ಈಶ್ವರನ ಅಸ್ತಿತ್ವವನ್ನು ನಂಬುವವರ ಮೇಲೆ ಅಥವಾ ನಂಬದಿರುವವರ ಮೇಲೆ ಜೀವನದ ಯಶಸ್ಸು ಅವಲಂಬಿಸಿದೆಯೇ ?

ಧರ್ಮದ ಬಗ್ಗೆ ಪ.ಪೂ. ಸ್ವಾಮೀ ವರದಾನಂದ ಭಾರತಿ ಇವರ ಅಮೂಲ್ಯ ಮಾರ್ಗದರ್ಶನ !

ಪ.ಪೂ. ಸ್ವಾಮಿ ವರದಾನಂದ ಭಾರತಿ

ಪ್ರಶ್ನೆಯ ಉತ್ತರದ ಕಡೆಗೆ ಹೊರಳುವ ಮೊದಲು ‘ಯಶಸ್ವೀ ಜೀವನ’ ಅಂದರೇನು ಎಂಬುದು ಸ್ಪಷ್ಟವಾಗಿದ್ದರೆ, ಅನುಕೂಲವಾಗಬಹುದಿತ್ತು. ಒಂದು ವೇಳೆ ಭೋಗವಾದಿ ಅಂದರೆ ‘ತಿನ್ನು, ಕುಡಿ, ಮೋಜು ಮಾಡು’, ಈ ಸಿದ್ಧಾಂತವನ್ನು ಗ್ರಹಿಸಿದರೆ, ಈ ರೀತಿಯ ಜೀವನ ಎಂದರೆ ಯಶಸ್ವಿ ಜೀವನ ಎಂದು ಹೇಳಿದರೆ, ಅದಕ್ಕಾಗಿ ಈಶ್ವರನ ಆವಶ್ಯಕತೆಯೇ ಇಲ್ಲ, ಅದಕ್ಕೆ ಹೇರಳ ಸಂಪತ್ತಿನ ಆವಶ್ಯಕತೆ ಇರುತ್ತದೆ.

ಈ ರೀತಿಯ ಜೀವನವು ತಾತ್ಕಾಲಿಕ ಮತ್ತು ಸುಂದರ-ಆಕರ್ಷಕವೆನಿಸಿದರೂ, ಅದರ ಪರಿಣಾಮ ಬಹಳ ತೊಂದರೆದಾಯಕ ವೆಂದೇ ಸಿದ್ಧವಾಗುತ್ತದೆ. ಯಾರು ತಮ್ಮ ಜೀವನದ ಮಹತ್ವಪೂರ್ಣ ಕಾಲಾವಧಿಯನ್ನು ಈ ರೀತಿ ಕಳೆದಿರುವರೋ, ಅವರು ಮುಂದೆ ಭಯಾನಕ ಸಂಕಷ್ಟಗಳನ್ನು ಭೋಗಿಸಿದುದರ ಅನೇಕ ಉದಾಹರಣೆಗಳಿವೆ.

೧. ಯಶಸ್ವಿ ಜೀವನಕ್ಕಾಗಿ ಆವಶ್ಯಕವಿರುವ ಸಂಯಮವು ಈಶ್ವರನ ಅಸ್ತಿತ್ವದಿಂದ ಸಾಧ್ಯ !

