ಕ್ರೈಸ್ತ ಸಮಾಜ ಧರ್ಮದ ಆಧಾರದಲ್ಲಿ ಮತದಾನ ಮಾಡುವುದು, ಇದೇನೂ ಹೊಸ ವಿಷಯವಲ್ಲ !

೨೦೧೨ ರ ಚುನಾವಣೆಯಿಂದ ಅಂದಿನ ಮುಖ್ಯಮಂತ್ರಿಗಳು ಪರಾಕಾಷ್ಠೆಯ ಓಲೈಕೆ ಮಾಡಿಯೂ ಕ್ರೈಸ್ತರ ಮತಗಳು ಭಾಜಪಕ್ಕೆ ಸಿಗಲಿಲ್ಲ. ಆ ಸಂದರ್ಭದಲ್ಲಿ ಮೂಲ ಭಾಜಪದವರಲ್ಲದ ೬ ಜನ ಕ್ರೈಸ್ತ ಶಾಸಕರನ್ನು ಹಿಂದೂಬಹುಸಂಖ್ಯಾತ ಮತದಾರಕ್ಷೇತ್ರದಿಂದ ಆರಿಸಿಕೊಳ್ಳುವ ‘ಸೆಕ್ಯುಲರ್’ (ಜಾತ್ಯತೀತ) ಆಟ ಆಡಲಾಯಿತು. ‘ಕ್ರೈಸ್ತರು ಮತ್ತು ಆರ್ಚ್‌ಬಿಶಪ್‌ ಇವರು ಭಾಜಪ ಸರಕಾರವನ್ನು ಆರಿಸಿ ತಂದರು’, ಎಂಬ ಸುಳ್ಳನ್ನು ಗಲ್ಲಿಯಿಂದ ದಿಲ್ಲಿಯವರೆಗೆ ಹರಡಲಾಯಿತು. ಅದು ಎಷ್ಟು ಸುಳ್ಳಾಗಿದೆ ಎಂಬುದು ಖ್ಯಾತ ಉದ್ಯಮಿ ಹಾಗೂ ಅಂದಿನ ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಪದಾಧಿಕಾರಿ ಶ್ರೀ. ಅಶೋಕ ಚೌಗುಲೆಯವರ ವಿಶ್ಲೇಷಣೆಯ ವರದಿಯಿಂದ ಸಿದ್ಧವಾಗಿದೆ.

ಪ್ರಾ. ಸುಭಾಷ ವೆಲಿಂಗಕರ್‌

೨೦೧೪ ರ ಲೋಕಸಭೆಯಲ್ಲಿ ನ್ಯಾಯವಾದಿ ನರೇಂದ್ರ ಸಾವಯಿಕರ್‌ ಇವರು ಭಾಜಪದ ಸಂಸದರಾಗಿ ಆರಿಸಿ ಬಂದರು, ಅದು ಹಿಂದೂ ಮತದಾರರ ಹೆಚ್ಚುವರಿ ಮತದಾನದಿಂದಲೆ ! ಏಕೆಂದರೆ ಆಗ ಫಾದರ್‌ ಸೆಡ್ರಿಕ್‌ ಪ್ರಕಾಶ ಎಂಬ ಗುಜರಾತದ ಪಾದ್ರಿಯನ್ನು ಗೋವಾಗೆ ತಂದು ಆರ್ಚ್‌ಬಿಶಪರು ಅವನ ೮೦ ಸಭೆಗಳನ್ನು ಗೋವಾದಲ್ಲಿ ಮಾಡಿಸಿ ಮೋದಿಯವರ ಗುಜರಾತದಲ್ಲಿ ಕ್ರೈಸ್ತರ ಮೇಲೆ ಹೇಗೆ ಅತ್ಯಾಚಾರ ಮಾಡಲಾಗುತ್ತದೆ, ಎಂದು ಚರ್ಚ್‌ಗಳಿಂದ ಅಪ್ಪಟ ಸುಳ್ಳು ಪ್ರಚಾರ ಮಾಡಿದ್ದರು. ‘ನ್ಯಾಯವಾದಿ ಸಾವಯಿಕರ್‌ ಆರಿಸಿ ಬಂದರು, ಅದು ಹಿಂದೂಗಳ ಹೆಚ್ಚಿನ ಮತದಾರರಿಂದ’, ಎಂಬುದನ್ನು ಭಾಜಪದ ನೇತೃತ್ವ ಮರೆತು ಬಿಟ್ಟಿತ್ತು. ‘ಸಾಸಷ್ಟಿ ಮಿಶನ್‌’ನ ಮೃಗತೃಷ್ಣೆಯಲ್ಲಿ (ಮೃಗಜಲದಲ್ಲಿ) ಭಾಜಪ ಮುಳುಗಿತು ಹಾಗೂ ಅದರಲ್ಲಿ ಮೈಮರೆತು ಮುಂದೆ ಹಿಂದೂಗಳು ಇಚ್ಛಿಸುತ್ತಿದ್ದ ‘ಮಾತೃಭಾಷಾ ಮಾಧ್ಯಮ’ (ಪ್ರಾಥಮಿಕ ಶಿಕ್ಷಣದ ಮಾಧ್ಯಮ ಮಾತೃಭಾಷೆ ಆಗಿರಬೇಕು) ಸಮಸ್ಯೆಯನ್ನು ಅಂದಿನ ಮುಖ್ಯಮಂತ್ರಿ ಪರ್ರೀಕರ್‌ ಇವರು ಆರ್ಚ್‌ಬಿಶಪರ ಅಶ್ವಮೇಘದಲ್ಲಿ ಬಲಿದಾನ ನೀಡಿದ್ದರು.

ಗೋವಾ ಮುಕ್ತಿಯ ನಂತರದ ಮೊದಲ ಚುನಾವಣೆಯಿಂದ ಇಂದಿನವರೆಗೆ ಚರ್ಚ್ ತನ್ನ ನಿಲುವನ್ನು ಬದಲಾಯಿಸಿಲ್ಲ. ಭಾಜಪ ಮಾತ್ರ ಆರ್ಚ್‌ಬಿಶಪರ ಆರತಿಗಾಗಿ ಗೋವಾದ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಒಡೆದು ಹಾಕಿತು. ಈ ಹೀನ ರಾಜನೀತಿಯಲ್ಲಿ ಸಂಘವೂ ಅಪವಾದವಾಗಲಿಲ್ಲ ! ಈ ಭಾಜಪದ ಆರ್ಚ್‌ಬಿಶಪರ ಓಲೈಕೆಯು ೨೦೧೨ ರಿಂದಲೆ ಇದೆ ಎಂಬುದು ಇತಿಹಾಸವಾಗಿದೆ.

೨೦೨೪ ರ ಚುನಾವಣೆಯ ನಂತರ ನಮಗೆ ಅರಿವು ಮೂಡಿದೆ, ಈ ವಾಸ್ತವಿಕತೆಯಿಂದ ಆಗಿರುವ ಅನುಭವ ಶಾಶ್ವತವಾಗಿರಲಿ ! ೨೦೨೭ ರ ವಿಧಾನಸಭಾ ಚುನಾವಣೆಯಲ್ಲಿ ಅದರ ಪರಿಣಾಮ ಕಾಣಿಸುವುದು.

(ಗೋವಾದ ಮಾಜಿ ಸಂಘಚಾಲಕ ಮತ್ತು ಈಗಿನ ಹಿಂದೂ ಮಹಾರಕ್ಷಾ ಕೂಟದ ನಿಮಂತ್ರಕರಾದ ಪ್ರಾ. ಸುಭಾಷ ವೆಲಿಂಗಕರ್‌ ಇವರ ಫೇಸ್‌ಬುಕ್‌ ಖಾತೆಯ ಆಧಾರದಲ್ಲಿ)