‘ಚುನಾವಣೆಯಲ್ಲಿ ನಡೆಯುವ ಹಸ್ತಕ್ಷೇಪವು ಚುನಾವಣೆಯ ಪ್ರಾರಂಭದಿಂದಲೇ ಆರಂಭವಾಗಿದೆ. ಯಾವಾಗ ಈ ಆಟದಲ್ಲಿನ ತಜ್ಞರಿಗೆ ಅವರೇ ಸಿದ್ಧಪಡಿಸಿದ ಯುಕ್ತಿಯಿಂದ ಕಚ್ಚಿಸಿಕೊಳ್ಳಬೇಕಾಗುತ್ತದೆಯೋ, ಆಗ ಈ ಶಬ್ದಕ್ಕೆ ಪೂರ್ಣ ವಿಕಾಸದ ಮಹತ್ವ ಪ್ರಾಪ್ತವಾಗುತ್ತದೆ. ಊರ್ಜೆಗನುಸಾರ ಚುನಾವಣೆಗಳಲ್ಲಿನ ಹಸ್ತಕ್ಷೇಪವು ಮೇಲಿಂದ ಕೆಳಗಿನ ವರೆಗೆ ಆಗುತ್ತಾ ಇರುತ್ತದೆ. ಈಗ ಆಗಿರುವ ಹಸ್ತಕ್ಷೇಪವು ಮೊದಲ ಅಥವಾ ಕೊನೆಯದ್ದೆಂದು ತಿಳಿಯಬಾರದು. ಈ ಲೇಖನದಲ್ಲಿ ಅದರಲ್ಲಿನ ಎಲ್ಲ ಯುಕ್ತಿಗಳ ಉಲ್ಲೇಖ ಇದೆ ಎಂದೂ ಹೇಳಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಕಥಾನಕದ (ಕಥೆಕಟ್ಟುವವರ) ಮಹತ್ವದ ಪಾತ್ರ ಹಾಗೂ ಅದನ್ನು ಹೇಗೆ ಹರಡಲಾಗುತ್ತದೆ, ಎಂಬುದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇದಾಗಿದೆ.
೧. ಭೂರಾಜಕೀಯ ಚದುರಂಗದ ಹಲಗೆಯ ಮೇಲೆ ಭಾರತ ಕೇಂದ್ರಸ್ಥಾನದಲ್ಲಿ
‘೨೦೨೪ ಇದು ಜಗತ್ತಿನ ಪ್ರಜಾಪ್ರಭುತ್ವಕ್ಕಾಗಿ ಮಹತ್ವದ ವರ್ಷವಾಗಿದೆ. ಈ ವರ್ಷ ಸರಕಾರದ ಆಯ್ಕೆಗಾಗಿ ೬೦ ಕ್ಕಿಂತ ಹೆಚ್ಚು ರಾಷ್ಟ್ರಗಳಲ್ಲಿ ಚುನಾವಣೆಗಳ ಆಯೋಜನೆಯಾಗಿದೆ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಆಗಿರುವ ಭಾರತದಲ್ಲಿ ೧೯ ಎಪ್ರಿಲ್ ನಿಂದ ೧ ಜೂನ್ ೨೦೨೪ ಈ ಅವಧಿಯಲ್ಲಿ ಚುನಾವಣೆಗಳಾದವು. ಈ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಜನರ ಸಹಭಾಗವು ಜಗತ್ತಿನ ಗಮನ ಸೆಳೆಯಿತು. ಈ ಬಾರಿ ೧೪೦ ಕೋಟಿ ಜನರಲ್ಲಿ ಮತದಾನದ ಅರ್ಹತೆ ಇರುವ ೯೬ ಕೋಟಿ ಜನರಿಗೆ ಪ್ರಜಾಪ್ರಭುತ್ವದ ನಿಜ ಸ್ವರೂಪವನ್ನು ತೋರಿಸುವ ಅವಕಾಶ ಸಿಕ್ಕಿತು. ವಿಭಾಗೀಯ ಅಧಿಕಾರಗಳಲ್ಲ್ಲಿ ಭಾರತದ ಉದಯ ಹಾಗೂ ಭೂರಾಜಕೀಯ ಯುಕ್ತಿಯ ದೃಷ್ಟಿಯಲ್ಲಿ ಹೆಚ್ಚಾಗಿರುವ ಭಾರತದ ಮಹತ್ವದಿಂದ ಭಾರತದಲ್ಲಿನ ಚುನಾವಣೆಯು ವೈಶ್ವಿಕ ಘಟನೆಯಾಯಿತು. ಭೂರಾಜಕೀಯದ ದೃಷ್ಟಿಕೋನದಿಂದ ನೋಡಿದಾಗ ಭಾರತದಲ್ಲಿನ ಚುನಾವಣೆಗಳಿಗೆ ಜಗತ್ತಿನಲ್ಲಿ ಅತ್ಯಂತ ಮಹತ್ವ ಪ್ರಾಪ್ತಿಯಾಯಿತು. ಭಾರತವು ಈಗ ಉದಯಿಸಿರುವಂತಹ ಮಹತ್ವದ ಹಾಗೂ ಹೊಸ ಆರ್ಥಿಕ ಅಧಿಕಾರಿ ಆಗಿದೆ. ಆದ್ದರಿಂದ ಚುನಾವಣೆಯ ಫಲಿತಾಂಶವು ಜಗತ್ತಿನ ಅರ್ಥಶಾಸ್ತ್ರವನ್ನು ಸಿದ್ಧಗೊಳಿಸುವಲ್ಲಿ ಮಹತ್ವದ ಪಾತ್ರ ನಿಭಾಯಿಸಬಲ್ಲದು.
ಈಗ ಅಧಿಕಾರಕ್ಕೆ ಬಂದಿರುವ ಪಕ್ಷದ ನೇತೃತ್ವದಡಿಯಲ್ಲಿ ಕಾರ್ಯಾಲಯದಲ್ಲಿ ನಿರ್ಧರಿಸಲ್ಪಡುವ ವಿದೇಶಾಂಗ ಧೋರಣೆಯಿಂದ ಅದು ಪ್ರಾರಂಭವಾಗುತ್ತದೆ. ಅಮೇರಿಕಾ, ಚೀನಾ ಮತ್ತು ರಶ್ಯಾ ಈ ದೇಶಗಳೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಸೂಕ್ಷ್ಮದಿಂದ ಸಮತೋಲನವನ್ನು ನಾಜೂಕಾಗಿ ನಿಭಾಯಿಸುವಾಗ ಭಾರತವು ಕೆಲವೊಮ್ಮೆ ತನ್ನ ಸ್ವತಂತ್ರ ನಿಲುವಿನೊಂದಿಗೆ ಈ ದೇಶಗಳನ್ನು ಆಶ್ಚರ್ಯಗೊಳಿಸಿದೆ. ರಶ್ಯಾ-ಉಕ್ರೇನ್ ಯುದ್ಧ ಅಥವಾ ಇಸ್ರೈಲ್-ಹಮಾಸ್ ಯುದ್ಧದ ಜಾಗತಿಕ ಸಂಕಟದ ಸಮಯದಲ್ಲಿ ಭಾರತ ತನ್ನದೇ ಆದ ಪ್ರತ್ಯೇಕ ವಿದೇಶಾಂಗ ಧೋರಣೆಯನ್ನು ತೋರಿಸಿ ಕೊಟ್ಟಿದೆ. ಆದ್ದರಿಂದ ‘ಭೌಗೋಳಿಕ ರಾಜಕೀಯದ ಚದುರಂಗದ ಹಲಗೆಯ ಮೇಲೆ ಭಾರತವು ಕೇಂದ್ರಸ್ಥಾನದಲ್ಲಿದೆ’, ಎಂದು ನಾವು ಹೇಳಬಹುದು.
