ಸಂತರು ಮತ್ತು ಮಹರ್ಷಿಗಳು ಮಾಡುತ್ತಿರುವ ಆಧ್ಯಾತ್ಮಿಕ ಸ್ತರದ ಸಹಾಯದಿಂದಲೇ ಹಿಂದೂ ರಾಷ್ಟ್ರದ ಸ್ಥಾಪನೆ ಸಾಧ್ಯ ! – ಪರಾತ್ಪರ ಗುರು ಡಾ. ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೩. ಹಿಂದೂ ರಾಷ್ಟ್ರದ ಸ್ಥಾಪನೆಯಾಗಲು ಅನೇಕ ಸಂತರು ಮಾಡುತ್ತಿರುವ ಸಹಾಯ !

೩ ಇ. ಬೆಂಗಳೂರಿನ ಪೂ. ಸುಮತಿ ಅಕ್ಕನವರು ಅಖಿಲ ಜಗತ್ತಿನಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಲು ಸುಲಭವಾಗಬೇಕೆಂದು ದೇಹತ್ಯಾಗ ಮಾಡಿ ಪಾತಾಳಕ್ಕೆ ಹೋಗಿ ಕೆಟ್ಟ ಶಕ್ತಿಗಳನ್ನು ನಾಶ ಮಾಡಲು ಸಿದ್ಧರಾಗಿರುವುದು 

೨೦೧೫ ನೇ ಇಸವಿಯಲ್ಲಿ ಬೆಂಗಳೂರಿನ ಸ್ತ್ರೀ ಸಂತರಾದ ಪೂ. ಸುಮತಿಅಕ್ಕನವರು ಗೋವಾದ ರಾಮನಾಥಿಯಲ್ಲಿನ ಆಶ್ರಮಕ್ಕೆ ಬಂದಿದ್ದರು. ಮಾತನಾಡುವಾಗ ಅವರು ನನಗೆ ಹೇಳಿದರು,

ಪೂ. ಸುಮತಿಅಕ್ಕ : ೩ ತಿಂಗಳುಗಳ ನಂತರ ನಾನು ದೇಹತ್ಯಾಗ ಮಾಡಲಿದ್ದೇನೆ.

ಪರಾತ್ಪರ ಗುರು ಡಾ. ಆಠವಲೆ : ನಮಗೆ ಈಗ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಬೇಕಾಗಿದೆ. ಇದಕ್ಕಾಗಿ ನಮಗೆ ಸಂತರ ಆಶೀರ್ವಾದ ಮತ್ತು ಮಾರ್ಗದರ್ಶನ ಬೇಕು. ತಾವು ದೇಹತ್ಯಾಗವನ್ನು ಏಕೆ ಮಾಡುತ್ತೀರಿ ?

ಪೂ. ಸುಮತಿಅಕ್ಕ : ಪೃಥ್ವಿಯಲ್ಲಿ ಅಸುರರ ಕೃತ್ಯಗಳಿಂದಾಗಿ ಅಧರ್ಮವು ಹೆಚ್ಚಾಗುತ್ತದೆ. ನಂತರ ಭಗವಾನ ಶ್ರೀವಿಷ್ಣುವು ಪೃಥ್ವಿಯಲ್ಲಿ ಅವತರಿಸುತ್ತಾನೆ ಮತ್ತು ಅಸುರರೊಂದಿಗೆ (ಸೂಕ್ಷ್ಮದಿಂದ) ಯುದ್ಧ ಮಾಡುತ್ತಾನೆ. ಈಶ್ವರೀ ರಾಜ್ಯದ ಸ್ಥಾಪನೆ ಮಾಡುವ ಉದ್ದೇಶದಿಂದ ಹಿಂದಿನ ಕಾಲದಲ್ಲಿ, ರಾಮರಾಜ್ಯಕ್ಕಾಗಿ ಶ್ರೀರಾಮ, ಅನಂತರ ಶ್ರೀಕೃಷ್ಣ ಇವರಂತಹ ಅವತಾರಗಳಾದವು. ಭಗವಾನ ಶ್ರೀವಿಷ್ಣುವಿನ ಹತ್ತು ಅವತಾರಗಳಾದವು. ಆ ಅವತಾರಗಳು ಇದೇ ಕಾರ್ಯವನ್ನು ಮಾಡಿವೆ. ಭಗವಾನ ಶ್ರೀವಿಷ್ಣುವು ವಿಷ್ಣುಲೋಕದಲ್ಲಿದ್ದು ಪೃಥ್ವಿಯ ಕಾರ್ಯವನ್ನು ಮಾಡುವುದಿಲ್ಲ. ಅವನು ಸ್ವತಃ ಪೃಥ್ವಿಯಲ್ಲಿ ಅವತರಿಸುತ್ತಾನೆ. ಈಗ ಆರನೇ ಮತ್ತು ಏಳನೇ ಪಾತಾಳಗಳಲ್ಲಿನ ಕೆಟ್ಟ ಶಕ್ತಿಗಳು ಪೃಥ್ವಿಯ ಮೇಲೆ ದಾಳಿ ಮಾಡುವವು ! ಈ ದಾಳಿಗಳ ಸಮಯದಲ್ಲಿ ನಾನು ಪೃಥ್ವಿಯಲ್ಲಿದ್ದು ದೇಹಧಾರಣೆ ಮಾಡಿ ಅವರೊಂದಿಗೆ ಹೋರಾಡಲು ಸಾಧ್ಯವೇ ? ನಾನು ದೇಹತ್ಯಾಗ ಮಾಡಿದರೆ, ಸೂಕ್ಷ್ಮದಿಂದ ಪಾತಾಳಕ್ಕೆ ಹೋಗಿ ಹೋರಾಡುವೆನು ಮತ್ತು ಆ ಕೆಟ್ಟ ಶಕ್ತಿಗಳನ್ನು ನಾಶ ಮಾಡುವೆನು. ಆದುದರಿಂದ ತಮಗೆ ಇಡೀ ಜಗತ್ತಿನಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಲು ಸುಲಭವಾಗುವುದು.

