Taliban Rejected POK : ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪಾಕಿಸ್ತಾನದ ಭಾಗವಲ್ಲ – ತಾಲಿಬಾನ್ !

ಕಾಬೂಲ್ (ಅಫ್ಘಾನಿಸ್ತಾನ) – ಪಾಕ್ ಆಕ್ರಮಿತ ಕಾಶ್ಮೀರದ ಮೇಲಿನ ಪಾಕಿಸ್ತಾನದ ಹಕ್ಕನ್ನು ಒಪ್ಪಿಕೊಳ್ಳಲು ತಾಲಿಬಾನ್ ನಿರಾಕರಿಸಿದೆ. ಮೂರು ದಶಕಗಳಲ್ಲಿ ಮೊದಲ ಬಾರಿಗೆ ತಾಲಿಬಾನ್ ಅಫ್ಘಾನಿಸ್ತಾನದ ಗಡಿಯನ್ನು ಮರು ಮೌಲ್ಯಮಾಪನ ಮಾಡಿದೆ. ತಾಲಿಬಾನ್‌ನ ‘ಗಡಿ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯವು’ ಪಾಕಿಸ್ತಾನ, ತಜಕಿಸ್ತಾನ್, ಜಮ್ಮು- ಕಾಶ್ಮೀರ ಮತ್ತು ಚೀನಾದೊಂದಿಗಿರುವ ತನ್ನ ಅಧಿಕೃತ ಗಡಿಗಳ ಮೌಲ್ಯ ಮಾಪನ ಮಾಡಿದೆ ಎಂದು ತಿಳಿಸಿದೆ.

ಕುತೂಹಲಕಾರಿ ಅಂಶ ಎಂದರೆ, ತಾಲಿಬಾನ್ ಸಚಿವಾಲಯವು ತನ್ನ ಈ ಹೇಳಿಕೆಯಲ್ಲಿ ಜಮ್ಮು- ಕಾಶ್ಮೀರವನ್ನು ‘ಪಾಕ್ ಆಕ್ರಮಿತ ಕಾಶ್ಮೀರ’ ಎಂದು ಉಲ್ಲೇಖಿಸಿಲ್ಲ. ಇದರರ್ಥ ತಾಲಿಬಾನ್ ಸಚಿವಾಲಯವು ಪಾಕ್ ಆಕ್ರಮಿತ ಕಾಶ್ಮೀರವು ಪಾಕಿಸ್ತಾನದ ಭಾಗವೆಂದು ಒಪ್ಪಿಕೊಂಡಿಲ್ಲ.

ತಾಲಿಬಾನ್‌ನ ಈ ನಿರ್ಧಾರದಿಂದಾಗಿ ಅಫ್ಘಾನಿಸ್ತಾನದ ಗಡಿಯು ನೇರವಾಗಿ ಭಾರತದ ಜಮ್ಮು- ಕಾಶ್ಮೀರಕ್ಕೆ ಜೋಡಿಸಲಾಗುವುದು. ಇದರಿಂದ ಎರಡು ದೇಶಗಳ ನಡುವೆ ನೇರ ಸಂಬಂಧ ಸ್ಥಾಪಿತವಾಗುವುದ. ಭಾರತವೂ ಕೂಡ ಈ ವಿಷಯದಲ್ಲಿ ಇದೇ ಅಧಿಕೃತ ನಿಲುವನ್ನು ಹೊಂದಿದೆ. ಭಾರತವು ಕಾಶ್ಮೀರದ ಮೂಲಕ ಅಫ್ಘಾನಿಸ್ತಾನವನ್ನು ತನ್ನ ನೆರೆಯ ರಾಷ್ಟ್ರವೆಂದು ಪರಿಗಣಿಸುತ್ತದೆ.

ಸಂಪಾದಕೀಯ ನಿಲುವು

ತಾಲಿಬಾನ್ ಒಂದು ಉತ್ತಮ ನಿರ್ಧಾರ ತೆಗೆದುಕೊಂಡಿದೆ, ಈಗ ಅದು ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಹಿಂದಿರುಗಿಸಲು ಪಾಕಿಸ್ತಾನದ ಮೇಲೆ ಒತ್ತಡ ಹೇರಬೇಕು !