S. Jayshankar : ಹಿಂದಿನ ಒಪ್ಪಂದಗಳನ್ನು ಗೌರವಿಸಿದರೆ ಮಾತ್ರ, ಎರಡು ದೇಶಗಳ ಸಂಬಂಧ ಸುಧಾರಿಸುವುದು ! – ಭಾರತದ ವಿದೇಶಾಂಗ ಸಚಿವ ಡಾ. ಜೈ ಶಂಕರ್

ಭಾರತದ ವಿದೇಶಾಂಗ ಸಚಿವ ಡಾ. ಜೈ ಶಂಕರ್ ಅವರಿಂದ ಚೀನಾದ ವಿದೇಶಾಂಗ ಸಚಿವರಿಗೆ ಛೀಮಾರಿ !

ಹಿವ್ನಿಟಿನ್ (ಲಾಓಸ್(ಥ್ಯೆಲ್ಯಾಂಡ್ ನ ಪಕ್ಕದ ದೇಶ) – ‘ಆಸಿಯಾನ’ನ (ದಕ್ಷಿಣ-ಪೂರ್ವ ಏಷಿಯಾ ರಾಷ್ಟ್ರದ ಸಂಘಟನೆ) ಆಯೋಜಿಸಿದ್ದ ಪರಿಷತ್ತಿನ ಸಂದರ್ಭದಲ್ಲಿ ಭಾರತದ ವಿದೇಶಾಂಗ ಸಚಿವ ಡಾ.ಎಸ್. ಜೈ ಶಂಕರ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ಮಹತ್ವದ ಸಭೆ ನಡೆದಿದೆ. ಇದರಲ್ಲಿ ಗಡಿ ವಿವಾದದ ಬಗ್ಗೆ ಚರ್ಚೆ ನಡೆದಿದೆ. ಈ ಸಂದರ್ಭದಲ್ಲಿ ಜೈ ಶಂಕರ್ ವಾಂಗ್ ಯಿ ಗೆ ಮಾತನಾಡಿ, ಎರಡೂ ದೇಶಗಳ ಹಿತಕ್ಕಾಗಿ ವಾತಾವರಣ ಸ್ಥಿರವಾಗಿರಬೇಕಾಗಿದೆ. ಭಾರತ-ಚೀನಾ ಬಾಂಧವ್ಯ ಹಿಂದಿನಿಂದಲೂ ಸರಿಯಾಗಿ ಇಲ್ಲದಿರುವದರ ಹಿಂದೆ ಗಡಿವಿವಾದವೇ ಪ್ರಮುಖ ಕಾರಣ ಇದೆ. ಗಡಿ ಮೇಲಿನ ಪರಿಸ್ಥಿತಿ ಹೇಗಿರುತ್ತದೆಯೋ ಹಾಗೆಯೇ ಉಭಯ ದೇಶಗಳ ನಡುವಿನ ಸಂಬಂಧ ಇರುತ್ತದೆ. ವಾಸ್ತವಿಕ ನಿಯಂತ್ರಣ ರೇಖೆ ಮತ್ತು ಹಿಂದಿನ ಒಪ್ಪಂದಗಳನ್ನು ಗೌರವಿಸಿದರೆ ಮಾತ್ರ ಉಭಯ ದೇಶಗಳ ನಡುವಿನ ಸಂಬಂಧಗಳು ಸುಧಾರಿಸುತ್ತವೆ ಎಂದಿದ್ದಾರೆ.

ಉಭಯ ನಾಯಕರು ಈ ತಿಂಗಳಲ್ಲಿ ಎರಡನೇ ಬಾರಿ ಭೇಟಿಯಾಗಿದ್ದಾರೆ. ಇದಕ್ಕೂ ಮುನ್ನ ಕಝಕಿಸ್ತಾನದ ರಾಜಧಾನಿ ಅಸ್ತಾನಾದಲ್ಲಿ ಆಯೋಜಿಸಿದ ‘ಶಾಂಘೈ ಕೊ-ಆಪರೇಷನ್ ಆರ್ಗನೈಸೇಶನ್’ನ (ಸಹಕಾರ ಸಂಘಟನೆಯ) ಶೃಂಗಸಭೆಯಲ್ಲಿ ಅವರು ಭೇಟಿಯಾಗಿದ್ದರು. ಉಭಯ ನಾಯಕರು ಗಡಿ ಇತ್ಯರ್ಥಕ್ಕೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ರೂಪಿಸಲು ಒಪ್ಪಿಕೊಂಡಿದ್ದರು, ಆಗ ಮಾತ್ರ ಉಭಯ ದೇಶಗಳ ಗಡಿಯಲ್ಲಿ ಸೈನಿಕರ ಸಂಖ್ಯೆಯನ್ನು ಕಡಿಮೆ ಮಾಡುವ ವಿಷಯದಲ್ಲಿ ಕಠಿಣ ಮಾರ್ಗ ಸೂಚಿಗಳನ್ನು ರೂಪಿಸಲು ಒಪ್ಪಿಕೊಂಡರು.

ಸಂಪಾದಕೀಯ ನಿಲುವು

ಚೀನಾಗೆ ಎಷ್ಟೇ ಹೇಳಿದರೂ ಅದು ಅದರ ವಿಸ್ತಾರವಾದಿಯ ಮಹತ್ವಾಕಾಂಕ್ಷೆಯನ್ನು ಬಿಡುವುದಿಲ್ಲವಾದ್ದರಿಂದ ಇಂತಹ ಚರ್ಚೆಗಳು ವ್ಯರ್ಥವಾಗುವವು !