ಕೇವಲ ‘ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ’ ಎಂದಷ್ಟೆ ಅಲ್ಲ, ಹೊಸತಾಗಿ ಉತ್ಕರ್ಷ ಹೊಂದುತ್ತಿರುವ ಆರ್ಥಿಕ ಸ್ಥಿತಿ ಹಾಗೂ ಯುಕ್ತಿಯಲ್ಲಿಯೂ ಮುಂಚೂಣಿಯಲ್ಲಿರುವ ದೇಶವೆಂದು ಭಾರತದ ಮಹತ್ವ ಹೆಚ್ಚಾಗುತ್ತಿದೆ. ಆದ್ದರಿಂದ ಈ ‘ಡಿಜಿಟಲ್’ ಯುಗದಲ್ಲಿ ಕಥೆಗಳನ್ನು ಸೃಷ್ಟಿ ಮಾಡುವ ಜಾಗತಿಕ ಪ್ರಸಾರಮಾಧ್ಯಮಗಳು ಮತ್ತು ಬುದ್ಧಿವಂತರಿಗೆ ಜಗತ್ತಿನ ದೊಡ್ಡ ಪ್ರಜಾಪ್ರಭುತ್ವದಲ್ಲಿ ಘಟಿಸುವ ಈ ಘಟನೆಗಳ ಮೇಲೆ ಹೆಚ್ಚು ಗಮನಹರಿಸುವುದು ಅನಿವಾರ್ಯವಾಗಿದೆ.
೨. ದೇಶಿ ಹಾಗೂ ವಿದೇಶಿ ಪ್ರಸಾರಮಾಧ್ಯಮಗಳ ಲೋಕಸಭಾ ಚುನಾವಣೆಯಲ್ಲಿ ಹಸ್ತಕ್ಷೇಪ
ಪ್ರಸಾರಮಾಧ್ಯಮಗಳು ಅಥವಾ ವರ್ತಮಾನಪತ್ರಿಕೆಗಳು ಪ್ರಜಾಪ್ರಭುತ್ವದ ಬಲಿಷ್ಠ ಸ್ತಂಭಗಳಾಗಿವೆ. ಚುನಾವಣೆಯಲ್ಲಿ ಅವುಗಳ ಜವಾಬ್ದಾರಿ ಹೆಚ್ಚು ಪ್ರಮಾಣದಲ್ಲಿದೆ. ಅವು ತಮ್ಮ ಸ್ವಾರ್ಥಕ್ಕಾಗಿ ಚುನಾವಣೆಯ ಪ್ರಕ್ರಿಯೆಯಲ್ಲಿ ಅನಗತ್ಯ ಹಸ್ತಕ್ಷೇಪ ಮಾಡದೆ ನೈತಿಕ ಮೌಲ್ಯವನ್ನು ಜೋಪಾನ ಮಾಡಬೇಕು. ಯಾವಾಗ ಕೋಟಿಗಟ್ಟಲೆ ಹಿಂದೂಗಳು ತಮ್ಮ ಭವಿಷ್ಯವನ್ನು ನಿರ್ಧರಿಸುತ್ತಿದ್ದರೊ, ಆಗ ದುರದೃಷ್ಠವಶಾತ್ ಜಾಗತಿಕ ಪ್ರಸಿದ್ಧಿಮಾಧ್ಯಮಗಳ ಒಂದು ವಿಭಾಗ ಹಾಗೂ ಕೆಲವು ವಿದ್ವಾಂಸರು ತಮ್ಮ ಪ್ರಭಾವವನ್ನು ಸಮಾಜದ ಮೇಲೆ ಬೀರಲು ದೊಡ್ಡ ಪ್ರಮಾಣದಲ್ಲಿ ಹಣವನ್ನು ವಿನಿಯೋಗಿಸುತ್ತಿದ್ದರು. ಈ ನಿಯೋಜನೆಯ ವ್ಯಾಪ್ತಿ ಕೇವಲ ಪಾಶ್ಚಿಮಾತ್ಯ ಪ್ರಸಿದ್ಧಿಮಾಧ್ಯಮಗಳಿಗಷ್ಟೆ ಸೀಮಿತವಾಗಿರಲಿಲ್ಲ, ಭಾರತದಲ್ಲಿನ ಕೆಲವು ಪ್ರಸಿದ್ಧಿಮಾಧ್ಯಮಗಳು