ಇಸ್ವಿ ೨೦೦೨ ರಿಂದ ಕೆಟ್ಟ ಶಕ್ತಿಗಳೊಂದಿಗೆ ನಮ್ಮ ಸೂಕ್ಷ್ಮ ಯುದ್ಧ ನಡೆದಿದೆ. ಆರಂಭದಲ್ಲಿ ಒಂದನೇ ಪಾತಾಳ, ನಂತರ ಎರಡನೇ ಪಾತಾಳದ ಕೆಟ್ಟ ಶಕ್ತಿಗಳೊಂದಿಗೆ ಯುದ್ಧ ಮಾಡಿ ಅವರನ್ನು ಸೋಲಿಸುತ್ತಾ ನಾವು ಏಳನೇ ಪಾತಾಳದ ವರೆಗೆ ತಲುಪಿದ್ದೇವೆ. ಆ ಸ್ತ್ರೀ ಸಂತರ ಮಾತೂ ಈಗ ನಾನು ಹೇಳಿದಂತಿತ್ತು. ಸಂತರಿಗೆ ಸೂಕ್ಷ್ಮದಲ್ಲಿನ ಎಲ್ಲ ವಿಷಯಗಳು ಗೊತ್ತಿರುತ್ತದೆ.

ಇದು ಅಧ್ಯಾತ್ಮದ ಮಹತ್ವವಾಗಿದೆ. ಆ ಸಂತರು ಕೇವಲ ಭಾರತದಲ್ಲಷ್ಟೇ ಹಿಂದೂ ರಾಷ್ಟ್ರದ ಸ್ಥಾಪನೆಯ ವಿಚಾರ ಮಾಡದೇ ಸಂಪೂರ್ಣ ಜಗತ್ತಿನ ವಿಚಾರ ಮಾಡಿದ್ದರು ! ಸಂತರ ಕಾರ್ಯಕ್ಕೆ ಹೋಲಿಸಿದರೆ ಕಾರ್ಯಕರ್ತರಿಂದಾಗುವ ಹಿಂದುತ್ವದ ಕಾರ್ಯ, ಚಿಕ್ಕ ಮಕ್ಕಳ ಒಂದು ಆಟದಂತಿದೆ. ಈ ಕಾರ್ಯದ ಮಾಧ್ಯಮದಿಂದ ಸಾಧನೆಯನ್ನು ಮಾಡಿ ಕಾರ್ಯಕರ್ತರು ತಮ್ಮ ಆಧ್ಯಾತ್ಮಿಕ ಪ್ರಗತಿ ಮಾಡಿಕೊಳ್ಳಬೇಕು.