ಯಶಸ್ವಿ ಜೀವನವೆಂದರೆ ನಿರಾಮಯ (ನೆಮ್ಮದಿಯ), ಸಮಾಧಾನಿ ಜೀವನವೆಂದು ನಿರ್ಧರಿಸಿದರೆ, ಅದಕ್ಕೆ ಯೋಗ್ಯ ಆಚಾರಧರ್ಮದ (ನಡವಳಿಕೆಯ) ಅವಶ್ಯಕತೆ ಇರುತ್ತದೆ. ಆಚಾರಧರ್ಮಕ್ಕೆ ಅಧಿಷ್ಠಾನವೆಂದು ‘ಈಶ್ವರ’ ಈ ಸಂಕಲ್ಪನೆಯ ಮೇಲೆ ಶ್ರದ್ಧೆ ಇರುವುದು ಉಪಯುಕ್ತವಾಗಿದೆ. ಅನೇಕ ಬಾರಿ ಧಾರ್ಮಿಕ ಆಚರಣೆಗಾಗಿ ಅವಶ್ಯಕವಾಗಿರುವ ಸಂಯಮವನ್ನು ಈಶ್ವರನ ಅಸ್ತಿತ್ವದ ಧಾರಣಶಕ್ತಿಯಿಂದ ಸಾಧಿಸುವುದು ಸಾಧ್ಯ ವಾಗುತ್ತದೆ. ‘ವೃತ್ತದಲ್ಲಿ ಪೊಲೀಸ್‌ ನಿಂತಿದ್ದಾನೆ’, ಎಂಬ ಕಲ್ಪನೆಯಿಂದ ವಾಹನಗಳು ವ್ಯವಸ್ಥಿತವಾಗಿ ಓಡುತ್ತವೆ.

೨. ಈಶ್ವರನ ಅಸ್ತಿತ್ವವು ಯಾರದ್ದಾದರೂ ನಂಬಿಕೆ ಅಥವಾ ಅಪನಂಬಿಕೆಯನ್ನು ಅವಲಂಬಿಸಿಲ್ಲ

ಈಶ್ವರನ ಅಸ್ತಿತ್ವವು ಯಾರಾದರೊಬ್ಬರ ನಂಬಿಕೆ ಅಥವಾ ಅಪನಂಬಿಕೆಯನ್ನು ಅವಲಂಬಿಸಿಲ್ಲ. ಯಾರ ಮನಸ್ಸು-ಬುದ್ಧಿ ವಿಕಸನಗೊಂಡಿಲ್ಲವೋ, ಯಾರು ಆಳವಾದ-ಸೂಕ್ಷ್ಮ ವಿಚಾರಗಳನ್ನು ಮಾಡಲು ಸಾಧ್ಯವಿಲ್ಲವೋ, ಅವರು ತಮ್ಮ ಸೀಮಿತ ಸಾಮರ್ಥ್ಯದಿಂದ ಒಂದು ವೇಳೆ ನಾಸ್ತಿಕವಾದವನ್ನು ನಂಬುವವರಿದ್ದರೂ, ಅವರ ಸ್ಥಾನದಲ್ಲಿಯೂ ಈಶ್ವರನ ಶಕ್ತಿಯು ಸಕ್ರಿಯವಾಗಿರುತ್ತದೆ. ಬಹುಶಃ ಅವರ ನಾಸ್ತಿಕತೆಯನ್ನೂ ಈಶ್ವರೀ ಶಕ್ತಿಯ ಅಧಿಷ್ಠಾನದಿಂದಾಗಿಯೇ ಪ್ರಸ್ತುತಪಡಿಸಲಾಗುತ್ತದೆ, ಎಂದು ಹೇಳಿದರೆ ತಪ್ಪಾಗಲಾರದು. ಯಾವುದೇ ಒಬ್ಬ ವ್ಯಕ್ತಿಯು (ಅಥವಾ ಸಮೂಹವು) ‘ನಾನು ಪೃಥ್ವಿಯ ಗುರುತ್ವಾಕರ್ಷಣೆಯನ್ನು ನಂಬುವುದಿಲ್ಲ’, ಎಂದು ಹೇಳಿದರೆ ಏನಾಗುತ್ತದೆ ? ವಿಜ್ಞಾನಿಗಳ ಸಭೆಯಲ್ಲಿ ಅವನನ್ನು ಅಜ್ಞಾನಿ(ಆಶಿಕ್ಷಿತ) ಎಂದು ಕರೆಯಲಾಗುತ್ತದೆ. ವಿಜ್ಞಾನದ ಕ್ಷೇತ್ರದಲ್ಲಿ ಮೂರ್ಖನಾಗುತ್ತಾನೆ; ಆದರೆ ಅವನನ್ನು ಭೂಮಿಯಿಂದ ಹೊರಗೆ ಎಸೆಯುವುದಿಲ್ಲ. ಇದರ ಪ್ರಮುಖ ಕಾರಣವೆಂದರೆ ಈಶ್ವರೀ ಶಕ್ತಿಯು ಈಶ್ವರನ ಆಯೋಜನೆಯ ಪ್ರಕಾರವೇ ಕಾರ್ಯನಿರತ ವಾಗಿರುತ್ತದೆ. ವ್ಯಕ್ತಿಯ ನಂಬಿಕೆಯ ಮೇಲಲ್ಲ !

