ಢಾಕಾ (ಬಾಂಗ್ಲಾದೇಶ) – ಶೇಖ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ತೊರೆದ ನಂತರ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಆರಂಭವಾಗಿದೆ. ಮುಖ್ಯವಾಗಿ, ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಲಾಗುತ್ತಿದೆ. ಜನರ ಮನೆಗಳಿಗೆ ನುಗ್ಗಿ ಹಣ ಲೂಟಿ ಗೈದು ಮನೆ ಧ್ವಂಸಗೊಳಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ 12ನೇ ತರಗತಿಯಲ್ಲಿ ಕಲಿಯುತ್ತಿರುವ ಓರ್ವ ಹಿಂದೂ ಹುಡುಗಿಯ ಪತ್ರ ವ್ಯಾಪಕವಾಗಿ ಪ್ರಸಾರವಾಗಿದೆ. ಅವಳು ಭಾರತದ ಬಳಿ ನೆರವು ಕೋರಿದ್ದಾರೆ. ‘ಸ್ಪುಟ್ನಿಕ್ ಇಂಡಿಯಾ’ ಜಾಲತಾಣದಲ್ಲಿ ಈ ಪತ್ರ ಪ್ರಸಾರವಾಗಿದೆ. ಈ ಪತ್ರದಲ್ಲಿ ಸಂಬಂಧಪಟ್ಟ ಹುಡುಗಿಯು ಭಾರತ ಸರಕಾರದಿಂದ ಸಹಾಯವನ್ನು ಕೋರುತ್ತಿದ್ದಾಳೆ.
ಈ ಪತ್ರದಲ್ಲಿ,
1. ದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ವಿಶೇಷವಾಗಿ ಹಿಂದೂ ಮಹಿಳೆಯರು ಮತ್ತು ಹುಡುಗಿಯರನ್ನು ಗುರಿಯಾಗಿಸಲಾಗುತ್ತಿದೆ. ಅವರ ಮೇಲೆಯೂ ಬಲತ್ಕಾರವನ್ನೂ ಮಾಡುತ್ತಿದ್ದಾರೆ.
2. ಹಿಂದೂಗಳ ಅಂಗಡಿಗಳನ್ನು ನಿರಂತರವಾಗಿ ಲೂಟಿ ಮಾಡಿ ಲಕ್ಷಗಟ್ಟಲೆ ಹಣ ಲೂಟಿ ಮಾಡಲಾಗುತ್ತಿದೆ. ಹಿಂದೂಗಳ ಜೀವನ ಮತ್ತು ಮನೆಯ ಭದ್ರತೆಗಾಗಿ ಸಮಾಜಕಂಟಕರು ಲಕ್ಷಾಂತರ ರೂಪಾಯಿಗಳನ್ನು ಕೇಳುತ್ತಿದ್ದಾರೆ. ‘ಹಿಂದೂ ದೇಶವನ್ನು ಬಿಡದಿದ್ದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಬೆದರಿಕೆ ಹಾಕಲಾಗುತ್ತಿದೆ.
3. ನನಗೆ ಭಾರತ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ, ನಮಗೆ ಸಾಧ್ಯವಾದಷ್ಟು ಬೇಗ ನೆರವು ನೀಡುವಂತೆ ನಾನು ವಿನಂತಿಸುತ್ತೇನೆ. ನಮಗೆ ನಮ್ಮ ದೇಶದಲ್ಲಿ ಶಾಂತಿಯಿಂದ ಬದುಕಬೇಕಾಗಿದೆ.
4. ಭಾರತ ಸರಕಾರಕ್ಕೆ ನಮ್ಮ ವಿಷಯದಲ್ಲಿ ಕಾಳಜಿಯಿದೆ ಮತ್ತು ಬಹುಶಃ ಅಲ್ಲಿನ ಸರಕಾರ ನಮಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದೆ ಎಂದು ನನಗೆ ತಿಳಿದಿದೆ; ಆದರೆ ಇದರಲ್ಲಿ ವಿಳಂಬ ಮಾಡಿದರೆ ದೊಡ್ಡ ಅನಾಹುತವಾಗಬಹುದು. ಎಂದು ಹೇಳಿದೆ.
ಸಂಪಾದಕೀಯ ನಿಲುವುಬಾಂಗ್ಲಾದೇಶದ ಹಿಂದೂಗಳ ದುಃಸ್ಥಿತಿಯನ್ನು ಪರಿಗಣಿಸಿ, ಈಗಲಾದರೂ ಭಾರತ ಸರಕಾರವು ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗೆ ಸಹಾಯ ಮಾಡುತ್ತದೆಯೇ ? |