಲ್‌ ಇರುತ್ತಿದ್ದರೆ, ಇಷ್ಟರವರೆಗೆ ಅದು ಪಾಕಿಸ್ತಾನವನ್ನು ಜಗತ್ತಿನ ಭೂಪಟದಿಂದ ಅಳಿಸಿ ಹಾಕುತ್ತಿತ್ತು. ‘ಇಂತಹ ಮಾನಸಿಕತೆ, ನಾಯಕತ್ವ ಮತ್ತು ಪ್ರಖರ ರಾಷ್ಟ್ರಪ್ರೇಮವನ್ನು ಇಲ್ಲಿಯವರೆಗಿನ ಎಲ್ಲ ಪಕ್ಷಗಳ ಭಾರತೀಯ ಆಡಳಿತಗಾರರಲ್ಲಿ ಎಂದಿಗೂ ಕಂಡುಬಂದಿಲ್ಲ’, ಇದು ಭಾರತೀಯರ ದುರ್ದೈವವೇ ಎಂದು ಹೇಳಬಹುದಾಗಿದೆ. ತಥಾಕಥಿತ ಅಂತಾರಾಷ್ಟ್ರೀಯ ಒತ್ತಡದ ಹೆಸರಿನಡಿಯಲ್ಲಿ ಭಾರತ ಗಾಂಧಿಗಿರಿ ಮಾಡುತ್ತಿದ್ದುದರಿಂದಲೇ ಕಾಶ್ಮೀರದ ಭಯೋತ್ಪಾದಕತೆಯನ್ನು ಬುಡಸಮೇತ ನಾಶ ಮಾಡಲು ಸಾಧ್ಯವಾಗಿಲ್ಲ. ಭಾರತವು ಒಂದೇ ಒಂದು ಭಯೋತ್ಪಾದಕ ಸಂಘಟನೆಯ ಮುಖಂಡನನ್ನು ಇಲ್ಲಿಯವರೆಗೆ ಹತ್ಯೆ ಮಾಡಿಲ್ಲ. ಮುಂಬಯಿಯ ಮೇಲಿನ ೨೬/೧೧ ರ ದಾಳಿಯ ರೂವಾರಿ ಹಾಫಿಜ ಸಯಿದ್‌ ಇಂದಿಗೂ ಪಾಕಿಸ್ತಾನದಲ್ಲಿ ಸುಖದಿಂದ ವಾಸಿಸುತ್ತಿದ್ದಾನೆ. ಕಂದಹಾರ ವಿಮಾನ ಅಪಹರಣ ಪ್ರಕರಣದಲ್ಲಿ ಬಿಡುಗಡೆಗೊಳಿಸಲಾಗಿರುವ ಪ್ರಮುಖ ಭಯೋತ್ಪಾದಕ ಇಂದಿಗೂ ಭಾರತದ ವಿರುದ್ಧ ಕೃತ್ಯಗಳನ್ನು ನಡೆಸುತ್ತಿದ್ದಾನೆ. ದಾವೂದ ಇಬ್ರಾಹಿಮ್‌ ಮೇಲೆಯೂ ಭಾರತಕ್ಕೆ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಇಸ್ರೈಲ್‌ ಹಮಾಸನನ್ನು ನಾಶಗೊಳಿಸದೇ ಸುಮ್ಮನೇ ಕುಳಿತುಕೊಳ್ಳುವುದಿಲ್ಲ. ಭಾರತ ಲಷ್ಕರ-ಎ-ತೊಯಬಾ, ಜೈಶ-ಎ-ಮಹಮ್ಮದ ಈ ಭಯೋತ್ಪಾದಕ ಸಂಘಟನೆಯನ್ನು ನಾಶಗೊಳಿಸಲು ಸಾಧ್ಯವಾಗಿಲ್ಲ. ವಿಶೇಷವೆಂದರೆ ಅಂತಹ ಪ್ರಯತ್ನವನ್ನೂ ಮಾಡಿಲ್ಲ. ಇದರಿಂದ ಇಸ್ರೈಲ್‌ ಎದುರು ಭಾರತ ಎಷ್ಟು ಚಿಕ್ಕದಾಗಿದೆಯೆಂದು ಸ್ಪಷ್ಟವಾಗಿದೆ. ಕಳೆದ ಕೆಲವು ತಿಂಗಳಿನಲ್ಲಿ ಪಾಕಿಸ್ತಾನದಲ್ಲಿಯೂ ಭಾರತವಿರೋಧಿ ಭಯೋತ್ಪಾದಕರ ಹತ್ಯೆಯಾಗುತ್ತಿದೆ. ಇದರ ಹಿಂದೆ ಭಾರತವಿದೆಯೆಂದು ಪಾಕಿಸ್ತಾನ ಆರೋಪಿಸಿದೆ. ಭಾರತವು ಹೀಗೆ ಮಾಡಿದ್ದರೆ, ಅದರಿಂದ ಭಾರತೀಯರಿಗೆ ಬಹಳ ಅಭಿಮಾನವೇ ಇರಲಿದೆ. ಆದಾಗ್ಯೂ ಭಾರತಕ್ಕೆ ಏನಾದರೂ ಮಾಡುವುದಿದ್ದರೆ, ಇಂತಹ ವಿಷಯಗಳನ್ನು ಮಾಡುವುದರೊಂದಿಗೆ ಬುಡಕ್ಕೆ ಕೊಡಲಿಯೇಟು ಹಾಕಲು ಪ್ರಯತ್ನಿಸಬೇಕು.

ಭಾರತಕ್ಕೆ ಇಸ್ರೈಲ್‌ ಆಡಳಿತಾಧಿಕಾರಿಗಳು ಬೇಕು

ಇಸ್ರೈಲ್‌ ಕಳೆದ ೧೦ ತಿಂಗಳಿನಲ್ಲಿ ಗಾಝಾ ಪಟ್ಟಿಯನ್ನು ಸುಟ್ಟು ಬೂದಿ ಮಾಡಿದೆ. ವಿಶೇಷವೆಂದರೆ ಇಷ್ಟೆಲ್ಲ ಆದರೂ ಹಮಾಸ ಒತ್ತೆಯಾಳುಗಳನ್ನಾಗಿ ಮಾಡಿರುವ ಇಸ್ರೈಲ್‌ ಜನರನ್ನು ಬಿಟ್ಟಿಲ್ಲ. ಅನೇಕ ಜನರನ್ನು ಹತ್ಯೆ ಮಾಡಲಾಗಿದೆ. ಮಹಿಳಾ ಒತ್ತೆಯಾಳುಗಳ ಮೇಲೆ ಲೈಂಗಿಕ ಅತ್ಯಾಚಾರ ಮಾಡಲಾಗಿದೆ. ಹಮಾಸ ಎಷ್ಟು ಕ್ರೂರವಾಗಿದೆಯೆನ್ನುವುದು ಗಮನಕ್ಕೆ ಬರುತ್ತಿದೆ. ಇಂತಹ ಭಯೋತ್ಪಾದಕ ಸಂಘಟನೆಯೊಂದಿಗೆ ಗಾಂಧಿಗಿರಿಯಲ್ಲ, ಛತ್ರಪತಿ ಶಿವಾಜಿ ಮಹಾರಾಜರಂತೆಯೇ ನಡೆದುಕೊಳ್ಳಬೇಕು, ಇದು ಇಸ್ರೈಲ್‌ಗೆ ತಿಳಿದಿದೆ ಮತ್ತು ಅದು ಅದೇ ರೀತಿ ಮಾಡುತ್ತಿದೆ. ಇದುವರೆಗೂ ಹಮಾಸ ಮತ್ತೊಬ್ಬ ದೊಡ್ಡ ನಾಯಕ ಯಾಹ್ಯಾ ಸಿನವಾರ ಜೀವಂತವಾಗಿದ್ದಾನೆ. ‘ಅವನನ್ನು ಇಸ್ರೈಲ್‌ ಹತ್ಯೆ ಮಾಡುವುದು’ ಎಂದೇ ಹೇಳಲಾಗುತ್ತಿದೆ. ಎಲ್ಲಿಯವರೆಗೆ ಹಮಾಸ ನಾಶವಾಗುವುದಿಲ್ಲವೋ ಮತ್ತು ಒತ್ತೆಯಾಳುಗಳ ಬಿಡುಗಡೆಯಾಗುವುದಿಲ್ಲವೋ, ಅಲ್ಲಿಯವರೆಗೆ ಹಮಾಸ-ಇಸ್ರೈಲ್‌ ಯುದ್ಧ ನಿಲ್ಲುವುದಿಲ್ಲ. ಇಸ್ರೈಲಿನ ದೃಢವಾದ ಮನೋವೃತ್ತಿಯಿಂದಲೇ ಅದು ತನ್ನ ಪಕ್ಕದಲ್ಲಿರುವ ೭ ಮುಸಲ್ಮಾನ ದೇಶಗಳನ್ನು ೭೫ ವರ್ಷಗಳಿಂದ ಎದುರಿಸುತ್ತಾ ತಲೆಯೆತ್ತಿ ನಿಂತಿದೆ. ಭಾರತವು ಪಾಕಿಸ್ತಾನದ ವಿರುದ್ಧ ಕೃತಿ ಮಾಡಿದರೆ, ಮುಸಲ್ಮಾನಪ್ರೇಮಿ ರಾಜಕೀಯ ಪಕ್ಷ ಅದನ್ನು ವಿರೋಧಿಸುತ್ತದೆ ಮತ್ತು ಸೇನೆಯ, ಸರಕಾರದ ಕಾಲನ್ನು ಎಳೆಯಲು ಪ್ರಯತ್ನಿಸುತ್ತದೆ. ಇದು ಇಸ್ರೈಲ್‌ ಮತ್ತು ಭಾರತದ ನಡುವಿನ ಪ್ರಮುಖ ವ್ಯತ್ಯಾಸವಾಗಿದೆ. ಇದರಿಂದಲೇ ಭಾರತ ಜಿಹಾದಿ ಭಯೋತ್ಪಾದಕರ ಮತ್ತು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮವನ್ನು ಕೈಕೊಳ್ಳಲು ಧೈರ್ಯ ತೋರಿಸುತ್ತಿಲ್ಲ. ಭಾರತವು ೧೯೭೧ ರಲ್ಲಿ ಪೂರ್ವಪಾಕಿಸ್ತಾನ ಸ್ವತಂತ್ರಗೊಳಿಸಿ ಆ ಭಾಗವನ್ನು ಮತ್ತೊಮ್ಮೆ ಭಾರತಕ್ಕೆ ಜೋಡಿಸದೇ, ಅಲ್ಲಿ ಹೊಸ ಬಾಂಗ್ಲಾದೇಶವನ್ನು ಸ್ಥಾಪನೆಗೊಂಡಿತು. ಬದಲಾಗಿ ಇಸ್ರೈಲ್‌ ೧೯೬೦ ರ ದಶಕದಲ್ಲಿ ಗಾಝಾ ಪಟ್ಟಿಯನ್ನು ವಶಕ್ಕೆ ಪಡೆದಿತ್ತು ಮತ್ತು ಸರಿಸುಮಾರು ೩೦ ವರ್ಷಗಳ ವರೆಗೆ ತನ್ನ ಬಳಿಯೇ ಇಟ್ಟುಕೊಂಡಿತು. ಅದು ಪುನಃ ಪ್ಯಾಲೆಸ್ಟೈನ್‌ ಬಳಿಗೆ ಕೊಟ್ಟ ಬಳಿಕ ಹಮಾಸ ಭಯೋತ್ಪಾದಕ ಸಂಘಟನೆ ಪುನಃ ಬೆಳೆಯಿತು. ಭಾರತ ಕಳೆದ ೭೫ ವರ್ಷಗಳಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮರಳಿ ಪಡೆಯಲು ಸಾಧ್ಯವಾಗುತ್ತಿಲ್ಲ. ಭಾರತದಲ್ಲಿ ಇಸ್ರೈಲ್‌ ಆಡಳಿತಗಾರರು ಇದ್ದಿದ್ದರೆ, ಭಾರತ ಇಲ್ಲಿಯವರೆಗೆ ಮಹಾಶಕ್ತಿಯಾಗಿರುತ್ತಿತ್ತು. ಬಹುತೇಕ ಭಾರತ ಪುನಃ ಅಖಂಡ ಭಾರತವೂ ಆಗಿದ್ದರೆ, ಇದು ಅತಿಶಯೋಕ್ತಿಯಾಗಲಾರದು.