ಸಂಸ್ಕೃತ ಭಾಷೆಯ ಸೌಂದರ್ಯ

ಆಗಸ್ಟ್ ೧೯ ರಂದು ಇರುವ ಸಂಸ್ಕೃತದಿನದ ನಿಮಿತ್ತ

‘ಸಂತೋಷ’ವೇ ಮಾನವನ ನಿಜವಾದ ಸಂಪತ್ತು !

ಸರ್ವಾಃ ಸಮ್ಪತ್ತಯಸ್ತಸ್ಯ ಸನ್ತುಷ್ಟಂ ಯಸ್ಯ ಮಾನಸಮ್‌ |

ಉಪಾನದ್ಗೂಢಪಾದಸ್ಯ ನನು ಚರ್ಮಾವೃತೈವ ಭೂಃ ||

– ಹಿತೋಪದೇಶ, ಮಿತ್ರಲಾಭ, ಶ್ಲೋಕ ೧೩೮

ಅರ್ಥ : ಯಾರ ಮನಸ್ಸು ಸಂತುಷ್ಟವಾಗಿದೆಯೋ, ಅವನಲ್ಲಿಯೇ ನಿಜವಾದ ಸಂಪತ್ತಿದೆ. ಯಾರು ಕಾಲಿನಲ್ಲಿ ಚಪ್ಪಲಿ ಧರಿಸುತ್ತಾನೋ, ಅವನ ದೃಷ್ಟಿಯಲ್ಲಿ ಸಂಪೂರ್ಣ ಪೃಥ್ವಿಯೇ ಚರ್ಮದಿಂದ ಮುಚ್ಚಿರುತ್ತದೆ. (ಅಂದರೆ ಅವನು ಪೃಥ್ವಿಯ ಮೇಲೆ ಎಲ್ಲಿ ನಡೆದರೂ ಅವನ ಕಾಲಿನಡಿಯ ಭೂಮಿ ಅವನಿಗೆ (ಆ ಚಪ್ಪಲಿಯಿಂದಾಗಿ) ಚರ್ಮದ್ದೆಂದೇ ಅನಿಸುತ್ತದೆ.)

ಯೋಜಕ ನಿಜವಾಗಿಯೂ ದುರ್ಲಭನಾಗಿರುತ್ತಾನೆ !

‘ಯೋಜಕಸ್ತತ್ರ ದುರ್ಲಭಃ |’ ಅಂದರೆ ‘ಯೋಜಕ (ಹೊಂದಿಸುವಂತಹುದು) ನಿಜವಾಗಿಯೂ ದುರ್ಲಭನಾಗಿರುತ್ತಾನೆ,’ ಯೋಜಕ ಚತುರನಾಗಿದ್ದರೆ, ಭಗವನ್ಮಯನಾಗಿದ್ದರೆ, ಎಲ್ಲವನ್ನೂ ಅಂದರೆ ಯಾವುದೇ ಎಸೆಯುವ ವಸ್ತುವನ್ನಾದರೂ ಉಪಯೋಗಿಸಿಕೊಳ್ಳುತ್ತಾನೆ. ಅವನ ವಿಷಯದಲ್ಲಿ ದುಃಖ ವರದಾನವಾಗುತ್ತದೆ, ಅದೇ ರೀತಿ ಶಾಪವೂ ವರವಾಗುತ್ತದೆ. ಅವನು ವಿಷವನ್ನು ರೋಗ ನಿವಾರಣೆಗಾಗಿ ಉಪಯೋಗಿಸುತ್ತಾನೆ. ಚತುರ ವ್ಯಕ್ತಿ ದುಃಖವನ್ನು ಸುಖವನ್ನಾಗಿ ಮಾಡುತ್ತಾನೆ ಹಾಗೂ ಶಾಪವನ್ನು ವರವನ್ನಾಗಿ ಮಾಡುತ್ತಾನೆ. ಉರ್ವಶಿಯು ಅರ್ಜುನನಿಗೆ ಒಂದು ವರ್ಷ ನಪುಂಸಕತ್ವ ಅನುಭವಿಸುವ ಶಾಪ ನೀಡಿದ್ದಳು. ಅಜ್ಞಾತವಾಸದಲ್ಲಿ ವಿರಾಟನ ನಗರದಲ್ಲಿ ಅವನು ಬೃಹನ್ನಳೆ (ನರ್ತಕಿ) ಆಗುತ್ತಾನೆ ! (ಆಧಾರ : ಮಾಸಿಕ ‘ಘನಗರ್ಜಿತ’, ನವೆಂಬರ್‌ ೨೦೨೪)