ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಂತರ ಶ್ರೇಷ್ಠತೆ !

‘ನಮ್ಮ ಮಕ್ಕಳದ್ದು ಮುಂದೆ ಏನಾಗುವುದೋ ?’ ಎಂಬ ಚಿಂತೆಯು ತಾಯಿ ತಂದೆಯವರಿಗೆ ಇರುತ್ತದೆ. ತದ್ವಿರುದ್ಧ ‘ರಾಷ್ಟ್ರದಲ್ಲಿನ ಎಲ್ಲರೂ ತಮ್ಮ ಮಕ್ಕಳು’ ಎಂಬ ವ್ಯಾಪಕ ಭಾವವಿರುವ ಕಾರಣ ಸಂತರು ಸದಾ ಆನಂದದಲ್ಲಿರುತ್ತಾರೆ !’

ಭಾರತದ ಪ್ರಾರಬ್ಧವನ್ನು ಬದಲಾಯಿಸಲು ಆಧ್ಯಾತ್ಮಿಕಸ್ತರದ ಪರಿಹಾರಗಳೇ ಅವಶ್ಯಕ

‘ಯಾವುದೇ ವ್ಯಕ್ತಿಯ ಪ್ರಾರಬ್ಧವನ್ನು ಬದಲಾಯಿಸುವುದು ಅಸಾಧ್ಯವಾಗಿರುತ್ತದೆ. ಬದಲಾಯಿಸಲೇ ಬೇಕಾದರೆ ತೀವ್ರ ಸಾಧನೆ ಮಾಡಬೇಕಾಗುತ್ತದೆ. ಹೀಗಿರುವಾಗ ಭಾರತದ ಪ್ರಾರಬ್ಧವನ್ನು ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಸ್ತರಗಳಲ್ಲಿ ಪ್ರಯತ್ನಿಸಿ ಬದಲಾಯಿಸಲು ಸಾಧ್ಯವಿದೆಯೇ ? ಅದಕ್ಕೆ ಅಧ್ಯಾತ್ಮಿಕ ಸ್ತರದ ಪರಿಹಾರವೆಂದರೆ ಸಾಧನೆಯ ಬಲವು ಬೇಕು.’

ಅಹಂಭಾವವಿರುವ ಆಧುನಿಕ ವೈದ್ಯರು (ಡಾಕ್ಟರರು) ಮತ್ತು ಅಹಂಭಾವಶೂನ್ಯ ಭಗವಂತ !

‘ಆಧುನಿಕ ವೈದ್ಯರು (ಡಾಕ್ಟರರು) ರೋಗಿಗಳನ್ನು ಚಿಕ್ಕ-ದೊಡ್ಡ ರೋಗಗಳಿಂದ ರಕ್ಷಿಸುತ್ತಾರೆ ಮತ್ತು ಅದರ ಬಗ್ಗೆ ಅವರಲ್ಲಿ ಅಹಂಭಾವ ಇರುತ್ತದೆ. ಆದರೆ ಭಗವಂತನು ಸಾಧಕರನ್ನು ಭವರೋಗದಿಂದ, ಅಂದರೆ ಜನನ- ಮರಣ ಚಕ್ರದಿಂದ ಮುಕ್ತಗೊಳಿಸುತ್ತಾನೆ, ಆದರೂ ಅವನು ಅಹಂಭಾವಶೂನ್ಯ ನಾಗಿರುತ್ತಾನೆ !’

ಹಿಂದೂ ಧರ್ಮದ ಅದ್ವಿತೀಯತೆ !

‘ಎಲ್ಲಿ ಇತರ ಧರ್ಮದವರನ್ನು ತುಳಿದು ಅವರನ್ನು ಆಳುವ ಬೋಧನೆ ನೀಡುವ ಕೆಲವು ಪಂಥಗಳು ಮತ್ತು ಎಲ್ಲಿ ‘ಸರ್ವೇಷಾಂ ಅವಿರೋಧೇಣ’ ಎಂಬಂತಹ ಸಹಿಷ್ಣುತಾವಾದದ ಬೋಧನೆಯನ್ನು ನೀಡುವ ಮಹಾನ್‌ ಹಿಂದೂ ಧರ್ಮ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