ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇವರಿಂದ ಹಸ್ತದಿಂದ ಲೋಕಾರ್ಪಣೆ !
ವ್ಹಿಯೆಂಟಿಯಾನ್ (ಲಾವೋ) – ವಿದೇಶಾಂಗ ಸಚಿವ ಡಾ. ಎಸ್. ಜೈ ಶಂಕರ ಇವರು ಲಾವೋ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ (ಲಾವೋ ಪೀಡಿಆರ್) ಈ ದೇಶದ ಮೂರು ದಿನದ ಭೇಟಿಯ ಸಮಯದಲ್ಲಿ ಅಯೋಧ್ಯೆಯ ಶ್ರೀ ರಾಮನಲ್ಲಾನ ಮೊದಲ ಅಂಚೆ ಚೀಟಿ ಲೋಕಾರ್ಪಣೆಗೊಳಿಸಿದರು. ಆಸಿಯನ (ದಕ್ಷಿಣ ಪೂರ್ವ ಏಷ್ಯಾದಲ್ಲಿನ ದೇಶದ ಸಂಘಟನೆಗಳಿಗೆ) ಸಂಬಂಧ ಪಟ್ಟ ವಿದೇಶಾಂಗ ಸಚಿವರ ಕಾರ್ಯಕ್ರಮದಲ್ಲಿ ಉಪಸ್ಥಿತರಾಗಲು ಅವರು ಲಾವೋದ ರಾಜಧಾನಿ ವ್ಹಿಯೆಂಟಿಯಾನ್ ಗೆ ಹೋಗಿದ್ದರು.
ಶ್ರೀರಾಮಲಲ್ಲಾನ ಅಂಚೆ ಚೀಟಿ ಪ್ರಕಾಶೀತ !
ವ್ಹಿಯೆಂಟಿಯಾನ್ ಇಲ್ಲಿ ಜೈ ಶಂಕರ್ ಮತ್ತು ಲಾವೋದ ಉಪ ಪ್ರಧಾನಮಂತ್ರಿ ಹಾಗೂ ವಿದೇಶಾಂಗ ಸಚಿವ ಸೇಲುಮಕ್ಸೆ ಕೋಮಾಸಿಥ ಇವರು ಜಂಟಿಯಾಗಿ ಎರಡು ಅಂಚೆ ಚೀಟಿ ಲೋಕಾರ್ಪಣೆಗೊಳಿಸಿದರು.’ಲಾವೋ ಮತ್ತು ಭಾರತದ ಏಕತ್ರಿತ ಸಾಂಸ್ಕೃತಿಕ ಪರಂಪರೆ ಆಚರಿಸುವುದು’, ಈ ಪರಿಕಲ್ಪನೆಯಿಂದ ಈ ಅಂಚೆ ಚೀಟಿ ಪ್ರಕಾಶೀತಗೊಳಿಸಲಾಗಿದೆ. ಒಂದು ಅಂಚೆ ಚೀಟಿಯ ಮೇಲೆ ಅಯೋಧ್ಯೆಯಲ್ಲಿನ ಶ್ರೀರಾಮಲಲ್ಲನ ಮೂರ್ತಿ ಮುದ್ರಿಸಲಾಗಿದೆ ಹಾಗೂ ಇನ್ನೊಂದು ಅಂಚೆ ಚೀಟಿಯ ಮೇಲೆ ಲುವಾಂಗ್ ಪ್ರಬಾಂಗದ ಭಗವಾನ್ ಬುದ್ಧನ ನೆನಪಿಗಾಗಿ ಮುದ್ರಿಸಲಾಗಿದೆ. ಲುವಾಂಗ್ ಪ್ರಬಾಂಗ ಇದು ಲಾವೋದ ಪ್ರಾಚೀನ ರಾಜಧಾನಿಯಾಗಿದೆ.
ಲಾವೋ ಈಗ ಪ್ರಮುಖವಾಗಿ ಬೌದ್ಧ ದೇಶವಾಗಿದೆ; ಆದರೆ ಅದರ ಸಂಸ್ಕೃತಿ ಮತ್ತು ಪರಂಪರೆಯ ಮೇಲೆ ಹಿಂದೂ ಧರ್ಮದ ಪ್ರಭಾವವಿದೆ. ಲಾವೋದಲ್ಲಿ ರಾಮಾಯಣವನ್ನು ‘ರಾಮಕಿಯೇನ್’ ಅಥವಾ ‘ಫ್ರಾ ಲಕ ಫ್ರಾ’ ರಾಮಕಥೆಯೆಂದು ಗುರುತಿಸಲಾಗುತ್ತದೆ ಮತ್ತು ಲಾವೋದಲ್ಲಿನ ಮಹತ್ವಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮದ ಸಮಯದಲ್ಲಿ ಇದನ್ನು ಪ್ರಸ್ತುತಪಡಿಸಲಾಗುತ್ತದೆ.