ಕೂಡ ಅದರಲ್ಲಿ ಮುಂಚೂಣಿಯಲ್ಲಿದ್ದವು. ಭಾರತದಲ್ಲಿನ ಚುನಾವಣೆಯ ವಿಷಯದಲ್ಲಿ ವಾರ್ತೆಗಳನ್ನು ನೀಡುವಾಗ ಪಾಶ್ಚಾತ್ಯ ಪ್ರಸಿದ್ಧಿಮಾಧ್ಯಮಗಳು ಚುನಾವಣೆಗೆ ಸಂಬಂಧಿಸಿದ ಎಲ್ಲ ವಿಷಯಗಳ ಕುರಿತು (ಒಂದು ಪ್ರಸಿದ್ಧಿಮಾಧ್ಯಮ ಬೇಸಿಗೆಯ ಉರಿ ಬಿಸಿಲಿನಲ್ಲಿ ಚುನಾವಣೆಯನ್ನು ಇಟ್ಟುಕೊಂಡಿರುವ ಚುನಾವಣಾ ಆಯೋಗವನ್ನು ದೋಷಿ ಎಂದು ನಿರ್ಧರಿಸಿತು.) ನಿರಂತರ ಆಕ್ರಮಣ ಮಾಡುತ್ತಿದ್ದವು. ಮೇಲ್ನೋಟಕ್ಕೆ ಇದರಲ್ಲಿ ಏನಾದರೂ ವಿಶೇಷವಿದೆ ಎಂದು ಅನಿಸುತ್ತಿರಲಿಲ್ಲ. ಭಾರತದಲ್ಲಿನ ಚುನಾವಣೆಯ ವಿಷಯದಲ್ಲಿ ಲೇಖನ, ಸಂಶೋಧನಾತ್ಮಕ ವರದಿಗಳು ಇತ್ಯಾದಿಗಳ ಮೂಲಕ ೬ ತಿಂಗಳು ಅಸಂಬದ್ಧ ಲೇಖನಗಳನ್ನು ಪ್ರಸಿದ್ಧ ಮಾಡಲಾಗುತ್ತಿತ್ತು. (ಅವುಗಳಲ್ಲಿನ ಹೆಚ್ಚಿನ ಲೇಖನಗಳನ್ನು ಕೆಲವು ಸಂಸ್ಥೆಗಳಿಂದ ಬಿಡುಗಡೆ ಮಾಡಲಾಗಿತ್ತು) ದಕ್ಷಿಣ ಏಶಿಯಾದ ಜನರು ಈ ಪಾಶ್ಚಾತ್ಯ ಪ್ರಸಿದ್ಧಿಮಾಧ್ಯಮಗಳಿಗೆ ಬೆಲೆ ಕೊಡುವುದಿಲ್ಲ ಎಂಬುದು ಅವರ ಪೂರ್ವಗ್ರಹಯುಕ್ತ ಸಂಪಾದಕೀಯ ಹಾಗೂ ವರ್ಚಸ್ವವಾದಿ ಸಾಹಿತ್ಯಗಳಲ್ಲಿರುವ ವಸಾಹತುವಾದದ ಪ್ರಭಾವದಿಂದ ಕಂಡು ಬರುತ್ತದೆ; ಆದರೆ ಈ ಬಾರಿ ಭಾರತದ ಚುನಾವಣೆಯ ವಿಷಯದಲ್ಲಿ ಹೇಳುವಾಗ ಅವರ ಧ್ವನಿ ಸ್ವಲ್ಪ ಬೇರೆಯಾಗಿತ್ತು. ಈ ಹಿಂದೆ ಈ ವಿಷಯದಲ್ಲಿ ಸಂಶಯಪಟ್ಟಿದ್ದ ‘ಬಿ.ಬಿ.ಸಿ’, ‘ವಾಶಿಂಗ್ಟನ್ ಪೋಸ್ಟ್’ ಹಾಗೂ ‘ನ್ಯೂಯಾರ್ಕ್ ಟೈಮ್ಸ್’ ಇವುಗಳು ಭಾರತದಲ್ಲಿ ಪ್ರಸಾರ ಮಾಡುವುದರ ಹಿಂದಿನ ಉದ್ದೇಶವನ್ನು ಇತರರು ತೆರೆದಿಟ್ಟಿದ್ದಾರೆ. ಈ ಚುನಾವಣೆಯ ಸಮಯದಲ್ಲಿ ಕೆಲವರಿಂದ ಸಮನ್ವಯ ಸಾಧಿಸಿ ಪ್ರಯತ್ನಿಸಲಾಯಿತು. ಜಾಗತಿಕ ಸ್ತರದಲ್ಲಿನ ಪ್ರಸಿದ್ಧಿಮಾಧ್ಯಮಗಳಿಂದ ಕೆಲವು ವಿಶಿಷ್ಟ ಕಟ್ಟುಕಥೆಗಳನ್ನು ಪ್ರಸಾರ ಮಾಡಿ ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಲಾಯಿತು. ನಮಗೆ ಆಶ್ಚರ್ಯದ ವಿಷಯವೆಂದರೆ, ಈ ಪ್ರಯತ್ನ ಫ್ರೆಂಚ್ ಪ್ರಸಿದ್ಧಿಮಾಧ್ಯಮಗಳ ಮೂಲಕ ಮಾಡಲಾಯಿತು. ಇದರಲ್ಲಿ ಫ್ರಾನ್ಸ್‌ನ ಪ್ರಭಾವಿ ಹಾಗೂ ತುಂಬಾ ಖರ್ಚಾಗುವ ‘ಲೀ ಮೋಂದೆ’ ಈ ವರ್ತಮಾನಪತ್ರಿಕೆಯ ಸಮಾವೇಶವಿತ್ತು. ಈ ಎಲ್ಲವನ್ನೂ ಗಮನಿಸುವಂತಹ ನಮೂನೆ, ಅಂದರೆ ಸಂಪಾದಕೀಯ ತಜ್ಞ ಹಾಗೂ ಸಂಶೊಧಕರಾಗಿರುವ ಖ್ರಿಸ್ತೋಫೆ ಜೆಫ್ರಿಲಾಟ್ ಇವರ ಸಂದರ್ಶನ ಅಥವಾ ಹೇಳಿಕೆಯನ್ನು ಆಧರಿಸಿತ್ತು.
೩. ಚುನಾವಣೆಯ ಮೇಲೆ ಪ್ರಭಾವ ಬೀರಲು ವಿದೇಶಿ ಸಂಸ್ಥೆಗಳಿಂದ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಸಹಾಯ
ಭಾರತೀಯ ಚುನಾವಣೆಯ ವಿಷಯದಲ್ಲಿ ಚರ್ಚೆಗಳ ವಿಶ್ಲೇಷಣೆ ಮಾಡುವಾಗ ಪಾಶ್ಚಿಮಾತ್ಯ ಪ್ರಸಿದ್ಧಿಮಾಧ್ಯಮಗಳು ಹಾಗೂ ಭಾರತದಲ್ಲಿನ ಕೆಲವು ಪ್ರಸಿದ್ಧಿಮಾಧ್ಯಮಗಳು ಬರೆದಿರುವ ಲೇಖನಗಳ ಜೆಫ್ರಿಲಾಟ್ ಎಂಬ ಮಹತ್ವದ ವ್ಯಕ್ತಿ ಇದ್ದರು ಹಾಗೂ ಅವರ ಮೂಲಕ ಭಾರತದಲ್ಲಿನ ಚುನಾವಣೆಗಳಿಗೆ ಗುರಿಯಿಡಲಾಗಿತ್ತು. ಈ ಆಟದಲ್ಲಿ ಅವನೊಬ್ಬನೇ ಆಟಗಾರನಿರಲಿಲ್ಲ, ಯಾವಾಗ ನಾವು ಭಾರತದಲ್ಲಿನ ಚುನಾವಣೆಗಳ ಸಂದರ್ಭದಲ್ಲಿ ಭಾರತದ ಹೊರಗಿನ ಘಟನೆಗಳನ್ನು ಮತ್ತು ಕಾರ್ಯವನ್ನು ಅಭ್ಯಾಸ ಮಾಡಿದೆವೋ ಆಗ ನಮಗೆ ಒಂದು ವಿಶಿಷ್ಟ ವಿಷಯ ಕಂಡುಬಂತು. ಅದೇನೆಂದರೆ, ಈ ಎಲ್ಲ ಘಟನೆಗಳು, ವ್ಯಕ್ತಿ ಮತ್ತು ಕಥಾವಸ್ತುಗಳನ್ನು ಜೋಡಿಸುವ ಅಂದರೆ ಎಲ್ಲರಿಗೂ ನೀಡಿರುವ ನಿಧಿ ಆಗಿತ್ತು. ಈ ಕಾರ್ಯವನ್ನು ಮಾಡುವುದರ ಹಿಂದಿನ ಪದ್ಧತಿ ಹಾಗೂ ಅದರಲ್ಲಿನ ಪ್ರಮುಖ ಮುಖಂಡತ್ವವು ಒಂದಕ್ಕೊಂದು ಜೋಡಿಸಲ್ಪಟ್ಟಿವೆ. ಈ ವಿಷಯದಲ್ಲಿ ಕಾರ್ಯ ಮಾಡುವ ಪ್ರಮುಖ ಘಟಕಗಳಿಗೆ ‘ಹೆನ್ರಿ ಲುಸಿ ಫೌಂಡೇಶನ್’ ಮತ್ತು ‘ಜಾರ್ಜ್ ಸೊರೋಸ್ ಓಪನ್ ಸೊಸೈಟಿ ಫೌಂಡೇಶನ್’ ಇವರಿಂದ ನೇರವಾಗಿ ನಿಧಿ ಪೂರೈಸಲಾಗಿತ್ತು. ಇದರಲ್ಲಿ ಕೆಲಸ ಮಾಡುವ ಗುಂಪು ಮತ್ತು ವ್ಯಕ್ತಿಗಳ ಫ್ರಾನ್ಸ್ ಮತ್ತು ಅಮೇರಿಕಾದ ಹೊರಗೆ ದೊಡ್ಡ ಜಾಲವಿದ್ದು ಭಾರತದಲ್ಲಿನ ಫಲಿತಾಂಶದ ಮೇಲೆ ಪ್ರಭಾವ ಬೀರಲು ಅವರಿಗೆ ಅಮೇರಿಕಾದಲ್ಲಿರುವ ದಾನಿಗಳಿಂದ ನಿಧಿ ಪೂರೈಸಲಾಗುತ್ತಿದೆ. ಭಾರತದ ವಿಷಯದಲ್ಲಿ ಉಲ್ಲೇಖಿಸುವಾಗ ‘ಭಾರತದಲ್ಲಿನ ಪ್ರಜಾಪ್ರಭುತ್ವ ನಷ್ಟವಾಗುತ್ತಿದೆ’, ‘ಹಿಂದೂಗಳ ಪ್ರಾಬಲ್ಯ ಹೆಚ್ಚಾಗುತ್ತಿದೆ’ ಹಾಗೂ ‘ಫ್ಯಾಸಿಸ್ಟ್ ವಿಚಾರಸರಣಿ ಉದಯವಾಗುತ್ತಿದೆ’ ಈ ಅಂಶಗಳನ್ನು ಮುಖ್ಯ ಪ್ರವಾಹದಲ್ಲಿನ ವ್ಯಾಖ್ಯಾನಗಳ ಸಮಯದಲ್ಲಿ ಉಲ್ಲೇಖಿಸಲಾಯಿತು. ಆ ವಿಚಾರವನ್ನು ಮುಖ್ಯ ಪ್ರವಾಹದಲ್ಲಿ ಸ್ಥಾಪಿಸುವ ಸಂಸ್ಥೆಗಳನ್ನು ಈ ವರದಿಯ ಮೂಲಕ ಬೆಳಕಿಗೆ ತರುವ ಪ್ರಯತ್ನವಾಗಿದೆ. ವಾಚಕರಿಗೆ ಜಾರ್ಜ್ ಸೊರೋಸ್ ೨೦೨೩ ರಲ್ಲಿ ‘ಡೆಮೋಕ್ರೆಟಿಕ್ ರಿವಾಯವಲ್ ಇನ್ ಇಂಡಿಯಾ’ ಇದರಲ್ಲಿ ನೀಡಿದ ಭಾಷಣ ನೆನಪಾಗುತ್ತಿದ್ದರೆ, ಅದರ ಸಂಬಂಧ ಎಲ್ಲರೊಂದಿಗಿದೆ, ಎಂಬುದು ಅರಿವಾಗಬಹುದು.
(ಆಧಾರ : ‘ದ ಡಿಸ್‌ಇನ್‌ಫೋಲ್ಯಾಬ್ ಡಾಟ್ ಆರ್ಗ್’ನ ಜಾಲತಾಣ)