ಪ್ರಧಾನಿ ಲಕ್ಸನ್ ನಿಂದ ಕ್ಷಮೆಯಾಚನೆ !
ವೆಲ್ಲಿಂಗ್ಟನ್ (ನ್ಯೂಜಿಲೆಂಡ್) – ಕಳೆದ 70 ವರ್ಷಗಳಲ್ಲಿ ನ್ಯೂಜಿಲೆಂಡ್‌ನಲ್ಲಿ 2 ಲಕ್ಷ ಮಕ್ಕಳು ಮತ್ತು ದುರ್ಬಲ ವಯಸ್ಕರ ಆರೈಕೆ ಮಾಡುವಾಗ ಅವರ ಮೇಲೆ ಅತ್ಯಾಚಾರ ನಡೆದಿದೆ, ಎಂದು ತನಿಖೆಯಲ್ಲಿ ಕಂಡುಬಂದಿದೆ. ಈ ಖಂಡನೀಯ ಕೃತ್ಯ ಬೆಳಕಿಗೆ ಬಂದ ನಂತರ, ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಕ್ಷಮೆಯಾಚಿಸುತ್ತಾ ಅದನ್ನು ಸುಧಾರಿಸುವ ಆಶ್ವಾಸನೆ ನೀಡಿದ್ದಾರೆ. ಈ ಚಿತ್ರಹಿಂಸೆಗಳಲ್ಲಿ ಬಲಾತ್ಕಾರ, ಸಂತಾನಹರಣ ಮತ್ತು ವಿದ್ಯುತ್ ಆಘಾತಗಳ ಸಮಾವೇಶ ಇತ್ತು.
ತನಿಕೆಯಲ್ಲಿ, 1950 ಮತ್ತು 2019 ರ ನಡುವೆ ಸುಮಾರು 3 ರಲ್ಲಿ ಒಬ್ಬ ಬಾಲಕ ಮತ್ತು ದುರ್ಬಲ ವಯಸ್ಕರು ಅನೇಕ ಪ್ರಕಾರದ ಅತ್ಯಾಚಾರಗಳನ್ನು ಅನುಭವಿಸಿದ್ದಾರೆ ಎಂದು ಕಂಡುಬಂದಿದೆ.
ನ್ಯೂಜಿಲೆಂಡನ ಇತಿಹಾಸದಲ್ಲಿ ಇದೊಂದು ಕರಾಳ ಮತ್ತು ದುಃಖದ ದಿನವಾಗಿದೆ ಎಂದು ಪ್ರಧಾನಿ ಲಕ್ಸನ್ ಒಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ನಾವು ಖಂಡಿತವಾಗಿಯೂ ಈ ಪರಿಸ್ಥಿತಿಯನ್ನು ಸುಧಾರಿಸುತ್ತೇವೆ, ಇದು ನನ್ನ ನಿರ್ಧಾರವೇ ಇದೆ ಎಂದು ಹೇಳಿದ್ದಾರೆ.