೩. ಈಶ್ವರನ ಅಸ್ತಿತ್ವವನ್ನು ನಂಬದ ವ್ಯಕ್ತಿಯ ಮತ್ತು ಅವನ ಪ್ರಭಾವದಲ್ಲಿರುವ ಸಮಾಜಕ್ಕೆ ಹಾನಿಯಾಗುತ್ತದೆ !

ಆಸ್ತಿಕನಾಗಿರುವ ವ್ಯಕ್ತಿಯು ಜೀವನದಲ್ಲಿ ಸಂಘರ್ಷವನ್ನು ಯಶಸ್ವಿಯಾಗಿ ಮಾಡುತ್ತಿರುವಾಗ ಈಶ್ವರನಲ್ಲಿ ಅವನಿಗಿರುವ ಪ್ರಾಮಾಣಿಕ ಶ್ರದ್ಧೆಯು ಉದಾತ್ತ ಪ್ರೇರಣಾಶಕ್ತಿಯನ್ನು ನೀಡುತ್ತಿರು ತ್ತದೆ. ‘ನನ್ನ ಜೊತೆಗೆ ಪರಮೇಶ್ವರನಿದ್ದಾನೆ’, ಎಂಬ ಶ್ರದ್ಧೆ ಇದ್ದರೆ, ಅದನ್ನು ಆಶಾವಾದ ಎಂದು ಕರೆದರೂ, ವಿಜಯಾಭಿಲಾಷೆಯು ಕಾರ್ಯಶಕ್ತಿಯನ್ನು ಸ್ಥಿರ ಮಾಡಿ ಅದನ್ನು ಹೆಚ್ಚಿಸಲು ಉಪಯುಕ್ತವಾಗುತ್ತದೆ. ಇಂತಹ ಕಠಿಣ ಪ್ರಸಂಗಗಳಲ್ಲಿ ನಾಸ್ತಿಕನು ಏಕಾಂಗಿಯಾಗುತ್ತಾನೆ ಮತ್ತು ಪರಿಣಾಮ ಸ್ವರೂಪ ಧೈರ್ಯಗುಂದುತ್ತಾನೆ. ಅವನಲ್ಲಿರುವ ಕಾರ್ಯಶಕ್ತಿ ಕಡಿಮೆಯಾಗುತ್ತದೆ. ಆ ವ್ಯಕ್ತಿಯ ಮತ್ತು ಇಂತಹ ವ್ಯಕ್ತಿಯ ಪ್ರಭಾವಕ್ಕೆ ಒಳಗಾದ ಸಮಾಜಕ್ಕೂ ಹಾನಿಯಾಗುತ್ತದೆ.

– ಪ.ಪೂ. ಸ್ವಾಮಿ ವರದಾನಂದ ಭಾರತಿ (ವರ್ಷ ೧೯೯೮)

(ಆಧಾರ : ಗ್ರಂಥ ‘ಜಿಜ್ಞಾಸಾ’, ಶ್ರೀವರದಾನಂದ ಪ್ರತಿಷ್ಠಾನ, ಶ್ರೀ ಕ್ಷೇತ್ರ ಪಂಢರಾಪುರ)