ಮೋದಿಗೆ ಪತ್ರ ಬರೆದು ಮನವಿ ಮಾಡಿದ ಶೇಖ್ ಹಸೀನಾ ಪುತ್ರ ಸಾಜಿಬ್ ವಾಜೇದ್ ಜಾಯ್ !
ವಾಷಿಂಗ್ಟನ್ (ಅಮೇರಿಕಾ) – ಬಾಂಗ್ಲಾದೇಶದಲ್ಲಿ ಭಾರೀ ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲಿ ಅಲ್ಲಿನ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಸದ್ಯ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಅಮೇರಿಕದಲ್ಲಿ ನೆಲೆಸಿರುವ ಶೇಖ್ ಹಸೀನಾ ಅವರ ಪುತ್ರ ಸಾಜಿಬ್ ವಾಜೆದ್ ಜಾಯ್ ಅವರು ಭಾರತಕ್ಕೆ ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ. ವಾಷಿಂಗ್ಟನ್ ಡಿಸಿಯಿಂದ ವೀಡಿಯೊ ಪ್ರಸಾರ ಮಾಡಿದ ಜಾಯ್, “ನನ್ನ ತಾಯಿಯ (ಶೇಖ್ ಹಸೀನಾ) ಜೀವವನ್ನು ಉಳಿಸುವುದಕ್ಕಾಗಿ ಪ್ರಧಾನಿ ಮೋದಿಯವರ ಸರಕಾರವು ತೆಗೆದುಕೊಂಡ ತ್ವರಿತ ಕ್ರಮಕ್ಕಾಗಿ ನಾನು ವೈಯಕ್ತಿಕವಾಗಿ ಕೃತಜ್ಞನಾಗಿದ್ದೇನೆ ಎಂದು ಹೇಳಿದರು. ಅವರಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ. ನನ್ನ ಎರಡನೇ ಸಂದೇಶವೇನೆಂದರೆ, ಭಾರತವು ಜಾಗತಿಕ ನಾಯಕತ್ವದ ಪಾತ್ರವನ್ನು ವಹಿಸಬೇಕು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಇತರ ವಿದೇಶಿ ಶಕ್ತಿಗಳಿಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಸಂಪಾದಕೀಯ ನಿಲುವುಭಾರತವು ಪ್ರಪಂಚದ ಅನ್ಯ ರಾಷ್ಟ್ರಗಳಿಗಿಂತ ಮೊದಲು ಹಿಂದೂಗಳ ನೇತೃತ್ವವಹಿಸಬೇಕು ಮತ್ತು ಅವರನ್ನು ರಕ್ಷಿಸಬೇಕು ! |