೪. ಈಶ್ವರೀ ಆಯೋಜನೆಗನುಸಾರ ನಾಡಿಪಟ್ಟಿಗಳ ಮೂಲಕ ಮಹರ್ಷಿಗಳ ಮಾರ್ಗದರ್ಶನ ದೊರಕಿ ಆಧ್ಯಾತ್ಮಿಕ ಸ್ತರದಲ್ಲಿ ಸಹಾಯವಾಗುವುದು

ಅಧ್ಯಾತ್ಮದಲ್ಲಿ ನಮಗಿಂತ ಮುಂದಿರುವವರನ್ನು ಕೇಳಿಯೇ ಎಲ್ಲವನ್ನೂ ಮಾಡಬೇಕು. ನಾವೂ ಇತರರಲ್ಲಿ ಕೇಳಿಯೇ ಕಾರ್ಯವನ್ನು ಮಾಡುತ್ತೇವೆ. ಆದುದರಿಂದ ದೊಡ್ಡ ದೊಡ್ಡ ಸಂತರು ನಮಗೆ ಸಹಾಯ ಮಾಡುತ್ತಾರೆ. ಈಗ ನಮ್ಮ ಜೀವನದಲ್ಲಿ ಮಹರ್ಷಿಗಳೂ ಬಂದಿದ್ದಾರೆ. ಮಹರ್ಷಿಗಳು ಸಾವಿರಾರು ವರ್ಷಗಳ ಹಿಂದೆ ಭವಿಷ್ಯದಲ್ಲಿನ ಘಟನೆಗಳ ಬಗ್ಗೆ  ಏನೆಲ್ಲ ಹೇಳಿದ್ದರೋ, ಅದನ್ನು ವಿವಿಧ ನಾಡಿಪಟ್ಟಿಗಳಲ್ಲಿ ಬರೆದಿಟ್ಟಿದ್ದಾರೆ. ನಾಡಿಪಟ್ಟಿಯನ್ನು ಓದಿ ನಾಡಿಪಟ್ಟಿಯ ವಾಚಕರು ನಮಗೆ ಆ ಬಗ್ಗೆ ಹೇಳುತ್ತಾರೆ. ಮಹರ್ಷಿಗಳು ನಮಗೆ ನಾಡಿಪಟ್ಟಿ ಮೂಲಕ ಮಾರ್ಗದರ್ಶನ ಮಾಡುತ್ತಾರೆ, ‘ಈ ಯಜ್ಞವನ್ನು ಮಾಡಿ, ಈ ಅನುಷ್ಠಾನವನ್ನು ಮಾಡಿ ಅಥವಾ ಇಂತಹ ಸ್ಥಳದಲ್ಲಿರುವ ತೀರ್ಥಕ್ಷೇತ್ರಗಳ ದರ್ಶನ ಪಡೆಯಲು ಹೋಗಿ.’ ನಾವು ಮಹರ್ಷಿಗಳ ಆಜ್ಞೆಯಂತೆ ಎಲ್ಲ ಕೃತಿಗಳನ್ನು ಮಾಡುತ್ತೇವೆ.

ತಿರುವಣ್ಣಾಮಲೈ (ತಮಿಳುನಾಡು) ನಲ್ಲಿನ ಸಪ್ತರ್ಷಿ ಜೀವನಾಡಿ-ಪಟ್ಟಿ ನಾಡಿವಾಚಕರು, ಹೋಶಿಯಾರಪುರ (ಪಂಜಾಬ)ದ ಭೃಗು ಸಂಹಿತೆಯ ನಾಡಿವಾಚಕರು ಮತ್ತು ಪುಣೆಯ (ಮಹಾರಾಷ್ಟ್ರ)ಅತ್ರಿ ಸಂಹಿತೆಯ ನಾಡಿವಾಚಕರು ಈ ಮೂವರಿಗೂ ಪರಸ್ಪರರ ಪರಿಚಯವಿಲ್ಲ; ಆದರೆ ಈ ೩ ನಾಡಿಪಟ್ಟಿಗಳಲ್ಲಿ, ‘ಇಂತಹ ನಿರ್ದಿಷ್ಟ ದಿನ ನಾವು ಗೋವಾದ ಸನಾತನದ ರಾಮನಾಥಿ ಆಶ್ರಮಕ್ಕೆ ಹೋಗಬೇಕು’, ಎಂದು ಬರೆಯಲಾಗಿತ್ತು. ಈಶ್ವರನ ಈ ಆಯೋಜನೆ ಮನುಷ್ಯನ ಅಲ್ಪಬುದ್ಧಿಗೆ ಹೇಗೆ ಅರ್ಥವಾಗಬಲ್ಲದು ?

(ಮುಕ್ತಾಯ)

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.